Don't Miss

ಕೌನ್ ಬನೇಗಾ ಕರೋರ್ಪತಿಯಲ್ಲಿ ಮಧ್ಯ ಪ್ರದೇಶದ ಶಿವರಾಜ್ ಸಿಂಘ್ ಚೌಹಾನ್ ರವರನ್ನು ಕೆಣಕುವ ರಾಜಕೀಯ ಪ್ರಶ್ನೆಯನ್ನು ಕೇಳಲಾಗಿತ್ತೇ? ಸತ್ಯ ಪರಿಶೀಲನೆ

ಕೌನ್ ಬನೇಗಾ ಕರೋರ್ಪತಿ ಕಾರ್ಯಕ್ರಮದ್ದು ಎನ್ನಲಾಗಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮಿತಾಭ್ ಬಚ್ಚನ್ ರವರು ಸ್ಪರ್ಧಿಗೆ ರೂ. 20,000ಕ್ಕೆ ಒಂದು ರಾಜಕೀಯ ಪ್ರಶ್ನೆ ಕೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪ್ರಶ್ನೆ ಹೀಗಿದೆ,

इनमें से किस मुख्यमंत्री को उनकी झूठी घोषना के करण घोषना मशीन कहा जाता है?

[ಅನುವಾದ: ಇವರಲ್ಲಿ ಯಾವ ಮುಖ್ಯಮಂತ್ರಿಗಳನ್ನು ಅವರ ಸುಳ್ಳು ಘೋಷಣೆಗಳ ಕಾರಣದಿಂದಾಗಿ ಘೋಷಣಾ ಮಶೀನ್ ಎಂದು ಕರೆಯುತ್ತಾರೆ?]

ಸ್ಪರ್ಧಿಗೆ ಕೊಡಲಾದ ಆಯ್ಕೆಗಳು ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಘ್ ಚೌಹಾನ್ , ಯೋಗಿ ಆದಿತ್ಯನಾಥ್ ಮತ್ತು ಭೂಪೇಂದ್ರ ಪಟೇಲ್. ಸ್ಪರ್ಧಿಯು  ಶಿವರಾಜ್ ಸಿಂಘ್ ಚೌಹಾನ್  ಎಂದು ಉತ್ತರಿಸಿ ಮೊತ್ತವನ್ನು ಗೆಲ್ಲುತ್ತಾರೆ . ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಅಲೆ ಎಬ್ಬಿಸುತ್ತಿದೆ..

ಈ ವೈರಲ್ ವೀಡಿಯೊದ ಸತ್ಯ ಪರಿಶೀಲನೆ ನಡೆಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಒಂದು ಕೋರಿಕೆ ಬಂತು.

FACT CHECK

ವೀಡಿಯೊವನ್ನು ನಕಲಿಯಾಗಿ ಮಾಡಲಾಗಿತ್ತೆಂದು ಬಹಿರಂಗಪಡಿಸುವ ಯಾವುದೇ ವಿವರಗಳನ್ನು ಹುಡುಕುವ ಸಲುವಾಗಿ ಡಿಜಿಟೈ ಇಂಡಿಯಾ ತಂಡವು ವೀಡಿಯೊವನ್ನು ಹತ್ತಿರದಿಂದ ಗಮನಿಸಿತು. 0:39ರ ಸಮಯಕ್ಕೆ, ಫ್ರೇಮ್ ಅಮಿತಾಭ್ ಬಚ್ಚನ್‌ ರೆಡೆಗೆ ತಿರುಗುತ್ತದೆ. ತುಟಿಗಳ ಚಲನೆಯು ಅವರು ಮಾತನಾಡುತ್ತಿರುವುದಕ್ಕೆ ಹೊಂದಿಕೆಯಾಗುವುದಿಲ್ಲ.

