ಹೇಳಿಕೆ/Claim: ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಬಿಲ್ ಗೇಟ್ಸ್ ಅವರ ಪ್ರಯೋಗಾಲಯದಲ್ಲಿ ಬೆಳೆದ ಕೃತಕ ಮತ್ತು ಸಂಶ್ಲೇಷಿತ ಆಹಾರಗಳು ಅಥವಾ ಮಾಂಸವನ್ನು ನಿಷೇಧಿಸಲು ಸಿದ್ಧತೆ ನಡೆಸುತ್ತಿವೆ.
ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ನಿಯಂತ್ರಕ ನವೀಕರಣಗಳು, ಸರ್ಕಾರಿ ಹೇಳಿಕೆಗಳು ಮತ್ತು ಉದ್ಯಮ ವರದಿಗಳು ಅಂತಹ ಯಾವುದೇ ಕ್ರಮವನ್ನು ಬಹಿರಂಗಪಡಿಸುವುದಿಲ್ಲ. ಬದಲಾಗಿ, ಮೂರೂ ದೇಶಗಳು ಬೆಳೆಸಿದ ಮಾಂಸ ತಂತ್ರಜ್ಞಾನಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿವೆ ಮತ್ತು ಅದನ್ನು ಮುಂದುವರಿಸುತ್ತಿವೆ.
ರೇಟಿಂಗ್/Rating : ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ದಕ್ಷಿಣ ಏಷ್ಯಾದ ಕೆಲವು ದೇಶಗಳು ಬಿಲ್ ಗೇಟ್ಸ್ ಅವರ ಪ್ರಯೋಗಾಲಯದಲ್ಲಿ ಬೆಳೆದ ಆಹಾರವನ್ನು ನಿಷೇಧಿಸಲಿವೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘RealWester19512’ ಅಂತಹ ಒಂದು ಹೇಳಿಕೆಯನ್ನು “ಬ್ರೇಕಿಂಗ್ ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ಬಿಲ್ ಗೇಟ್ಸ್ ಅವರ ಪ್ರಯೋಗಾಲಯದಲ್ಲಿ ಬೆಳೆದ ಕೃತಕ ಮತ್ತು ಸಂಶ್ಲೇಷಿತ ಆಹಾರಗಳು ಅಥವಾ ಮಾಂಸವನ್ನು ನಿಷೇಧಿಸಲು ತಯಾರಿ ನಡೆಸುತ್ತಿವೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ 2 ಮಿಲಿಕ್ಕಿಂತಲೂ ಹೆಚ್ಚು ವೀಕ್ಷಣೆಗಳು ದೊರಕಿವೆ, ಅದನ್ನು ಕೆಳಗೆ ನೋಡಬಹುದು –
BREAKING🇺🇸❌🇨🇳🇰🇷🇯🇵 Japan, China and South Korea are preparing to ban Bill Gates’ lab-grown artificial and Synthetic foods or meat. pic.twitter.com/441NNMZGQh
— RealWestern (@RealWester19512) February 17, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಅಧಿಕೃತ ನೀತಿ ಅಪ್ಡೇಟ್ ಗಳು, ಸಾರ್ವಜನಿಕ ಹೇಳಿಕೆಗಳು ಮತ್ತು ಉದ್ಯಮ ವರದಿಗಳು ಈ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ವಾಸ್ತವವಾಗಿ, ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾಗಳು ಆಹಾರ ಭದ್ರತೆ ಮತ್ತು ದೀರ್ಘಾವಧಿಯ ಸುಸ್ಥಿರತೆಯನ್ನು ಬಲಪಡಿಸಲು ಬೆಳೆಸಿದ ಮಾಂಸದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಗಳೊಂದಿಗೆ ಮುಂದುವರಿಯುತ್ತಿವೆ.
ಈ ವಿಷಯದ ಬಗ್ಗೆ ತಿಳಿಯಲು ನಾವು ಮೊದಲು “ಬಿಲ್ ಗೇಟ್ಸ್ ಸಿಂಥಟಿಕ್ ಮಾಂಸ” ಎಂಬ ಪದಗಳೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಒಂದು ಲೇಖನದ ಪ್ರಕಾರ, ಮೀಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಗೇಟ್ಸ್ ಸಾಂಪ್ರದಾಯಿಕ ಜಾನುವಾರು ಸಾಕಣೆಯಿಂದ ಕೃತಕ ಅಥವಾ ಸಸ್ಯ ಆಧಾರಿತ ಮಾಂಸದ ನಿಟ್ಟಿನಲ್ಲಿ ಭಾಗಶಃ ಬದಲಾವಣೆಯನ್ನು ಪ್ರತಿಪಾದಿಸುತ್ತಿದ್ದಾರೆ. “ಈಗ ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪಾದನಾ ಮಾದರಿಯಲ್ಲಿ ಬದಲಾವಣೆಯ ಅಗತ್ಯವಾಗಿದೆ” ಎಂದು ಆತ ನಂಬುತ್ತಾರೆ ಮತ್ತು ಮುಖ್ಯ ಪರ್ಯಾಯವಾಗಿ “ಕೃತಕ ಮಾಂಸ ಮತ್ತು ಸಸ್ಯ ಆಧಾರಿತ ಉತ್ಪನ್ನಗಳನ್ನು ಮುಂದುವರಿಸುವುದನ್ನು” ಉತ್ತೇಜಿಸುತ್ತಾರೆ ಎಂದು ಲೇಖನವು ಉಲ್ಲೇಖಿಸುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ವೀಕ್ಷಿಸಿ-

ಗೇಟ್ಸ್ ರವರು ಪ್ರಯೋಗಾಲಯದಲ್ಲಿ ನಿರ್ಮಿತ ಕಾರ್ಬನ್ ಬೆಣ್ಣೆಯನ್ನು ಬೆಂಬಲಿಸಿದ್ದಾರೆ, ಅದು ನಿಜವಾದ ಬೆಣ್ಣೆಯ ರುಚಿಯನ್ನು ಹೊಂದಿದೆ ಎಂದು TOI ವರದಿಯು ಹೇಳುತ್ತದೆ. ಗ್ರೀನ್ ಕ್ವೀನ್ ನ ಮತ್ತೊಂದು ಲೇಖನವು ಗೇಟ್ಸ್ ಪಾಲು ಹೊಂದಿರುವ ಪರ್ಯಾಯ ಪ್ರೋಟೀನ್ ಕಂಪನಿಗಳ ಬಗ್ಗೆ ಬರೆಯುತ್ತದೆ.
ಇದಲ್ಲದೆ, ಬಿಲ್ ಗೇಟ್ಸ್ ಯಾವುದೇ ಸಂಶ್ಲೇಷಿತ ಆಹಾರ ಕಂಪನಿಯನ್ನು ನೇರವಾಗಿ ಹೊಂದಿಲ್ಲ, ಆತ ಅವುಗಳಲ್ಲಿ ಹೂಡಿಕೆ ಮಾತ್ರ ಮಾಡಿದ್ದಾರೆ.
ನಂತರ, ಜಪಾನ್ ಸಂಶ್ಲೇಷಿತ ಆಹಾರಗಳ ಮೇಲೆ ಯಾವುದೇ ನಿರ್ಬಂಧಗಳನ್ನು ನಿಷೇಧಿಸಲು ಅಥವಾ ಪ್ರಸ್ತಾಪಿಸಲು ತಯಾರಿ ನಡೆಸುತ್ತಿದೆಯೇ ಎಂದು ನಾವು ಪರಿಶೀಲಿಸಿದೆವು. ನವೆಂಬರ್ 16, 2025 ರಂದು ಪ್ರಕಟವಾದ ಫುಡ್ ಟೆಕ್ ಜಪಾನ್ ವರದಿಯಲ್ಲಿ ಉಲ್ಲೇಖಿಸಿರುವಂತೆ, “ಮಾಜಿ ಪ್ರಧಾನಿ ಫೂಮಿಯೊ ಕಿಶಿಡಾ ಫೆಬ್ರವರಿ 2023 ರಲ್ಲಿ ಸೆಲ್ಯುಲಾರ್ ಕೃಷಿಯಂತಹ ಪರ್ಯಾಯ-ಪ್ರೋಟೀನ್ ತಂತ್ರಜ್ಞಾನಗಳು ‘ಸುಸ್ಥಿರ ಆಹಾರ ಪೂರೈಕೆಯನ್ನು ಸಾಧಿಸುವ ದೃಷ್ಟಿಕೋನದಿಂದ ಪ್ರಮುಖ ತಂತ್ರಜ್ಞಾನಗಳು’ ಎಂದು ಹೇಳಿದ್ದಾರೆ”.
