Don't Miss

ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅರವತ್ತು ವರ್ಷ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಭಾರತದ ತಂತ್ರಜ್ಞಾನವು ಬಹಳ ಉತ್ತಮವಾಗಿದೆ ಎಂಬ ಹೇಳಿಕೆಯೊಂದಿಗೆ ರೈಲು ಹಳಿ ಇರಿಸುವ ಯಂತ್ರದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಕಡೆನುಡಿ/Conclusion: ಸುಳ್ಳು. ಭಾರತವು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ರೈಲುಮಾರ್ಗಗಳನ್ನು ಹೇಗೆ ನಿರ್ಮಿಸುತ್ತಿದೆ ಎಂಬುದನ್ನು ತೋರಿಸುವ ವೈರಲ್ ವೀಡಿಯೊ ವಾಸ್ತವವಾಗಿ ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಮಲೇಷ್ಯಾದಲ್ಲಿ ರೈಲು ಮಾರ್ಗವನ್ನು ನಿರ್ಮಿಸುತ್ತಿರುವ ವೀಡಿಯೊ.

ರೇಟಿಂಗ್:ತಪ್ಪು ನಿರೂಪಣೆ —

ಸತ್ಯ ಪರಿಶೀಲನೆ ವಿವರಗಳು

ಟ್ಯಾಂಪಿಂಗ್ ಯಂತ್ರವೊಂದು ಚಲಿಸುತ್ತಾ ರೈಲು ಸ್ಲೀಪರ್ ಗಳನ್ನು ಇರಿಸುವ ಒಂದು ಸಣ್ಣ ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಅದರೊಂದಿಗಿರುವ ಹೇಳಿಕೆ ಹೀಗಿದೆ, “ये हैं आज के भारत की टेक्नोलॉजी। जिसे विगत 60 वर्षों में सरकार लांच नहीं कर सकी क्योंकि भारत की जनता के टैक्स का पैसा स्विस बैंक में जमा किया जा रहा था।

जय श्रीराम”

[ಅನುವಾದ: 60 ವರ್ಷಗಳ ಹಿಂದಿಗೆ ಹೋಲಿಸಿದರೆ ಇದು ಭಾರತದ ಈಗಿನ ತಂತ್ರಜ್ಞಾನ, ಆ ಸಮಯದಲ್ಲಿ ತೆರಿಗೆ ಪಾವತಿದಾರರ ಸಂಪೂರ್ಣ ಹಣವನ್ನು ಸಾಗಿಸಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಇಡಲಾಗುತ್ತಿತ್ತು]” ಇದನ್ನು ಟ್ವಿಟರ್ (X) ನಲ್ಲಿ ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ  ‘ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್’ ನ ಯಂತ್ರಗಳು ರೈಲು ಮಾರ್ಗವನ್ನು ಇರಿಸುತ್ತಿರುವುದನ್ನು ತೋರಿಸಲಾಗಿದೆ.

 

FACT CHECK

ಇದನ್ನು ಈ ಹಿಂದೆ ನೋಡಿರದ ಕಾರಣ ಡಿಜಿಟೈ ಇಂಡಿಯಾ ತಂಡವು ಇದನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು, ತಂಡವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಇದನ್ನು ಪರಿಶೀಲಿಸಿತು, ಆಗ ಮಲೇಷ್ಯಾಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ 12, 2023 ರಂದು ಪೋಸ್ಟ್ ಮಾಡಲಾದ ಲೇಖನದಲ್ಲಿರುವ ವೀಡಿಯೊ ಕುರಿತು ಫಲಿತಾಂಶಗಳು ಕಂಡುಬಂದವು.

ಮಲೇಷ್ಯಾದ ಕ್ವಾಂಟನ್ ನಗರದಲ್ಲಿ ನಡೆಯುತ್ತಿರುವ ಈಸ್ಟ್ ಕೋಸ್ಟ್ ರೈಲ್ ಲಿಂಕ್ ರಸ್ತೆ ಕಾಮಗಾರಿ ಕುರಿತು ‘News.CN’ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಲಾಗಿತ್ತು. ಇದನ್ನು ‘ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಕಂಪನಿ’ಯವರು ನಿರ್ಮಿಸುತ್ತಿದ್ದರು. ಗೂಗಲ್ ನ್ಯೂಸ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ, ಮೂಲ ವೀಡಿಯೊವನ್ನು ಚೈನಾ ಪ್ರೆಸ್ ತನ್ನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿತ್ತು ಎಂದು ತಿಳಿದುಬಂದಿದೆ. ಕ್ವಾಂಟನ್‌ನಲ್ಲಿನ ರೈಲು ಮಾರ್ಗವು ಚೈನಾ-ಮಲೇಷ್ಯಾ ಜಂಟಿ ಯೋಜನೆಯ ಭಾಗವಾಗಿದೆ ಎಂದು ವಿವರಗಳು ತೋರಿಸುತ್ತವೆ.

ಇದನ್ನೂ ಓದಿ:

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*