ಹೇಳಿಕೆ/Claim: ಜಾನ್ವಿ ಕಪೂರ್ ಬಾಂಗ್ಲಾದೇಶಿ ಹಿಂದೂಗಳನ್ನು ಬೆಂಬಲಿಸಿ ಪೋಸ್ಟ್ ಮಾಡಿದ ನಂತರ ಧ್ರುವ್ ರಾಠಿ ತಮ್ಮ ವೀಡಿಯೊದಲ್ಲಿ ಆಕೆಯನ್ನು ಟೀಕೆಯ ಗುರಿಯಾಗಿಸಿಕೊಂಡಿದ್ದಾರೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಧ್ರುವ್ ರಾಠಿ ಆಕೆಯ ಫೋಟೋವನ್ನು ಥಂಬ್ನೇಲ್ನಲ್ಲಿ ಬಳಸಿದ್ದು ನಿಜ, ಆದರೆ ವೀಡಿಯೊದಲ್ಲಿ ಬಾಂಗ್ಲಾದೇಶಿ ಹಿಂದೂಗಳ ಕುರಿತು ಮಾತನಾಡಿಲ್ಲ, ಬದಲಾಗಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಸಮಾಜದ ಮೇಲೆ ಬೀರುವ ಪ್ರಭಾವದ ಬಗ್ಗೆ ಚರ್ಚಿಸಲಾಗಿದೆ.
ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಜಾನ್ವಿ ಕಪೂರ್ ಬಾಂಗ್ಲಾದೇಶಿ ಹಿಂದೂಗಳನ್ನು ಬೆಂಬಲಿಸಿದ ನಂತರ ಧ್ರುವ್ ರಾಠಿ ತಮ್ಮ ಯೂಟ್ಯೂಬ್ ವೀಡಿಯೊದಲ್ಲಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘chixxsays’ ಈ ಮುಂದಿನ ಶೀರ್ಷಿಕೆಯೊಂದಿಗೆ ಅಂತಹ ಒಂದು ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ: “ಜಾನ್ವಿ ಕಪೂರ್ ಬಾಂಗ್ಲಾದೇಶಿ ಹಿಂದೂಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ ಮತ್ತು ಧ್ರುವ್ ರಾಠಿ ತಕ್ಷಣವೇ ಆಕೆಯ ಚಿತ್ರವನ್ನು ಅನುಚಿತ ರೀತಿಯಲ್ಲಿ ಬಳಸಿಕೊಂಡು ವೀಡಿಯೊ ಮಾಡಿದ್ದಾರೆ. ಈ ವ್ಯಕ್ತಿಯನ್ನು ಕೆಲವರು ಬೆಂಬಲಿಸುವುದಾದರೂ ಹೇಗೆ . ರಾಠಿ ಜಾನ್ವಿಯ ವಿರುದ್ಧ “ಸೌಂದರ್ಯದ ಕರಾಳ ಭಾಗ”ದ ವೀಡಿಯೊವನ್ನು ಮಾಡಲು ಕಾರಣವಾದ ಇದು ಆಕೆಯ ನಿಲುವನ್ನು ಗುರಿಯಾಗಿಸಿಕೊಂಡು ಮಾಡಿದ ನೇರ, ತ್ವರಿತ ಪ್ರತಿಕ್ರಿಯೆಯನ್ನು ತೋರುತ್ತದೆ. ಪೋಸ್ಟ್ ಅನ್ನು ಕೆಳಗೆ ವೀಕ್ಷಿಸಿ:
Janhavi Kapoor posted about Bangladeshi Hindus and Dhruv Rathee immediately made a video using her pic in an inappropriate way
How can someone even support this guy pic.twitter.com/B79kev39dQ
— ` (@chixxsays) December 25, 2025

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಬಾಂಗ್ಲಾದೇಶಿ ಹಿಂದೂಗಳನ್ನು ಬೆಂಬಲಿಸುವ ಜಾನ್ವಿ ಕಪೂರ್ ಅವರ ಪೋಸ್ಟ್ ಮತ್ತು ಧ್ರುವ್ ರಾಠಿಯವರ “ರಾಠಿಯ “ಬಾಲಿವುಡ್ ಸೆಲೆಬ್ರಿಟಿಗಳ ನಕಲಿ ಸೌಂದರ್ಯ!” ಎಂಬ ವೀಡಿಯೊವನ್ನು ಡಿಸೆಂಬರ್ 25, 2025 ರಂದು ಬಿಡುಗಡೆ ಮಾಡಲಾಗಿತ್ತು.
ರಾಠಿ ಥಂಬ್ನೇಲ್ನಲ್ಲಿ ಜಾನ್ವಿಯ ಫೋಟೋವನ್ನು ಬಳಸಿದ್ದು ನಿಜ, ಆದರೆ ವೀಡಿಯೊದ ರಚನೆಯನ್ನು ಆಕೆಯ ಹೇಳಿಕೆಗೆ ಲಿಂಕ್ ಮಾಡುವ ಯಾವುದೇ ನೇರ ಪುರಾವೆಗಳಿಲ್ಲ, ಜೊತೆಗೆ ತಮ್ಮ ವೀಡಿಯೊದಲ್ಲಿ ಆಕೆಯನ್ನು ಗುರಿಯಾಗಿಸಿಲ್ಲ ಎಂದು ರಾಠಿ ಸ್ಪಷ್ಟಪಡಿಸಿದ್ದಾರೆ. ವೀಡಿಯೊದ ಉದ್ದಕ್ಕೂ ಆತ ಲಿಪ್ ಫಿಲ್ಲರ್ಗಳು, ನೋಸ್ ಕರೆಕ್ಷನ್, ಸ್ಕಿನ್ ಲೈಟನಿಂಗ್ ಮುಂತಾದ ವಿವಿಧ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳು ಮತ್ತು ಸಮಾಜದ ಮೇಲೆ ಅವುಗಳ ನಕಾರಾತ್ಮಕ ಪರಿಣಾಮದ ಬಗ್ಗೆ ಮಾತನಾಡುತ್ತಾರೆ.
ವಿವರಗಳು:
ಹೇಳಿಕೆಗಳ ಬಗ್ಗೆ ತಿಳಿಯಲು ನಾವು ಮೊದಲು “ಬಾಂಗ್ಲಾದೇಶಿ ಹಿಂದೂಗಳನ್ನು ಬೆಂಬಲಿಸುವ ಜಾನ್ವಿ ಕಪೂರ್ ಪೋಸ್ಟ್” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಡಿಸೆಂಬರ್ 25, 2025 ರಂದು, ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ 30 ವರ್ಷದ ಹಿಂದೂ ಗಾರ್ಮೆಂಟ್ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ಜನರ ಗುಂಪು ಹತ್ಯೆಗೈದದ್ದನ್ನು ಖಂಡಿಸಿ ಆಕೆ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಿದ್ದರು. NDTV ವರದಿಯಲ್ಲಿ, ಆಕೆ ಅದನ್ನು “ಬರ್ಬರ” ಎಂದು ಬಣ್ಣಿಸಿದ್ದಾರೆ ಮತ್ತು ಸ್ಥಳ ಯಾವುದೇ ಆಗಿದ್ದರೂ ಅಂತಹ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಕೆಳಗಿನ ವರದಿಯಿಂದ ತೆಗೆದ ಆಕೆಯ ಪೋಸ್ಟ್ನ ಸ್ಕ್ರೀನ್ಶಾಟ್ ಅನ್ನು ನೋಡಿ-

ಧ್ರುವ್ ರಾಠಿ ಡಿಸೆಂಬರ್ 25, 2025 ರಂದು ಯೂಟ್ಯೂಬ್ನಲ್ಲಿ “ಬಾಲಿವುಡ್ ಸೆಲೆಬ್ರಿಟಿಗಳ ಕೃತ ಸೌಂದರ್ಯ!” ಎಂಬ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ, ಇದು ಸುಮಾರು 26 ನಿಮಿಷಗಳ ಕಾಲ ನಡೆಯುತ್ತದೆ ಮತ್ತು ಕಾಸ್ಮೆಟಿಕ್ ಚಿಕಿತ್ಸೆಗಳ ಸಾಮಾಜಿಕ ಪರಿಣಾಮವನ್ನು ಟೀಕಿಸುತ್ತದೆ. ಈ ವೀಡಿಯೊದಲ್ಲಿ ಶ್ರುತಿ ಹಾಸನ್, ಪ್ರಿಯಾಂಕಾ ಚೋಪ್ರಾ ಮುಂತಾದ ಸೆಲೆಬ್ರಿಟಿಗಳ ಬಗ್ಗೆ ಮಾತನಾಡಲಾಗಿದೆ, ಆದರೆ ಜಾನ್ವಿ ಕಪೂರ್ ಅವರನ್ನು ನಿರ್ದಿಷ್ಟವಾಗಿ ಟೀಕಿಸಲಾಗಿಲ್ಲ. ವೀಡಿಯೊದ ದಿನಾಂಕವನ್ನು ಪ್ರದರ್ಶಿಸುವ ವೀಡಿಯೊ ಮತ್ತು ಸ್ಕ್ರೀನ್ಶಾಟ್ ಅನ್ನು ಕೆಳಗೆ ನೋಡಿ:

ಇದರ ನಂತರ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯ ಪರಿಣಾಮಗಳನ್ನು ವಿವರಿಸಲು ಜಾಲ್ವಿ ಕಪೂರ್ ರವರ ಮೊದಲು ಮತ್ತು ನಂತರದ ಚಿತ್ರಗಳನ್ನು ಪ್ರಮುಖವಾಗಿ ಪ್ರದರ್ಶಿಸುವ ವೀಡಿಯೊದ ಥಂಬ್ನೇಲ್ ಅನ್ನು ನಾವು ಪರಿಶೀಲಿಸಿದೆವು. ಡಿಸೆಂಬರ್ 26, 2025 ರಂದು, ಧ್ರುವ್ ರಾಠಿ X ಪೋಸ್ಟ್ನಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ, ಅಂತಹ ವೀಡಿಯೊವನ್ನು ಮಾಡಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಇದಲ್ಲದೆ, ಆತ ಸತಃ ಈ ಹಿಂದೆ ದೀಪು ಚಂದ್ರ ದಾಸ್ ಅವರನ್ನು ಬೆಂಬಲಿಸುವ ವೀಡಿಯೊವನ್ನು ರಚಿಸಿದ್ದು, ಯಾವುದೇ ಹಂತದಲ್ಲಿ ಆತ ಜಾನ್ವಿ ಕಪೂರ್ ಅವರನ್ನು ನಿರ್ದಿಷ್ಟವಾಗಿ ಆಕ್ರಮಣ ಮಾಡಿಲ್ಲ.
Let’s ignore the fact that it takes days to make a video like that.
Let’s also ignore the fact that I myself made a video in support of Dipu Chandra Das
The funny thing is where did I even “attack” Jahnvi specifically in that video? Nowhere.
— Dhruv Rathee (@dhruv_rathee) December 25, 2025
ಡಿಸೆಂಬರ್ 27, 2025 ರಂದು, ರಾಠಿ ಮತ್ತೊಮ್ಮೆ ತಮ್ಮ ವೀಡಿಯೊವನ್ನು ಸಮರ್ಥಿಸಿಕೊಳ್ಳುತ್ತಾ ಜಾನ್ವಿ ಕಪೂರ್ ಅವರು ಇನ್ಸ್ಟಾಗ್ರಾಮ್ನಲ್ಲಿ “ದೀಪು ಚಂದ್ರ ದಾಸ್” ಬಗ್ಗೆ ಪೋಸ್ಟ್ ಮಾಡಿದ ದಿನವೇ ವೀಡಿಯೊವನ್ನು ಸಂಶೋಧಿಸಿ, ಸಂಪಾದಿಸಿ, ಪ್ರಕಟಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.
ಜಾನ್ವಿ ಕಪೂರ್ ಅವರ ಪೋಸ್ಟ್ ನಂತರ ಥಂಬ್ನೇಲ್ ಬದಲಾಯಿಸಿದ ಬಗ್ಗೆ ಆರೋಪಗಳನ್ನು ಉಲ್ಲೇಖಿಸುತ್ತಾ, ಹಲವು ಥಂಬ್ನೇಲ್ಗಳನ್ನು ಹೊಂದಿರುವುದು ಅಥವಾ ಬದಲಾಯಿಸುವುದು A/B ಪರೀಕ್ಷಾ ತಂತ್ರದ ಭಾಗವಾಗಿದೆ, ಇದು ತಾನು ಹಿಂದಿನ ವೀಡಿಯೊಗಳಲ್ಲಿಯೂ ಮಾಡಿರುವುದಾಗಿ ಎಂದು ಆತ ಹೇಳಿದರು. ಮುಂದುವರೆದು, ಆರೋಪಗಳು ವೀಕ್ಷಕರನ್ನು ತಪ್ಪುದಾರಿಗೆಳೆಯುವ ಗುರಿಯನ್ನು ಹೊಂದಿವೆ ಎಂದು ರಾಠಿ ಹೇಳಿಕೊಂಡರು ಮತ್ತು ಬಾಂಗ್ಲಾದೇಶ ಪೋಸ್ಟ್ಗಾಗಿ ಆಕೆಯನ್ನು ಅಪಹಾಸ್ಯ ಮಾಡುವ ಯಾವುದೇ ಉದ್ದೇಶವನ್ನು ತಾನು ಹೊಂದಿಲ್ಲ ಎಂದು ದೃಢಪಡಿಸಿದರು ಮತ್ತು ಇದೇ ರೀತಿಯ ವಿಷಯಗಳ ಕುರಿತು ತಮ್ಮದೇ ಆದ ಹಿಂದಿನ ವೀಡಿಯೊದ ಬಗ್ಗೆ ಉಲ್ಲೇಖಿಸಿದರು.
Did I mock Janhvi Kapoor for her post on Bangladeshi Hindus?
Watch full video: https://t.co/xEdy3U616h pic.twitter.com/tlZNQy1D3i
— Dhruv Rathee (@dhruv_rathee) December 27, 2025
ಬಾಂಗ್ಲಾದೇಶಿ ಹಿಂದೂಗಳ ಬಗೆಗಿನ ಜಾನ್ವಿ ಕಪೂರ್ ಅವರ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ವೀಡಿಯೊವನ್ನು ರಚಿಸಲಾಗಿದೆ ಎಂಬ ಆರೋಪವನ್ನು ಬೆಂಬಲಿಸಲು ಡಿಜಿಟೈ ಇಂಡಿಯಾಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.
ಹೀಗಾಗಿ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಮೊಬೈಲ್ ಟವರ್ ಅಳವಡಿಸಲು ಟೆಲಿಕಾಂ ಇಲಾಖೆಯು ನಿಜವಾಗಿಯೂ ₹2,500 ಕೇಳುತ್ತದೆಯೇ? ಸತ್ಯ ಪರಿಶೀಲನೆ
Digiteye Kannada Fact Checkers