ಹೇಳಿಕೆ/Claim : ಸ್ಟಾರ್‌ಲಿಂಕ್ ಬಳಸಿ ಅಂಟಾರ್ಟಿಕಾದ ‘ಐಸ್ ವಾಲ್’ ನಿಂದ ಮಾಡಲಾದ ಮೊದಲ ಲೈವ್ ಸ್ಟ್ರೀಮ್ ಅನ್ನು ವೀಡಿಯೊದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ.
ಕಡೆನುಡಿ/Conclusion : ಈ ಹೇಳಿಕೆ ದಾರಿತಪ್ಪಿಸುವಂಥದ್ದು. ಈ ವೀಡಿಯೊ ಅಂಟಾರ್ಟಿಕಾದ್ದಲ್ಲ, ಇದು ದಕ್ಷಿಣ ಅಮೆರಿಕಾದ ಪ್ಯಾಟಗೋನಿಯಾದಿಂದ ಬಂದಿರುವಂತಹ ವೀಡಿಯೊ. ಇದಲ್ಲದೆ, ವೀಡಿಯೊದ ಆಡಿಯೊದ ಕೊನೆಯಲ್ಲಿ, “ಪ್ಯಾಟಗೋನಿಯಾ ನಿಜವಾಗಿಯೂ ನಾನು ನೋಡಿರುವಂತಹ ಅತ್ಯಂತ ಸುಂದರವಾದ ಭೂದೃಶ್ಯವಾಗಿದೆ” ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ರೇಟಿಂಗ್/Rating : ದಾರಿತಪ್ಪಿಸುವಂಥದ್ದು– ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಸ್ಟಾರ್‌ಲಿಂಕ್ ಬಳಸಿ ಅಂಟಾರ್ಟಿಕಾದಿಂದ ಮಾಡಲಾಗಿರುವ ಲೈವ್ ಸ್ಟ್ರೀಮ್ ಅನ್ನು ತೋರಿಸಲಾಗುತ್ತಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘naturel_1919’ ಅಂತಹ ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಸ್ಟಾರ್‌ಲಿಂಕ್‌ಗೆ ಧನ್ಯವಾದಗಳು, ಅಂಟಾರ್ಟಿಕಾದ ಅದ್ಭುತ ಐಸ್ ವಾಲ್ ಲೈವ್ ಆಯಿತು. ಕನೆಕ್ಟಿವಿಟಿಯು ಪರಿಶೋಧನೆಯ ಪುನರ್ರಚನೆ ಮಾಡುತ್ತಿದೆಯಲ್ಲವೇ?” ಪೋಸ್ಟ್‌ಗೆ 49 ಕ್ಷಣಗಳ ವೀಡಿಯೊವೊಂದನ್ನು ಲಗತ್ತಿಸಲಾಗಿದೆ ಮತ್ತು ಸಂಪರ್ಕ ಸಮಸ್ಯೆಗಳಿಂದಾಗಿ ಅಂಟಾರ್ಕ್ಟಿಕಾದಿಂದ ಯಾವುದೇ ಹಿಂದಿನ ಲೈವ್ ಸ್ಟ್ರೀಮಿಂಗ್ ಸಾಧ್ಯವಾಗಿರಲಿಲ್ಲ ಮತ್ತು ಈ ವೀಡಿಯೊ ಸ್ಟಾರ್‌ಲಿಂಕ್ ಮೂಲಕ ಮೊದಲನೆಯ ವೀಡಿಯೊ ಆಗಿದೆ ಎಂದು ಪ್ರತಿಪಾದಿಸುವ ಗುರಿಯನ್ನು ಈ ಪೋಸ್ಟ್ ಹೊಂದಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-
Thanks to Starlink, Antarctica’s legendary ice wall went live. Isn’t connectivity rewriting exploration? pic.twitter.com/n1a8Anjqag
— HUMOR (@naturel_1919) February 10, 2026

ಫೆಬ್ರವರಿ 10, 2026 ರಂದು ಎಲೋನ್ ಮಸ್ಕ್ ಕೂಡ ತಮ್ಮ X ಖಾತೆಯಲ್ಲಿ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ಇದಕ್ಕೆ ಸುಮಾರು 23 ಮಿಲಿಯ ವೀಕ್ಷಣೆಗಳು ದೊರಕಿದವು. ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದು, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
స్టార్లింక్ పవర్: మంచు ఖండం నుంచి లైవ్ స్ట్రీమింగ్!
