ಹೇಳಿಕೆ/Claim : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಫ್ಘಾನಿಸ್ತಾನ ಭಾರತದ ರಾಷ್ಟ್ರಗೀತೆಯನ್ನು ನುಡಿಸುತ್ತಿರುವುದು ಮತ್ತು ಧ್ವಜವನ್ನು ಹಾರಿಸುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
ಕಡೆನುಡಿ/Conclusion :ಹೇಳೀಕೆ ಸುಳ್ಳು. ಈ ಕ್ಲಿಪ್ ಭಾರತದ ಉತ್ತರ ಪ್ರದೇಶದ ಸಹರಾನ್ಪುರದಲ್ಲಿರುವ ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಮ್ ದಿಯೋಬಂದ್ನಲ್ಲಿ ನಡೆದ ಗಣರಾಜ್ಯೋತ್ಸವದ ಹಳೆಯ ವೀಡಿಯೊವಾಗಿದೆ. ವಿಶ್ವಾಸಾರ್ಹ ಸುದ್ದಿ ವರದಿಗಳು ಮತ್ತು ಸರ್ಕಾರಿ ಮೂಲಗಳು ಇದನ್ನು ದೃಢಪಡಿಸಿವೆ ಮತ್ತು ಈ ಕ್ಲಿಪ್ ಇತ್ತೀಚಿನ ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ ಮತ್ತು ಇದು ಅಫ್ಘಾನಿಸ್ತಾನದಿಂದ ಬಂದದ್ದಲ್ಲ.
ರೇಟಿಂಗ್/Rating : ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಅಫ್ಘಾನಿಸ್ತಾನವು ಭಾರತದ ರಾಷ್ಟ್ರಗೀತೆಯನ್ನು ನುಡಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘rightwingchora’ ಅಂತಹ ಕ್ಲಿಪ್ ಅನ್ನು: “ಅಂತರ್ಜಾಲದಲ್ಲಿ ಎಂತಹ ಸುಂದರ ವಿಷಯ. ಅಫ್ಘಾನಿಸ್ತಾನವು ಭಾರತದ ರಾಷ್ಟ್ರಗೀತೆ “ಜನ ಗನ ಮನ”ವನ್ನು ನುಡಿಸುತ್ತಿದೆ” ಉದಾರವಾದಿಗಳು ಇನ್ನಷ್ಟು ಅಳಲಿದ್ದಾರೆ”, ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. 167,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ ಈ ಪೋಸ್ಟ್ ಜೊತೆಗೆ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಮಸೀದಿಯ ಮುಂದೆ ಭಾರತದ ರಾಷ್ಟ್ರಗೀತೆ ನುಡಿಸುತ್ತಿರುವುದನ್ನು ಗೌರವಯುತವಾಗಿ ನಿಂತಿದ್ದ ದೊಡ್ಡ ಜನಸಮೂಹವು ನೋಡುತ್ತಿರುವ 29 ಕ್ಷಣಗಳ ಕ್ಲಿಪ್ ಅನ್ನು ಲಗತ್ತಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-
What a beautiful thing on Internet
Afghanistan playing India’s national Anthem “Jan Gan Man”
Liberals gonna cry more 🔥pic.twitter.com/SYnQUWUwWr
— Right Singh (@rightwingchora) March 4, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ವೀಡಿಯೊ ಭಾರತದ ಉತ್ತರ ಪ್ರದೇಶದ ಸಹರಾನ್ಪುರದಲ್ಲಿರುವ ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಮ್ ದಿಯೋಬಂದ್ನಲ್ಲಿ ನಡೆದ ಗಣರಾಜ್ಯೋತ್ಸವದ ಹಳೆಯ ಕ್ಲಿಪ್ ಆಗಿದೆ. ಈ ದೃಶ್ಯಗಳು ಇತ್ತೀಚಿನ ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಂಬಂಧಿಸಿದ್ದಲ್ಲ ಮತ್ತು ಅಫ್ಘಾನಿಸ್ತಾನದಿಂದ ಬಂದದ್ದಲ್ಲ ಎಂದು ದೃಢೀಕೃತ ಸುದ್ದಿ ವರದಿಗಳು ಮತ್ತು ಸರ್ಕಾರಿ ಮೂಲಗಳು ಖಚಿತಪಡಿಸುತ್ತವೆ.
ಸಂದರ್ಭದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ‘inh24x7’ ಎಂಬ ಬಳಕೆದಾರರು ಅಪ್ಲೋಡ್ ಮಾಡಿದ ಇನ್ಸ್ಟಾಗ್ರಾಂ ರೀಲ್ ದೊರಕಿತು, ಅದರ ಶೀರ್ಷಿಕೆ ಹಿಂದಿ ಭಾಷೆಯಲ್ಲಿ ಹೀಗಿತ್ತು: गणतंत्र दिवस के अवसर पर दारुल उलूम देवबंद में राष्ट्रीय ध्वज तिरंगा फहराया गया। इस मौके पर देशभक्ति और एकता का संदेश दिया गया, जिसकी तस्वीरें और वीडियो सोशल मीडिया पर चर्चा में हैं ಇದು ಕನ್ನಡಾನುವಾದ ಹೀಗಿದೆ: ‘ಗಣರಾಜ್ಯೋತ್ಸವದ ಸಂದರ್ಭದಲ್ಲಿ, ದಾರುಲ್ ಉಲೂಮ್ ದಿಯೋಬಂದ್ನಲ್ಲಿ ರಾಷ್ಟ್ರಧ್ವಜ, ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಈ ಸಂದರ್ಭದಲ್ಲಿ ದೇಶಭಕ್ತಿ ಮತ್ತು ಏಕತೆಯ ಸಂದೇಶವನ್ನು ಸಾರಲಾಯಿತು, ಅದರ ಚಿತ್ರಗಳು ಮತ್ತು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.’ ಪೋಸ್ಟ್ನ ಸ್ಕ್ರೀನ್ಶಾಟ್ ಅನ್ನು ಕೆಳಗೆ ನೋಡಿ
View this post on Instagram

ಇದಲ್ಲದೆ, ದಾರುಲ್ ಉಲೂಮ್ ದಿಯೋಬಂದ್ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾದ ಬಗ್ಗೆ ಇತರ ಬಳಕೆದಾರರು ಇದೇ ರೀತಿಯ ಕ್ಲಿಪ್ಗಳನ್ನು ಪೋಸ್ಟ್ ಮಾಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಇದರ ನಂತರ, ಹೆಚ್ಚಿನ ವಿವರಗಳಿಗಾಗಿ ನಾವು ” ದಾರು ಉಲೂಮ್ ದಿಯೋಬಂದ್ ನಲ್ಲಿ ಭಾರತೀಯ ರಾಷ್ಟ್ರಗೀತೆ ಮತ್ತು ತ್ರಿವರ್ಣ ಧ್ವಜ ಹಾರಿಸಲಾಯಿತು, ಗಣರಾಜ್ಯೋತ್ಸವ 2026″ ಎಂಬ ಪದಗಳೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ನವಭಾರತ್ ಟೈಮ್ಸ್ ವರದಿಯ ಪ್ರಕಾರ (ಮೂಲತಃ ಹಿಂದಿಯಲ್ಲಿ, ಕನ್ನಡಕ್ಕೆ ಅನುವಾದಿಸಲಾಗಿದೆ), “ಜನವರಿ 26ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ದಾರುಲ್ ಉಲೂಮ್ ಕ್ಯಾಂಪಸ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು, ಜೊತೆಗೆ ರಾಷ್ಟ್ರಗೀತೆಯನ್ನೂ ನುಡಿಸಲಾಯಿತು.” ” ದಾರುಲ್ ಉಲೂಮ್ ದಿಯೋಬಂದ್ ಈ ದೇಶದ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ ಎಂದು ಜನವರಿ 26ರ ವೀಡಿಯೊ ಮತ್ತೊಮ್ಮೆ ಸಾಬೀತುಪಡಿಸಿದೆ” ಎಂದೂ ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಆದ್ದರಿಂದ, ಈ ಹೇಳಿಕೆ ಸುಳ್ಳು.
***************************************************************************
ಇದನ್ನೂ ಓದಿ:
ಈ ಚಿತ್ರ ನಿಜವಾಗಿಯೂ ವರ್ಷದ ನ್ಯಾಷನಲ್ ಜಿಯಾಗ್ರಫಿಕ್ ಪ್ರಶಸ್ತಿ ವಿಜೇತ ಛಾಯಾಚಿತ್ರವೇ? ಸತ್ಯ ಪರಿಶೀಲನೆ
