ನೈಜೀರಿಯಾದ ಎಲ್ಲಾ ಜಾಹೀರಾತುಗಳಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

ನೈಜೀರಿಯಾದ ಎಲ್ಲಾ ಜಾಹೀರಾತುಗಳಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ನೈಜೀರಿಯಾ ದೇಶವು ಎಲ್ಲಾ ಜಾಹೀರಾತುಗಳಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಿದ ಮೊದಲ ದೇಶವಾಗಿದೆ.

ಕಡೆನುಡಿ/Conclusion : ಹೇಳಿಕೆ ದಾರಿತಪ್ಪಿಸುವಂತಿದೆ. ಈ ನೀತಿಯು 2022ರದು ಮತ್ತು ನೈಜೀರಿಯಾದ ಜಾಹೀರಾತು ನಿಯಂತ್ರಣ ಮಂಡಳಿ (ARCON) ಇದನ್ನು ಹೊರಡಿಸಿದೆ, ಇದು ಎಲ್ಲಾ ಜಾಹೀರಾತುಗಳಲ್ಲಿ ವಿದೇಶಿ ಮಾಡೆಲ್ ಗಳನ್ನು ಮತ್ತು ಧ್ವನಿ ಕಲಾವಿದರನ್ನು ನಿಷೇಧಿಸುತ್ತದೆ. ಆದಾಗ್ಯೂ, ಇದು ಜನಾಂಗದ ಭೇದವಿಲ್ಲದೆ ಎಲ್ಲಾ ವಿದೇಶಿ ಪ್ರಜೆಗಳಿಗೆ ಅನ್ವಯಿಸುತ್ತದೆ ಮತ್ತು ಹೇಳಿಕೆಯಲ್ಲಿ ಸೂಚಿಸಿದಂತೆ ಬಿಳಿಯರು ಅಥವಾ ಬ್ರಿಟಿಷ್ ಮಾಡೆಲ್ ಗಳಿಗೆ ಮಾತ್ರ ಸೀಮಿತವಲ್ಲ.

ರೇಟಿಂಗ್/Rating : ದಾರಿತಪ್ಪಿಸುವಂತಿದೆ.

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ನೈಜೀರಿಯಾ ದೇಶವು ಜಾಹೀರಾತು ಉದ್ಯಮದಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಿದ ಮೊದಲ ದೇಶವಾಗಿದೆ ಎಂಬ ಹೇಳಿಕೆಯನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ಫೈಟ್‌ಸ್ಟೋರೇಜ್’ ಈ ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: ‘ನೈಜೀರಿಯಾವು ಎಲ್ಲಾ ಜಾಹೀರಾತುಗಳಲ್ಲಿ ಬಿಳಿ ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಿದ ಮೊದಲ ದೇಶವಾಗಿದೆ. “ನಮ್ಮಲ್ಲಿ 200 ಮಿಲಿಯ ಸುಂದರ ಜನರಿದ್ದಾರೆ.. ನಾವು ನಮ್ಮವರನ್ನೇ ಬಳಸೋಣ”. ಇದರಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿರುವ ನೈಜೀರಿಯನ್ ಮಾಡೆಲ್ ಗಳ ಗುಂಪಿನ ಚಿತ್ರವನ್ನು ಒಳಗೊಂಡಿದೆ. ಈ ಪೋಸ್ಟ್ 1.2 ಮಿಲಿಯಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ನಿಯಂತ್ರಣವನ್ನು 2022ರಲ್ಲಿ ನೈಜೀರಿಯಾದ ಜಾಹೀರಾತು ನಿಯಂತ್ರಣ ಮಂಡಳಿ (ARCON) ಪರಿಚಯಿಸಿತ್ತು ಮತ್ತು ಜಾಹೀರಾತುಗಳಲ್ಲಿ ವಿದೇಶಿ ಮಾಡೆಲ್ ಗಳು ಮತ್ತು ಧ್ವನಿ ಕಲಾವಿದರ ಬಳಕೆಯನ್ನು ನಿಷೇಧಿಸಿತ್ತು. ಈ ನಿಷೇಧವು ಜನಾಂಗದ ಭೇದವಿಲ್ಲದೆ, ನೈಜೀರಿಯನ್ ಅಲ್ಲದ ಎಲ್ಲಾ ಪ್ರಜೆಗಳಿಗೆ ವ್ಯಾಪಕವಾಗಿ ಅನ್ವಯಿಸುತ್ತದೆ ಮತ್ತು ಹೇಳಿಕೆ ಸೂಚಿಸುವಂತೆ ಬಿಳಿಯರು ಅಥವಾ ಬ್ರಿಟಿಷ್ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ.

ಮೊದಲು ನಾವು “ನೈಜೀರಿಯಾ ಎಲ್ಲಾ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಿದೆ” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಈ ಹುಡುಕಾಟದಲ್ಲಿ ನಮಗೆ ಆಗಸ್ಟ್ 30, 2022ರಂದು ಪ್ರಕಟವಾದ ಅಲ್ ಜಜೀರಾ ವರದಿಯು ದೊರಕಿತು, ಅದರಲ್ಲಿ ನೈಜೀರಿಯಾ “ಉದ್ಯಮ ಮತ್ತು ಇತರೆಡೆಗಳಲ್ಲಿ ಹೆಚ್ಚಿನ ಸ್ಥಳೀಯ ಪಾಲ್ಗೊಳ್ಳುವಿಕೆಯನ್ನು ಬೆಳೆಸಲು ಪ್ರಯತ್ನಿಸುತ್ತಿದೆ” ಎಂದು ಹೇಳಲಾಗಿದೆ. ಇದು ದೇಶಕ್ಕೆ “ಹೊಸ ಹೆಮ್ಮೆಯ ಭಾವನೆಯನ್ನು” ಉಂಟುಮಾಡುತ್ತದೆ ಎಂದು ನೈಜೀರಿಯಾದ ಜಾಹೀರಾತು ಸಂಸ್ಥೆಗಳ ಸಂಘದ ಅಧ್ಯಕ್ಷ ಸ್ಟೀವ್ ಬಾಬೆಕೊ ರವರ ಹೇಳಿಕೆಯನ್ನು ನೀಡಿದ್ದಾರೆಂದು ಈ ವರದಿಯು ತಿಳಿಸಿದೆ. ವರದಿಯಿಂದ ಒಂದು ಭಾಗವನ್ನು ಕೆಳಗೆ ನೋಡಿ-

ಓಕೆಆಫ್ರಿಕಾ ಪ್ರಕಟಿಸಿದ ಮತ್ತೊಂದು ವರದಿಯು ಜಾಹೀರಾತುಗಳಲ್ಲಿ ವಿದೇಶಿ ಮಾಡೆಲ್ ಗಳನ್ನು ನಿಷೇಧಿಸುವ ನೈಜೀರಿಯಾದ ಕ್ರಮವನ್ನು ದೃಢಪಡಿಸುತ್ತದೆ. “ನೈಜೀರಿಯಾದ ಜಾಹೀರಾತು ಉದ್ಯಮವನ್ನು ಒಟ್ಟಾರೆಯಾಗಿ ಬೆಳೆಸುವ ಗುರಿಯನ್ನು ಹೊಂದಿರುವ ಸರ್ಕಾರಿ ನೀತಿಗಳಿಗೆ ಅನುಗುಣವಾಗಿ ಕೈಗೊಂಡಿರುವ ಕ್ರಮವೆಂದು ಸೂಚಿಸಿ ನೈಜೀರಿಯಾದ ಜಾಹೀರಾತು ನಿಯಂತ್ರಣ ಮಂಡಳಿ (ARCON) ಈ ಯೋಜನೆಯನ್ನು ಘೋಷಿಸಿತು” ಎಂದು ವರದಿ ಹೇಳುತ್ತದೆ. ಆದಾಗ್ಯೂ, ಜನಾಂಗೀಯ ಕೋನವಿದೆ ಅಥವಾ ನಿಷೇಧವನ್ನು ನಿರ್ದಿಷ್ಟವಾಗಿ ಬಿಳಿಯರು ಅಥವಾ ಬ್ರಿಟಿಷ್ ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಇದರ ನಂತರ, ನಾವು ನೈಜೀರಿಯಾದ ಜಾಹೀರಾತು ನಿಯಂತ್ರಣ ಮಂಡಳಿಯ (ARCON) ಅಧಿಕೃತ ಸೂಚನೆಯನ್ನು ಹುಡುಕಿದೆವು. ಆಗಸ್ಟ್ 22, 2022 ರಂದು 2022 ರ ARCON ಕಾಯ್ದೆ ಸಂಖ್ಯೆ 23ರ ಅಡಿಯಲ್ಲಿ ಹೊರಡಿಸಲಾದ ಇದು, “ಅಕ್ಟೋಬರ್ 1, 2022ರಿಂದ ಜಾರಿಗೆ ಬರುವಂತೆ ನೈಜೀರಿಯನ್ ಜಾಹೀರಾತು ಸ್ಥಳಗಳನ್ನು ಗುರಿಯಾಗಿಸಿದ ಅಥವಾ ಬಹಿರಂಗಪಡಿಸಿದ ಯಾವುದೇ ಜಾಹೀರಾತಿನಲ್ಲಿ ವಿದೇಶಿ ಮಾಡೆಲ್‌ಗಳು ಮತ್ತು ಧ್ವನಿ ಕಲಾವಿದರ ಬಳಕೆಯನ್ನು ನಿಷೇಧಿಸುತ್ತದೆ”. ಮುಂದುವರೆದು “ಎಲ್ಲಾ ಜಾಹೀರಾತುಗಳು… ನೈಜೀರಿಯನ್ ಮಾಡೆಲ್ ಮತ್ತು ಧ್ವನಿ ಕಲಾವಿದರನ್ನು ಮಾತ್ರ ಬಳಸಬೇಕು” ಎಂದು ನಿರ್ದೇಶನವು ಹೇಳುತ್ತದೆ. ನಡೆಯುತ್ತಿರುವ ಅಭಿಯಾನಗಳಿಗೆ ಅವುಗಳ ಅವಧಿ ಮುಗಿಸಲು ಅವಕಾಶವಿದೆ, ಆದಾಗ್ಯೂ, ಅಂತಹ ಜಾಹೀರಾತುಗಳ ನಿರಂತರ ಬಳಕೆಗಾಗಿ ಮರುಮೌಲ್ಯಮಾಪನಕ್ಕಾಗಿ ಸಲ್ಲಿಸುವ ನಂತರದ ಅರ್ಜಿಗಳನ್ನು ಅನುಮೋದಿಸಲಾಗುವುದಿಲ್ಲ…” ನಿರ್ದೇಶನವನ್ನು ಕೆಳಗೆ ನೋಡಿ-

ಈ ನೀತಿಯು ನಿರ್ದಿಷ್ಟವಾಗಿ ಬಿಳಿಯರು ಅಥವಾ ಬ್ರಿಟಿಷ್ ಜನರನ್ನು ಗುರಿಯಾಗಿರಿಸಿಕೊಂಡಿದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಸೂಚನೆಯ ಪ್ರಕಾರ, ಇದು ಎಲ್ಲಾ ವಿದೇಶಿ ಪ್ರಜೆಗಳಿಗೆ ಅನ್ವಯಿಸುತ್ತದೆ ಮತ್ತು ಪ್ರಪಂಚದಾದ್ಯಂತ ವಿದೇಶಿ ಮಾಡೆಲ್‌ಗಳು ಮತ್ತು ವಾಯ್ಸ್ ಓವರ್ ಕಲಾವಿದರ ಬಳಕೆಯನ್ನು ನಿಷೇಧಿಸುತ್ತದೆ. ನೀತಿಗೆ ಯಾವುದೇ ಜನಾಂಗೀಯ ಕೋನವಿಲ್ಲ, ಮತ್ತು ಹೇಳಿಕೆಯಲ್ಲಿ ಉಲ್ಲೇಖಿಸಿದಂತೆ 2026ರಲ್ಲಿ ಬಿಳಿಯರು ಅಥವಾ ಬ್ರಿಟಿಷ್ ಮಾಡೆಲ್‌ಗಳ ವಿರುದ್ಧ ಯಾವುದೇ ನವೀಕೃತ ನಿಷೇಧವನ್ನು ಘೋಷಿಸಲಾಗಿಲ್ಲ.

ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂತಿದೆ.

***********************************************************************

ಇದನ್ನೂ ಓದಿ:

ಸಿಂಥಟಿಕ್ ಆಹಾರ, ಮಾಂಸದ ಯೋಜನೆಯ ಕುರಿತು ಬಿಲ್ ಗೇಟ್ಸ್ ಅವರ ಯೋಜನೆಯನ್ನು ನಿಷೇಧಿಸಲು ಜಪಾನ್, ಚೀನಾ, ದಕ್ಷಿಣ ಕೊರಿಯಾ ಯೋಚಿಸುತ್ತಿವೆಯೇ? ಸತ್ಯ ಪರಿಶೀಲನೆ

ಮಾರುತಿ ಸುಜುಕಿ ಭಾರತದಲ್ಲಿ ₹4.99 ಲಕ್ಷಕ್ಕೆ ಹೊಸ ‘ಮಿನಿ ಬಸ್’ ಬಿಡುಗಡೆ ಮಾಡಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published.