అంటార్కిటికా వంటి మారుమూల ప్రాంతాల్లో సాధారణంగా ఇంటర్నెట్ సౌకర్యం ఉండదు. అందుకే ఇప్పటివరకు అక్కడి నుంచి లైవ్ స్ట్రీమింగ్ చేయడం ఎవరికీ సాధ్యం కాలేదు. అయితే స్టార్లింక్ శాటిలైట్ టెక్నాలజీ సాయంతో ఓ వ్యక్తి మొదటిసారి అక్కడి… pic.twitter.com/9IPyyc162q
— ChotaNews App (@ChotaNewsApp) February 10, 2026
ತೆಲುಗು ಭಾಷೆಯಲ್ಲಿನ ಹೇಳಿಕೆಯ ಕನ್ನಡ ಅನುವಾದ ಹೀಗಿದೆ: “ಸ್ಟಾರ್‌ಲಿಂಕ್ ಪವರ್: ಐಸ್ ಖಂಡದಿಂದ ಲೈವ್ ಸ್ಟ್ರೀಮಿಂಗ್!”
ಅಂಟಾರ್ಟಿಕಾದಂತಹ ದೂರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅಂತರ್ಜಾಲ ಸೌಲಭ್ಯಗಳಿರುವುದಿಲ್ಲ. ಅದಕ್ಕಾಗಿಯೇ, ಇಲ್ಲಿಯವರೆಗೆ, ಯಾರೂ ಅಲ್ಲಿಂದ ಲೈವ್ ಸ್ಟ್ರೀಮಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ, ಸ್ಟಾರ್‌ಲಿಂಕ್ ಉಪಗ್ರಹ ತಂತ್ರಜ್ಞಾನದ ಸಹಾಯದೊಂದಿಗೆ, ಒಬ್ಬ ವ್ಯಕ್ತಿ ಮೊದಲ ಬಾರಿಗೆ ಪ್ರಸಿದ್ಧ ‘ಐಸ್ ವಾಲ್’ ಅನ್ನು ಜಗತ್ತಿಗೆ ಲೈವ್ ಸ್ಟ್ರೀಮ್ ಮಾಡಿದ್ದಾರೆ. ಸ್ಟಾರ್‌ಲಿಂಕ್ ಹಿಂದೆಂದೂ ತೋರಿಸಿರದಂತಹ ಪ್ರವಾಸಿ ಅದ್ಭುತಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ದೃಶ್ಯಗಳು ಅಂಟಾರ್ಕ್ಟಿಕಾದಿಂದಲ್ಲ, ಬದಲಾಗಿ ದಕ್ಷಿಣ ಅಮೆರಿಕಾದ ಪ್ಯಾಟಗೋನಿಯಾದಿಂದ ಬಂದಿರುವಂತಹ ದೃಶ್ಯಗಳು. ವಾಸ್ತವವಾಗಿ, ಆಡಿಯೋದ ಕೊನೆಯಲ್ಲಿ, “ಪ್ಯಾಟಗೋನಿಯಾ ನಿಜವಾಗಿಯೂ ನಾನು ನೋಡಿದ ಅತ್ಯಂತ ಸುಂದರವಾದ ಭೂದೃಶ್ಯವಾಗಿದೆ.” ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ನಾವು ಮೊದಲು “ಅಂಟಾರ್ಟಿಕಾ ಐಸ್ ವಾಲ್” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು, ಆದರೆ ಗಣನೀಯವಾದ ಯಾವುದೇ ಸುದ್ದಿ ಸಿಗಲಿಲ್ಲ. ವೀಡಿಯೊವನ್ನು ಮತ್ತಷ್ಟು ಪರಿಶೀಲಿಸಿದಾಗ, ಈ ವೀಡಿಯೊ ಅಂಟಾರ್ಟಿಕಾದಿಂದಲ್ಲ, ಪ್ಯಾಟಗೋನಿಯಾದಿಂದ ಬಂದಿರುವಂಥದ್ದು ಎಂದು ನಮಗೆ ತಿಳಿದುಬಂತು. ವೀಡಿಯೊದ ಆಡಿಯೋದಲ್ಲಿ, “ಪ್ಯಾಟಗೋನಿಯಾ ನಿಜವಾಗಿಯೂ ನಾನು ನೋಡಿದ ಅತ್ಯಂತ ಸುಂದರವಾದ ಭೂದೃಶ್ಯವಾಗಿದೆ” ಎಂದು 0:43 ಸಮಯಮುದ್ರೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇದರ ನಂತರ, ಮೇಲ್ಭಾಗದಲ್ಲಿ “ಫೆಬ್ರವರಿ 8, ಸಂಜೆ 4:25” ಎಂದು