Don't Miss

ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಪ್ಯಾಲೇಸ್ಟಿನಿನ ಮಿಲಿಟರಿ ಗುಂಪಾದ ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಲು ಮೋಟರೀಕೃತ ಪ್ಯಾರಾಗ್ಲೈಡರ್‌ಗಳನ್ನು ಬಳಸಿತು. ಆದರೆ, ಹಮಾಸ್‌ನ ನಿಜವಾದ ದಾಳಿಯನ್ನು ತೋರಿಸುತ್ತಿರುವುದಾಗಿ ಹೇಳುವ ದಾಳಿಗೆ ಸಂಬಂಧಿಸಿರದ ಇತರ ಅನೇಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂತಹ ಒಂದು ವೀಡಿಯೊದಲ್ಲಿ ಪ್ಯಾರಾಗ್ಲೈಡರ್‌ಗಳು ಆಟದ ಮೈದಾನದಂತೆ ಕಾಣುತ್ತಿರುವ ಸ್ಥಳದೊಳಗೆ ಹಾರಿ ಬರುವುದನ್ನು  ಕಾಣಬಹುದು.

ವೀಡಿಯೊದೊಂದಿಗಿನ ಹೇಳಿಕೆಯ ಪ್ರಕಾರ “ಹಮಾಸ್ ಭಯೋತ್ಪಾದಕರು ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿದರು, ಅಮಾಯಕ ನಾಗರಿಕರನ್ನು ಹತ್ಯೆಗೊಳಿಸಲು, ಮಹಿಳೆಯರು ಮತ್ತು ಮಕ್ಕಳನ್ನು ಅತ್ಯಾಚಾರಕ್ಕೊಳಗಾಗಿಸಿ ಕೊಲ್ಲಲು ಮನೆ-ಮನೆಗೆ ಹೋದರು.” ಪ್ಯಾರಾಗ್ಲೈಡರ್‌ಗಳು ಗಾಳಿಯಲ್ಲಿ ಹಾರಿ ಆಟದ ಮೈದಾನದಲ್ಲಿ ಇಳಿಯುವುದನ್ನು ವೀಡಿಯೊ ತೋರಿಸುತ್ತದೆ.

ಈ ವೀಡಿಯೊವನ್ನು ಇಲ್ಲಿಯೂ,ಇಲ್ಲಿಯೂ,ಮತ್ತು ಇಲ್ಲಿಯೂ ಹಂಚಿಕೊಳ್ಳಲಾಗಿದೆ.ಈ ವೈರಲ್ ವೀಡಿಯೊದ ಸತ್ಯ ಪರಿಶೀಲನೆ ನಡೆಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಒಂದು ಕೋರಿಕೆ ಬಂತು.

FACT CHECK

ಡಿಜಿಟೈ ಇಂಡಿಯಾ ತಂಡವು ವೀಡಿಯೊವನ್ನು ಹಲವು ಕೀಫ್ರೇಮ್‌ಗಳಾಗಿ ವಿಂಗಡಿಸಿ, ಪ್ರತಿಯೊಂದು ಕೀಫ್ರೇಮನ್ನು ಬಳಸಿ ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. ಒಂದು ಫಲಿತಾಂಶವು 13 ದಿನಗಳ ಹಿಂದೆ, ಅಂದರೆ ಸೆಪ್ಟೆಂಬರ್ 30, 2023 ರಂದು YouTube ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವನ್ನು ತೋರಿಸಿತು. ವೀಡಿಯೊಗೆ ಅರೇಬಿಕ್‌ ಭಾಷೆಯಲ್ಲಿ ಶೀರ್ಷಿಕೆ ನೀಡಲಾಗಿದ್ದು ಅದರ ಅನುವಾದ ಹೀಗಿದೆ ‘ಹೆಲಿಯೊಪೊಲಿಸ್‌ನಲ್ಲಿ ಪ್ಯಾರಾಚೂಟ್ ಫೋರ್ಸ್ ಗಳು’. ಈ ವೀಡಿಯೋ, ವೈರಲ್ ವೀಡಿಯೋದಲ್ಲಿ ಬಳಸಲಾದ ವೀಡಿಯೋ ಆಗಿತ್ತು. ಸ್ವರ ಕೂಡ ಹೊಂದಿಕೆಯಾಗುತ್ತಿತ್ತು.

ವೀಡಿಯೊದ ನಿಖರವಾದ ಸ್ಥಳವನ್ನು ತಿಳಿಸುವ ಸುಳಿವುಗಳಿಗಾಗಿ ನಾವು ವೀಡಿಯೊವನ್ನು ಕೂಲಂಕುಷವಾಗಿ ಗಮನಿಸಿದೆವು. 0:01 ಸೆಕೆಂಡುಗಳ ಸಮಯಕ್ಕೆ, ಭುಜದ ಮೇಲೆ ಸಮತಲ ಪಟ್ಟಿಗಳನ್ನು ಹೊಂದಿದ್ದ ನೀಲಿ ಜ್ಯಾಕೆಟ್ ಧರಿಸಿರುವ ವ್ಯಕ್ತಿಯೊಬ್ಬನನ್ನು ನಾವು ಗುರುತಿಸಿದೆವು. ಜ್ಯಾಕೆಟ್‌ನ ಹಿಂಭಾಗದಲ್ಲಿ, ‘EL NASR SC.’ ಎಂದು ಬರೆದಿತ್ತು. ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ EL NASR SC ಎಂಬುದು ಈಜಿಪ್ಟ್‌ನ ಕೈರೋ ಮೂಲದ ಈಜಿಪ್ಷಿಯನ್ ಫುಟ್‌ಬಾಲ್ ಕ್ಲಬ್ ಎಂದು ನಮಗೆ ತಿಳಿದುಬಂತು.

ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟ ನಡೆಸಲು ನಾವು ಈ ಸುಳಿವುಗಳನ್ನು ಬಳಸಿದಾಗ ಕೈರೋದಲ್ಲಿ ಎಲ್-ನಾಸ್ರ್ ಸ್ಪೋರ್ಟಿಂಗ್ ಕ್ಲಬ್ ಒಂದಿದೆ ಎಂದು ನಮಗೆ ತಿಳಿದುಬಂತು. ವೀಡಿಯೋಗಳ ಸ್ಥಳ ಒಂದೇ ಎಂದು ಖಚಿತಪಡಿಸಿಕೊಳ್ಳಲು ನಮ್ಮ ತಂಡವು ಕ್ಲಬ್‌ನ ಚಿತ್ರಗಳನ್ನು ನೋಡಿತು. ಗೂಗಲ್ ನಲ್ಲಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ಚಿತ್ರವು ನಮ್ಮ ಕೈಸಿಕ್ಕಿತು, ಆ ಚಿತ್ರದಲ್ಲಿ ಅದೇ ಆಟದ ಮೈದಾನವನ್ನು ಬೇರೊಂದು ಕೋನದಿಂದ ತೋರಿಸಲಾಗಿದೆ. ವೀಡಿಯೊದ ಸ್ಥಳವನ್ನು ಕಂಡುಹಿಡಿಯಲು ಇದು ನಮಗೆ ಸಹಾಯ ಮಾಡಿತು.

ಆದ್ದರಿಂದ, ವೀಡಿಯೊ ಇಸ್ರೇಲ್‌ನಿಂದ ಬಂದಿದೆ ಎಂಬ ಹೇಳಿಕೆ ಸುಳ್ಳು.

Claim/ಹೇಳಿಕೆ: ವೈರಲ್ ವೀಡಿಯೊವೊಂದು ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಪ್ರಜೆಗಳ ಮೇಲೆ ದಾಳಿ ನಡೆಸಲು ಇಸ್ರೇಲ್‌ನ ಆಟದ ಮೈದಾನದೊಳಗೆ ಪ್ಯಾರಾಗ್ಲೈಡ್ ಮಾಡುತ್ತಿದ್ದರೆಂದು ಆಪಾದಿಸಿ ದೃಶ್ಯ ತೋರಿಸುತ್ತದೆ.

Conclusion/ಕಡೆನುಡಿ: ಈ ವೀಡಿಯೊ ಇಸ್ರೇಲ್‌ನಿಂದ ಅಲ್ಲ. ಇದನ್ನು ಈಜಿಪ್ಟ್‌ನಲ್ಲಿ ಚಿತ್ರೀಕರಿಸಲಾಗಿತ್ತು, ಇದರಲ್ಲಿ ಪ್ಯಾರಾಗ್ಲೈಡರ್‌ಗಳು ಕೈರೋದಲ್ಲಿನ ಆಟದ ಮೈದಾನದೊಳಗೆ ಹಾರಿ ಬರುತ್ತಾರೆ. ಈಜಿಪ್ಟ್‌ನ ಎಲ್-ನಾಸ್ರ್ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಸ್ಥಳವು ವೈರಲ್ ವೀಡಿಯೊದಲ್ಲಿ ತೋರಿಸಿರುವ ಸ್ಥಳದೊಂದಿಗೆ ಹೊಂದಿಕೆಯಾಗುತ್ತದೆ.

ರೇಟಿಂಗ್:ತಪ್ಪು ನಿರೂಪಣೆ???

[ಇದನ್ನೂ ಓದಿ-: ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ]

 

9 comments

  1. Pingback: ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾ

  2. Pingback: ಇಲ್ಲ, ಈ ವೀಡಿಯೊ ಒಬ್ಬ ಬ್ರಾಹ್ಮಣ ಶಿಕ್ಷಕರು ದಲಿತ ಮಗುವನ್ನು ಥಳಿಸುವುದನ್ನು ತೋರಿಸುವುದಿಲ್ಲ; ಸತ್ಯ ಪರಿಶೀಲನೆ -

  3. Pingback: ಭಾರತದಾದ್ಯಂತ ಎಲ್ಲಾ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆಯೇ? ಸತ್ಯ ಪರಿಶೀಲನೆ - Digi

  4. Pingback: ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾ

  5. Pingback: ಕೆನಡಾದ ವಿರೋಧ ಪಕ್ಷದ ನಾಯಕರು ಭಾರತದೊಂದಿಗಿನ ಸಂಬಂಧವನ್ನು ಕೆಡಿಸಿದ್ದಕ್ಕಾಗಿ ಜಸ್ಟಿನ್ ಟ್ರುಡೊರನ್ನು ಟೀಕಿಸ

  6. Pingback: ನಂದಿನಿ ತುಪ್ಪದ ಪೂರೈಕೆಗೆ ಕೆಎಂಎಫ್ ನೀಡಿದ ಬೆಲೆ ಹೇಳಿಕೆಯನ್ನು ಟಿಟಿಡಿ 50 ವರ್ಷಗಳ ನಂತರ ತಿರಸ್ಕರಿಸಿತೇ? ಸತ್ಯ

  7. Pingback: ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳಿದ್ದಕ್ಕಾಗಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ಶಾಸಕರ ಮೇಲೆ ಹಲ್ಲೆ? ಸತ್ಯ ಪರಿಶೀಲ

  8. Pingback: ಪ್ರಧಾನಿ ಮೋದಿ ಸೋನಿಯಾ ಗಾಂಧಿಯವರ ಪಾದಸ್ಪರ್ಶ ಮಾಡುತ್ತಿರುವುದು? ನಕಲಿ ಚಿತ್ರ ಆಗಿದೆ ವೈರಲ್ - Digiteye Kannada

  9. Pingback: ಇಂದಿರಾ ಗಾಂಧಿಯೊಂದಿಗೆ ಕನ್ನಡದ ವರನಟ ಡಾ। ರಾಜಕುಮಾರ್ ಅವರ ಹಳೆಯ ಛಾಯಾಚಿತ್ರದಲ್ಲಿ ಮೋದಿ? Fact Check - Digiteye Kannada

Leave a Reply

Your email address will not be published. Required fields are marked *

*