ಕ್ಲಾಡ್ ಮೈಥೋಸ್ ನಿಜವಾಗಿಯೂ 15 ಬಿಟ್ ಖಾಸಗಿ ಕೀಯನ್ನು ಭೇದಿಸಿದ್ದು, ಬಿಟ್‌ಕಾಯಿನ್‌ಗೆ ಬೆದರಿಕೆಯಾಗಿದೆಯೇ? ಸತ್ಯ ಪರಿಶೀಲನೆ

ಕ್ಲಾಡ್ ಮೈಥೋಸ್ ನಿಜವಾಗಿಯೂ 15 ಬಿಟ್ ಖಾಸಗಿ ಕೀಯನ್ನು ಭೇದಿಸಿದ್ದು, ಬಿಟ್‌ಕಾಯಿನ್‌ಗೆ ಬೆದರಿಕೆಯಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಬಿಟ್‌ಕಾಯಿನ್ ಅನ್ನು ಹ್ಯಾಕ್ ಮಾಡಿದ ಮತ್ತು 15 ಬಿಟ್ ಖಾಸಗಿ ಕೀಯನ್ನು ಭೇದಿಸಿರುವ ಕ್ಲೌಡ್ ಮೈಥೋಸ್ ಅನ್ನು ಆಂಥ್ರೊಪಿಕ್ ಬಿಡುಗಡೆ ಮಾಡಲಿದೆ. 

ಕಡೆನುಡಿ/Conclusion:  ಹೇಳಿಕೆ ಸುಳ್ಳು. ಯಾವುದೇ ಆಂಥ್ರೊಪಿಕ್ ದಸ್ತಾವೇಜೀಕರಣ ಅಥವಾ ಪ್ರಕಟಣೆಗಳು ಕ್ಲಾಡ್ ಮೈಥೋಸ್ ಅನ್ನು 256-ಬಿಟ್ ಎಲಿಪ್ಟಿಕ್ ಕರ್ವ್ ಭದ್ರತೆಯನ್ನು ಬಳಸುವ ಯಾವುದೇ ಬಿಟ್‌ಕಾಯಿನ್-ಶೈಲಿಯ ಖಾಸಗಿ ಕೀಯನ್ನು ಭೇದಿಸಿದೆಯೆಂದು ತಿಳಿಸಿಲ್ಲ. 15 ಬಿಟ್ ಖಾಸಗಿ ಕೀಯನ್ನು ಸ್ವತಂತ್ರ ಸಂಶೋಧಕ ಜಿಯಾನ್ಕಾರ್ಲೊ ಲೆಲ್ಲಿ ಭೇದಿಸಿದ್ದಾರೆ, AI ಅಲ್ಲ

