ಚೀನಾದ ಸಂಪೂರ್ಣ ಮಹಿಳಾ SWAT ತಂಡವು ಭಾರತದ ಪುರುಷರ ತಂಡವನ್ನು ಸೋಲಿಸಿತೇ? ಸತ್ಯ ಪರಿಶೀಲನೆ

ಚೀನಾದ ಸಂಪೂರ್ಣ ಮಹಿಳಾ SWAT ತಂಡವು ಭಾರತದ ಪುರುಷರ ತಂಡವನ್ನು ಸೋಲಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim : UAEಯಲ್ಲಿ ನಡೆದ ಯುದ್ಧತಂತ್ರದ ಸ್ಪರ್ಧೆಯಲ್ಲಿ ಚೀನಾದ ಮಹಿಳಾ SWAT ತಂಡವು ಭಾರತೀಯ ಪುರುಷರ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡಿದೆ.

ಕಡೆನುಡಿ/Conclusion : ಹೇಳಿಕೆ ದಾರಿ ತಪ್ಪಿಸುವಂತಿದೆ. ವೀಡಿಯೊ ತುಣುಕುಗಳಲ್ಲಿನ ವ್ಯಾಖ್ಯಾನವು ಮಿಶಿತವಾಗಿದೆ ಹಾಗೂ ಚೀನಾದ ಮಹಿಳಾ SWAT ತಂಡವು ಭಾರತವನ್ನು ಮುಖಾಮುಖಿಯಾಗಿ ಎದುರಿಸಲಿಲ್ಲ. ಮಹಿಳಾ ತಂಡಗಳು ಮತ್ತು ಪುರುಷ ತಂಡಗಳು ಪರಸ್ಪರ ಸ್ಪರ್ಧಿಸುತ್ತಿರುವುದರ ಕುರಿತು ಯಾವುದೇ ಅಧಿಕೃತ ಫಲಿತಾಂಶಗಳಲ್ಲಿ  ತೋರಿಸಲಾಗಿಲ್ಲ.

ರೇಟಿಂಗ್/Rating : ದಾರಿ ತಪ್ಪಿಸುವಂತಿದೆ —

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ..

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

UAEಯಲ್ಲಿ ನಡೆದ ಯುದ್ಧತಂತ್ರದ ಪಂದ್ಯಾವಳಿಯಲ್ಲಿ ಚೀನಾದ ಮಹಿಳಾ SWAT ತಂಡವು ಭಾರತದ ಪುರುಷರ ತಂಡವನ್ನು ಸೋಲಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘PolymarketIntel’ ಈ ಹೇಳಿಕೆಯನ್ನು: UAE ಯುದ್ಧತಂತ್ರದ ಸ್ಪರ್ಧೆಯಲ್ಲಿ ಚೀನಾದ ಸಂಪೂರ್ಣ ಮಹಿಳಾ SWAT ತಂಡವು ಸಂಪೂರ್ಣ ಪುರುಷರ ಭಾರತೀಯ ತಂಡವನ್ನು ಸೋಲಿಸಿತು, ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ 2:46 ನಿಮಿಷಗಳ ವೀಡಿಯೊ ಕ್ಲಿಪ್ ಸೇರಿಸಲಾಗಿದೆ, ಅದು ಎರಡೂ ತಂಡಗಳ ಕಾರ್ಯಕ್ಷಮತೆಯನ್ನು ಹೋಲಿಸುತ್ತದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ವೀಡಿಯೊವನ್ನು ಬೇರೆಯದಾದ ಧ್ವನಿಮುದ್ರಿಕೆಯೊಂದಿಗೆ ಬದಲಾಯಿಸಲಾಗಿದೆ ಮತ್ತು ಚೀನಾದ ಮಹಿಳಾ SWAT ತಂಡವು ಭಾರತೀಯ ಪುರುಷ ತಂಡದ ವಿರುದ್ಧ ನೇರವಾಗಿ ಸ್ಪರ್ಧಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಪುರುಷ ತಂಡಗಳೊಂದಿಗೆ ಮಹಿಳಾ ತಂಡಗಳನ್ನು ಸ್ಪರ್ಧಿಸಿದ ಯಾವುದೇ ಘಟನೆಯನ್ನು ಅಧಿಕೃತ ದಾಖಲೆಗಳೂ ಸಹ ತೋರಿಸುವುದಿಲ್ಲ.

