ಈ ವೈರಲ್ ಕ್ಲಿಪ್ ನಿಜವಾಗಿಯೂ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೇಲರ್‌ನ ಕಿರುನೋಟವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ‘ಅವತಾರ್: ಫಯರ್ ಅಂಡ್ ಆಶ್’ ಜೊತೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶಿಸಬೇಕಾಗಿದ್ದ ‘ಅವೆಂಜರ್ಸ್: ಡೂಮ್ಸ್‌ಡೇ’ ಟ್ರೇಲರ್‌ನ ಕಿರುನೋಟ ತೋರಿಸುವುದಾಗಿ ಈ ಕ್ಲಿಪ್ ಹೇಳಿಕೊಳ್ಳುತ್ತದೆ.

ಕಡೆನುಡಿ/Conclusion :ಹೇಳಿಕೆ ಸುಳ್ಳು. ‘ಅವೆಂಜರ್ಸ್ ಡೂಮ್ಸ್‌ಡೇ’ ಗಾಗಿ ಮಾರ್ವೆಲ್ ಯಾವುದೇ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿಲ್ಲ. ಈ ಕ್ಲಿಪ್ ಅನ್ನು AI ಮೂಲಕ ರಚಿಸಲಾಗಿದೆ. ‘ಅವತಾರ್: ಫಯರ್ ಅಂಡ್ ಆಶ್’ ನೊಂದಿಗೆ ನಾಲ್ಕು ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ಮಾರ್ವೆಲ್ ಯೋಜಿಸಿದೆ, ಆದರೆ ಅವು ಲೀಕ್ ಆಗಿಲ್ಲ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು —

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

 ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ವೈರಲ್ ಕ್ಲಿಪ್ ಅನ್ನು ಪ್ರಸಾರ ಮಾಡುತ್ತಿದ್ದು, ಇದು ‘ಅವತಾರ್: ಫಯರ್ ಅಂಡ್ ಆಶ್’ ಜೊತೆಗೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿದ್ದ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೇಲರ್‌ನ ಕಿರುನೋಟ ಎಂದು ಹೇಳಿಕೊಳ್ಳುತ್ತಿದ್ದಾರೆ.  ‘karthick362533’ ಎಂಬ ಹೆಸರಿನ X ಬಳಕೆದಾರರು “ಅವೆಂಜರ್ಸ್ ಡೂಮ್ಸ್‌ಡೇ ಟ್ರೇಲರ್ ಲೀಕ್. ಅವತಾರ್: ಫಯರ್ ಅಂಡ್ ಆಶ್‌ಗಾಗಿ ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಿರುವ ಅವೆಂಜರ್ಸ್: ಡೂಮ್ಸ್‌ಡೇ ಟ್ರೇಲರ್‌ನಲ್ಲಿ ಕಿರುನೋಟ” ಎಂಬ ಶೀರ್ಷಿಕೆಯೊಂದಿಗೆ ಅಂತಹ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

‘ಇಲ್ಲಿರುವ 10-ಕ್ಷಣಗಳ ವೀಡಿಯೊ ಕ್ಲಿಪ್ ನಲ್ಲಿ ರಾಬರ್ಟ್ ಡೌನಿ ಜೂನಿಯರ್ (RDJ) ಅವರನ್ನು ಗಾಯಗೊಂಡ ಡಾಕ್ಟರ್ ಡೂಮ್ ಆಗಿ ಚಿತ್ರಿಸಲಗಿದೆ, ಇದರಲ್ಲಿ ಫೆಂಟಾಸ್ಟಿಕ್ ಫೋರ್ ಮತ್ತು ಮಾರ್ವೆಲ್ ಸ್ಟುಡಿಯೋಸ್ ಬ್ರ್ಯಾಂಡಿಂಗ್ ಅನ್ನು ಹೋಲುವ ಪಾತ್ರಗಳ ಚಿತ್ರಣಗಳನ್ನು ಅಲ್ಲಲ್ಲಿ ಸೇರಿಸಲಾಗಿದೆ. ಈ ಪೋಸ್ಟ್ ಗೆ ಸುಮಾರು 78,000 ವೀಕ್ಷಣೆಗಳು ದೊರಕಿದ್ದು, ಅದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಮಾರ್ವೆಲ್‌ನ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಯಾವುದೇ ಅಧಿಕೃತ ದೃಢೀಕರಣ ಅಥವಾ ಯಾವುದೇ ಟ್ರೇಲರ್ ಬಿಡುಗಡೆಯಾಗಿಲ್ಲ. ಅವತಾರ್: ಫಯರ್ ಅಂಡ್ ಆಶ್‌ಗೆ ನಾಲ್ಕು ಟ್ರೇಲರ್‌ಗಳನ್ನು ಲಗತ್ತಿಸಲಾಗುವುದು ಎಂಬುದರ ಕುರಿತು ವರದಿಗಳಿವೆ, ಆದರೆ ಇಲ್ಲಿಯವರೆಗೆ ಯಾವುದೇ “ಸ್ನೀಕ್ ಪೀಕ್” (ಕಿರುನೋಟ) ಇಲ್ಲ ಮತ್ತು ಹೇಳಿಕೆಯಲ್ಲಿ ಕಾಣುವ ವೀಡಿಯೊ AI ಮೂಲಕ ರಚಿಸಿರುವಂಥದ್ದು.

ವಿವರಗಳು:

ಮೂಲದ ಬಗ್ಗೆ ತಿಳಿಯಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಯಾವುದೇ ಫಲಿತಾಂಶಗಳಲ್ಲಿ ಯಾವುದೇ ಅಧಿಕೃತ ಸಾಮಾಜಿಕ ವೇದಿಕೆಗಳಲ್ಲಿ ಮಾರ್ವೆಲ್ ಬಿಡುಗಡೆ ಮಾಡಿದ ಅಧಿಕೃತ ಟ್ರೇಲರ್‌ ಕಂಡುಬಂದಿಲ್ಲ. ಈ ಕ್ಲಿಪ್ ಅನ್ನು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲದೆ ಪರಿಶೀಲಿಸದಿರುವ ಸಾಮಾಜಿಕ ಮಾಧ್ಯಮ ಖಾತೆಗಳು ಮಾತ್ರ ಪ್ರಸಾರ ಮಾಡಿವೆ.

ಇದರ ನಂತರ, ಹೆಚ್ಚಿನ ಮಾಹಿತಿಗಾಗಿ ನಾವು “ಮಾರ್ವೆಲ್ ಅವೆಂಜರ್ಸ್: ಡೂಮ್ಸ್‌ಡೇ ಟ್ರೇಲರ್ ಲೀಕ್” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಟೈಮ್ಸ್ ಆಫ್ ಇಂಡಿಯಾದ ಒಂದು ವರದಿಯ ಪ್ರಕಾರ, ಮಾರ್ವೆಲ್ ಸ್ಟುಡಿಯೋಸ್ ನಾಲ್ಕು ವಿಭಿನ್ನ ಟೀಸರ್ ಟ್ರೇಲರ್‌ಗಳನ್ನು ಯೋಜಿಸಿದೆ, ಪ್ರತಿಯೊಂದೂ ಸರಿಸುಮಾರು 1-1.5 ನಿಮಿಷಗಳಷ್ಟು ಉದ್ದವಾಗಿರಲಿದ್ದು, ಚಿತ್ರಮಂದಿರಗಳಲ್ಲಿ ಅನುಕ್ರಮವಾಗಿ ಬಿಡುಗಡೆಯಾಗಲಿದೆ: ಮೊದಲನೆಯದು ಡಿಸೆಂಬರ್ 19 ರಂದು ಕಾಣಲಿದೆ ಎನ್ನಲಾಗಿತ್ತು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

IGN ಇಂಡಿಯಾ ಪ್ರಕಟಿಸಿದ ಮತ್ತೊಂದು ವರದಿಯೂ ಸಹ, ಡಿಸ್ನಿಯು ಅವೆಂಜರ್: ಡೂಮ್ಸ್‌ಡೇ ಚಿತ್ರದ ನಾಲ್ಕು ವಿಭಿನ್ನ  ಟ್ರೇಲರ್‌ಗಳನ್ನು ಸೇರಿಸುವ ಮೂಲಕ ಅವತಾರ್: ಫಯರ್ ಅಂಡ್ ಆಶ್ ವೀಕ್ಷಕತ್ವವನ್ನು ಹೆಚ್ಚಿಸಲು ಯೋಜಿಸಿದೆ ಎಂದು ವರದಿ ಮಾಡಿತು.

ಡಿಸೆಂಬರ್ 12, 2025 ರಂದು ಹಾಲಿವುಡ್ ರಿಪೋರ್ಟರ್ ಪ್ರಕಟಿಸಿದ ವರದಿಯು “ಡಿಸ್ನಿಯು ಮಾರ್ವೆಲ್ ಮೆಗಾ-ಚಲನಚಿತ್ರದ [ಅವೆಂಜರ್ಸ್: ಡೂಮ್ಸ್‌ಡೇ] ನಾಲ್ಕು ವಿಭಿನ್ನ ಟ್ರೇಲರ್‌ಗಳನ್ನು ಥಿಯೇಟರ್‌ಗಳಿಗೆ ಕಳುಹಿಸುತ್ತಿದೆ… ನೀವು ಒಂದು ವಾರದ ನಂತರ ಹೋದರೆ, ನಿಮಗೆ ಟ್ರೇಲರ್‌ ಎರಡು ಸಿಗುತ್ತದೆ, …..” ಎಂದು ಉಲ್ಲೇಖಿಸುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಕೊನೆಯದಾಗಿ, ಹೇಳಿಕೆಯಲ್ಲಿ ಹಂಚಿಕೊಂಡಿರುವ ವೀಡಿಯೊದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ನಾವು ಅದರ ವಿವಿಧ ಭಾಗಗಳನ್ನು AI ಡಿಟೆಕ್ಟರ್‌ ನಲ್ಲಿ ಪರಿಶೀಲಿಸಿದೆವು. ಪೂರ್ಣ ಕ್ಲಿಪ್ ಅಲ್ಲದಿದ್ದರೂ, ವೀಡಿಯೊದ ಗಮನಾರ್ಹ ಭಾಗವನ್ನು AI ಬಳಸಿ ರಚಿಸಲಾಗಿದೆ ಎಂದು ಫಲಿತಾಂಶಗಳು ಸಾಬೀತುಪಡಿಸಿದವು. ಫಲಿತಾಂಶಗಳನ್ನು ಕೆಳಗೆ ವೀಕ್ಷಿಸಿ –

ಹೀಗಾಗಿ, ಹೇಳಿಕೆ ಸುಳ್ಳು.

******************************************************
ಇದನ್ನೂ ಓದಿ:

ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು CDS ಸಿಬ್ಬಂದಿ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

 

 

Leave a Reply

Your email address will not be published. Required fields are marked *

*