ಜಪಾನ್ ದೇಶವು ಜಪಾನ್ ಅಭಿವೃದ್ಧಿ ಕಾರ್ಯತಂತ್ರದ ಪ್ರಧಾನ ಕಚೇರಿಯ ಮೊದಲ ಸಭೆಯನ್ನು ನವೆಂಬರ್ 4, 2025 ರಂದು ನಡೆಸಿತು ಎಂದು ವರದಿಯು ಗಮನಿಸುತ್ತದೆ, ಇದು “ಆಹಾರ ತಂತ್ರಜ್ಞಾನ,” ‘ಸಂಶ್ಲೇಷಿತ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ,’ ಮತ್ತು ‘ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ ಗಳು’ ಸೇರಿದಂತೆ 17 ಕಾರ್ಯತಾಂತ್ರಿಕ ವಲಯಗಳನ್ನು ಗುರುತಿಸಿದೆ ಎನ್ನಲಾಗಿದೆ. ಜಪಾನ್ ಕೃತಕ ಮಾಂಸ ಅಥವಾ ಸಂಶ್ಲೇಷಿತ ಮಾಂಸವನ್ನು ನಿಷೇಧಿಸಲು ತಯಾರಿ ನಡೆಸುತ್ತಿರುವ ಬಗ್ಗೆ ನಮಗೆ ಯಾವುದೇ ಸುದ್ದಿ ಕಂಡುಬಂದಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ –
ಒಂದು ಲೇಖನದ ಪ್ರಕಾರ, ಚೀನಾದ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯವು ತನ್ನ ಅಧಿಕೃತ ಪಂಚವಾರ್ಷಿಕ ಕೃಷಿ ಯೋಜನೆಯನ್ನು ಬಿಡುಗಡೆ ಮಾಡಿದೆ, ಇದು ಮೊದಲ ಬಾರಿಗೆ ಬೆಳೆಸಿದ ಮಾಂಸವನ್ನು ನಿರ್ದಿಷ್ಟವಾಗಿ ಉಲ್ಲೇಖಿಸುತ್ತದೆ ಮತ್ತು ಸಾಂಪ್ರದಾಯಿಕ ಕೃಷಿ ಉದ್ಯಮವು ತರುವ ಪರಿಸರ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪರ್ಯಾಯ ಪ್ರೋಟೀನ್ಗಳಿಗೆ ಆದ್ಯತೆ ನೀಡುತ್ತಿದೆ.. ವರದಿಯ ಸ್ಕ್ರೀನ್ಶಾಟ್ ಅನ್ನು ಕೆಳಗೆ ನೋಡಿ.

ಇದರ ನಂತರ, ಜೋಸ್ ಫ್ಯೂಚರ್ ಫುಡ್ ನಿರ್ವಹಿಸಿರುವ ತನ್ನ ಅತಿದೊಡ್ಡ ಮಾಂಸ ಬೆಳುಯುವ ಘಟಕವನ್ನು ಚೀನಾ ದೇಶವು ಪೂರ್ಣಗೊಳಿಸಿದೆ ಎಂದು ನಮಗೆ ತಿಳಿದುಬಂದಿತು, ಇದರಲ್ಲಿ ಸ್ಕೇಲ್ಡ್ ಹಂದಿಮಾಂಸ ಉತ್ಪಾದನೆಗಾಗಿ 2,000-ಲೀಟರ್ ಜೈವಿಕ ರಿಯಾಕ್ಟರ್ ಮತ್ತು ವಾರ್ಷಿಕ 10-50 ಟನ್ ಸಾಮರ್ಥ್ಯವಿದೆ. ಈ ಪೈಲಟ್ ಸ್ಥಾವರವು ಪೂರ್ಣ ಉತ್ಪಾದನಾ ಸರಪಳಿಗಳನ್ನು “ಮತ್ತು ಕಡಿಮೆ-ವೆಚ್ಚದ ಸೀರಮ್-ಮುಕ್ತ ಮಾಧ್ಯಮವನ್ನು ದೊಡ್ಡ-ಪ್ರಮಾಣದ ಜೈವಿಕ ಸಂಸ್ಕರಣೆಯೊಂದಿಗೆ” ಸಂಯೋಜಿಸುತ್ತದೆ.
