ಹೇಳಿಕೆ/Claim: 2026ರ ಫ್ರೆಂಚ್ ಓಪನ್ ಟೂರ್ನಮೆಂಟ್‌ನಲ್ಲಿ ಸ್ಪ್ಯಾನಿಷ್ ಟೆನಿಸ್ ಆಟಗಾರ ರಫೇಲ್ ಜೋಡರ್ ಬಾಲ್ ಗರ್ಲ್ ಅನ್ನು ತಳ್ಳುತ್ತಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ.
ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ವೈರಲ್ ಕ್ಲಿಪ್ ನಲ್ಲಿ 2026ರ ಫ್ರೆಂಚ್ ಓಪನ್ ಸಮಯದಲ್ಲಿ ರಫೇಲ್ ಜೋಡರ್ ಬಾಲ್ ಗರ್ಲ್ ಅನ್ನು ತಳ್ಳುತ್ತಿರುವುದನ್ನು ತೋರಿಸಲಾಗಿಲ್ಲ. ನಿಧಾನ-ಚಲನೆಯ ದೃಶ್ಯಗಳು ಸೇರಿದಂತೆ ವಿಭಿನ್ನ ಕೋನಗಳಿಂದ ತೆಗೆದ ವೀಡಿಯೊ ಪುರಾವೆಗಳು ತೋರಿಸುವಂತೆ, ಆ ಬಾಲ್ ಗರ್ಲ್ ಆಟಗಾರನನ್ನು ವಿರಾಮಕ್ಕೆ ಹೋಗಲು ಅನುವು ಮಾಡುತ್ತಿದ್ದಳು, ಆದರೆ ಕೋರ್ಟ್ ಕವರ್ ಮೇಲೆ ಎಡವಿ ಬಿದ್ದಳು ಮತ್ತು ಅದೇ ಸಮಯದಲ್ಲಿ ಜೋಡರ್ ತನ್ನ ತಂದೆಯೊಂದಿಗೆ ಮಾತನಾಡುತ್ತಾ ತನ್ನ ಕೈಯನ್ನು ಎತ್ತಿದ್ದು, ಅದು ಆತ ಹುಡುಗಿಯನ್ನು ತಳ್ಳುತ್ತಿರುವಂತೆ ಕಾಣುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಆತ ಆಕೆಯನ್ನು ಮುಟ್ಟಿರುವ ಅಥವಾ ತಳ್ಳಿರುವ ಯಾವುದೇ ಹೇಳಿಕೆಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ರೇಟಿಂಗ್/Rating: ಸುಳ್ಳು ![]()
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡು ಸ್ಪ್ಯಾನಿಷ್ ಟೆನಿಸ್ ತಾರೆ ರಫೇಲ್ ಜೋಡರ್ ಬಾಲ್ ಗರ್ಲ್ ಅನ್ನು ತಳ್ಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘‘jackunheard’’ ಅಂತಹ ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಟೆನಿಸ್ ಆಟಗಾರ ರಾಫಾ ಜೋಡರ್ ಬಾಲ್ ಗರ್ಲ್ ಅನ್ನು ದಾರಿಯಿಂದಾಚೆ ತಳ್ಳುತ್ತಾರೆ. ಆತ ತನ್ನ ಜೀವನದಲ್ಲಿ ಮತ್ತೆಂದಿಗೂ ಟೆನಿಸ್ ಪಂದ್ಯವನ್ನು ಆಡಬಾರದು. ಎಂತಹ ಲೂಸರ್.” ಜೋಡರ್ ಹುಡುಗಿಯನ್ನು ಪಕ್ಕಕ್ಕೆ ತಳ್ಳುತ್ತಿದ್ದಾರೆಂದು ತೋರಿಸುವ 3 ಕ್ಷಣಗಳ ಕ್ಲಿಪ್ ಅನ್ನು ಪೋಸ್ಟ್‌ಗೆ ಲಗತ್ತಿಸಲಾಗಿದೆ. ಪೋಸ್ಟ್ 8.2 ಮಿಲಿಯಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅದನ್ನು ಕೆಳಗೆ ನೋಡಬಹುದು –
Tennis player Rafa Jodar SHOVES the ball girl out of the way.
He should never play another tennis match again in his life.
