ಈ ಪೋಸ್ಟ್ ನಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿಯು ಥೈಲ್ಯಾಂಡ್ ನ ಪ್ರವಾಸಿಗೆ ಕಿರುಕುಳ ನೀಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ಪೋಸ್ಟ್ ನಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿಯು ಥೈಲ್ಯಾಂಡ್ ನ ಪ್ರವಾಸಿಗೆ ಕಿರುಕುಳ ನೀಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim ಭಾರತದಲ್ಲಿ ಒಬ್ಬ ವ್ಯಕ್ತಿಯು ವಿದೇಶಿ ಮಹಿಳಾ ಪ್ರವಾಸಿಗೆ ಕಿರುಕುಳ ನೀಡಿದ್ದನ್ನು ತೋರಿಸುವುದಾಗಿ ವೈರಲ್ ಪೋಸ್ಟ್ ಹೇಳುತ್ತದೆ.

ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂತಿದೆ. ವಿವರಿಸಲಾದ ಪ್ರಮುಖ ಘಟನೆಯು ನಿಜ, ಆದರೆ ಇದು ವಾಸ್ತವವಾಗಿ ನಡೆದದ್ದು ನೇಪಾಳದ ಕಾಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯದಲ್ಲಿ, ಇದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಈ ಪ್ರವಾಸಿಯ ಸ್ವಂತ ವ್ಲಾಗ್‌ನಿಂದ ಸಾಬೀತಾಗಿದೆ. ಪ್ರವಾಸಿಯು ಥೈಲ್ಯಾಂಡ್ ನವರಾಗಿದ್ದು ಮತ್ತು ಈ ವೀಡಿಯೊ ಭಾರತದ್ದು ಎಂದು ತಪ್ಪಾಗಿ ಆರೋಪಿಸಲಾಗಿದೆ..

ರೇಟಿಂಗ್/Rating: ದಾರಿ ತಪ್ಪಿಸುವಂತಿದೆ.

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ

******************************************************

ಭಾರತದಲ್ಲಿ ವಿದೇಶಿ ಮಹಿಳಾ ಪ್ರವಾಸಿಯೊಬ್ಬರಿಗೆ ಪುರುಷನೊಬ್ಬ ಕಿರುಕುಳ ನೀಡಿದ ಎಂಬುದನ್ನು ವಿವರಿಸುವ ಪೋಸ್ಟ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಭಾರತದಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದ ವಿದೇಶಿ ಹುಡುಗಿಯೊಬ್ಬಳು ರಸ್ತೆಬದಿಯಲ್ಲಿ ಊಟ ಮಾಡುವಾಗ ₹20 ಕೇಳಿದ ವ್ಯಕ್ತಿಗೆ ₹200 ಕೊಟ್ಟದ್ದಕ್ಕೆ ಆಕೆಗೆ ಕಿರುಕುಳ ನೀಡಲಾಯಿತು ಎನ್ನುತ್ತ ದೃಢೀಕೃತ X ಬಳಕೆದಾರ ‘AjayKumaarJi’ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸುವವರೆಗೂ ಆ ವ್ಯಕ್ತಿಯು ಆಕೆಯ ಕೈಯನ್ನು ಹಿಡಿದು ಅನುಚಿತವಾಗಿ ವರ್ತಿಸಿದ ಎಂದು ಆರೋಪಿಸಲಾಗಿದೆ. ಈ ಪೋಸ್ಟ್ ನಲ್ಲಿ ಭಾರತೀಯರು “ಅತಿಥಿ ದೇವೋ ಭವ” ಎಂಬ ಮಾತನ್ನು ಎತ್ತಿಹಿಡಿಯಬೇಕೆಂದು ಒತ್ತಾಯಿಸಲಾಗಿದೆ ಮತ್ತು ಅದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ವೈರಲ್ ಕ್ಲಿಪ್‌ನಲ್ಲಿ ತೋರಿಸಿರುವ ಘಟನೆಯು ನಡೆದದ್ದು ನಿಜವಾದರೂ, ಅದು ಕಾಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ನಡೆದದ್ದು, ಇದನ್ನು ಪ್ರವಾಸಿಗರ ಸ್ವಂತ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ವ್ಲಾಗ್‌ಗಳಲ್ಲಿ ದೃಢೀಕರಿಸಲಾಗಿದೆ. ಆ ಮಹಿಳೆ ಥಾಯ್ ಪ್ರಜೆಯಾಗಿದ್ದು, ಆ ದೃಶ್ಯಗಳನ್ನು ಭಾರತಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.

ವಿವರಗಳು:

ಘಟನೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು ಹೇಳಿಕೆಯಲ್ಲಿ ಹಂಚಿಕೊಂಡ ಚಿತ್ರಗಳ ಮೇಲೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ದೃಶ್ಯಾವಳಿಯ ವಿಸ್ತೃತ ಆವೃತ್ತಿಯನ್ನು ಪ್ರದರ್ಶಿಸುವ nepal.360ನ ಇನ್ಸ್ಟಾಗ್ರಾಂ ಪೋಸ್ಟ್‌ ದೊರಕಿತು. “ಪಶುಪತಿನಾಥ ಪ್ರದೇಶದ ಒಂದು ಗೊಂದಲದ ವೀಡಿಯೊ ಥಾಯ್ಲೆಂಡ್ ಪ್ರವಾಸಿಗರಿಗರೊಬ್ಬಾಕೆ ನೇಪಾಳಕ್ಕೆ ಭೇಟಿ ನೀಡಿದಾಗ ಆಕೆಗೆ ಕಿರುಕುಳ ನೀಡಲಾದದ್ದನ್ನು ತೋರಿಸುತ್ತದೆ” ಎಂದು ಪೋಸ್ಟ್ ಸ್ಪಷ್ಟವಾಗಿ ಹೇಳುತ್ತದೆ.

ಇದರ ನಂತರ, ಮತ್ತೊಂದು ಫಲಿತಾಂಶವು nepal_hotspotನ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು, ಅದರ ಶೀರ್ಷಿಕೆ “ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಒಂದು ವೀಡಿಯೊದಲ್ಲಿ ಕಠ್ಮಂಡುವಿನ ಪಶುಪತಿನಾಥ ಪ್ರದೇಶದ ಆವರಣದಲ್ಲಿ ಥಾಯ್ಲೆಂಡ್ ಪ್ರವಾಸಿಗೆ ಕಿರುಕುಳ ನೀಡಲಾಗುತ್ತಿರುವುದನ್ನು ತೋರಿಸಲಾಗುತ್ತಿದೆ”.

ಕೊನೆಯದಾಗಿ, ನಾವು ವ್ಲಾಗರ್ ಸ್ವತಃ ಪೋಸ್ಟ್‌ ಮಾಡಿದ ಮೂಲ ವೀಡಿಯೊಗಾಗಿ ಹುಡುಕಿದೆವು ಮತ್ತು ಆಕೆಯ ವಾಹಿನಿಯ ಹೆಸರು ‘mintnawinda’ ಎಂದು ತಿಳಿದುಕೊಂಡೆವು. ಆಕೆ ಮೇ 3, 2026ರಂದು ಈ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದರು (ಅದನ್ನು ಕನ್ನಡಕ್ಕೆ ಅನುವಾದಿಸಲಾಗಿದೆ) “ನಾನು ಸುಮ್ಮನೆ ಸುತ್ತಾಡಲು ಹೋದಾಗ ಇದ್ದಕ್ಕಿದ್ದಂತೆ ಈ ಪರಿಸ್ಥಿತಿ ಎದುರಾಯಿತು. ಸಾಮಾನ್ಯವಾಗಿ, ನಾನು ಏನೂ ಕೊಡುತ್ತಿರಲಿಲ್ಲ- ಆದರೆ ಅವರು ಹಸಿವಾಗಿದೆ ಎಂದು ನನಗೆ ಹೇಳಿದ್ದರು.”

 

View this post on Instagram

 

A post shared by Mint Nawinda (@mintnawinda)

ನಂತರ, ನಾವು ಆಕೆಯ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ಸಂಪೂರ್ಣ ವ್ಲಾಗ್ ಮತ್ತು ಕಿರುಕುಳದ ಈ ನಿರ್ದಿಷ್ಟ ಕ್ಷಣವನ್ನು ಹುಡುಕಿದೆವು. “ಮೊದಲ ಬಾರಿಗೆ ಕ್ರೇಜಿ ನೇಪಾಳ ಸ್ಟ್ರೀಟ್ ಫುಡ್ ಪ್ರಯತ್ನಿಸಿದ್ದು! ಬಫಲೋ ಮೀಟ್… ನಾನಿದನ್ನು ನಿರೀಕ್ಷಿಸಿರಲಿಲ್ಲ” ಎಂಬ ಶೀರ್ಷಿಕೆಯ ಆಕೆಯ ವೀಡಿಯೊ ನಮಗೆ ದೊರಕಿತು. ಘಟನೆ ನಡೆದಿದ್ದು ಭಾರತದಲ್ಲಲ್ಲ, ಅಕೆ ನೇಪಾಳ ಪ್ರವಾಸದಲ್ಲಿದ್ದರು ಎಂಬುದು ಶೀರ್ಷಿಕೆಯಿಂದ ಸ್ಪಷ್ಟವಾಗುತ್ತದೆ.

38:18ರ ಸಮಯಮುದ್ರೆಯಲ್ಲಿ, ಆ ವ್ಯಕ್ತಿಯು ಆಕೆಯ ಹತ್ತಿರ ಬರುತ್ತಾನೆ, ಹಣ ಕೇಳುತ್ತಾನೆ ನಂತರ ಅನುಚಿತವಾಗಿ ವರ್ತಿಸುತ್ತಾನೆ. ಈ ಕ್ಷಣವನ್ನು ಕೆಳಗೆ ವೀಕ್ಷಿಸಿ –

ಹೀಗಾಗಿ, ಸ್ಥಳವು ವಾಸ್ತವವಾಗಿ ನೇಪಾಳ, ಭಾರತವಲ್ಲ.

ಈ ಹೇಳಿಕೆ ದಾರಿತಪ್ಪಿಸುವಂತಿದೆ.


ಇದನ್ನೂ ಓದಿ:

ವಿಲ್ ಸ್ಮಿತ್ ಮತ್ತು ಜಾಡಾ ಪಿಂಕೆಟ್ ಸ್ಮಿತ್ ವಿಚ್ಛೇದನ ಪಡೆಯುತ್ತಿದ್ದಾರೆಯೇ? ಸತ್ಯ ಪರಿಶೀಲನೆ

ಇರಾನ್ USS ಜೆರಾಲ್ಡ್ ಆರ್.ಫೋರ್ಡ್ ಮೇಲೆ 17 ದಿಕ್ಕುಗಳಿಂದ ದಾಳಿ ಮಾಡಿದೆ ಎಂದು ಟ್ರಂಪ್ ಹೇಳಿದರೇ? ಸತ್ಯ ಪರಿಶೀಲನೆ

Leave a Reply

Your email address will not be published.