ರೇಟಿಂಗ್/Rating: ಸುಳ್ಳು 


ಕ್ಲಾಡ್ ಮೈಥೋಸ್ ಬಿಟ್‌ಕಾಯಿನ್ ಅನ್ನು ಭೇದಿಸಬಹುದಾದ್ದರಿಂದ ಬಿಟ್‌ಕಾಯಿನ್ ಅಪಾಯದಲ್ಲಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ಕ್ರಿಪ್ಟೋನೋಬ್ಲರ್’ ಅಂತಹ ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯ ಭಾಗದೊಂದಿಗೆ ಹಂಚಿಕೊಂಡಿದ್ದಾರೆ: “ಬಿಟ್‌ಕಾಯಿನ್ ಅನ್ನು “ಹ್ಯಾಕ್ ಮಾಡಿದ” AI ಅನ್ನು ನಾಳೆ ಆಂಥ್ರಾಪಿಕ್ ಬಿಡುಗಡೆ ಮಾಡಲಿದೆ! 6 ವಾರಗಳ ಹಿಂದೆ, ಕ್ಲಾಡ್ ಮೈಥೋಸ್ 15-ಬಿಟ್ ಖಾಸಗಿ ಕೀಯನ್ನು ಕ್ರ್ಯಾಕ್ ಮಾಡಿತು, ಅದು $430,000,000,000 ಕ್ಕಿಂತ ಹೆಚ್ಚು ಮೌಲ್ಯದ್ದಾಗಿರುವ 6.9 ಮಿಲಿಯ ಬಿಟ್‌ಕಾಯಿನ್‌ಗೆ ಪ್ರವೇಶವನ್ನು ನೀಡುವ ಸಾಧ್ಯತೆ ಇದೆ” ಟರ್ಮಿನಲ್ ಕೋಡ್ ಎಕ್ಸಿಕ್ಯೂಶನ್‌ನಂತೆ ಕಾಣುವ ವೀಡಿಯೊ ಒಂದನ್ನು ಪೋಸ್ಟ್‌ಗೆ ಲಗತ್ತಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಹೇಳಿಕೆಯು ಸುಳ್ಳು ಎಂದು ಕಂಡುಕೊಂಡಿತು. ಬಿಟ್‌ಕಾಯಿನ್-ಶೈಲಿಯ ಖಾಸಗಿ ಕೀಯನ್ನು ಮುರಿಯಲು ಕ್ಲಾಡ್ ಮೈಥೋಸ್ ಅನ್ನು ಬಳಸಲಾಗಿದೆ ಎಂದು ಯಾವುದೇ ಅಧಿಕೃತ ಆಂಥ್ರೊಪಿಕ್ ಪ್ರಕಟಣೆ ಅಥವಾ ಸಂಶೋಧನಾ ಪ್ರಬಂಧವು ಹೇಳಿಲ್ಲ. ಕ್ವಾಂಟಮ್ ಕಂಪ್ಯೂಟಿಂಗ್ ಸಂಶೋಧಕ ಜಿಯಾನ್ಕಾರ್ಲೊ ಲೆಲ್ಲಿ ಅವರು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಹಾರ್ಡ್‌ವೇರ್‌ನಲ್ಲಿ ವ್ಯಾಪಕವಾಗಿ ವರದಿಯಾದ 15-ಬಿಟ್ ಎಲಿಪ್ಟಿಕ್ ಕರ್ವ್ ಕೀ ಪ್ರದರ್ಶನವನ್ನು ನಡೆಸಿದರು, ಆದರೆ ಈ ಸಾಧನೆಯಲ್ಲಿ ಕ್ಲಾಡ್ ಮೈಥೋಸ್ ಪಾತ್ರ ವಹಿಸಿದೆ ಎಂಬುದರ ಕುರಿತು ಯಾವುದೇ ಸೂಚನೆಯಿಲ್ಲ.

ವಿವರಗಳು:

ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಆಂಥ್ರೊಪಿಕ್ ಕ್ಲಾಡ್ ಮಿಥೋಸ್ ಅನ್ನು ಬಿಡುಗಡೆ ಮಾಡುತ್ತದೆ” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಜೂನ್ 9, 2026ರಂದು ಪ್ರಕಟವಾದ ಆಂಥ್ರೊಪಿಕ್ ವರದಿಯ ಪ್ರಕಾರ, “ವಿಶ್ವದ ಯಾವುದೇ ಮಾದರಿಯ ಪ್ರಬಲ ಸೈಬರ್ ಭದ್ರತಾ ಸಾಮರ್ಥ್ಯಗಳನ್ನು” ಹೊಂದಿದೆ” ಎಂದು ಮೈಥೋಸ್ 5 ಅನ್ನು ವಿವರಿಸಲಾಗಿದೆ. ಇದಲ್ಲದೆ, ಮೈಥೋಸ್ 5 “ಒಂದು ವಾರಕ್ಕೂ ಹೆಚ್ಚು ಕಾಲ ಸ್ವಾಯತ್ತ ಕೆಲಸ”ದಷ್ಟು ಅವಧಿಗೆ ನಡೆದ ಜಿನೊಮಿಕ್ಸ್ ಸಂಶೋಧನೆ ಮತ್ತು ಕುಶಲ ಮಾನವ ನಿರ್ವಾಹಕರ ಕೆಲಸಕ್ಕೆ “ಹೊಂದಾಣಿಕೆಯಾಗುವ ಅಥವಾ ಸೋಲಿಸುವ” ಔಷಧ-ವಿನ್ಯಾಸ ಕಾರ್ಯಗಳನ್ನು ನಡೆಸಿತು. ಈ ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಸೈಬರ್ ಸೆಕ್ಯುರಿಟಿ ವಿಭಾಗದ ಅಡಿಯಲ್ಲಿ, ಸಂಶೋಧಕರು “1,000 ಗಂಟೆಗಳಿಗಿಂತ ಹೆಚ್ಚಿನ ಟೆಸ್ಟಿಂಗ್ ನಲ್ಲಿ ಯಾವುದೇ ಸಾರ್ವತ್ರಿಕ ಜೈಲ್ ಬ್ರೇಕ್‌ಗಳನ್ನು ಕಾಣಲಿಲ್ಲ” ಮತ್ತು ಜೈಲ್ ಬ್ರೇಕ್ ಪ್ರಯತ್ನಗಳನ್ನು “ಸಾಕಷ್ಟು ನಿಧಾನ ಮತ್ತು ದುಬಾರಿ”ಯಾಗಿಸುವುದು ಅವರ ಗುರಿಯಾಗಿದೆ, ಈ ಮೂಲಕ ಪ್ರಮಾಣರೂಪದಲ್ಲಿ ಬಳಸುವ ಮುನ್ನ ಅವುಗಳನ್ನು ಪತ್ತೆಹಚ್ಚಬಹುದು ಮತ್ತು ತಡೆಯಬಹುದಾಗಿರುತ್ತದೆ ಎಂದು ವರದಿಯು ಹೇಳುತ್ತದೆ. ಸುರಕ್ಷತಾ ಕ್ರಮಗಳನ್ನು ಚರ್ಚಿಸಲಾಗಿದೆ ಮತ್ತು ಮೈಥೋಸ್ 5ನ್ನು ಅಂತಹ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಆಂಥ್ರೊಪಿಕ್‌ನಿಂದ ಯಾವುದೇ ಪ್ರಕಟಣೆಗಳು ಅಥವಾ ವರದಿಗಳು ನಮಗೆ ಕಂಡುಬಂದಿಲ್ಲ. ಈ ನಿರ್ದಿಷ್ಟ ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ಕ್ಲಾಡ್ ಮೈಥೋಸ್ 15 ಬಿಟ್ ಖಾಸಗಿ ಕೀಯನ್ನು ಭೇದಿಸಿದೆಯೇ ಎಂದು ನಾವು ಹುಡುಕಿದೆವು, ಆದರೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಸ್ವತಂತ್ರ ಸಂಶೋಧಕ ಜಿಯಾನ್ಕಾರ್ಲೊ ಲೆಲ್ಲಿ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಕ್ವಾಂಟಮ್ ಹಾರ್ಡ್‌ವೇರ್ ಬಳಸಿ 15-ಬಿಟ್ ಎಲಿಪ್ಟಿಕ್ ಕರ್ವ್ ಕೀಯನ್ನು ಯಶಸ್ವಿಯಾಗಿ ಮುರಿದು ಪ್ರಾಜೆಕ್ಟ್ ಇಲೆವೆನ್‌ನ 1 BTC “ಕ್ಯೂ-ಡೇ ಬಹುಮಾನ”ವನ್ನು ಗೆದ್ದರು ಎಂದು ಕಾಯಿನ್‌ಡೆಸ್ಕ್ ನ ಒಂದು ವರದಿ ಹೇಳುತ್ತದೆ. ಆದರೆ, “ಬಿಟ್‌ಕಾಯಿನ್ 256-ಬಿಟ್ ಎಲಿಪ್ಟಿಕ್ ಕರ್ವ್ ಭದ್ರತೆಯನ್ನು ಬಳಸುತ್ತದೆ” ಮತ್ತು ಲೆಲ್ಲಿಯ ಸಾಧನೆಯು ಬಿಟ್‌ಕಾಯಿನ್ ಅನ್ನು ಭೇದಿಸಬಹುದು ಎಂದು ಅರ್ಥವಲ್ಲ” ಎಂದು ವರದಿಯು ಒತ್ತಿಹೇಳುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಪೋಸ್ಟ್‌ನಲ್ಲಿ ಹೇಳಿರುವಂತೆ, ಕ್ಲಾಡ್ ಮೈಥೋಸ್ 6.9 ಮಿಲಿಯ BTCಗೆ ಪ್ರವೇಶವನ್ನು ನೀಡುವ ಕೀಯನ್ನು ಭೇದಿಸಿರುವ ಬಗ್ಗೆ ಡಿಜಿಟೈ ಇಂಡಿಯಾಗೆ ಯಾವುದೇ ಪುರಾವೆಗಳು ಅಥವಾ ವಿಶ್ವಾಸಾರ್ಹ ವರದಿಗಳು ದೊರಕಿಲ್ಲ.

ಆದ್ದರಿಂದ, ಈ ಹೇಳಿಕೆ ಸುಳ್ಳು.


ಇದನ್ನೂ ಓದಿ:

ಅರ್ಥ್ ಸಾಂಗ್ ಸಮಯದಲ್ಲಿ ಮೈಕೆಲ್ ಜಾಕ್ಸನ್ ಅವರ ಮೇಲೆ ಬಂದೂಕು ಇರಿಸಲಾಗಿತ್ತು ಎಂದು ನಿಜವಾಗಿಯೂ ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಬದಲಿಗೆ ಇಟಲಿಯನ್ನು ನೇಮಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.