ಹೇಳಿಕೆ/Claim : ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಅಂತಹ ಯಾವುದೇ ನಿಷೇಧ ಹೇರಲಾಗಿಲ್ಲ. ಇಸ್ರೇಲಿ ನಾಗರಿಕರು ದಕ್ಷಿಣ ಕೊರಿಯಾದೊಳಗೆ ವೀಸಾ-ಮುಕ್ತ ಪ್ರವೇಶಕ್ಕೆ ಅರ್ಹರಾಗಿದ್ದಾರೆ ಮತ್ತು ಡಿಸೆಂಬರ್ 31, 2026ರವರೆಗೆ ಕೊರಿಯಾ ಎಲೆಕ್ಟ್ರಾನಿಕ್ ಪ್ರಯಾಣ ಆಥರೈಸೇಶನ್(K-ETA) ವಿನಾಯಿತಿ ಪಡೆದಿದ್ದಾರೆ ಎಂದು ಕೊರಿಯಾದ ಅಧಿಕೃತ ಮೂಲಗಳು ದೃಢಪಡಿಸಿವೆ.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ![]()
ದಕ್ಷಿಣ ಕೊರಿಯಾ ಎಲ್ಲಾ ಇಸ್ರೇಲಿ ಪ್ರವಾಸಿಗರು ತಮ್ಮ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘Malcolm_Pal9’ ಒಂದು ಚಿತ್ರವನ್ನು ಹಂಚಿಕೊಳ್ಳುತ್ತಾ ಈ ಮುಂದಿನ ಹೇಳಿಕೆಯನ್ನು ಹಾಕಿದ್ದಾರೆ- “ಬ್ರೇಕಿಂಗ್: ದಕ್ಷಿಣ ಕೊರಿಯಾ ಎಲ್ಲಾ ಇಸ್ರೇಲಿ ಪ್ರವಾಸಿಗರು ತಮ್ಮ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ”.
ಚಿತ್ರದಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರ ಫೋಟೋಗಳನ್ನು ಕಾಣಬಹುದು, ಇದನ್ನು “ಡೈಲಿ ಫೀಡ್” ನ ಸುದ್ದಿ ಶೀರ್ಷಿಕೆಯಂತೆ ವಿನ್ಯಾಸಗೊಳಿಸಲಾಗಿದೆ. ಈ ಪೋಸ್ಟ್ ಗೆ 263,000ಕ್ಕೂ ಹೆಚ್ಚು ವೀಕ್ಷಣೆಗಳು ದೊರಕಿದ್ದು ಅದನ್ನು ಕೆಳಗೆ ನೋಡಬಹುದು –
Fair enough. pic.twitter.com/jnB1mfU4Bv
— 𝐌𝐚𝐥𝐜𝐨𝐥𝐦 (@Malcolm_Pal9) January 7, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ದಕ್ಷಿಣ ಕೊರಿಯಾವನ್ನು ಪ್ರವೇಶಿಸುವ ಇಸ್ರೇಲಿಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ಕೊರಿಯಾ ಎಲೆಕ್ಟ್ರಾನಿಕ್ ಪ್ರಯಾಣ ಆಥರೈಜೇಶನ್ (K-ETA) ಅವಶ್ಯಕತೆಯನ್ನು ಡಿಸೆಂಬರ್ 31, 2026 ರವರೆಗೆ ಅಧಿಕೃತವಾಗಿ ಮನ್ನಾ ಮಾಡಲಾಗಿರುವುದರಿಂದ ಇಸ್ರೇಲಿ ಪ್ರಜೆಗಳು ವೀಸಾ ಮುಕ್ತ ಪ್ರವೇಶವನ್ನು ಪಡೆಯುವುದನ್ನು ಮುಂದುವರೆಸಬಹುದು.
ಹೇಳಿಕೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಎಲ್ಲಾ ಇಸ್ರೇಲಿಗಳ ಮೇಲೆ ದಕ್ಷಿಣ ಕೊರಿಯಾ ನಿಷೇಧ” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದೆವು. ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವಾಲಯ ಮತ್ತು ವೀಸಾ ಪೋರ್ಟಲ್ ಇಸ್ರೇಲಿ ನಾಗರಿಕರನ್ನು ಗುರಿಯಾಗಿಸಿಕೊಂಡಿರುವ ಯಾವುದೇ ಪ್ರಯಾಣ ನಿಷೇಧ ಅಥವಾ ಪ್ರವೇಶ ನಿರ್ಬಂಧಗಳನ್ನು ತೋರಿಸುವುದಿಲ್ಲ. ಇದಲ್ಲದೆ, ಅಂತಹ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳ ಯಾವುದೇ ವರದಿಗಳಿಲ್ಲ.
ಇದರ ನಂತರ, ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರು ಡಿಸೆಂಬರ್ 31, 2026 ರವರೆಗೆ ಕೊರಿಯಾ ಎಲೆಕ್ಟ್ರಾನಿಕ್ ಪ್ರಯಾಣ ಆಥರೈಸೇಶನ್ (K-ETA) ಅವಶ್ಯಕತೆಯಿಂದ ಸ್ಪಷ್ಟ ವಿನಾಯಿತಿ ಪಡೆದಿದ್ದಾರೆ ಎಂದು ನಮಗೆ ವರದಿಯಿಂದ ತಿಳಿದುಬಂತು, ಈ ಮೂಲಕ ಪ್ರವಾಸಕ್ಕಾಗಿ 90 ದಿನಗಳವರೆಗೆ ವೀಸಾ-ಮುಕ್ತ ವಾಸ್ತವ್ಯವನ್ನು ಪಡೆಯಬಹುದು. 2025ರ ಕೊನೆಯಲ್ಲಿ ಘೋಷಿಸಲಾದ ಇತ್ತೀಚಿನ ಈ ವಿಸ್ತರಣೆಯು ಡಿಸೆಂಬರ್ 31, 2026 ರವರೆಗೆ ಈ ವಿನಾಯಿತಿಯನ್ನು ಸಕ್ರಿಯವಾಗಿರಿಸುತ್ತದೆ. ಕೊರಿಯಾದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಈ ಪ್ರಕಟಣೆಯ ಸ್ಕ್ರೀನ್ಶಾಟ್ ಅನ್ನು ಕೆಳಗೆ ನೋಡಿ-

ಇದರ ನಂತರ ನಾವು ದಕ್ಷಿಣ ಕೊರಿಯಾದ ಅಧಿಕಾರಿಗಳಿಂದ K-ETA ವಿನಾಯಿತಿಯ ಅಧಿಕೃತ ಸೂಚನೆಯನ್ನು ಹುಡುಕಿದೆವು. ಡಿಸೆಂಬರ್ 23, 2025 ರಂದು, ದಕ್ಷಿಣ ಕೊರಿಯಾ K-ETA ವೆಬ್ಸೈಟ್ನಲ್ಲಿ “ವಿನಾಯಿತಿಯು ಡಿಸೆಂಬರ್ 31, 2026 ರವರೆಗೆ ಜಾರಿಯಲ್ಲಿರುತ್ತದೆ” ಎನ್ನುವ ಅಧಿಕೃತ ಸೂಚನೆಯನ್ನು ಬಿಡುಗಡೆ ಮಾಡಲಾಯಿತು. ಅಂದರೆ ಜನವರಿ 1, 2026 ರಿಂದ ಡಿಸೆಂಬರ್ 31, 2026 ರವರೆಗಿನ ಈ ಅವಧಿಯಲ್ಲಿ, 22 ರಾಷ್ಟ್ರೀಯತೆಗಳ ಗುಂಪುಗಳು (ಇಸ್ರೇಲಿಗಳು ಸೇರಿದಂತೆ) K-ETAಗೆ ಅರ್ಜಿ ಸಲ್ಲಿಸದೆ ದಕ್ಷಿಣ ಕೊರಿಯಾವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಅಂತಿಮವಾಗಿ, K ETA ಅನ್ವಯವಾಗುವ ದೇಶಗಳಿಗೆ ಅರ್ಹತೆ ಮತ್ತು ಅರ್ಜಿದಾರರ ಪುಟವನ್ನು ನಾವು ಪರಿಶೀಲಿಸಿದೆವು. ಅಧಿಕೃತ ವೆಬ್ಸೈಟ್ ನಲ್ಲಿ ಇಸ್ರೇಲ್ ಅನ್ನು ವಿನಾಯಿತಿ ಪಡೆದ ದೇಶದ ಪಟ್ಟಿಯಲ್ಲಿ ಸೂಚಿಸಲಾಗಿದೆ, ಕೆಳಗೆ ಕಾಣುವ ವಾಸದ ಅವಧಿಯನ್ನು 90 ದಿನಗಳು ಎಂದು ತೋರಿಸಲಾಗಿದೆ. ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಇಸ್ರೇಲಿ ಪ್ರವಾಸಿಗರು ದಕ್ಷಿಣ ಕೊರಿಯಾದೊಳಗೆ ಈಗಲೂ ಸ್ವಾಗತಾರ್ಹರು.

ಆದ್ದರಿಂದ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಮುಸ್ಲಿಮರ ಅತಿಹೆಚ್ಚು ಪ್ರವೇಶವಾದ ಕಾರಣ ಭಾರತವು ವೈದ್ಯಕೀಯ ಕಾಲೇಜನ್ನು ಮುಚ್ಚಿತೇ? ಸತ್ಯ ಪರಿಶೀಲನೆ
Digiteye Kannada Fact Checkers