What a loser. pic.twitter.com/h6a3RQ8H0a
— Jack (@jackunheard) May 30, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಇತರ ಕೋನಗಳಿಂದ ಸೆರೆಹಿಡಿದ ದೃಶ್ಯಾವಳಿಗಳಲ್ಲಿ ಬಾಲ್ ಗರ್ಲ್ ಅನ್ನು ರಫೇಲ್ ಜೋಡರ್ ತಳ್ಳಲಿಲ್ಲ, ಬದಲು ಕೋರ್ಟ್ ಕವರ್ ಮೇಲೆ ಎಡವಿ ಆಯ ತಪ್ಪಿದಳು ಎಂದು ಕಾಣಬಹುದು. ಆತ ಪತ್ರಿಕಾಗೋಷ್ಠಿಯ ಸಮಯದಲ್ಲಿಯೂ ಕೂಡ ಘಟನೆಯನ್ನು ಉಲ್ಲೇಖಿಸಿ, ತಾನು ಬಾಲ್ ಗರ್ಲ್ ಅನ್ನು ಮುಟ್ಟಿದ್ದು ಅಥವಾ ತಳ್ಳಿದ್ದರ ಬಗೆಗಿನ ಆರೋಪಗಳನ್ನು ದೃಢವಾಗಿ ತಿರಸ್ಕರಿಸಿದರು.
ವಿವರಗಳು:
ಘಟನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ರಫೇಲ್ ಜೋಡರ್ ಬಾಲ್ ಗರ್ಲ್ ಅನ್ನು ತಳ್ಳಿದ್ದು” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ವಿವಿಧ ವರದಿಗಳು ಮತ್ತು ದ ಟೆನಿಸ್ ಪಾಸ್ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊ ದೊರಕಿತು: “ಆತ ಒಬ್ಬ ಬಾಲ್ ಗರ್ಲ್ ಅನ್ನು ತಳ್ಳಿದರೇ? ಆರೋಪ ಹೊತ್ತ ನಂತರ ಜೋಡರ್ ಪ್ರತಿಕ್ರಯಿಸಿದರು! | ರೋಲ್ಯಾಂಡ್ ಗ್ಯಾರೋಸ್ 2026”. ವೀಡಿಯೊದ ವಿವರಣೆಯಲ್ಲಿ ಬರೆದಿರುವುದೇನೆಂದರೆ, “ಗುರುವಾರ ರೋಲ್ಯಾಂಡ್ ಗ್ಯಾರೋಸ್ 2026ರಲ್ಲಿ ತಮ್ಮ ಓಟವನ್ನು ಮರೆಮಾಚಿದ ವಿವಾದದ ಕುರಿತು ರಾಫೇಲ್ ಜೋಡರ್ ಮಾತನಾಡಿ, ಪ್ಯಾರಿಸ್‌ನಲ್ಲಿ ನಡೆದ ಐದು ಸೆಟ್‌ಗಳ ಉದ್ವಿಗ್ನ ಯುದ್ಧದ ಸಮಯದಲ್ಲಿ ಆತ ಬಾಲ್ ಗರ್ಲ್ ಅನ್ನು ತಳ್ಳಿದರು ಎಂಬ ಆರೋಪಗಳಿಗೆ ನೇರವಾಗಿ ಪ್ರತಿಕ್ರಿಯಿಸಿದರು”. ಇದರ ವೀಡಿಯೊ/ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಆತ ಹುಡುಗಿಯನ್ನು ಏಕೆ ತಳ್ಳಿದ್ದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, 0:25ರ ಸಮಯಮುದ್ರೆಯಲ್ಲಿ ಆತ “ನಾನು ಆಕೆಯನ್ನೇನು ತಳ್ಳಲಿಲ್ಲ” ಎಂದು ಹೇಳುತ್ತಾರೆ. ಟಾಯ್ಲೆಟ್ ಬ್ರೇಕ್ ನಂತರ ವಸ್ತುಗಳನ್ನು ತಯಾರಿಸಲು ತಮ್ಮ ತಂದೆಗೆ ಹೇಳುತ್ತಿದ್ದು, ಅದೇ ಸಮಯ ಬಾಲ್ ಗರ್ಲ್ ಹಿಂದಕ್ಕೆ ಚಲಿಸುತ್ತಿದ್ದು ಎಡವಿ ಬಿದ್ದರು ಎಂದು ಆತ ವಿವರಿಸಿದರು. 0:58ರ ಸಮಯಮುದ್ರೆಯಲ್ಲಿ ಕೋರ್ಟ್ ಕವರ್ ಆಕೆಯ ಹಿಂದೆ ಇತ್ತು ಎಂದು ಆತ ಹೇಳುತ್ತಾರೆ, “ಆಕೆ ಹಿಂದಕ್ಕೆ ನಡೆಯುತ್ತಿದ್ದರು… ಅದರಿಂದ ಬಿದ್ದರು”. ವರದಿಗಾರ ಆಕೆಯನ್ನು ಮುಟ್ಟಿದಿರಾ ಎಂದು ಪುನಃ ಕೇಳಿದಾಗ, 1:21ರ ಸಮಯಮುದ್ರೆಯಲ್ಲಿ ಆತ, “ಇಲ್ಲ, ನಾನು ಅಕೆಯನ್ನು ಮುಟ್ಟಲಿಲ್ಲ. ಇಲ್ಲ, ಇಲ್ಲ, ಇಲ್ಲ, ನಾನು ಎಂದಿಗೂ ಹಾಗೆ ಮಾಡಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದರು. ವೀಡಿಯೊವನ್ನು ಕೆಳಗೆ ವೀಕ್ಷಿಸಿ:
(ಕೃಪೆ: ದ ಟೆನಿಸ್ ಪಾಸ್)
ಇದರ ನಂತರ, ವಿವಾದವನ್ನು ಬಗೆಹರಿಸುವ AP ನ್ಯೂಸ್ ವರದಿಯು ನಮಗೆ ದೊರಕಿತು ಮತ್ತು ಅದರಲ್ಲಿ ಜೋದರ್ ಆಕೆಯನ್ನು ಮುಟ್ಟಲಿಲ್ಲ ಎಂದು ಬರೆಯಲಾಗಿದೆ. ಶುಕ್ರವಾರ ಫ್ರೆಂಚ್ ಓಪನ್‌ನಲ್ಲಿ ಅಮೆರಿಕದ ಅಲೆಕ್ಸ್ ಮೈಕೆಲ್ಸನ್ ವಿರುದ್ಧದ ಮೂರನೇ ಸುತ್ತಿನ ಗೆಲುವಿನ ಸಮಯದಲ್ಲಿ ಆತ “ಬಾಲ್ ಗರ್ಲ್ ಅನ್ನು ದಾರಿಯಿಂದ ತಳ್ಳಲಿಲ್ಲ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೋಡರ್ ಅವರ ಪ್ರತಿಕ್ರಿಯೆಯನ್ನು ಪ್ರತಿಪಾದಿಸುತ್ತಾ, “ಬಾಲ್ ಗರ್ಲ್ ಪಾದ ಕೋರ್ಟ್ ಕವರ್‌ನಲ್ಲಿ ಸಿಲುಕಿಸಿಕೊಂಡಿತು ಎಂದು ಜೋಡರ್ ಹೇಳಿದರು” ಎಂದು ವರದಿಯು ಹೇಳುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಕೊನೆಯದಾಗಿ, ಘಟನೆಯನ್ನು ವಿವಿಧ ಕೋನಗಳಿಂದ ವಿಶ್ಲೇಷಿಸಲು ಮತ್ತು ನಿಜವಾಗಿಯೂ ಸಂಪರ್ಕವಾಗಿತ್ತೇ ಇಲ್ಲವೇ ಎಂಬುದನ್ನು ನಾವು ಹುಡುಕಿದೆವು. ನಿಧಾನ ಚಲನೆಯ ಕ್ಲಿಪ್‌ನಲ್ಲಿ ಹುಡುಗಿ ಕೋರ್ಟ್ ಕವರ್ ಮೇಲೆ ಎಡವಿ ಬಿದ್ದದ್ದು ಮತ್ತು ಜೋಡರ್‌ನ ಕೈಯೊಂದಿಗೆ ಯಾವುದೇ ಸಂಪರ್ಕವಿಲ್ಲದಿದ್ದದ್ದು ಸ್ಪಷ್ಟವಾಗಿ ಕಾಣುತ್ತದೆ
WATCH🚨: The internet rushing to judgment again over a clipped video 😅
It looked like Rafael Jódar pushed the ball girl, but the full shot clearly shows she tripped on her own while he was gesturing toward his box.
Context matters. pic.twitter.com/Pm9CxGm32C
— Officer Lew (@officer_Lew) May 30, 2026
ಅದೇ ರೀತಿ, ನಿಧಾನ ಚಲನೆಯ ಮತ್ತೊಂದು ಕ್ಲಿಪ್‌ನಲ್ಲಿ ಹುಡುಗಿ ಎಡವಿ ಬಿದ್ದಳು ಮತ್ತು ನಂತರ ಜೋಡರ್ ತಮ್ಮ ತಂದೆಗೆ ಕೈಯಿಂದ ಸನ್ನೆ ಮಾಡುತ್ತಿದ್ದದ್ದನ್ನು ತೋರಿಸುತ್ತದೆ.
Parece que no hay tal empujón. Hay que retractarse. Se tropieza y el ángulo de otras imágenes hace pensar que la empuja de malas maneras, con la coincidencia de que levanta la mano dirigiendo a su padre en la grada. Malos ángulos y malas coincidencias. pic.twitter.com/HfIyUjo8uB
— Gonzalo de Miguel (@Ciro2Ciro) May 30, 2026
ಹೀಗಾಗಿ, ಈ ಹೇಳಿಕೆ ಸುಳ್ಳು.
ಇದನ್ನೂ ಓದಿ:
