ಅಂಬಾನಿ ಮದುವೆಯಲ್ಲಿ, ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಫೋಟೋಗೆ ನಿಂತಿಂದ್ದರಾ? ಸತ್ಯ ಪರಿಶೀಲನೆ

ಅಂಬಾನಿ ಮದುವೆಯಲ್ಲಿ, ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಫೋಟೋಗೆ ನಿಂತಿಂದ್ದರಾ?  ಸತ್ಯ ಪರಿಶೀಲನೆ

ಹೇಳಿಕೆ/Claim: ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಿಂತಿರುವ ವೈರಲ್ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.

ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಅವರನ್ನು ಒಂದೇ ಫ್ರೇಮಿನಲ್ಲಿರಿಸಲು ಚಿತ್ರವನ್ನು ಬದಲಾಯಿಸಲಾಗಿದೆ.

ರೇಟಿಂಗ್: ತಪ್ಪು ನಿರೂಪಣೆ -- 

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಕಳೆದ ಕೆಲವು ತಿಂಗಳುಗಳಿಂದ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಅಂಬಾನಿ ವಿವಾಹ ಸಂಭ್ರಮಗಳ ಜೊತೆಜೊತೆಗೆ ಐಶ್ವರ್ಯಾ ರೈ ಬಚ್ಚನ್ ರವರು ಸಲ್ಮಾನ್ ಖಾನ್ ರವರ ಜೊತೆ ಪೋಸ್ ನೀಡುತ್ತಿರುವ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಐಶ್ವರ್ಯಾ ಬಚ್ಚನ್ ಕುಟುಂಬದೊಂದಿಗೆ ಆಗಮಿಸಲಿಲ್ಲ, ಮತ್ತೀಗ ಅವರು ಸಲ್ಮಾನ್ ಭಾಯ್ ಜೊತೆ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಇದು ನನ್ನ ಹುಚ್ಚುತನದ  ಮಹಾಲೋಕ.” ಎಂಬ ಹೇಳಿಕೆಯೊಂದಿಗೆ ಚಿತ್ರದಲ್ಲಿ ಐಶ್ವರ್ಯಾ ರೈ ಅವರು ಸಲ್ಮಾನ್ ಖಾನ್ ಮತ್ತು ಸಹೋದರಿ ಅರ್ಪಿತಾ ಖಾನ್ ಅವರೊಂದಿಗೆ ಪೋಸ್ ಕೊಡುತ್ತಿರುವ ಫೋಟೋ ನೋಡಬಹುದು.

ಸಂದರ್ಭ ಸ್ಪಷ್ಟವಾಗಿದೆ. ಐಶ್ವರ್ಯಾ ರೈ ಬಚ್ಚನ್ ಅವರು ಜುಲೈ 12ರಂದು ತಮ್ಮ ಮಗಳು ಆರಾಧ್ಯ ಜೊತೆ ಅಂಬಾನಿಗಳ ವಿವಾಹ ಸ್ಥಳಕ್ಕೆ ಆಗಮಿಸಿದರು ಮತ್ತು ಈ ಸಮಾರಂಭದಲ್ಲಿ ಬಚ್ಚನ್ ಕುಟುಂಬದೊಂದಿಗಿನ ಫ್ಯಾಮಿಲಿ ಫೋಟೋ ಅವರಿಗೆ ತಪ್ಪಿಹೋಯಿತು. ಅಮಿತಾಭ್ ಬಚ್ಚನ್, ಅವರ ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್, ಪುತ್ರಿ ಶ್ವೇತಾ, ಅಳಿಯ ನಿಖಿಲ್ ನಂದಾ ಮತ್ತು ಮೊಮ್ಮಕ್ಕಳು ಸಾಮೂಹಿಕ  ಫೋಟೋಗೆ ಪೋಸ್ ನೀಡಿದರೆ, ಐಶ್ವರ್ಯಾ ಮತ್ತು ಆರಾಧ್ಯ ಬಹಳಷ್ಟು ತಡವಾಗಿ ಸ್ಥಳಕ್ಕೆ ತಲುಪಿದ್ದರಿಂದ ಈ ಫೋಟೊ ಅವರಿಗೆ ತಪ್ಪಿಹೋಯಿತು. ಇದು ಬಾಲಿವುಡ್ ಮಾಧ್ಯಮಗಳಲ್ಲಿ ಸಾಕಷ್ಟು ವಿವಾದವನ್ನೆಬ್ಬಿಸಿದೆ.

ಈ ವಿವಾದದೊಂದಿಗೆ ಕಾಕತಾಳೀಯವಾಗಿ, ನಮ್ಮ ಸುದ್ದಿಯಲ್ಲಿನ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು, ಏಕೆಂದರೆ ಬಾಲಿವುಡ್‌ನಲ್ಲಿ ಐಶ್ವರ್ಯಾ ಅವರು  ಸಲ್ಮಾನ್ ಖಾನ್‌ ರವರ ಪೂರ್ವದ ಸ್ನೇಹಿತೆಯಾಗಿದ್ದರೆಂಬುದು ತಿಳಿದ ವಿಷಯ.

FACT-CHECK

ಡಿಜಿಟೈ ಇಂಡಿಯಾ ಈ ಹಿಂದೆ ಇದೇ ರೀತಿಯ ಹೇಳಿಕೆಗಳ ನಿಜಸ್ವರೂಪ ಬಯಲಿಗೆಳೆದಿದ್ದರಿಂದ ಇತ್ತೀಚಿನ ಈ ವೈರಲ್ ಚಿತ್ರವನ್ನು ಸತ್ಯ ಪರಿಶೀಲನೆಗೆ ಕೈಗೆತ್ತಿಕೊಂಡಿತು.  ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಇದು ತಿದ್ದಿದ ಫೋಟೋ ಎಂಬುದು ಕಂಡುಬಂತು. ಸಲ್ಮಾನ್ ಖಾನ್ ತಮ್ಮ ಸಹೋದರಿ ಅರ್ಪಿತಾ ಅವರೊಂದಿಗೆ ಕಾಣಿಸಿಕೊಂಡಿರುವ ಮೂಲ ವೀಡಿಯೊ ಇಲ್ಲಿದೆ. ಆದರೆ ಹೇಳಿಕೆಯಲ್ಲಿ ತಿಳಿಸಿರುವಂತೆ ಐಶ್ವರ್ಯಾ ರೈ ಬಚ್ಚನ್ ಅವರು ಇದರಲ್ಲೆಲ್ಲೂ ಕಾಣಿಸುವುದಿಲ್ಲ.

ಹಾಗೆಯೇ, ವಿವಾಹ ಸ್ಥಾಳದಲ್ಲಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳೊಂದಿಗಿರುವ ಚಿತ್ರವನ್ನು ಈ ಕೆಳಗಿನ ವೀಡಿಯೊದಲ್ಲಿ ಕಾಣಬಹುದು:

ಹೇಳಿಕೆಯಂತೆ, ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಇಬ್ಬರೂ ಫೋಟೋಗಾಗಿ ಒಂದೇ ಸ್ಥಳದಲ್ಲಿ ಒಟ್ಟಿಗೆ ನಿಂತಿಲ್ಲ ಎಂಬುದು ಈ ವೀಡಿಯೊ ತುಣುಕಿನಿಂದ ಸ್ಪಷ್ಟವಾಗಿದೆ. ಆದ್ದರಿಂದ, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ಹಳೆಯ ವಿವಾದದ ಕಾರಣದಿಂದಾಗಿ ಅವರನ್ನು ಒಟ್ಟಿಗೆ ತೋರಿಸಲು, ಈ ವೈರಲ್ ಫೋಟೋವನ್ನು ತಿದ್ದಿ ಬದಲಾಯಿಸಲಾಗಿದೆ.

ಇದನ್ನೂ ಓದಿ:
ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published.