ದಕ್ಷಿಣ ಕೊರಿಯಾ ಸಂಶ್ಲೇಷಿತ ಮಾಂಸವನ್ನು ನಿಷೇಧಿಸಿದೆಯೇ ಎಂದು ಹುಡುಕಿದಾಗ, ಬದಲಾಗಿ ಈ ದೇಶವು ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ದೊಡ್ಡ ಹೂಡಿಕೆ ಮಾಡುತ್ತಿದೆ ಎಂದು ನಮಗೆ ತಿಳಿದುಬಂತು. ದಕ್ಷಿಣ ಕೊರಿಯಾದ ಉಯಿಸಿಯಾಂಗ್ ಕೌಂಟಿಯು ದೇಶದ ಮೊದಲ ಆಹಾರ ತಂತ್ರಜ್ಞಾನ ಸಂಶೋಧನಾ ಬೆಂಬಲ ಕೇಂದ್ರಕ್ಕಾಗಿ $10 ಮಿಲಿಯ ಸಾರ್ವಜನಿಕ ಹೂಡಿಕೆಯನ್ನು ಪಡೆದುಕೊಂಡಿತು, ಇದು ಸ್ಕೇಲಿಂಗ್ ಮತ್ತು ನಿಯಂತ್ರಕ ಅನುಮೋದನೆಗಳನ್ನು ಬೆಂಬಲಿಸಲು 2027ರಲ್ಲಿ ತೆರೆಯಲಿರುವ 2,660 ಚದರ ಮೀಟರ್ ಗಳ ಘಟಕವಾಗಿದೆ. ಅನುಗಾ ಪ್ರಕಟಿಸಿದ ಮತ್ತೊಂದು ಲೇಖನದಲ್ಲಿಯೂ ಸಹ ದಕ್ಷಿಣ ಕೊರಿಯಾದಲ್ಲಿ ರಾಷ್ಟ್ರೀಯ ಮಾಂಸ ಬೆಳೆಸುವ ಘಟಕವನ್ನು ಸ್ಥಾಪಿಸಲಾಗುವುದು ಎಂದು ದೃಢಪಡಿಸಲಾಗಿದೆ.
ಬಿಲ್ ಗೇಟ್ಸ್ ನೇರವಾಗಿ ಯಾವುದೇ ಸಂಶ್ಲೇಷಿತ ಆಹಾರ ಕಂಪನಿಯ ಸ್ವಾಮ್ಯ ಹೊಂದಿಲ್ಲವೆಂದಾದರೆ, ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಬಿಲ್ ಗೇಟ್ಸ್ ಅವರ ಪ್ರಯೋಗಾಲಯದಲ್ಲಿ ಬೆಳೆದ ಕೃತಕ, ಸಂಶ್ಲೇಷಿತ ಆಹಾರಗಳನ್ನು ನಿಷೇಧಿಸಲು ತಯಾರಿ ನಡೆಸುತ್ತಿವೆ ಎಂಬ ಮಾತು ಬರುವುದಿಲ್ಲ. ಇದಲ್ಲದೆ, ಜಪಾನ್, ಚೀನಾ ಅಥವಾ ದಕ್ಷಿಣ ಕೊರಿಯಾದಿಂದ ಸಂಶ್ಲೇಷಿತ ಆಹಾರ ಅಥವಾ ಮಾಂಸದ ಮೇಲೆ ಯಾವುದೇ ನಿಷೇಧ ಅಥವಾ ಬಿಲ್ ಗೇಟ್ಸ್ಗೆ ಸಂಬಂಧಿಸಿದ ಯಾವುದೇ ಕ್ರಮವನ್ನು ಸೂಚಿಸುವ ಯಾವುದೇ ಅಧಿಕೃತ ಹೇಳಿಕೆಗಳು ಅಥವಾ ನಿಯಮಗಳು ಇಲ್ಲ.
ಆದ್ದರಿಂದ, ಈ ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಮಾರುತಿ ಸುಜುಕಿ ಭಾರತದಲ್ಲಿ ₹4.99 ಲಕ್ಷಕ್ಕೆ ಹೊಸ ‘ಮಿನಿ ಬಸ್’ ಬಿಡುಗಡೆ ಮಾಡಿದೆಯೇ? ಸತ್ಯ ಪರಿಶೀಲನೆ
ಚೀನಾ ದೇಶವು ಇಸ್ರೇಲ್ನಲ್ಲಿ ಎಲ್ಲಾ ಹೊಸ ಹೂಡಿಕೆಗಳನ್ನು ನಿಷೇಧಿಸಿದೆಯೇ? ಸತ್ಯ ಪರಿಶೀಲನೆ