ಪಂದ್ಯಾವಳಿಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ದುಬೈ SWAT ಚ್ಯಾಲೆಂಜ್” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಅಧಿಕೃತ UAE SWAT ಚ್ಯಾಲೆಂಜ್ ವೆಬ್‌ಸೈಟ್ ಪ್ರಕಾರ, 7ನೇ UAE SWAT ಸ್ಪರ್ಧೆಯು ಫೆಬ್ರವರಿ 7, 2026 ರಿಂದ ಫೆಬ್ರವರಿ 11, 2026ರವರೆಗೆ ದುಬೈ ಪೊಲೀಸರು ಆಯೋಜಿಸಿದ್ದ ದುಬೈ SWAT ತರಬೇತಿ ಸೌಲಭ್ಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಝಾಕಿಸ್ತಾನ್ “C” “ಒಟ್ಟು 536 ಅಂಕಗಳೊಂದಿಗೆ ಸಾಮಾನ್ಯ ಸ್ಥಾನಗಳಲ್ಲಿ ಮೊದಲ ಸ್ಥಾನವನ್ನು ಗಳಿಸಿದ” ನಂತರ ಅವರನ್ನು ಚ್ಯಾಂಪಿಯನ್ ಆಗಿ ಹೆಸರಿಸಲಾಯಿತು.

ಮುಂದೆ, ನಾವು ಅಧಿಕೃತ ವೆಬ್‌ಸೈಟ್‌ನಲ್ಲಿ “ತಂಡಗಳು” ವಿಭಾಗವನ್ನು ಪರಿಶೀಲಿಸಿದಾಗ, ಭಾರತವು NSG (ರಾಷ್ಟ್ರೀಯ ಭದ್ರತಾ ಸಿಬ್ಬಂದಿ) ಗಳ ಒಂದು ಪುರುಷರ ತಂಡವನ್ನು ಕಳಿಸಿತ್ತು ಎಂದು ತಿಳಿದುಕೊಂಡೆವು. ಮತ್ತೊಂದೆಡೆ, ಚೀನಾ ಪೊಲೀಸ್ A ನಿಂದ ಚೀನಾ ಪೊಲೀಸ್ F ವರೆಗೆ 6 ತಂಡಗಳನ್ನು ಚೀನಾ ದೇಶವು ಕಳುಹಿಸಿತ್ತು. ಚೀನಾ ತಂಡದ ಸ್ಕ್ರೀನ್‌ಶಾಟ್ ಅನ್ನು ಮತ್ತು 2026ರ ಚ್ಯಾಂಪಿಯನ್‌ಶಿಪ್‌ನಲ್ಲಿ ಅವರ ಪ್ರದರ್ಶನವನ್ನು ಕೆಳಗೆ ನೋಡಿ –