ಬರೆದಿರುವ ಸಮಯಮುದ್ರೆಯನ್ನ ನಾವು ಗಮನಿಸಿದೆವು, ಇದರಿಂದಾಗಿ, ಈ ವೀಡಿಯೊ ಲೈವ್‌ಸ್ಟ್ರೀಮ್ ಆದದ್ದು ಎಂದು ನಮಗೆ ಸುಳಿವು ಸಿಕ್ಕಿತು. ಕಿಕ್ ಸ್ಟ್ರೀಮರ್ ‘ಐಸ್ ಪೋಸೈಡನ್’ ಇದನ್ನು ಫೆಬ್ರವರಿ 8, 2026ರಂದು ತಮ್ಮ ವಾಹಿನಿಯಲ್ಲಿ ಸ್ಟ್ರೀಮ್ ಮಾಡಿದ್ದರು. ಹೇಳಿಕೆಯಲ್ಲಿ ಪ್ರದರ್ಶಿಸಲಾದ ಸಮಯವು ಮೂಲ ವೀಡಿಯೊದ ಸುಮಾರು 6:44:15ರ್ ಸಮಯದ್ದಾಗಿದ್ದು, ಅದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ಕಾಣಬಹುದು –

ನಂತರ, ಪ್ಯಾಟಗೋನಿಯಾವೇ ಇದರಲ್ಲಿರುವ ಸ್ಥಳವೆಂದು ದೃಢೀಕರಿಸುವ ಸಲುವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾವು ಐಸ್ ಪೋಸೈಡನ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಪರಿಶೀಲಿಸಿದೆವು. ಫೆಬ್ರವರಿ 8, 2026 ರಂದು ಆತ ಮಾಡಿದ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ನ ಶೀರ್ಷಿಕೆ ಹೀಗಿದೆ: “ಪ್ಯಾಟಗೋನಿಯಾ ಫ್ಜೋರ್ಡ್ಸ್‌ನಲ್ಲಿ ಹಿಮನದಿ” ಆತನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ “ಪ್ಯಾಟಗೋನಿಯಾ ಚಿಲಿ”ಯ ಲೊಕೇಶನ್ ಟ್ಯಾಗ್ ಕೂಡ ಇದೆ. ಈ ವಿವರಗಳನ್ನು ಕೆಳಗೆ ನೋಡಿ-

ಪ್ಯಾಟಗೋನಿಯಾ ಒಂದು ದೇಶವಲ್ಲ, ಅದೊಂದು ಭೌಗೋಳಿಕ ಪ್ರದೇಶ. ಇದು ಹೆಚ್ಚಾಗಿ ಅರ್ಜೆಂಟೀನಾಕ್ಕೆ ಸೇರಿದ ಒಂದು ದೊಡ್ಡ ಪ್ರದೇಶವಾಗಿದೆ, ಆದರೆ ಇದು ಚಿಲಿಯ ಒಂದು ಸಣ್ಣ ಭಾಗವನ್ನು ಸಹ ಒಳಗೊಂಡಿದೆ. ಪ್ಯಾಟಗೋನಿಯಾದಲ್ಲಿನ ಸಂವಹನವು ಪಟ್ಟಣಗಳಲ್ಲಿ 4G/5G ಮೊಬೈಲ್ ನೆಟ್‌ವರ್ಕ್‌ಗಳು, ಗ್ರಾಮೀಣ ರಸ್ತೆಗಳಲ್ಲಿ ಸೀಮಿತ ಸಂಪರ್ಕ ಮತ್ತು ದೂರದ ಪ್ರದೇಶಗಳಿಗೆ ಉಪಗ್ರಹ ಆಧಾರಿತ ವ್ಯವಸ್ಥೆಗಳು (ನಿರ್ದಿಷ್ಟವಾಗಿ ಸ್ಟಾರ್‌ಲಿಂಕ್) ಮಿಶ್ರಣವನ್ನು ಒಳಗೊಂಡಿದೆ.
ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ, ಪ್ರಯಾಣಿಕರಿಗೆ ಹಾಗೂ ಸ್ಥಳೀಯ, ವಿಶ್ವಾಸಾರ್ಹ, ಹೆಚ್ಚಿನ ವೇಗದ ಮತ್ತು ಕಡಿಮೆ-ಲೇಟೆನ್ಸಿ ಆಕ್ಸೆಸ್ ಪಡೆಯಲು ಸ್ಟಾರ್‌ಲಿಂಕ್ ಬಹುಮುಖ್ಯವಾಗಿದೆ.

ಹೀಗಾಗಿ, ಸ್ಟಾರ್‌ಲಿಂಕ್ ಬಳಸಿಕೊಂಡು ಅಂಟಾರ್ಟಿಕಾದ ‘ಐಸ್ ವಾಲ್’ ನಿಂದ ಲೈವ್ ಸ್ಟ್ರೀಮ್ ಮಾಡಲಾಗಿದೆ ಎನ್ನುವ ವೀಡಿಯೊ ದಾರಿತಪ್ಪಿಸುವಂತಿದೆ.
******************************************************
ಇದನ್ನೂ ಓದಿ:
