ಹೇಳಿಕೆ/Claim : ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಶೂಟ್ ಅನ್ನು ತೋರಿಸುವುದಾಗಿ ಚಿತ್ರವು ಹೇಳಿಕೊಳ್ಳುತ್ತದೆ.
ಕಡೆನುಡಿ/Conclusion :ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಚಿತ್ರವು ಸಂಪೂರ್ಣವಾಗಿ AI- ರಚಿತವಾಗಿದ್ದು, ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ ಯಾವುದೇ ವಾಸ್ತವಿಕ ಕಾರ್ಯಕ್ರಮವನ್ನು ಚಿತ್ರಿಸುವುದಿಲ್ಲ. ಇದನ್ನು ಜೆಮಿನಿ ಬಳಸಿ ರಚಿಸಲಾಗಿದೆ ಮತ್ತು ಚಿತ್ರದಲ್ಲಿ ವಾಟರ್‌ಮಾರ್ಕ್ ಅನ್ನು ಕಾಣಬಹುದು.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಶೂಟ್ ಅನ್ನು ತೋರಿಸುತ್ತಿರುವ ಚಿತ್ರವೆಂದು ಹೇಳಿಕೊಂಡು ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘mrjethwani_’ ಅಂತಹ ಒಂದು ಪೋಸ್ಟ್ ಅನ್ನು “ಕೇರಳ ಪ್ರವಾಸದ ಫೋಟೋಶೂಟ್ ಫ್ರಾಂಡ್ಸ್…” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಲಗತ್ತಿಸಲಾದ ಚಿತ್ರದಲ್ಲಿ ಬಿಳಿ ಅಂಗಿ ಮತ್ತು ಸಾಂಪ್ರದಾಯಿಕ ಕೇರಳದ ಉಡುಪಿನಲ್ಲಿ, ಎತ್ತರದ ತೆಂಗಿನ ಮರದ ಕೆಳಗೆ ತೆಂಗಿನಕಾಯಿಗಳನ್ನು ಹೊತ್ತ ಉದ್ದನೆಯ ಬಿದಿರಿನ ಕಂಬವನ್ನು ಹಿಡಿದಿರುವ ಪ್ರಧಾನಿ ಮೋದಿಯವರನ್ನು ತೋರಿಸಲಾಗಿದೆ. ಕ್ಯಾಮೆರಾಗಳು, ಬೂಮ್ ಮೈಕ್‌ಗಳು ಮತ್ತು ಲೈಟಿಂಗ್ ಉಪಕರಣಗಳನ್ನು ಹೊಂದಿರುವ ವೃತ್ತಿಪರ ಚಿತ್ರತಂಡವು ಅವರನ್ನು ಸುತ್ತುವರೆದಿದ್ದು, ಇದು ಮೋದಿಯವರ ಕೇರಳ ಪ್ರಚಾರ ಭೇಟಿಯ ಸಮಯದಲ್ಲಿ ನಡೆದ ಫೋಟೋಶೂಟ್ ನ ತೆರ್ರೆಮರೆಯ ಚಿತ್ರ ಎಂಬುದನ್ನು ಸೂಚಿಸುತ್ತದೆ. ಪೋಸ್ಟ್ ಅನ್ನು ಕೆಳಗೆ ನೋಡಿ-
Kerala trip photo shoot Phraands… pic.twitter.com/wLJw1C8CCk
— Manish RJ (@mrjethwani__) April 5, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವುಗಳನ್ನು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ಈ ದೃಶ್ಯವು ನೈಜ ಘಟನೆಯಿಂದ ಬಂದದ್ದಲ್ಲ, ಇದನ್ನು ಕೃತಕವಾಗಿ ರಚಿಸಲಾಗಿದೆ, ಇದಕ್ಕೂ ಕೇರಳದಲ್ಲಿ ನರೇಂದ್ರ ಮೋದಿಯವರ ಭೇಟಿಗೂ ಯಾವುದೇ ಸಂಬಂಧವಿಲ್ಲ. ಚಿತ್ರದ ಮೇಲೆ ಗೋಚರಿಸುವ ವಾಟರ್‌ಮಾರ್ಕ್‌ನಿಂದ ತಿಳಿದುಬರುವಂತೆ ಇದು ಜೆಮಿನಿಯನ್ನು ಬಳಸಿಕೊಂಡು ರಚಿಸಲಾಗಿದೆ.
ಹೇಳಿಕೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “PM ಮೋದಿ ಕೇರಳ ಫೋಟೋಶೂಟ್” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು.
ಈ ಹುಡುಕಾಟದ ಫಲಿತಾಂಶಗಳು ನಮ್ಮನ್ನು ಪತ್ರಿಕಾ ಮಾಹಿತಿ ಸಂಸ್ಥೆಯ ಸತ್ಯ ಪರಿಶೀಲನಾ ಘಟಕದ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಕರೆದೊಯ್ಯವು, ಅಲ್ಲಿ ಈ ನಿಖರವಾದ ವೈರಲ್ ಚಿತ್ರವನ್ನು ನೇರವಾಗಿ ಉಲ್ಲೇಖಿಸಲಾಗಿತ್ತು. “ಪ್ರಧಾನಿ ನರೇಂದ್ರ ಮೋದಿಯವರು ಕೇರಳ ಭೇಟಿಯ ಸಮಯದಲ್ಲಿ ಫೋಟೋಶೂಟ್ ನಲ್ಲಿ ಭಾಗವಹಿಸಿದ್ದಾರೆ ಎನ್ನುವ ಒಂದು ವೈರಲ್ ಚಿತ್ರವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಚಿತ್ರವು ನಕಲಿ ಮತ್ತು AI ರಚಿತವಾಗಿದೆ” ಎಂದು PIB ತಿಳಿಸುತ್ತದೆ. ಇದಲ್ಲದೆ, ದೃಢೀಕೃತವಲ್ಲದ ವಿಷಯವನ್ನು ಹಂಚಿಕೊಳ್ಳಬಾರದೆಂದು PIB ಸಲಹೆ ನೀಡಿ, ಅಂತಹ ತಪ್ಪು ಮಾಹಿತಿಗಳನ್ನು ವರದಿ ಮಾಡಲು ಮಾಧ್ಯಮಗಳನ್ನು ಒದಗಿಸಿದೆ. ಈ ಪೋಸ್ಟ್ ಅನ್ನು ಕೆಳಗೆ ಕಾಣಬಹುದು-
View this post on Instagram

ಇದರ ನಂತರ, ಕೇರಳಕ್ಕೆ ಪ್ರಧಾನಿ ಮೋದಿಯವರ ವಾಸ್ತವಿಕ ಭೇಟಿಯ ಬಗ್ಗೆ ಮತ್ತು ನೈಜ ಘಟನೆಗಳ ಯಾವುದೇ ಕುರುಹುಗಳಿವೆಯೇ ಎಂಬುದರ ಬಗ್ಗೆ ನಾವು ಹುಡುಕಿದೆವು. ಏಪ್ರಿಲ್ 4, 2026ರಂದು ಕೊನೆಯದಾಗಿ ನವೀಕರಿಸಿದ ದ ಹಿಂದೂ ವರದಿಯ ಪ್ರಕಾರ, ಪ್ರಧಾನಿ ಮೋದಿ “ಏಪ್ರಿಲ್ 4 (ಶನಿವಾರ)ರಂದು NDAಯ ವಿಧಾನಸಭಾ ಚುನಾವಣಾ ಪ್ರಚಾರದ ಅಂಗವಾಗಿ ಕೇರಳಕ್ಕೆ ಭೇಟಿ ನೀಡುತ್ತಾರೆ” ಎನ್ನಲಾಗಿದೆ. ಪ್ರಧಾನಿ ಮೋದಿಯವರು “ತಿರುವಲ್ಲಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆ ಮತ್ತು ತಿರುವನಂತಪುರದಲ್ಲಿ ರೋಡ್ ಶೋನಲ್ಲಿ ಭಾಗವಹಿಸುತ್ತಾರೆ…” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. “ಪಕ್ಷದ ನಾಯಕರು ಮತ್ತು ಹತ್ತಿರದ ಕ್ಷೇತ್ರಗಳ NDA ಅಭ್ಯರ್ಥಿಗಳೊಂದಿಗೆ ಸಾರ್ವಜನಿಕ ಕ್ರೀಡಾಂಗಣದಲ್ಲಿ ದೊಡ್ಡ ಸಭೆಯನ್ನು ಉದ್ದೇಶಿಸಿ” ಮಾತನಾಡುವುದು ಮತ್ತಿತರ ಮಾಹಿತಿಗಳನ್ನೂ ಸಹ ಉಲ್ಲೇಖಿಸಲಾಗಿದೆ. ವರದದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಮತ್ತೊಂದು ಆನ್ಮನೋರಮಾ ವರದಿಯು ಈ ಘಟನೆಗಳನ್ನು ದೃಢಪಡಿಸುತ್ತದೆ, ಪ್ರಧಾನಿ ಮೋದಿಯವರು “ತಿರುವನಂತಪುರದಲ್ಲಿ ರೋಡ್ ಶೋ ನಡೆಸಲು ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ನಿರ್ಧರಿಸಲಾಗಿದೆ” ಎಂದು ಉಲ್ಲೇಖಿಸಿದೆ. “ಸಮೀಪದ ವಿಧಾನಸಭಾ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರು… ಕೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ” ಎಂದು ವರದಿ ಹೇಳುವುದರೊಂದಿಗೆ, “ಸುಮಾರು 30,000 ಜನರು… ಭಾಗವಹಿಸುವ ಸಾಧ್ಯತೆಯಿದೆ” ಎಂದಿದೆ. ಆದರೆ, ಪ್ರಧಾನಿ ಮೋದಿಯವರು ಆಯೋಜಿಸಿದ ಯಾವುದೇ ಫೋಟೋಶೂಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಕೊನೆಯದಾಗಿ, ಚಿತ್ರದ ಕೆಳ-ಬಲಭಾಗದಲ್ಲಿ ನಾವು ಜೆಮಿನಿ ಲೋಗೋವನ್ನು ಗಮನಿಸಿದೆವು, ಚಿತ್ರವನ್ನು AI ಬಳಸಿ ರಚಿಸಲಾಗಿದೆ ಎಂದು ಇದು ಸಾಬೀತುಪಡಿಸುತ್ತದೆ. ನಾವು ಹೇಳಿಕೆಯಲ್ಲಿರುವ ಚಿತ್ರವನ್ನು ಡೌನ್‌ಲೋಡ್ ಮಾಡಿ, ಚಿತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹೈವ್ ಮಾಡರೇಶನ್‌ನ AI ಡಿಟೆಕ್ಟರ್ ನಲ್ಲಿ ಅದನ್ನು ಹಾಕಿ ನೋಡಿದೆವು. ಈ ಫೋಟೋ ನಿಜವಾಗಿಯೂ 99.9% AI ರಚಿತವಾಗಿದೆ ಎಂದು ಫಲಿತಾಂಶಗಳು ಸಾಬೀತುಪಡಿಸಿವೆ. ಎರಡೂ ಸ್ಕ್ರೀನ್‌ಶಾಟ್‌ಗಳನ್ನು ಕೆಳಗೆ ಕಾಣಬಹುದು-

ಆದ್ದರಿಂದ, ಹೇಳಿಕೆಯು ಸಂಪೂರ್ಣವಾಗಿ ಸುಳ್ಳು.
ಇದನ್ನೂ ಓದಿ:
ದುಬೈಯಲ್ಲಿ ಕಪ್ಪು ಸಿಂಹವನ್ನು ಹರಾಜಿನಲ್ಲಿ ಮಾರಾಟ ಮಾಡುತ್ತಿರುವುದನ್ನು ನಿಜವಾಗಿಯೂ ಈ ವೀಡಿಯೊದಲ್ಲಿ ತೋರಿಸಲಾಗುತ್ತಿದೆಯೇ? ಸತ್ಯ ಪರಿಶೀಲನೆ
ಆಪಲ್ CEO ಟಿಮ್ ಕುಕ್ ತಮ್ಮ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ
