Don't Miss

ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ(ಲೆಬನಾನ್) ಪೂರ್ಣ ಪ್ರಮಾಣದ ಯುದ್ಧ ಸಾರುತ್ತಿದೆ ಎಂದು ಹೇಳುವ ಹಳೆಯ ವೀಡಿಯೊ ಒಂದು ತಲೆ ಎತ್ತುತ್ತಿದೆ; ಸತ್ಯ ಪರಿಶೀಲನೆ

ಇಸ್ರೇಲ್ -ಹಮಾಸ್ ಸಂಘರ್ಷದ ಬಗ್ಗೆ ಭಾರಿ ಗೊಂದಲದ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಹೊಸ ತಿರುವುಗಳು ಕಾಣಿಸಿಕೊಳ್ಳುತ್ತಿದ್ದು, ಅವು ಒಂದಲ್ಲ ಒಂದು ಪಕ್ಷವನ್ನು ದೂಷಿಸುತ್ತಿವೆ. ಅಂತಹ ಒಂದು ವೀಡಿಯೊ ಹೇಳಿಕೊಳ್ಳುತ್ತಿರುವುದೇನೆಂದರೆ ಹಿಜ್ಬುಲ್ಲಾ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಲು ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ನಿರ್ದೇಶಿಸಿದ ರಾಕೆಟ್‌ಗಳನ್ನು ಉಡಾಯಿಸಿತೆಂದು. ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಎದುರಿಸಲು ಹಮಾಸ್ ಗುಂಪು ಅವರೊಂದಿಗೆ ಕೈಬೆಸೆದಿದೆ ಎಂಬ ಹೇಳಿಕೆಯನ್ನು ಇದು ಮತ್ತಷ್ಟು ಬೆಂಬಲಿಸುತ್ತದೆ.

ಶೀರ್ಷಿಕೆಯು ಹೀಗಿದೆ: “ಹಿಜ್ಬುಲ್ಲಾ (ಲೆಬನಾನ್) ಇಸ್ರೇಲ್ ರಾಜ್ಯದ ವಿರುದ್ಧ ಪೂರ್ಣ ಪ್ರಮಾಣದ ಯುದ್ಧವನ್ನು ಸಾರುತ್ತಿದೆ. ಹಮಾಸ್ ಕೇವಲ ಕೈಗೊಂಬೆಯಾಗಿತ್ತು, ಅರಬ್ ಇಸ್ರೇಲಿನೊಂದಿಗೆ ಯುದ್ಧ ಪ್ರಾರಂಭಿಸಲು ಬಯಸಿತ್ತು. ಇರಾನ್ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸೇರಲು ಬಹಳ ಉತ್ಸುಕವಾಗಿದೆ. ಇದೀಗ ಸ್ಪಷ್ಟವಾಗಿದೆ. ಇದು ಇಸ್ರೇಲ್ ವಿರುದ್ಧದ ಒಂದು ಅತಿದೊಡ್ಡ ಪಿತೂರಿ”.

ರಾಯಿಟರ್ಸ್ ವರದಿ ಮಾಡಿರುವಂತೆ ಇರಾನ್ ಬೆಂಬಲಿತ ಹಿಜ್ಬುಲ್ಲಾ, 1982 ರಿಂದ ಲೆಬನಾನ್‌ನಿಂದ ಇಸ್ರೇಲ್‌ನೊಂದಿಗಿನ ಸಂಘರ್ಷದಲ್ಲಿ ತೊಡಗಿದೆ. ಅಕ್ಟೋಬರ್ 7ರಂದು ಗಾಜಾ಼ ಮತ್ತು ಇಸ್ರೇಲ್‌ನಲ್ಲಿನ ಅದರ ಪ್ಯಾಲೇಸ್ಟಿನಿ ಮಿತ್ರರಾದ ಹಮಾಸ್ ಯುದ್ಧಕ್ಕೆ ಹೋದಾಗಿನಿಂದ ಅವರು ಗಡಿಯುದ್ದಕ್ಕೂ ಇಸ್ರೇಲಿ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. ವಾಸ್ತವವಾಗಿ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಗಡಿ ಹಿಂಸಾಚಾರವು 2006 ರಲ್ಲಿ ನಡೆದ ಒಂದು ಪ್ರಮುಖ ಯುದ್ಧದ ನಂತರದ ಅತಿ ಮಾರಣಾಂತಿಕ ಘಟನೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ನೀವು X ನಲ್ಲಿ ಇಲ್ಲಿ ಮತ್ತು ಇಲ್ಲಿ ಪೋಸ್ಟ್ ನೋಡಬಹುದು.

