ರಿಷಿ ಸುನಾಕ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದರೇ? ಸತ್ಯ ಪರಿಶೀಲನೆ

ರಿಷಿ ಸುನಾಕ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ರಿಷಿ ಸುನಾಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಡೆನುಡಿ/Conclusion : ಈ ಹೇಳಿಕೆ ಸುಳ್ಳು. UKಯ ಮಾಜಿ ಪ್ರಧಾನಿ ರಿಷಿ ಸುನಾಕ್ ರವರಿಂದ ಇದನ್ನು ದೃಢೀಕರಿಸುವ ಯಾವುದೇ ಅಧಿಕೃತ ಹೇಳಿಕೆಗಳಿಲ್ಲ. ಅಕ್ಷತಾ ಮೂರ್ತಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ, ಮತ್ತು ಯಾವುದೇ ಮಾಧ್ಯಮಗಳು ಈ ಸುದ್ದಿಯನ್ನು ದೃಢಪಡಿಸಿಲ್ಲ ಅಥವಾ ವರದಿ ಮಾಡಿಲ್ಲ.

ರೇಟಿಂಗ್/Rating : ಸುಳ್ಳು

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

UKಯ ಮಾಜಿ ಪ್ರಧಾನಿ ರಿಷಿ ಸುನಾಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿಯವರ ಅನಾರೋಗ್ಯದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಗ್ಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರ ‘deepak.gusain.58118774’ ಈ ಮುಂದಿನ ಶೀರ್ಷಿಕೆಯೊಂದಿಗೆ ಅಂತಹ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ: “ಭಾವುಕ ಅಪ್ಡೇಟ್: ಅಕ್ಷತಾ ಮೂರ್ತಿಯವರ ಪತಿ ರಿಷಿ ಸುನಾಕ್, ತಮ್ಮ ಪತ್ನಿಯ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಹಠಾತ್ ವೈದ್ಯಕೀಯ ತುರ್ತು ಸ್ಥಿತಿಯಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಈ ಕಷ್ಟದ ಸಮಯದಲ್ಲಿ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ…” ಪೋಸ್ಟ್‌ನೊಂದಿಗೆ ರಿಷಿ ಸುನಾಕ್ ಅವರ ಹೇಳಿಕೆಯಂತೆ ಕಾಣುವ ಚಿತ್ರವನ್ನು ಲಗತ್ತಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಈ ಬಳಕೆದಾರ ಫೇಸ್‌ಬುಕ್‌ನಲ್ಲಿಯೂ ಅದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದಕ್ಕೆ 9,800ಕ್ಕೂ ಹೆಚ್ಚು ಲೈಕ್‌ಗಳು ದೊರಕಿವೆ.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. UK ಮಾಜಿ ಪ್ರಧಾನಿ ರಿಷಿ ಸುನಾಕ್ ಅವರ ಯಾವುದೇ ಅಧಿಕೃತ ಹೇಳಿಕೆಯು ಇದನ್ನು ಬೆಂಬಲಿಸುವುದಿಲ್ಲ. ಅಕ್ಷತಾ ಮೂರ್ತಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ಮತ್ತು ಯಾವುದೇ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಗಳು ಅಂತಹ ಘಟನೆಯನ್ನು ವರದಿ ಮಾಡಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಾವು ಮೊದಲು “ರಿಷಿ ಸುನಾಕ್ ತಮ್ಮ ಪತ್ನಿ ಅಕ್ಷತಾ ಮೂರ್ತಿಯವರ ಆರೋಗ್ಯದ ಬಗ್ಗೆ ಹೇಳಿಕೆ” ಎಂಬ ಪದಗಳೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಆದಾಗ್ಯೂ, ವಿಶ್ವಾಸಾರ್ಹ ಮಾಧ್ಯಮಗಳಲ್ಲಿ ಯಾವುದೇ ವರದಿಗಳು ಅಥವಾ ರಿಷಿ ಸುನಾಕ್ ಅವರ ಸಾಮಾಜಿಕ ಜಾಲತಾಣಗಳಿಂದ ಯಾವುದೇ ಅಪ್ಡೇಟ್ ಗಳು ನಮಗೆ ಕಂಡುಬಂದಿಲ್ಲ. ಅಂತರ್ಜಾಲದಾದ್ಯಂತ ಹುಡುಕಾಟ ನಡೆಸಿದರೂ ಅಕ್ಷತಾ ಮೂರ್ತಿಯವರ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ತುರ್ತುಸ್ಥಿತಿ ಅಥವಾ ಸುನಾಕ್ ಅವರ ಯಾವುದೇ ಹೇಳಿಕೆಯ ಬಗ್ಗೆ ಯಾವುದೇ ವರದಿಗಳು ದೊರಕಿಲ್ಲ.

ಇದರ ನಂತರ, ಅಕ್ಷತಾ ಮೂರ್ತಿ ಮತ್ತು ಆಕೆಯ ಹೇಳಿಕೆಗಳಿಗೆ ಸಂಬಂಧಿಸಿದ ಇತ್ತೀಚಿನ ವರದಿಗಳನ್ನು ನಾವು ಪರಿಶೀಲಿಸಿದೆವು. ಫೆಬ್ರವರಿ 2, 2026ರಂದು ಪ್ರಕಟವಾದ TOI ಲೇಖನದಲ್ಲಿ ಅಕ್ಷತಾ ಮೂರ್ತಿ “ಆತ [ರಿಷಿ ಸುನಾಕ್] ನನ್ನ ಕೊರತೆಗಳನ್ನು ತುಂಬುವವ ಎಂದು ನಾನು ಯಾವಾಗಲೂ  ಹೇಳುತ್ತೇನೆ. ಅದು ಒಂದು ಸುಂದರವಾದ ಸಂಕೇತ, ಅಲ್ಲವೇ” ಎಂದು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಲೇಖನದಲ್ಲಿ ಸುನಕ್ ಅವರನ್ನು ಅಕ್ಷತಾ ಭೇಟಿಯಾದ್ದು, ಇಬ್ಬರದೂ ಆದ ಪರರ್ಸ್ಪರ ಧ್ಯೇಯ ಮತ್ತು ದಂಪತಿಗಳ ನಡುವಿನ ಪರಸ್ಪರ ಬೆಂಬಲದ ಬಗ್ಗೆ ಮತ್ತಷ್ಟು ಚರ್ಚಿಸಲಾಗಿದೆ. ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ಅಸ್ವಸ್ಥರಾಗಿದ್ದಾರೆ ಎಂಬುದರ ಕುರಿತು ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ, ಕೆಳಗಿನ ವಿಭಾಗವನ್ನು ನೋಡಿ-

ಭಾರತದ 2026ರ AI ಶೃಂಗಸಭೆಯ ಸಮಯದಲ್ಲಿ ರಿಷಿ ಸುನಾಕ್ ಅವರ ತಮಾಷೆಯ ಹೇಳಿಕೆಯನ್ನು ಫೆಬ್ರವರಿ 21, 2026 ರಂದು ಪ್ರಕಟವಾದ ಮತ್ತೊಂದು TOI ವರದಿಯು ಚರ್ಚಿಸುತ್ತದೆ. ಆತ ತಮಾಷೆಯಾಗಿ ಹೇಳಿದರು, “ನಾನು ಕುಟುಂಬದೊಂದಿಗಿನ ಊಟದ ಸಮಯದಲ್ಲಿ ಅವರದೇ (ಅತ್ತೆ-ಮಾವ) ಮಟ್ಟದಲ್ಲಿ ಮುಂದುವರೆಯಲು ಸಾಧ್ಯವಾದರೆ, ನಾನು ಬಹುಶಃ ಶೃಂಗಸಭೆಯ ಚರ್ಚೆಗಳನ್ನು ನಿಭಾಯಿಸಬಹುದು.” ಈ ಹೇಳಿಕೆಯು ಜನಸಮೂಹವನ್ನು ನಗೆಗಡಲಲ್ಲಿ ತೇಲಿಸಿತು, ಆದರೆ ಸುನಾಕ್ ತಮ್ಮ ಪತ್ನಿಯ ಅನಾರೋಗ್ಯದ ಬಗ್ಗೆ ಅಥವಾ ಆಕೆ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾತನಾಡಿದ ಯಾವುದೇ ನಿದರ್ಶನಗಳಿಲ್ಲ.

ಮುಂದೆ, ಮೂಲಕ್ಕೆ ಸಂಬಂಧಿಸಿದಂತೆ ಈ ಹೇಳಿಕೆಯನ್ನು ಮಾಡಿದ ವ್ಯಕ್ತಿ ಮತ್ತು ಅವರ ಖಾತೆಯನ್ನು ನಾವು ಪರಿಶೀಲಿಸಿದೆವು. ಅದೇ ಬಳಕೆದಾರರು ರಿಷಿ ಸುನಾಕ್ ಅವರ ಅನಾರೋಗ್ಯದ ಬಗ್ಗೆ ಇದೇ ರೀತಿಯ ನಕಲಿ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಕಾಣಬಹುದು ಮತ್ತು ಆತ UK ಸಂಸತ್ತಿನಲ್ಲಿ ಕುಸಿದು ಬಿದ್ದ ಬಗ್ಗೆ ತಪ್ಪಾಗಿ ಇಲ್ಲಿ ಕಾಣಬಹುದಾದಂತೆ ಹಂಚಿಕೊಂಡಿದ್ದಾರೆ. ಈ ಎರಡೂ ನಕಲಿ ಪೋಸ್ಟ್‌ಗಳ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು-

ಹೇಳಿಕೆಯಲ್ಲಿ ಬಳಸಲಾದ ಚಿತ್ರದ ವಿಷಯದಲ್ಲಿ ನಡೆಸಿದ ಹುಡುಕಾಟದಲ್ಲಿ  ನಮಗೆ ಇಂಡಿಯಾ ಟುಡೇಯ ವರದಿ ಕೈಸಿಕ್ಕಿತು, ಇದನ್ನು ಕೊನೆಯದಾಗಿ ಸೆಪ್ಟೆಂಬರ್ 10, 2023ರಂದು ನವೀಕರಿಸಲಾಗಿದೆ. ಅದರಲ್ಲಿರುವ ಚಿತ್ರದಲ್ಲಿ, ಎರಡು ದಿನಗಳ G20 ಶೃಂಗಸಭೆಯ ಸಮಯದಲ್ಲಿ ದೆಹಲಿಯ ಅಕ್ಷರಧಾಮ ದೇವಾಲಯದಲ್ಲಿ ಮಾಜಿ UK ಪ್ರಧಾನಿ ರಿಷಿ ಸುನಾಕ್ ಮತ್ತು ಪತ್ನಿ ಅಕ್ಷತಾ ಮೂರ್ತಿಯವರನ್ನು ತೋರಿಸಲಾಗಿದೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ಕಾಣಬಹುದು-

ಅಕ್ಷತಾ ಮೂರ್ತಿಯವರ ಇನ್‌ಸ್ಟಾಗ್ರಾಮ್ ಅನ್ನು ಪರಿಶೀಲಿಸಿದಾಗ, ಅವರ ನಡುವಿನ ಮೋಜಿನ ಹಾಡಿನ ಸವಾಲನ್ನು ಪ್ರದರ್ಶಿಸುವ ಇತ್ತೀಚಿನ ಪೋಸ್ಟ್‌ಗಳು ನಮಗೆ ಕಂಡುಬಂದವು. ಮಕ್ಕಳಲ್ಲಿ ಸಂಖ್ಯೆಗಳ ಬಗೆಗಿನ ಆತ್ಮವಿಶ್ವಾಸವನ್ನು ಬೆಳೆಸಲು, ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್ ಇಬ್ಬರೂ ಕಥೆ ಪುಸ್ತಕಗಳನ್ನು ಹಂಚುತ್ತಿರುವ ಪೋಸ್ಟ್ ಕೂಡ ಇತ್ತು. ಅಷ್ಟೇ ಅಲ್ಲದೆ, ರಿಷಿ ಸುನಾಕ್ ಆಸ್ಪತ್ರೆಯ ಹಾಸಿಗೆಯಲ್ಲಿರುವ ಬಗೆಗಿನ ಇತ್ತೀಚಿನ ತಪ್ಪು ಮಾಹಿತಿಯನ್ನು ಫುಲ್ ಫ್ಯಾಕ್ಟ್ ತಳ್ಳಿಹಾಕಿದೆ ಮತ್ತು ಅಕ್ಷತಾ ಮೂರ್ತಿಯವರ ಬಗೆಗಿನ ಈ ಪೋಸ್ಟ್‌ಗಳು ಸಹ ಸುಳ್ಳು.

ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

ಆಸ್ಕರ್ 2026ರ ಕಾರ್ಯಕ್ರಮದ ಸಮಯದಲ್ಲಿ ಟಿಮತಿ ಶಾಲಮೆಟ್ ನಿಜವಾಗಿಯೂ ಮೆಟ್ಟಿಲುಗಳಿಂದ ಕೆಳಗೆ ಬಿದ್ದರೇ? ಸತ್ಯ ಪರಿಶೀಲನೆ

ಹೆಚ್ಚುವರಿ 10% ಸುಂಕದಿಂದಾಗಿ ಭಾರತವು ಅಮೆರಿಕಕ್ಕೆ 28% ಸುಂಕವನ್ನು ಪಾವತಿಸಲಿದೆಯೇ? ಸತ್ಯ ಪರಿಶೀಲನೆ

 

 

Leave a Reply

Your email address will not be published.