Don't Miss

ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಟ್ರಂಪ್‌ರವರ ಬೇಡಿಕೆಯ ಕುರಿತು ಡ್ಯಾನಿಶ್ ಪ್ರಧಾನಿ ಮತ್ತು ಸಂಸದರು ನಗುತ್ತಿರುವುದನ್ನು ಈ ಕ್ಲಿಪ್‌ನಲ್ಲಿ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ.

ಹೇಳಿಕೆ/Claim : ಟ್ರಂಪ್‌ರವರ ನೊಬೆಲ್ ಶಾಂತಿ ಪ್ರಶಸ್ತಿ ಕುರಿತಾದ ಬೇಡಿಕೆಯ ಬಗ್ಗೆ ಡ್ಯಾನಿಶ್ ಪ್ರಧಾನಿ ಮತ್ತು ಸಂಸತ್ ಸದಸ್ಯರು ನಗುತ್ತಿರುವುದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸುತ್ತವೆ ಎಂದು ಹೇಳಲಾಗಿದೆ.

ಕಡೆನುಡಿ/Conclusion :ಹೇಳಿಕೆ ಸುಳ್ಳು. ಈ ವೀಡಿಯೊ 2019ರದ್ದಾಗಿದ್ದು, ಡ್ಯಾನಿಶ್ ಸಂಸತ್ ಸದಸ್ಯರ ನಗುವನ್ನು ತೋರಿಸುತ್ತದೆ ಆದರೆ ಅದು ಡೊನಾಲ್ಡ್ ಟ್ರಂಪ್ ಅಥವಾ ನೊಬೆಲ್ ಶಾಂತಿ ಪ್ರಶಸ್ತಿ ಬಯಕೆಗೆ ಸಂಬಂಧಿಸದ್ದಲ್ಲ. ನಿಜವಾದ ಸಂದರ್ಭವೇನೆಂದರೆ, ಸರ್ಕಸ್‌ಗಳಲ್ಲಿ ಕಾಡು ಪ್ರಾಣಿಗಳ ಮೇಲಿನ ನಿಷೇಧದ ನಂತರ ನಿವೃತ್ತಿಗೆ ಉಳಿದಿದ್ದ ಕೊನೆಯ ನಾಲ್ಕು ಸರ್ಕಸ್ ಆನೆಗಳು ಮತ್ತು ಒಂದು ಒಂಟೆಯನ್ನು ಖರೀದಿಸಲು ಡ್ಯಾನಿಶ್ ಸರ್ಕಾರ ನಿರ್ಧರಿಸಿದಾಗ, ಶಾಸಕರು ಒಂಟೆಯು ಆನೆಯ ಜೊತೆಗಾರನಾಗಿರಬಹುದು ಎಂದು ತಮಾಷೆ ಮಾಡುತ್ತಾರೆ. 2019ರ ಸಮಯಕ್ಕೆ, ಡೆನ್ಮಾರ್ಕ್ ಅಧಿಕೃತವಾಗಿ ಸರ್ಕಸ್ ಗಳಲ್ಲಿ ಕಾಡು ಪ್ರಾಣಿಗಳ ಬಳಕೆಯಿಂದ ಮುಕ್ತವಾಗಿದೆ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು — Five rating


ಟ್ರಂಪ್ ರವರ ನೊಬೆಲ್ ಶಾಂತಿ ಪ್ರಶಸ್ತಿಯ ಬೇಡಿಕೆಯನ್ನು ನೋಡಿ ಸದಸ್ಯರು ನಗುತ್ತಿರುವ ಡ್ಯಾನಿಶ್ ಸಂಸತ್ತಿನ ದೃಶ್ಯಾವಳಗಳನ್ನು ತೋರಿಸಲಾಗಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘JaipurDialogues’ ಅಂತಹ ವೀಡಿಯೊವನ್ನು ಹಂಚಿಕೊಂಡು, ಡೊನಾಲ್ಡ್ ಟ್ರಂಪ್ ರವರ ನೊಬೆಲ್ ಶಾಂತಿ ಪ್ರಶಸ್ತಿ ಬೇಡಿಕೆಯ ಬಗ್ಗೆ ಡ್ಯಾನಿಶ್ ಸಂಸತ್ತು ನಗೆಗಡಲಲ್ಲಿ ತೇಲುತ್ತಿರುವುದನ್ನು ತೋರಿಸುತ್ತದೆ. ಶೀರ್ಷಿಕೆ ಹೀಗಿದೆ: “ಟ್ರಂಪ್ ಅವರ ನೊಬೆಲ್ ಶಾಂತಿ ಪ್ರಶಸ್ತಿ ಬೇಡಿಕೆಯನ್ನು ನೋಡಿ ಡ್ಯಾನಿಶ್ ಸಂಸತ್ತು ನಗುತ್ತಿದೆ.” ಈ ಪೋಸ್ಟ್ ಗೆ 58,000 ಕ್ಕೂ ಹೆಚ್ಚು ವೀಕ್ಷಣೆಗಳು ದೊರಕಿದ್ದು, ಅದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಜನವರಿ 14, 2026 ರಂದು “US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು “ಖರೀದಿಸುವುದಾಗಿ” ಹೇಳಿಕೊಂಡ ನಂತರ ಡ್ಯಾನಿಶ್ ಸಂಸತ್ತಿನ ಪ್ರತಿಕ್ರಿಯೆ” ಎಂಬ ಹೇಳಿಕೆಯೊಂದಿಗೆ ಅದೇ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ. ಕೆಳಗಿನ ಪೋಸ್ಟ್ ಅನ್ನು ನೋಡಿ.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ಕ್ಲಿಪ್ 2019ರಷ್ಟು ಹಿಂದಿನದು ಮತ್ತಿದು ಬೇರೊಂದು ಘಟನೆಯ ಬಗ್ಗೆ ಸದಸ್ಯರ ನಗುವನ್ನು ತೋರಿಸುತ್ತದೆ, ಇದಕ್ಕೂ ಡೊನಾಲ್ಡ್ ಟ್ರಂಪ್ ಅಥವಾ ನೊಬೆಲ್ ಶಾಂತಿ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ. ವಾಸ್ತವದಲ್ಲಿ ಈ ಕ್ಷಣದ ಹಿನ್ನೆಲೆ ಹೀಗಿದೆ- ಡ್ಯಾನಿಶ್ ಸರ್ಕಾರವು ಸರ್ಕಸ್‌ಗಳಲ್ಲಿ ಕಾಡು ಪ್ರಾಣಿಗಳನ್ನು ನಿಷೇಧಿಸಿದ ನಂತರ ನಾಲ್ಕು ಭಾವಿ ಸರ್ಕಸ್ ಆನೆಗಳು ಮತ್ತು ಒಂದು ಒಂಟೆಯನ್ನು ಖರೀದಿಸುವ ಬಗ್ಗೆ ಸಂಸತ್ತಿನ ಚರ್ಚೆಗೆ ಸಂಬಂಧಿಸಿದೆ, ಈ ಸಮಯದಲ್ಲಿ ಒಂದು ಒಂಟೆಯು ಆನೆಗಳಲ್ಲಿ ಒಂದಕ್ಕೆ ಒಡನಾಡಿಯಾಗಿರುವ ಬಗ್ಗೆ ತಮಾಷೆಯ ಹೇಳಿಕೆಯನ್ನು ನೀಡಲಾಯಿತು.

ವಿವರಗಳು:

ಸಂದರ್ಭದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಮೊದಲು ನಾವು ವೀಡಿಯೊದ ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ “ಒಂದು ಆನೆ ಮತ್ತು ಒಂಟೆಯ ಕಥೆಗೆ ಡ್ಯಾನಿಶ್ ಪ್ರಧಾನಿ ಹೊಟ್ಟೆಬಿರಿದು ನಗುವುದು” ಎಂಬ ಶೀರ್ಷಿಕೆಯೊಂದಿಗಿನ ಅಕ್ಟೋಬರ್ 5, 2019 ರಂದು ಪ್ರಕಟವಾದ CGTN ಸುದ್ದಿ (ವೀಡಿಯೊದೊಂದಿಗೆ) ವರದಿ ನಮ್ಮ ಕೈಸೇರಿತು. ವರದಿಯಿಂದ ನಮಗೆ ತಿಳಿದುಬಂದದ್ದೇನೆಂದರೆ, “ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ನಾಲ್ಕು ಸರ್ಕಸ್ ಆನೆಗಳು ಮತ್ತು ಒಂದು ಒಂಟೆಯ ಬಗ್ಗೆ ಕಥೆಯನ್ನು ಹೇಳುತ್ತಿದ್ದರು… ಡೆನ್ಮಾರ್ಕ್ ಒಂಟೆಯನ್ನು ಕೂಡ ಖರೀದಿಸಿತು ಏಕೆಂದರೆ ಅದು ನಿವೃತ್ತ ಆನೆಗಳಲ್ಲಿ ಒಂದರ ‘ಆಪ್ತ ಸ್ನೇಹಿತ’ ಆಗಿತ್ತು.” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ಬಗ್ಗೆ ಅರಿತ ನಂತರ, ಈ ಘಟನೆಯನ್ನು ದೃಢೀಕರಿಸಲು ನಾವು ಇತರ ಕ್ಲಿಪ್‌ಗಳು ಮತ್ತು ವರದಿಗಳನ್ನು ಹುಡುಕಿದೆವು. ಹುಡುಕಾಟದಲ್ಲಿ ನಮಗೆ ಯೂರೋ ನ್ಯೂಸ್ ಪ್ರಕಟಿಸಿದ ಲೇಖನ ದೊರಕಿತು, ಇದನ್ನು ಕೊನೆಯದಾಗಿ ಅಕ್ಟೋಬರ್, 2019ರಲ್ಲಿ ನವೀಕರಿಸಲಾಗಿದ್ದು, ಅದರ ಶೀರ್ಷಿಕೆ ಹೀಗಿದೆ: “ವೀಡಿಯೊ. ಸರ್ಕಸ್ ಆನೆಗಳ ಕುರಿತು ಹೇಳಿಕೆಯ ಸಮಯದಲ್ಲಿ ಡ್ಯಾನಿಶ್ ಪ್ರಧಾನಿಗೆ ನಗು” ವರದಿಯನ್ನು ಕೆಳಗೆ ನೋಡಿ-

(ಕೃಪೆ: euronews.com)

‘ಅಕ್ಟೋಬರ್ 3, 2019ರ ಆರಂಭಿಕ ಚರ್ಚೆ’ಯ ಸಮಯದಲ್ಲಿ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಸಂಸತ್ತಿನೊಂದಿಗೆ ನಗುತ್ತಿರುವ ಈ ಕ್ಲಿಪ್ ಅನ್ನು DR (ಡೆನ್ಮಾರ್ಕ್ ರೇಡಿಯೋ) ಸಹ ಹಂಚಿಕೊಂಡಿತ್ತು. ಈ ಘಟನೆಯನ್ನು ಅಕ್ಟೋಬರ್ 4, 2019 ರಂದು ಪೋಸ್ಟ್ ಮಾಡಿದ ಸುದ್ದಿಯಲ್ಲಿ ವರದಿ ಮಾಡಲಾಗಿದೆ, ಅದರ ಶೀರ್ಷಿಕೆ: “VIDEO: Mette Frederiksen får grineflip under åbningsdebat”. ಇದರ ಕನ್ನಡದ ಅನುವಾದ ಹೀಗಿದೆ: ವೀಡಿಯೊ: ಆರಂಭಿಕ ಚರ್ಚೆಯ ಸಮಯದಲ್ಲಿ ಮೆಟ್ಟೆ ಫ್ರೆಡೆರಿಕ್ಸೆನ್ ನಗೆಗಡಲಲ್ಲಿ ತೇಲಿದರು. ಇಂಗ್ಲಿಷ್‌ನಲ್ಲಿ ಅನುವಾದಿಸಲಾದ ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಹೀಗಾಗಿ, ಹೇಳಿಕೆ ಸುಳ್ಳು ಮತ್ತಿದು ಡೊನಾಲ್ಡ್ ಟ್ರಂಪ್ ಅವರ ನೊಬೆಲ್ ಶಾಂತಿ ಪ್ರಶಸ್ತಿ ಬೇಡಿಕೆಗೆ ಸಂಬಂಧಿಸಿದ್ದಲ್ಲ.

******************************************************
ಇದನ್ನೂ ಓದಿ:

ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು USA 700 ಬಿಲಿಯ ಡಲರ್ ಗಳನ್ನು ಪಾವತಿಸಲು ಒಪ್ಪಂದವನ್ನು ಮಾಡುತ್ತಿದೆಯೇ? ಸತ್ಯ ಪರಿಶೀಲನೆ

ಒಬ್ಬ ಎಮಿರಾಟಿ ಮೈಕ್ರೊಫೋನ್ ಮುಟ್ಟಿದ ನಂತರ ಇಸ್ರೇಲಿ ಪ್ರಧಾನಿ ನೆತನ್ಯಾಹು ಸ್ಯಾನಿಟೈಸರ್ ಕೇಳಿದರೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*