ಭಾರತ ಮತ್ತು ಚೀನಾದ ತಂಡಗಳನ್ನು ಪರಿಶೀಲಿಸಿದ ನಂತರ, ಚೀನಾದ ಮಹಿಳಾ ತಂಡವು ಭಾರತವನ್ನು ಎದುರಿಸಿದೆಯೇ ಎಂದು ನಾವು ಪರಿಶೀಲಿಸಿದೆವು. PRNನ ಲೇಖನದ ಪ್ರಕಾರ, ಚೀನಾದ ಎರಡು ತಂಡಗಳು ಸೇರಿದಂತೆ ಒಟ್ಟು ಎಂಟು ಮಹಿಳಾ ತಂಡಗಳು UAE SWAT ಚ್ಯಾಲೆಂಜ್‌ನಲ್ಲಿ ಭಾಗವಹಿಸಿದ್ದವು. “ಚಿಲಿ ಮತ್ತು ದಕ್ಷಿಣ ಆಫ್ರಿಕಾ ಮಿಶ್ರ-ಲಿಂಗ ತಂಡಗಳೊಂದಿಗೆ ಭಾಗವಹಿಸುತ್ತಿವೆ” ಎಂದು ಲೇಖನವು ತಿಳಿಸಿತು, ಆದರೆ ಲೇಖನದಲ್ಲಿ ಭಾರತದ ಯಾವುದೇ ತಂಡವನ್ನು ಉಲ್ಲೇಖಿಸಲಿಲ್ಲ. ಈ ಲೇಖನದ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ನಾವು ಕಾರ್ಯಕ್ರಮದ ರಾಂಕಿಂಗ್ ಗಳನ್ನು ಪರಿಶೀಲಿಸಿದಾಗ ಭಾರತದ NSGಯು ಪಟ್ಟಿಯಲ್ಲಿ 62 ನೇ ಸ್ಥಾನದಲ್ಲಿರುವುದು ಕಂಡುಬಂತು. ಮತ್ತೊಂದೆಡೆ, ಚೀನಾದ ಪೊಲೀಸ್ C 3ನೇ ಸ್ಥಾನದಲ್ಲಿ, ಚೀನಾ ಪೊಲೀಸ್ A 4ನೇ ಸ್ಥಾನದಲ್ಲಿ ಮತ್ತು ಚೀನಾ ಪೊಲೀಸ್ B 11ನೇ ಸ್ಥಾನದಲ್ಲಿವೆ. ಚೀನಾದ ಸಂಪೂರ್ಣ ಮಹಿಳಾ ತಂಡವು ಸ್ಪರ್ಧೆಯ ಆರಂಭಿಕ ಹಂತಗಳಲ್ಲಿ ಪ್ರಬಲ ಪ್ರದರ್ಶನ ನೀಡಿತು ಮತ್ತು ಗಮನ ಸೆಳೆಯಿತು ಎಂದು ಬಾಸ್ಟಿಲ್ ಪೋಸ್ಟ್ ಗ್ಲೋಬಲ್‌ನ ಲೇಖನ ಹೇಳಿತು. ಆದರೆ, ಭಾರತವು ಮಹಿಳಾ ತಂಡವನ್ನು ಕಳುಹಿಸಿಲ್ಲ ಮತ್ತು ಚೀನಾದ ಮಹಿಳಾ ತಂಡಗಳನ್ನು ಭಾರತದ ಪುರುಷ NSG ವಿರುದ್ಧ ನೇರವಾಗಿ ಸ್ಪರ್ದೆಗೆ ಇಳಿಸಲಾಗಿಲ್ಲ.

ಕೊನೆಯದಾಗಿ, ನಾವು ಹೇಳಿಕೆಯಲ್ಲಿರುವ ವೀಡಿಯೊವನ್ನು ವಿಶ್ಲೇಷಿಸಿದಾಗ, ಕ್ಲಿಪ್‌ಗಳ ಮೇಲಿನ ಧ್ವನಿಯು ಮಿಶ್ರಿತವಾಗಿದೆ ಎಂದು ಕಂಡುಕೊಂಡೆವು. ಕಾಮೆಂಟರಿಯಲ್ಲಿ ಆಂಗ್ಲ ಭಾಷೆಯಲ್ಲಿ ಚೀನಾದ ಮಹಿಳಾ ತಂಡದ ವಿರುದ್ಧ ಕಝಾಕಿಸ್ತಾನ್ ಟೊಮಿರಿಸ್ ಬಗ್ಗೆ ಮಾತ್ರ ಮಾತನಾಡಲಾಗಿದೆ (ವೀಡಿಯೊದ ಆರಂಭದಲ್ಲಿ ಕೇಳಿಬರುವಂತೆ). ಭಾರತದ ಪುರುಷರ NSG ತಂಡದ 2 ನಿಮಿಷ 31 ಕ್ಷಣಗಳಿಗೆ ಹೋಲಿಸಿದರೆ ಚೀನಾದ ಮಹಿಳಾ ತಂಡವು ‘ಅಸಾಲ್ಟ್ ಈವೆಂಟ್ ಟಾಸ್ಕ್’ ಅನ್ನು 2 ನಿಮಿಷ 8 ಕ್ಷಣಗಳಲ್ಲಿ ಪೂರ್ಣಗೊಳಿಸಿತು ಎಂಬುದು ನಿಜ (ಸಮಯಮುದ್ರೆ 8:44:15 ಪರಿಶೀಲಿಸಿ).

