ಹೆಚ್ಚುವರಿ 10% ಸುಂಕದಿಂದಾಗಿ ಭಾರತವು ಅಮೆರಿಕಕ್ಕೆ 28% ಸುಂಕವನ್ನು ಪಾವತಿಸಲಿದೆಯೇ? ಸತ್ಯ ಪರಿಶೀಲನೆ

ಹೆಚ್ಚುವರಿ 10% ಸುಂಕದಿಂದಾಗಿ ಭಾರತವು ಅಮೆರಿಕಕ್ಕೆ 28% ಸುಂಕವನ್ನು ಪಾವತಿಸಲಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸುಂಕವನ್ನು 18% ದಿಂದ 28%ಕ್ಕೆ ಏರಿಸಿದ್ದಾರೆ.

ಕಡೆನುಡಿ/Conclusion :ಹೇಳಿಕೆ ಸುಳ್ಳು. ಭಾರತೀಯ ಆಮದುಗಳ ಮೇಲಿನ ಸುಂಕವನ್ನು 18%ದಿಂದ 28%ಕ್ಕೆ ಹೆಚ್ಚಿಸಲು ಅಮೆರಿಕದಿಂದ ಯಾವುದೇ ವಿಶ್ವಾಸಾರ್ಹ, ದೃಢೀಕೃತ ಕ್ರಮ ಕಂಡುಬಂದಿಲ್ಲ. US ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಭಾರತದ ಸುಂಕವು 10 ಶೇಕಡಾ ಅಥವಾ 18 ಶೇಕಡಾದ ನಡುವೆ ಏರಿಳಿತಗೊಳ್ಳುತ್ತದೆಯೇ ಎಂಬುದು ಸದ್ಯಕ್ಕೆ ಖಚಿತವಲ್ಲ. ಭಾರತವು ತಾತ್ಕಾಲಿಕವಾಗಿ 10% ಸುಂಕವನ್ನು ಪಾವತಿಸತಕ್ಕದ್ದು ಎಂದು ಶ್ವೇತಭವನ ದೃಢಪಡಿಸಿದೆ.

ರೇಟಿಂಗ್/Rating : ಸುಳ್ಳು

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ವ್ಯಾಪಾರ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದ ಶೇಕಡಾ 18ರ ಬದಲು ಭಾರತ ಈಗ ಶೇಕಡಾ 28ರಷ್ಟು ಸುಂಕವನ್ನು USAಗೆ ಪಾವತಿಸಲಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ 10% ಸುಂಕ ವಿಧಿಸಿದ ನಂತರ, ಭಾರತವು ಈಗ USAಗೆ ರಫ್ತಿನ ಮೇಲೆ 28% ಸುಂಕವನ್ನು ಪಾವತಿಸುತ್ತದೆ, ಆದರೆ USA ಭಾರತಕ್ಕೆ ರಫ್ತಿನ ಮೇಲೆ 0% ಪಾವತಿಸುತ್ತದೆ ಎಂದು ದೃಢೀಕೃತ X ಬಳಕೆದಾರ ‘TikeshMeshram28’ ಅಂತಹ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಒಂದು ವೀಡಿಯೊ ಕ್ಲಿಪ್ ಅನ್ನು ಸೇರಿಸಲಾಗಿದ್ದು, “ಭಾರತದೊಂದಿಗೆ ಒಪ್ಪಂದವು ಅದ್ಭುತವಾಗಿದೆ. ಈಗ ಭಾರತ ನಮಗೆ ಸುಂಕಗಳನ್ನು ನೀಡುತ್ತಿದೆ, ನಾವು ಭಾರತಕ್ಕೆ ಸುಂಕಗಳನ್ನು ನೀಡುತ್ತಿಲ್ಲ.” ಎಂಬ ಟ್ರಂಪ್ ಅವರ ಉಲ್ಲೇಖವನ್ನು ಒಳಗೊಂಡಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಹೇಳಿಕೆ ಸುಳ್ಳು ಎಂದು ಕಂಡುಕೊಂಡಿತು. ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 18ರಿಂದ 28ಕ್ಕೆ ಹೆಚ್ಚಿಸಿದೆ ಎಂಬುದನ್ನು ತೋರಿಸುವ ಯಾವುದೇ ಪರಿಶೀಲಿಸಲಾದ ಅಥವಾ ಅಧಿಕೃತ ನಿರ್ಧಾರ ಕಂಡುಬಂದಿಲ್ಲ. US ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಅನ್ವಯವಾಗುವ ದರವು ಶೇಕಡಾ 10ಕ್ಕೆ ಸ್ಥಿರವಾಗಿರುತ್ತದೆಯೇ ಅಥವಾ ಶೇಕಡಾ 18ಕ್ಕೆ ಮರಳುತ್ತದೆಯೇ ಎಂಬುದರ ಕುರಿತು ಇನ್ನೂ ಅನಿಶ್ಚಿತತೆ ಇದೆ. ಭಾರತವು ಸದ್ಯಕ್ಕೆ ಶೇಕಡಾ 10ರಷ್ಟು ಸುಂಕವನ್ನು ಎದುರಿಸಲಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ ಮತ್ತು ಶೇಕಡಾ 28ಕ್ಕೆ ಹೆಚ್ಚಳವಾಗಿರುವುದನ್ನು ಸೂಚಿಸುವ ಯಾವುದೇ ಹೇಳಿಕೆ ಸುಳ್ಳು.

  1. ಫೆಬ್ರವರಿ 2, 2026ರ ವ್ಯಾಪಾರ ಒಪ್ಪಂದಕ್ಕೆ ಮುನ್ನ, ಭಾರತಕ್ಕೆ ಶೇಕಡಾ 25ರಷ್ಟು ಸುಂಕವನ್ನು ಹೇರಲಾಗಿತ್ತು. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಘೋಷಿಸಲಾದ ಹೊಸ ಒಪ್ಪಂದದ ಅಡಿಯಲ್ಲಿ ಈ ದರವನ್ನು ಶೇಕಡಾ 18ಕ್ಕೆ ಇಳಿಸಲಾಯಿತು.
  2. ಮುಂದೆ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ನಡುವೆ ಈಗಾಗಲೇ ಜಾರಿಯಲ್ಲಿರುವ ವ್ಯಾಪಾರ ಒಪ್ಪಂದದ ಬಗ್ಗೆ ನಾವು ತಿಳಿದುಬಂತು. ಫೆಬ್ರವರಿ 2, 2026 ರಂದು, ಭಾರತ ಮತ್ತು USA ವ್ಯಾಪಾರ ಒಪ್ಪಂದವನ್ನು ಘೋಷಿಸಿದವು, ಇದು ಭಾರತದ ಸುಂಕವನ್ನು 25%ದಿಂದ 18%ಕ್ಕೆ ಇಳಿಸಿತು. ಈ ಒಪ್ಪಂದದ ಕುರಿತು ಶ್ವೇತಭವನವು ಅಧಿಕೃತ ವಾಸ್ತವಾಂಶಗಳನ್ನು ಪ್ರಕಟಿಸಿತು.
  3. US ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕಗಳಲ್ಲಿ ಹೆಚ್ಚಿನದನ್ನು ರದ್ದುಗೊಳಿಸಿದ ನಂತರ ಟ್ರಂಪ್ ಅವರ ಆಡಳಿತವು “ಪ್ರಸ್ತುತ ವಿನಾಯಿತಿಗಳಲ್ಲಿ ಒಳಪಡದ ಎಲ್ಲಾ ಸರಕುಗಳ ಮೇಲೆ” ಶೇಕಡಾ 10 ರಷ್ಟು ಸುಂಕವನ್ನು ವಿಧಿಸಿದೆ ಎಂದು ನಮಗೆ ಒಂದು ವರದಿಯಿಂದ ತಿಳಿದುಬಂತು. 1974 ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಅನ್ನು ಬಳಸಿಕೊಂಡು ಟ್ರಂಪ್ ಈ 10 ಶೇಕಡಾ ಸುಂಕ ವಿಧಿಸಿದ್ದು, “ಅಧ್ಯಕ್ಷರು “ದೊಡ್ಡ ಮತ್ತು ಗಂಭೀರವಾದ ಯುನೈಟೆಡ್ ಸ್ಟೇಟ್ಸ್ ಬ್ಯಾಲೆನ್ಸ್-ಆಫ್-ಪೇಮೆಂಟ್ ಕೊರತೆಗಳನ್ನು” ಪರಿಹರಿಸಲು ಸುಂಕಗಳನ್ನು ಜಾರಿಗೆ ತರಲು” ಅನುವು ಮಾಡಿಕೊಡುತ್ತದೆ.  ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನ ಕೆಲವೇ ಗಂಟೆಗಳ ನಂತರ ಈ ಘೋಷಣೆಯನ್ನು ಮಾಡಲಾಯಿತು ಮತ್ತು ಫೆಬ್ರವರಿ 24, 2026ರ ಮಧ್ಯರಾತ್ರಿ 12:01 ESTರಿಂದ ಜಾರಿಗೆ ತರಲಾಯಿತು.

ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಫೆಬ್ರವರಿ 21, 2026ರಂದು ಟ್ರಂಪ್ ಘೋಷಿಸಿದ 10 ಶೇಕಡಾ ಜಾಗತಿಕ ಸುಂಕವನ್ನು, US-ಭಾರತ ವ್ಯಾಪಾರ ಒಪ್ಪಂದದ ಅಡಿಯಲ್ಲಿನ ಹಿಂದಿನ 18 ಶೇಕಡಾ ಪರಸ್ಪರ ಸುಂಕಕ್ಕೆ ಸೇರಿಸಿ, ಈ ಹೇಳಿಕೆಯ 28 ಶೇಕಡಾ ಸುಂಕದ ಅಂಕಿಯನ್ನು ಲೆಕ್ಕಮಾಡಲಾಗಿದೆ ಎಂದನಿಸುತ್ತದೆ. ಈ ಅರ್ಥೈಸುವಿಕೆಯು ತಪ್ಪಾಗಿದೆ ಏಕೆಂದರೆ ಸೆಕ್ಷನ್ 122ರ ಅಡಿಯಲ್ಲಿ ವಿಧಿಸಲಾದ ಹೊಸ 10 ಶೇಕಡಾ ಸುಂಕವು ರಾಷ್ಟ್ರ-ನಿರ್ದಿಷ್ಟವಾದ ಹಿಂದಿನ ಪರಸ್ಪರ ದರದ ಬದಲಿಯಾಗಿರುವಂಥದ್ದು, ಇದು ಅವುಗಳ ಮೇಲೆ ಸೇರಿಸುವ ಸುಂಕ ದರವಲ್ಲ. ಇದನ್ನು ಅರ್ಥಮಾಡಿಕೊಂಡ ನಂತರ, ಭಾರತವು 18 ಶೇಕಡಾ ಸುಂಕವನ್ನು ಎದುರಿಸುತ್ತಲೇ ಇದೆಯೇ ಅಥವಾ ದರವನ್ನು 10 ಶೇಕಡಕ್ಕೆ ಇಳಿಸಲಾಗಿದೆಯೇ ಎಂದು ನಾವು ಪರಿಶೀಲಿಸಿದೆವು.

ಫೆಬ್ರವರಿ 27, 2026 ರಂದು ದ ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯ ಪ್ರಕಾರ, US ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಪರಸ್ಪರ ಸುಂಕಗಳನ್ನು ರದ್ದುಗೊಳಿಸಿದ ನಂತರ “ಭಾರತವು ಹಿಂದಿನ 18 ಶೇಕಡದಿಂದ ಕಡಿಮೆಗೊಳಿಸಲಾದ 10 ಶೇಕಡಾ ಸುಂಕ ದರವನ್ನು ಈಗ ಎದುರಿಸುತ್ತಿದೆ.” ಇದೀಗ, ಭಾರತದ ಮೇಲೆ 10 ಪ್ರತಿಶತ ಸುಂಕವನ್ನು ವಿಧಿಸಲಾಗುತ್ತದೆ ಎಂದು ಶ್ವೇತಭವನವು ನಂತರ ಸ್ಪಷ್ಟಪಡಿಸಿದೆ. ವರದಿಯ ಒಂದು ಭಾಗವನ್ನು ಕೆಳಗೆ ವೀಕ್ಷಿಸಿ –

“ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಜಾಗತಿಕ ಸುಂಕವನ್ನು ಘೋಷಿಸಿದ ನಂತರ ಭಾರತದ ಮೇಲಿನ ಸುಂಕವು ತಾತ್ಕಾಲಿಕವಾಗಿ ಶೇಕಡಾ 10ಕ್ಕೆ ಇಳಿಯಲಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ” ಎಂದು ನ್ಯೂಸ್ ಆನ್ ಏರ್ ಪ್ರಕಟಿಸಿದ ವರದಿಯೂ ಇದನ್ನು ದೃಢಪಡಿಸಿದೆ. ಏತನ್ಮಧ್ಯೆ, ಎರಡೂ ಕಡೆಯವರು ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವೆಡೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಸಹ ಹೇಳಿದೆ, ಮುಂದಿನ ವಾರ ಭಾರತೀಯ ನಿಯೋಗವು ಅಮೆರಿಕಕ್ಕೆ ಭೇಟಿ ನೀಡಲಿದೆ. 28% ಸುಂಕವನ್ನು ಎಲ್ಲಿಯೂ ಉಲ್ಲೇಖಿಸಲಾಗಿದೆ ಅಥವಾ ವಿಧಿಸಲಾಗಿದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ದೊರಕಿಲ್ಲ.

ಕೊನೆಯದಾಗಿ, ಹೇಳಿಕೆಯಲ್ಲಿನ ವೀಡಿಯೊಗೆ ಸಂಬಂಧಿಸಿದಂತೆ ನೋಡುವುದಾದರೆ, ಇದನ್ನು CNN-ನ್ಯೂಸ್ 18 ಇಲ್ಲಿ ವರದಿ ಮಾಡಿದ ಪತ್ರಿಕಾಗೋಷ್ಠಿಯಿಂದ ತೆಗೆದುಕೊಳ್ಳಲಾಗಿದೆ. “ಏನೂ ಬದಲಾಗುವುದಿಲ್ಲ. ಅವರು ಸುಂಕಗಳನ್ನು ಪಾವತಿಸುವುದನ್ನು ಮುಂದುವರೆಸುತ್ತಾರೆ ಮತ್ತು ನಾವು ಸುಂಕಗಳನ್ನು ಪಾವತಿಸುವುದಿಲ್ಲ” ಎಂದು ಟ್ರಂಪ್ ಅವರ ಹೇಳಿಕೆಯನ್ನು ಸಹ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೆ, ಶ್ವೇತಭವನವು ದೃಢಪಡಿಸಿದಂತೆ, ಭಾರತವು ಈಗ ತಾತ್ಕಾಲಿಕವಾಗಿ ಶೇಕಡಾ 10ರಷ್ಟು ಸುಂಕವನ್ನು ಪಾವತಿಸಲಿದೆ ಮತ್ತು ಶೇಕಡಾ 18 ಅಲ್ಲ.

ಆದ್ದರಿಂದ, ಈ ಹೇಳಿಕೆ ಸುಳ್ಳು.

*********************************************************************************

ಇದನ್ನೂ ಓದಿ:

ಈ ವೈರಲ್ ವೀಡಿಯೊದಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿ ಕೆಳಗಿನಿಂದ ನೇರ ರೇಖೆಯಲ್ಲಿ ಪರ್ವತ ಹತ್ತುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ.

ಚೀನಾ ರೀಚಾರ್ಜ್ ಮಾಡದೆ 50 ವರ್ಷಗಳ ಕಾಲ ನಿರಂತರ ವಿದ್ಯುತ್ತನ್ನು ನೀಡುವ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಬಿಡುಗಡೆ ಮಾಡಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.