ಹೇಳಿಕೆ/Claim: ‘ಈ ದೇಶದಲ್ಲಿ ಇರಬೇಕಾದರೆ ಜೈ ಶ್ರೀರಾಮ್ ಎನ್ನುವುದು ಅಗತ್ಯ’ ಎಂದು ಒತ್ತಾಯಿಸಿದ ನವನೀತ್ ರಾಣಾ, 2024ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ನವನೀತ್ ರಾಣಾ ಸೋತ ನಂತರ ಅಳುತ್ತಿರುವುದು ಎಂದು ಚಿತ್ರಿಸಲು ಏಪ್ರಿಲ್ 2022 ರ ಆಕೆಯ ಹಳೆಯ ವೀಡಿಯೊವನ್ನು ಬಳಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ — ************************************************************************* ಸತ್ಯ ಪರಿಶೀಲನೆ ವಿವರಗಳು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮಹಾರಾಷ್ಟ್ರದ ಅಮರಾವತಿಯಿಂದ […]
ಹೇಳಿಕೆ/Claim: ಸೈನಿಕರು ಅಥವಾ ಅಗ್ನಿವೀರರನ್ನು ನೇಮಿಸಿಕೊಳ್ಳಲು ಅಗ್ನಿಪಥ್ ಯೋಜನೆಯನ್ನು ಮಾರ್ಪಾಡುಗಳೊಂದಿಗೆ ಮರುಪ್ರಾರಂಭಿಸಲಾಗಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಸರ್ಕಾರಿ ಸ್ವಾಮ್ಯದ ಪಿ.ಐ.ಬಿ ಈ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ಅದನ್ನು ನಕಲಿ ಎಂದು ಹೇಳಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ– ************************************************************************************** ಸತ್ಯ ಪರಿಶೀಲನೆ ವಿವರಗಳು ಅಗ್ನಿಪಥ್ ಯೋಜನೆಯನ್ನು ಎನ್‌ಡಿಎ ಸರ್ಕಾರವು ಸೈನಿಕ ಸಮ್ಮಾನ್ ಯೋಜನೆ ಎಂದು ಮರುಪ್ರಾರಂಭಿಸಲಿದೆ ಎಂಬ ಹೇಳಿಕೆಯೊಂದಿಗೆ ಒಂದು ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. All Posts आग्निवीर में बदलाव की खबर […]
ಹೇಳಿಕೆ/Claim: ಮೆಟ್ರೋದ ಒಂದು ಚಿತ್ರವನ್ನು ಹೊಂದಿರುವ ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಪೋಸ್ಟರ್, ಅದು ಪ್ರಧಾನಿ ಮೋದಿಯವರ ಸಾಧನೆಗಳಲ್ಲಿ ಒಂದಾಗಿದೆ ಎಂದು ಹೇಳುತ್ತದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಸಿಂಗಾಪುರದ ಜುರಾಂಗ್ ಮೆಟ್ರೋದ ಚಿತ್ರವನ್ನು ಮೋದಿಯವರ ಸಾಧನೆ ಎಂದು ಬಳಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಪ್ರಸಕ್ತವಾಗಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ನಡುವೆ ಪಶ್ಚಿಮ ಬಂಗಾಳ ಬಿಜೆಪಿಯು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅನ್ನು ಹಾಕಿದೆ, ಈ ಮೂಲಕ ದೇಶದಾದ್ಯಂತ ಅನೇಕ ನಗರಗಳಲ್ಲಿ ಭಾರತದ ಮೆಟ್ರೋ […]
ಹೇಳಿಕೆ/Claim: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತೀಯ ಸಂವಿಧಾನದ ಪ್ರತಿಯನ್ನಲ್ಲ, ಚೀನಾದ ಸಂವಿಧಾನವನ್ನು ಹಿಡಿದಿದ್ದಾರೆ. ಕಡೆನುಡಿ/Conclusion: ಹೇಳಿಕೆ ತಪ್ಪು. ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಗೋಪಾಲ್ ಸಂಕರನಾರಾಯಣನ್ ರವರ (ಇಬಿಸಿ ಪ್ರಕಟಿತ) ಕೆಂಪು (ಕೋಟ್ ಪಾಕೆಟ್) ಆವೃತ್ತಿಯನ್ನು ಹೊಂದಿದ್ದಾರೆಯೇ ಹೊರತು ಚೀನಾದ ಸಂವಿಧಾನವನ್ನಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು— ಸತ್ಯ ಪರಿಶೀಲನೆ ವಿವರಗಳು ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಕೆಂಪು ಬಣ್ಣದ ಪ್ರತಿಯನ್ನು ಪ್ರದರ್ಶಿಸುತ್ತಿರುವ ಚಿತ್ರವು ಅವರ ಅನೇಕ ರ‍್ಯಾಲಿಗಳಲ್ಲಿ ಕಂಡುಬಂದಿದೆ, ಅವರ ವಿರೋಧಿಗಳು […]
ಹೇಳಿಕೆ/Claim: ವಾರಣಾಸಿ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಎಣಿಕೆ ಮಾಡಿದ ಒಟ್ಟು ಮತಗಳು ಒಟ್ಟು ಚಲಾವಣೆಯಾದ ಮತಗಳನ್ನು ಮೀರಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ಹೇಳುತ್ತಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. 2019ರಲ್ಲಾಗಲೀ 2024ರಲ್ಲಾಗಲೀ ವಾರಣಾಸಿಯಲ್ಲಿ ಮೋದಿಗೆ ಹಾಕಲಾದ ಮತಗಳು ಒಟ್ಟು ಮತದಾರರ ಸಂಖ್ಯೆಯನ್ನು ಮೀರಿಲ್ಲ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಗೆ ಸ್ಪರ್ಧಿಸಿದ್ದ ವಾರಣಾಸಿಯಲ್ಲಿ ಇವಿಎಂಗಳಲ್ಲಿ (ವಿದ್ಯುನ್ಮಾನ ಮತಯಂತ್ರ) ಚಲಾವಣೆಯಾದ ಮತಗಳಿಗಿಂತ ಹೆಚ್ಚು ಮತಗಳು ಮೋದಿಯವರಿಗಾಗಿ ಬಿದ್ದಿವೆ ಎಂಬ ವೀಡಿಯೊವನ್ನು […]
ಹೇಳಿಕೆ/Claim: ವ್ಯಾಪಕ ಪ್ರತಿಭಟನೆಯ ಹೊರತಾಗಿಯೂ ತಮಿಳುನಾಡಿನ DMK ಸರ್ಕಾರವು ಗಣೇಶ ದೇವಸ್ಥಾನವನ್ನು ಕೆಡವಿದೆ ಎಂಬ ಹೇಳಿಕೆಯೊಂದಿಗೆ ದೇವಾಲಯವನ್ನು ಕೆಡವುತ್ತಿರುವ ವೀಡಿಯೊವನ್ನು ತೋರಿಸಲಾಗುತ್ತಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿರುವ ನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಕಲ್ಲಲುರಿಚಿಯಲ್ಲಿ ನೀರಾವರಿ ಕಾಲುವೆಯನ್ನು ಅತಿಕ್ರಮಿಸಿದ್ದ 36 ಕಟ್ಟಡಗಳನ್ನು ಕೆಡವುವ ಕಾರ್ಯಾಚರಣೆಯ ಭಾಗವಾಗಿ ಪುರಸಭೆಯ ಅಧಿಕಾರಿಗಳು ದೇವಾಲಯವದ ಕೆಡವುವಿಕೆಯನ್ನು ಆರಂಭಿಸಿದರು. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ– ಸತ್ಯ ಪರಿಶೀಲನೆ ವಿವರಗಳು ವ್ಯಾಪಕ ವಿರೋಧದ ಹೊರತಾಗಿಯೂ ತಮಿಳುನಾಡಿನ ಡಿಎಂಕೆ ಸರ್ಕಾರವು ಗಣಪತಿ […]
ಹೇಳಿಕೆ/Claim: ಜೂನ್ 5, 2024 ರಂದು ರಾಹುಲ್ ಗಾಂಧಿಯವರು ದೇಶದಿಂದ ಓಡಿಹೋಗುವುದನ್ನು ಬೋರ್ಡಿಂಗ್ ಪಾಸ್ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಟಿಕೆಟ್ ಅನ್ನು ಮಾರ್ಫ್ ಮಾಡಲಾಗಿದೆ, ಡಿಜಿಟಲ್ ಮಾಧ್ಯಮವನ್ನು ಬಳಸಿ ಮಾರ್ಪಡಿಸಲಾಗಿದೆ ಮತ್ತು ಏರ್‌ಲೈನ್‌ಗಳು ಬಳಸುವ PDF417 ಬಾರ್‌ಕೋಡ್ ಅನ್ನು ಇದು ಹೊಂದಿಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು ಭಾರತದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಭಾರಿ ಬಹುಮತ ಪಡೆಯುವುದೆಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ […]
ಹೇಳಿಕೆ/Claim:ಲದಾಖ್‌ನ ಪರಿಸರವಾದಿ ಸೋನಮ್ ವಾಂಗ್‌ಚುಕ್ ರವರು ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆ ಒತ್ತಾಯಿಸುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಾರ್ಗಿಲ್ ಕುರಿತು ಪರಿಸರವಾದಿ ಸೋನಮ್ ವಾಂಗ್ಚುಕ್ ರವರ ಹೇಳಿಕೆಯನ್ನು ತಿರುಚಿ ಸಂದರ್ಭಕ್ಕೆ ವಿಪರೀತವಾಗಿ ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು: ಲಡಾಖ್ ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಲು ಒತ್ತಾಯಿಸುತ್ತಿದ್ದಾರೆ ಎನ್ನುವ ಒಂದು ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋನಮ್ ವಾಂಗ್‌ಚುಕ್, “ಜನಮತಗಣನೆಗಳು ಮತ್ತು ಜನಾಭಿಪ್ರಾಯ ಸಂಗ್ರಹಣೆಗಳು ನಡೆಯಬೇಕು […]
ಹೇಳಿಕೆ/Claim: ದೆಹಲಿ ಸಚಿವೆ ಅತಿಶಿಯವರ ವೀಡಿಯೊ ಕ್ಲಿಪ್ ನಲ್ಲಿ ಆಕೆ ದೆಹಲಿಯ ವಿದ್ಯುತ್ ಅನುದಾನವು ನಾಳೆಯಿಂದ (ಮೇ 23, 2024) ನಿಲ್ಲುತ್ತದೆ ಎಂದು ಹೇಳುತ್ತಿರುವುದನ್ನು ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಸಚಿವೆ ಅತಿಶಿಯವರ ಏಪ್ರಿಲ್ 2023 ರ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ. ತದ್ವಿರುದ್ಧವಾಗಿ, ಇತ್ತೀಚಿನ ಅಧಿಕೃತ ದೃಢೀಕರಣದ ಅನುಸಾರ ಉಚಿತ ವಿದ್ಯುತ್ ಅನುದಾನವು 2025 ರವರೆಗೆ ಮುಂದುವರಿಯಲಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಶನಿವಾರ, ಮೇ 25, 2024 […]
ಹೇಳಿಕೆ/Claim: ಕೀಟನಾಶಕಗಳ ಬಳಕೆಯ ಕಾರಣದಿಂದ ಹಲವಾರು ದೇಶಗಳು ಭಾರತದಿಂದ ತರಕಾರಿಗಳನ್ನು ನಿಷೇಧಿಸಿವೆ ಎಂದು ಪತ್ರಿಕಾ ಕ್ಲಿಪ್ಪಿಂಗ್ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ಪತ್ರಿಕಾ ಕ್ಲಿಪ್ಪಿಂಗ್ 2015ರದ್ದು, ಇದು ದೆಹಲಿ ಉಚ್ಚ ನ್ಯಾಯಾಲಯವು ಕೀಟನಾಶಕಗಳ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದ ಸುದ್ದಿ, ಇದು ಇತ್ತೀಚಿನದ್ದಲ್ಲ. ರೇಟಿಂಗ್: ದಾರಿತಪ್ಪಿಸುವ ಸುದ್ದಿ — ಸತ್ಯ ಪರಿಶೀಲನೆ ವಿವರಗಳು: ಕೀಟನಾಶಕಗಳ ಕಾರಣದಿಂದಾಗಿ ಹಲವಾರು ದೇಶಗಳು ಭಾರತದಿಂದ ಬರುವ ತರಕಾರಿಗಳನ್ನು ನಿಷೇಧಿಸಿವೆ ಎನ್ನುವ ಪತ್ರಿಕಾ ಸುದ್ದಿಯ ಕ್ಲಿಪ್ಪಿಂಗ್ ಅನ್ನು ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆಹಾರಪದಾರ್ಥಗಳ […]