ಆದಾಗ್ಯೂ, ನೇರ, ಮುಖಾಮುಖಿ ಸ್ಪರ್ಧೆಯ ಭಾವನೆ ಸೃಷ್ಟಿಸುವಂತೆ ಹೇಳಿಕೆಯಲ್ಲಿ ಎರಡು ಪ್ರತ್ಯೇಕ ಕ್ಲಿಪ್‌ಗಳನ್ನು ಸಂಯೋಜಿಸಲಾಗಿದೆ, ಆದರೆ ನಡೆದದ್ದು ಹಾಗಲ್ಲ. ಟೂರ್ನಮೆಂಟ್ ಐದು ದಿನಗಳವರೆಗೆ ನಡೆಯಿತು, ಆದರೆ ಹೇಳಿಕೆಯು 1 ನೇ ದಿನದಂದು ನಡೆದ ಒಂದು ಸುತ್ತನ್ನು ಮಾತ್ರ ತೋರಿಸುತ್ತಾ ಅದು ಮುಖಾಮುಖಿ ಚಟುವಟಿಕೆ ಎಂಬಂತೆ ಪ್ರಸ್ತುತಪಡಿಸುತ್ತದೆ. ಅಧಿಕೃತ ಫಲಿತಾಂಶಗಳಲ್ಲಿ ಭಾರತ-ವಿರುದ್ಧ-ಚೀನಾ ಪುರುಷ-ಮಹಿಳಾ ಟಾಸ್ಕ್ ತೋರಿಸಲಾಗಿಲ್ಲ.

ಕಝಾಕಿಸ್ತಾನ್ C ತಂಡವು ಅಸಾಲ್ಟ್ ಈವೆಂಟ್‌ನಲ್ಲಿ ಮೊದಲ ಸ್ಥಾನ ಮಡೆಯಿತು ಮತ್ತು ಪ್ರತಿಷ್ಠಿತ UAE SWAT ಟೂರ್ನಮೆಂಟ್‌ನ ಸಂಪೂರ್ಣ ವಿಜೇತ ತಂಡವಾಗಿ ಘೋಷಿಸಲ್ಪಟ್ಟಿತು.

ಹೀಗಾಗಿ, ಹೇಳಿಕೆ ದಾರಿತಪ್ಪಿಸುವಂತಿದೆ.

******************************************************
ಇದನ್ನೂ ಓದಿ:

ಸಿಂಥಟಿಕ್ ಆಹಾರ, ಮಾಂಸದ ಯೋಜನೆಯ ಕುರಿತು ಬಿಲ್ ಗೇಟ್ಸ್ ಅವರ ಯೋಜನೆಯನ್ನು ನಿಷೇಧಿಸಲು ಜಪಾನ್, ಚೀನಾ, ದಕ್ಷಿಣ ಕೊರಿಯಾ ಯೋಚಿಸುತ್ತಿವೆಯೇ? ಸತ್ಯ ಪರಿಶೀಲನೆ

ಚೀನಾ ದೇಶವು ಇಸ್ರೇಲ್‌ನಲ್ಲಿ ಎಲ್ಲಾ ಹೊಸ ಹೂಡಿಕೆಗಳನ್ನು ನಿಷೇಧಿಸಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.