Fact Check

ವೈರಲ್ ವೀಡಿಯೊವನ್ನು ಯಾವುದೇ ಪ್ರಮುಖ ಸುದ್ದಿವಾಹಿನಿ ತೋರಿಸಿಲ್ಲವಾದ್ದರಿಂದ ಡಿಜಿಟೈ ಇಂಡಿಯಾ ತಂಡವು ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿತು. ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸಿದಾಗ, ಫಲಿತಾಂಶಗಳಲ್ಲಿ ಜನವರಿ 20, 2018ರಂದು ಸ್ಟಾರ್‌ಗೇಟ್‌ ಎಂಬ ಟರ್ಕಿಯ ಸುದ್ದಿ ವೆಬ್‌ಸೈಟ್ ಅಪ್‌ಲೋಡ್ ಮಾಡಿದ ಹಳೆಯ ವರದಿಯಿಂದ ಬಂದ ಒಂದು ವಿಡಿಯೋ ನಮಗೆ ದೊರಕಿತು.

ಸುದ್ದಿ ಲೇಖನದ ಅನುವಾದ ಹೀಗಿದೆ: “ಆಫ್ರಿನ್‌ನಲ್ಲಿ TSKಯು ಗುರಿಯಾದ PYDಯನ್ನು ಹೊಡೆಯಲಾರಂಭಿಸಿತು”. ಇದು ಸಿರಿಯಾದ ಆಫ್ರಿನ್‌ನಲ್ಲಿ ಗುರಿಯಾದ ಕುರ್ದಿಶ್ ಜನರ ಮೇಲೆ ಟರ್ಕಿಯ ದಾಳಿಯನ್ನು ಉಲ್ಲೇಖಿಸುತ್ತದೆ. ಆ ವೀಡಿಯೊವನ್ನು ಟರ್ಕಿಯ ಸುದ್ದಿ ಪ್ರಸಾರದೊಂದಿಗೆ ಇಲ್ಲಿ ನೋಡಬಹುದು.

ಆದ್ದರಿಂದ, ಇತ್ತೀಚಿನ ಇಸ್ರೇಲ್- ಹಿಜ್ಬುಲ್ಲಾ (ಲೆಬನಾನ್) ಘರ್ಷಣೆಗಳೆಂದು ಹೇಳಲು ತಪ್ಪು ವೀಡಿಯೊವನ್ನು ಬಳಸಲಾಗಿದೆ.

Claim/ಹೇಳಿಕೆ: ಇಸ್ರೇಲ್ ಮೇಲೆ ಹಿಜ್ಬುಲ್ಲಾ(ಲೆಬನಾನ್) ದಾಳಿಗಳನ್ನು ತೋರಿಸುತ್ತಾ ಅವೆರಡೂ ಈಗ ಪೂರ್ಣ ಪ್ರಮಾಣದ ಯುದ್ಧದಲ್ಲಿವೆ ಎಂದು ವೈರಲ್ ವೀಡಿಯೋ ಹೇಳುತ್ತದೆ.

Conclusion/ಕಡೆನುಡಿ: ಆಫ್ರಿನ್‌ನಲ್ಲಿ ಗುರಿಯಾದ ಕುರ್ದಿಶ್ ಜನರ ಮೇಲೆ ಟರ್ಕಿಯ ದಾಳಿಗಳನ್ನು ತೋರಿಸುವ 2018ರ ಹಳೆಯ ವೀಡಿಯೊ ಕ್ಲಿಪ್ ಅನ್ನು ತಿರುಚಲಾಗಿದೆ. ಸುಳ್ಳು.

ರೇಟಿಂಗ್: ತಪ್ಪು ನಿರೂಪಣೆ.

[ಇದನ್ನೂ ಓದಿ: ಕೆನಡಾದ ವಿರೋಧ ಪಕ್ಷದ ನಾಯಕರು ಭಾರತದೊಂದಿಗಿನ ಸಂಬಂಧವನ್ನು ಕೆಡಿಸಿದ್ದಕ್ಕಾಗಿ ಜಸ್ಟಿನ್ ಟ್ರುಡೊರನ್ನು ಟೀಕಿಸಿದರೇ?

ಕೌನ್ ಬನೇಗಾ ಕರೋರ್ಪತಿಯಲ್ಲಿ ಮಧ್ಯ ಪ್ರದೇಶದ ಶಿವರಾಜ್ ಸಿಂಘ್ ಚೌಹಾನ್ ರವರನ್ನು ಕೆಣಕುವ ರಾಜಕೀಯ ಪ್ರಶ್ನೆಯನ್ನು ಕೇಳಲಾಗಿತ್ತೇ? ಸತ್ಯ ಪರಿಶೀಲನೆ]

 

Leave a Reply

Your email address will not be published. Required fields are marked *

*