ಆಪಲ್ CEO ಟಿಮ್ ಕುಕ್ ತಮ್ಮ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ

ಆಪಲ್ CEO ಟಿಮ್ ಕುಕ್ ತಮ್ಮ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಆಪಲ್ CEO ಟಿಮ್ ಕುಕ್ ತಮ್ಮ ಹುದ್ದೆಯಿಂದ ಕೆಳಗಿಳಿದು ಶೀಘ್ರದಲ್ಲೇ ನಿವೃತ್ತರಾಗಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಡೆನುಡಿ/Conclusion : ಈ ಹೇಳಿಕೆ ಸುಳ್ಳು. ಟಿಮ್ ಕುಕ್ ಅವರ ನಿವೃತ್ತಿಯ ಬಗ್ಗೆ ಆಪಲ್ ಸಂಸ್ಥೆಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಬದಲಾಗಿ, ಟಿಮ್ ಕುಕ್ ಮಾರ್ಚ್ 2026ರಲ್ಲಿ ‘ಗುಡ್ ಮಾರ್ನಿಂಗ್ ಅಮೇರಿಕಾ’ದ ಸಂದರ್ಶನದಲ್ಲಿ ಸಾರ್ವಜನಿಕವಾಗಿ ಈ ವಿಷಯದ ಕುರಿತು ಮಾತನಾಡಿ ಅದನ್ನು ನಿರಾಕರಿಸಿದ್ದಾರೆ.

ರೇಟಿಂಗ್/Rating : ಸುಳ್ಳು

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಆಪಲ್ CEO ಟಿಮ್ ಕುಕ್ ತಮ್ಮ ಸ್ಥಾನದಿಂದ ಕೆಳಗಿಳಿದು ನಿವೃತ್ತರಾಗಲಿದ್ದಾರೆ ಎಂದು ಕಳೆದ ಕೆಲವು ತಿಂಗಳುಗಳಿಂದ ಹಲವಾರು ವರದಿಗಳು ಊಹಿಸಿವೆ. ನವೆಂಬರ್ 2025ರಲ್ಲಿ ಪ್ರಕಟವಾದ ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಆಪಲ್ ನಾಯಕತ್ವ ಪರಿವರ್ತನೆಗೆ “ಸಿದ್ಧತೆಗಳು ತೀವ್ರಗೊಂಡಿವೆ”, ಒಳಗಿನವರು ಕುಕ್ “ಮುಂದಿನ ವರ್ಷದಷ್ಟು ಶೀಘ್ರದಲ್ಲೇ” ಕೆಳಗಿಳಿಯಬಹುದು ಎಂದು ಸೂಚಿಸಿದ್ದು ಹಾರ್ಡ್‌ವೇರ್ ಮುಖ್ಯಸ್ಥ ಜಾನ್ ಟರ್ನಸ್ ಉತ್ತರಾಧಿಕಾರಿಯಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ ಎನ್ನಲಾಗಿದೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ.

ಬಿಸ್ನೆಸ್ ವರ್ಲ್ಡ್ ಮತ್ತು ನ್ಯೂಸ್‌ಬೈಟ್ಸ್ ಸೇರಿದಂತೆ ಹಲವಾರು ಮಾಧ್ಯಮಗಳು ಈ ಬೆಳವಣಿಗೆಗಳ ಕುರಿತು ವರದಿ ಮಾಡಿದಾಗ ಈ ಊಹಾಪೋಹವು ಜನವರಿ 2026ರಲ್ಲಿ ಹೊಸತಾಗಿ ವೇಗವನ್ನು ಪಡೆದುಕೊಂಡಿತು, ಇವುಗಳನ್ನು ಕ್ರಮವಾಗಿ ಇಲ್ಲಿ ಮತ್ತು ಇಲ್ಲಿ ವಿವರಿಸಲಾಗಿದೆ.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಟಿಮ್ ಕುಕ್ ಅವರ ನಿವೃತ್ತಿಯನ್ನು ದೃಢೀಕರಿಸುವ ಆಪಲ್‌ನ ಯಾವುದೇ ಅಧಿಕೃತ ಘೋಷಣೆ ಕಂಡುಬಂದಿಲ್ಲ; ವಾಸ್ತವವಾಗಿ, ಆತ ಮಾರ್ಚ್ 2026ರ ಗುಡ್ ಮಾರ್ನಿಂಗ್ ಅಮೇರಿಕಾ ಸಂದರ್ಶನದಲ್ಲಿ ನೇರವಾಗಿ ಈ ವಿಷಯವನ್ನೆತ್ತಿ, ಈ ಊಹಾಪೋಹವನ್ನು ತಳ್ಳಿಹಾಕಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಾವು ಮೊದಲು “ಆಪಲ್ CEO ಟಿಮ್ ಕುಕ್ ನಿವೃತ್ತಿ ಘೋಷಣೆ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಆದಾಗ್ಯೂ, ಆಪಲ್‌ನ ಅಧಿಕೃತ ವೇದಿಕೆ ಅಥವಾ ಇತರ ಚರ್ಚಾ ವೇದಿಕೆಗಳಲ್ಲಿ ನಮಗೆ ಯಾವುದೇ ಅಧಿಕೃತ ದೃಢೀಕರಣ ಸಿಗಲಿಲ್ಲ. ಕುಕ್ ಸ್ವತಃ ತಮ್ಮ ನಿವೃತ್ತಿ ಯೋಜನೆಗಳು ಅಥವಾ ತಮ್ಮ ಪಾತ್ರದಿಂದ ಕೆಳಗಿಳಿಯುವ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಾಕಿಲ್ಲ.

ಇದರ ನಂತರ, ಟಿಮ್ ಕುಕ್ ಅವರೊಂದಿಗಿನ ABCಯ ಗುಡ್ ಮಾರ್ನಿಂಗ್ ಅಮೇರಿಕಾ ಸಂದರ್ಶನವನ್ನು ನಾವು ನೋಡಿದೆವು, ಅದರ ಶೀರ್ಷಿಕೆ ಹೀಗಿತ್ತು: “ಟಿಮ್ ಕುಕ್ ಆಪಲ್‌ನ 50ನೇ ವಾರ್ಷಿಕೋತ್ಸವ, AI ಮತ್ತು ಗೌಪ್ಯತೆಯ ಭವಿಷ್ಯದ ಕುರಿತು ಮಾತನಾಡುತ್ತಾರೆ”. ನಿವೃತ್ತಿ ವದಂತಿಗಳ ಕುರಿತಾದ ಪ್ರಶ್ನೆಗಳಿಗೆ ಕುಕ್ ಪ್ರತಿಕ್ರಿಯಿಸುತ್ತಾ, “ನಾನು ಮಾಡುತ್ತಿರುವ ಕೆಲಸವನ್ನು ನಾನು ತುಂಬಾ ಇಷ್ಟ ಪಡುತ್ತೇನೆ” ಎಂದು ಹುದ್ದೆಯಿಂದ ಕೆಳಗಿಳಿಯುವ ಬಗೆಗಿನ ಸುದ್ದಿಯನ್ನು ಅಲ್ಲಗಳೆದರು. ಆಪಲ್‌ನೊಂದಿಗಿನ ತಮ್ಮ ಇಪ್ಪತ್ತೆಂಟು ವರ್ಷಗಳ ಪ್ರಯಾಣವನ್ನು ನೆನೆಯುತ್ತಾ, ಕುಕ್ “ನಾನು ಆಪಲ್‌ಗೆ ಕಾಲಿಟ್ಟೆ ಮತ್ತು ಅಂದಿನಿಂದ ಪ್ರತಿ ದಿನವೂ ನನಗೆ ಬಹಳ ಇಷ್ಟಕರವಾದ್ದು… ಆಪಲ್ ಇಲ್ಲದ ಜೀವನವನ್ನು ಊಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ಭಾಗದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಟಿಮ್ ಕುಕ್ ಅವರೊಂದಿಗಿನ ಅದೇ ಗುಡ್ ಮಾರ್ನಿಂಗ್ ಅಮೇರಿಕಾ ಸಂದರ್ಶನವನ್ನು ಮಾರ್ಚ್ 17, 2026ರಂದು ಅವರ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ. 4:30ರ ಸಮಯಮುದ್ರೆಗೆ, ಸಂದರ್ಶಕರು ಕುಕ್ ತಮ್ಮ CEO ಪಾತ್ರದಿಂದ “ಸ್ವಲ್ಪ ಹಿಂದೆ ಸರಿಯಲು…” ಬಯಸಿದ್ದರೆಂದು ಹೇಳಿರುವ ವರದಿಗಳಿವೆ ಎಂದು ಉಲ್ಲೇಖಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕುಕ್, “ನಾನು ಹಾಗೆ ಹೇಳಿಲ್ಲ… ಹರಡುತ್ತಿರುವುದು ಒಂದು ವದಂತಿ… ನಾನು ಮಾಡುವ ಕೆಲಸವನ್ನು ನಾನು ಆಳವಾಗಿ ಪ್ರೀತಿಸುತ್ತೇನೆ” ಎಂದು ಹೇಳುತ್ತಾರೆ.

ಜಾನ್ ಟರ್ನಸ್ 2001ರಲ್ಲಿ ಆಪಲ್‌ಗೆ ಸೇರಿದ್ದ ಹಾರ್ಡ್‌ವೇರ್ ಎಂಜಿನಿಯರಿಂಗ್‌ನ ಹಿರಿಯ ಉಪಾಧ್ಯಕ್ಷರು, ಮತ್ತು ಆತ CEO ಟಿಮ್ ಕುಕ್ ಅವರಿಗೆ ವರದಿ ಮಾಡುತ್ತಿದ್ದಾರೆ ಎಂದು ಡಿಜಿಟೈ ಇಂಡಿಯಾಗೆ ತಿಳಿದುಬಂತು. ಆತ ಕಂಪನಿಯ ಹಾರ್ಡ್‌ವೇರ್ ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸುತ್ತಾರೆ. ಫೆಬ್ರವರಿ 8, 2026ರಂದು ಪ್ರಕಟವಾದ ಟೈಮ್ಸ್ ನೌ ವರದಿಯ ಪ್ರಕಾರ, ಕುಕ್ ಗೆ”ಐದು ವರ್ಷಗಳ ನಂತರ, ಹತ್ತು ವರ್ಷಗಳ ನಂತರ ಯಾರು ಅಧಿಕಾರದಲ್ಲಿರುತ್ತಾರೆ” ಎಂಬುದರ ಯೋಚನೆಯ “ಗೀಳು” ಎಂದು ಉಲ್ಲೇಖಿಸಲಾಗಿದೆ. ಇತ್ತೀಚಿನ ಕಾರ್ಯನಿರ್ವಾಹಕರ ನಿರ್ಗಮನವನ್ನು ವಯಸ್ಸು ಮತ್ತು ಸಮಯಕ್ಕೆ ಸಂಬಂಧಿಸಿದ “ನೈಸರ್ಗಿಕ ವಿಷಯ” ಎಂದು ಆತ ರೂಪಿಸಿದ್ದಾರೆ.

ಆದಾಗ್ಯೂ, ಗುಡ್ ಮಾರ್ನಿಂಗ್ ಅಮೇರಿಕಾ ಸಂದರ್ಶನದಲ್ಲಿ ಟಿಮ್ ಕುಕ್ ಅವರ ಸ್ಪಷ್ಟೀಕರಣವು ಅವರು ಕೆಳಗಿಳಿಯಲು ಆತುರಪಡುತ್ತಿಲ್ಲ ಎಂದು ದೃಢಪಡಿಸುತ್ತದೆ. ಹೀಗಾಗಿ, ಕುಕ್ ನಿವೃತ್ತಿಯ ಬಗ್ಗೆ ಅಥವಾ ಆತ ಆಪಲ್ CEO ಪಾತ್ರದಿಂದ ಕೆಳಗಿಳಿಯುವ ಬಗ್ಗೆ ಇರುವ ಯಾವುದೇ ಹೇಳಿಕೆ ಸುಳ್ಳು.


ಇದನ್ನೂ ಓದಿ:

ಈ ಚಿತ್ರ ನಿಜವಾಗಿಯೂ ವರ್ಷದ ನ್ಯಾಷನಲ್ ಜಿಯಾಗ್ರಫಿಕ್ ಪ್ರಶಸ್ತಿ ವಿಜೇತ ಛಾಯಾಚಿತ್ರವೇ? ಸತ್ಯ ಪರಿಶೀಲನೆ

ಚೀನಾದ ಸಂಪೂರ್ಣ ಮಹಿಳಾ SWAT ತಂಡವು ಭಾರತದ ಪುರುಷರ ತಂಡವನ್ನು ಸೋಲಿಸಿತೇ? ಸತ್ಯ ಪರಿಶೀಲನೆ

 

Leave a Reply

Your email address will not be published.