ಹೇಳಿಕೆ/Claim : ವಿಲ್ ಸ್ಮಿತ್ ಮತ್ತು ಜಾಡಾ ಪಿಂಕೆಟ್ ಸ್ಮಿತ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಕಡೆನುಡಿ/Conclusion :ಈ ಹೇಳಿಕೆ ಸುಳ್ಳು. ಏಪ್ರಿಲ್ 2026ರಂತೆ ಸನ್ನಿಹಿತವಾದ ಅಥವಾ ಸಲ್ಲಿಸಲಾದ ವಿಚ್ಛೇದನದ ಅರ್ಜಿಯನ್ನು ಬೆಂಬಲಿಸುವಂತಹ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಕಂಡುಬಂದಿಲ್ಲ. ದಂಪತಿಗಳು 2016ರಿಂದ ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದಾರೆ, ಆದರೆ ಕಾನೂನುಬದ್ಧವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ.
ರೇಟಿಂಗ್/Rating : ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ವಿಲ್ ಸ್ಮಿತ್ ಮತ್ತು ಜಾಡಾ ಪಿಂಕೆಟ್ ವಿಚ್ಛೇದನಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. “ವಿಲ್ ಸ್ಮಿತ್ ಮತ್ತು ಜಾಡಾ ಪಿಂಕೆಟ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ” ಎಂಬ ಶೀರ್ಷಿಕೆಯೊಂದಿಗೆ ‘HoopsCrave’ ಎಂಬ ದೃಢೀಕೃತ ಬಳಕೆದಾರರು ಅಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಹೇಳಿಕೆಯೊಂದಿಗೆ ದಂಪತಿಗಳ ಬೇರ್ಪಡುವಿಕೆಯನ್ನು ಸಂಕೇತಿಸುವ ಮೊನಚಾದ ಬ್ರೇಕ್ ಲೈನ್ ಅನ್ನು ಹೊಂದಿರುಬಂತಹ ವಿಭಜಿತ ಚಿತ್ರವಿದೆ. ಪೋಸ್ಟ್ ಸುಮಾರು 5.3 ಮಿಲಿಯ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಅದನ್ನು ಕೆಳಗೆ ನೋಡಬಹುದು –
Will Smith and Jada Pinkett are reportedly getting a divorce. pic.twitter.com/B77nRU5Z7B
— Hoops Crave (@HoopsCrave) April 8, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Will Smith and Jada Pinkett Smith reportedly getting a divorce. pic.twitter.com/62bm5WhB5k
— Instablog9ja (@instablog9ja) April 8, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಏಪ್ರಿಲ್ 2026ರ ಹೊತ್ತಿಗೆ, ವಿಚ್ಛೇದನದ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಈ ದಂಪತಿಯು 2016ರಿಂದ ಬೇರೆಯಾಗಿಯೇ ವಾಸಿಸುತ್ತಿದ್ದರೂ, ಅವರು ತಮ್ಮ ಮದುವೆಯನ್ನು ಔಪಚಾರಿಕವಾಗಿ ಕೊನೆಗೊಳಿಸಲು ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿಲ್ಲ.
ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ವಿಲ್ ಸ್ಮಿತ್ ಮತ್ತು ಜಾಡಾ ಪಿಂಕೆಟ್ ವಿಚ್ಛೇದನ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಗಾರ್ಡಿಯನ್ ವರದಿಯ ಪ್ರಕಾರ, ಈ ದಂಪತಿಯು “2016ರಿಂದ ಪ್ರತ್ಯೇಕ ಜೀವನವನ್ನು ನಡೆಸುತ್ತಿದ್ದಾರೆ” ಮತ್ತು ಅವರು “ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುವ ಯಾವುದೇ ಯೋಜನೆಯನ್ನು ಹೊಂದಿಲ್ಲ”. ಜಾಡಾ ಪಿಂಕೆಟ್ “ವಿಚ್ಛೇದನ ಪಡೆಯಲು ನಮಗೆ ಎಂದಿಗೂ ಕಾರಣವಿರುವುದಿಲ್ಲ … ನಾವು ಏನನ್ನೂ ನಿಭಾಯಿಸುತ್ತೇವೆ ಎಂದು ಭರವಸೆ ನೀಡಿದರು” ಎಂದು ವರದಿ ಹೇಳುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ಪೀಪಲ್ ನ ಒಂದು ವರದಿಯಿಂದ ನಮಗೆ ತಿಳಿದುಬಂದದ್ದೇನೆಂದರೆ, “2023ರಲ್ಲಿ ಆನ್ ಪರ್ಪಸ್ ವಿತ್ ಜೇ ಶೆಟ್ಟಿಯ ಒಂದು ಸಂಚಿಕೆಯಲ್ಲಿ, ದಂಪತಿಗಳ ಹಲವಾರು ಬ್ರೇಕ್ಅಪ್ಗಳ ಬಗ್ಗೆ ಜಾಡಾ ವಿವರಗಳನ್ನು ಬಹಿರಂಗಪಡಿಸಿದರು”. ತಮ್ಮ ವೈವಾಹಿಕ ಜೀವನದ ಅವಧಿಯಲ್ಲಿ “ವಿಲ್ ಮತ್ತು ನನ್ನ ನಡುವೆ ಹಲವಾರು ಬ್ರೇಕ್ಅಪ್ಗಳು ನಡೆದಿವೆ” ಎಂದು ಆಕೆ ಹೇಳಿದರು. “ಡಿಸೆಂಬರ್ 2024ರಲ್ಲಿ, ವಿಲ್ ಮತ್ತು ಜಾಡಾ ಕುಟುಂಬ ಮತ್ತು ಸ್ನೇಹಿತರ ದೊಡ್ಡ ಕೂಟದಲ್ಲಿ ಒಟ್ಟಿಗೆ ಥ್ಯಾಂಕ್ಸ್ಗಿವಿಂಗ್ ಅನ್ನು ಕಳೆದರು” ಎಂದು ಪೀಪಲ್ ಗೆ ಮೂಲವು ತಿಳಿಸಿದೆ ಎಂದು ವರದಿಯು ಹೇಳುತ್ತದೆ.

ಜನವರಿ 2026ರಲ್ಲಿ, ತಮ್ಮ ಮಗ ಜೇಡೆನ್ ಅವರನ್ನು ಬೆಂಬಲಿಸಲು ಈ ದಂಪತಿಯು ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಸಾರ್ವಜನಿಕವಾಗಿ ಪುನಃ ಸೇರಿದರು. ಇ ನ್ಯೂಸ್ನ ವರದಿಯ ಪ್ರಕಾರ, “ನಾಲ್ಕು ತಿಂಗಳಲ್ಲಿ ಈ ಜೋಡಿಯು ಒಟ್ಟಿಗೆ ಕಾಣಿಸಿಕೊಂಡಿದ್ದು ಇದೇ ಮೊದಲು.” ಇದಕ್ಕೂ ಮೊದಲು ಸೆಪ್ಟೆಂಬರ್ನಲ್ಲಿ ಅವರನ್ನು ನೋಡಲಾಗಿತ್ತು, ಅಲ್ಲಿ “ಜಾಡಾರವರ 54ನೇ ಹುಟ್ಟುಹಬ್ಬವನ್ನು ಬೆವರ್ಲಿ ಹಿಲ್ಸ್ನಲ್ಲಿರುವ ಇ ಬಾಲ್ಡಿ ರೆಸ್ಟೋರೆಂಟ್ನಲ್ಲಿ ಆಚರಿಸಲು ವಿಲ್ ಆಕೆಯ ಜೊತೆ ಸೇರಿಕೊಂಡರು… ಅದೇ ತಿಂಗಳಲ್ಲಿ, ಅವರು ಕ್ಯಾಲಿಫೋರ್ನಿಯಾದ ಮಾಲಿಬುನಲ್ಲಿರುವ ನೊಬುನಲ್ಲಿ ಊಟ ಮಾಡುವುದು ಕಂಡುಬಂದಿತ್ತು.” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ, ನ್ಯಾಯಾಲಯದ ದಾಖಲೆಗಳಿಲ್ಲ, ಕಾನೂನು ಫೈಲಿಂಗ್ ಗಳಿಲ್ಲ ಅಥವಾ ವಿಚ್ಛೇದನ ಪ್ರಕ್ರಿಯೆಗಳನ್ನು ದೃಢೀಕರಿಸುವ ಪ್ರತಿನಿಧಿಗಳ ಹೇಳಿಕೆಗಳಿಲ್ಲ. ವಿಲ್ ಮತ್ತು ಜಾಡಾ ಸ್ಮಿತ್ ಇನ್ನೂ ವಿವಾಹಿತರಾಗಿಯೇ ಇದ್ದಾರೆ ಮತ್ತು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಈ ವದಂತಿಯ ಕುರಿತು ಇನ್ನೂ ಏನನ್ನೂ ಹೇಳಿಲ್ಲ.
ಆದ್ದರಿಂದ, ಈ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಇರಾನ್ USS ಜೆರಾಲ್ಡ್ ಆರ್.ಫೋರ್ಡ್ ಮೇಲೆ 17 ದಿಕ್ಕುಗಳಿಂದ ದಾಳಿ ಮಾಡಿದೆ ಎಂದು ಟ್ರಂಪ್ ಹೇಳಿದರೇ? ಸತ್ಯ ಪರಿಶೀಲನೆ
ಇರಾನ್ ಸಂಘರ್ಷದ ಮಧ್ಯೆ ಭಾಷಣ ಮಾಡುವಾಗ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ಕುಸಿದುಬಿದ್ದರೇ? ಸತ್ಯ ಪರಿಶೀಲನೆ