ಮೂಲ ವೀಡಿಯೊವನ್ನು ಹುಡುಕುವ ಸಲುವಾಗಿ ನಾವು ಕೀವರ್ಡ್ ಹುಡುಕಾಟ ಮತ್ತು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳಲ್ಲೊಂದು, ಯೂಟ್ಯೂಬ್‌ನಲ್ಲಿ ಕೆಬಿಸಿ ಇಂಡಿಯಾ ಅಪ್‌ಲೋಡ್ ಮಾಡಿದ ಈ ವೀಡಿಯೊವನ್ನು ತೋರಿಸಿತು. ಈ ವೀಡಿಯೊ ವೈರಲ್ ವೀಡಿಯೊದಲ್ಲಿರುವ ಅದೇ ಸ್ಪರ್ಧಿ, ಭೂಪೇಂದ್ರ ಚೌಧರಿಯನ್ನು ತೋರಿಸಿತು. 19:03ರ ಸಮಯಕ್ಕೆ , ಸ್ಪರ್ಧಿಗೆ  20,000 ರೂ.ಗಳ ಆರನೇ ಪ್ರಶ್ನೆಯನ್ನು ಕೇಳಲಾಗುತ್ತದೆ. ಆ ಪ್ರಶ್ನೆ ಹೀಗಿದೆ, ‘ಈ ಪೈಕಿ ಯಾವ ಸಿನಿಮಾ ಕ್ರೀಡಾಪಟುವಿನ ಕಥೆಯಲ್ಲ’. ಆಯ್ಕೆಗಳು- ಸೈನಾ, ಪಿಕು, ಭಾಗ್ ಮಿಲ್ಖಾ ಭಾಗ್ ಮತ್ತು ಶಭಾಶ್ ಮಿಥು.

ನಾವು ಈ ವೀಡಿಯೊವನ್ನು ವೈರಲ್ ವೀಡಿಯೊದೊಂದಿಗೆ ಹೋಲಿಸಿದಾಗ, ಸ್ಪರ್ಧಿ, ಅವರ ಪೋಷಕರು ಮತ್ತು ಅಮಿತಾಭ್ ಬಚ್ಚನ್ ಧರಿಸಿರುವ ಬಟ್ಟೆಗಳು ಒಂದೇ ಆಗಿರುವುದನ್ನು ನಾವು ಗಮನಿಸಿದೆವು. ಇದು ಜನವರಿ 2023ರಲ್ಲಿ ಪ್ರಸಾರವಾಗುತ್ತಿದ್ದ ಕೌನ್ ಬನೇಗಾ ಕರೋರ್ಪಪತಿಯ ಸೀಸನ್ 14ರ ವೀಡಿಯೊ.

ಮುಂದೆ, ನಾವು ಸಾಮಾಜಿಕ ಜಾಲತಾಣಗಳಲ್ಲಿ ಕೀವರ್ಡ್ ಹುಡುಕಾಟಗಳನ್ನು ನಡೆಸಿದೆವು, ಆಗ ನಮಗೆ ಭೂಪೇಂದ್ರರವರ ಈ ವೀಡಿಯೊ ದೊರಕಿತು, ಅದರಲ್ಲಿ ಅವರು ವೀಡಿಯೊವನ್ನು ಸ್ಪಷ್ಟಪಡಿಸುತ್ತಾರೆ. ಆ ವೀಡಿಯೊ ಸುಳ್ಳು ಎಂದು ಅವರು ತಿಳಿಸುತ್ತಾರೆ ಮತ್ತು ಮೂಲವಾಗಿದ್ದ ಪ್ರಶ್ನೆಯನ್ನು ಕೂಡ ಅವರು ಹೇಳುತ್ತಾರೆ.

ಮುಂದುವೆರೆದಂತೆ, ಸೋನಿ ಟಿವಿ ಸಹ ಹೇಳಿಕೆಯನ್ನು ನೀಡಿದೆ. ಅವರು ಹೇಳಿರುವುದೇನೆಂದರೆ, “ನಮ್ಮ ಶೋ, ‘ಕೌನ್ ಬನೇಗಾ ಕರೋರ್ಪತಿ’ ಯಿಂದ ಅನಧಿಕೃತ ವೀಡಿಯೊದ ಪ್ರಸಾರದ ಬಗ್ಗೆ ನಮಗೆ ಎಚ್ಚರಿಕೆ ನೀಡಲಾಗಿದೆ. ಈ ವೀಡಿಯೊ ನಮ್ಮ ನಿರೂಪಕರ ನಕಲಿ ಸ್ವರವನ್ನು ಮುಂದಿರಿಸಿ ವಿರೂಪ ವಿಷಯವನ್ನು ಪ್ರಸ್ತುತಪಡಿಸುತ್ತದೆ. ಕಾರ್ಯಕ್ರಮದ ದೃಢತೆ ಮತ್ತು ನಮ್ಮ ವೀಕ್ಷಕರ ನಂಬಿಕೆಯನ್ನು ಎತ್ತಿಹಿಡಿಯುವುದು ಅತಿಮುಖ್ಯವಾಗಿದೆ, ಮತ್ತು ನಾವು ಸೈಬರ್‌ಕ್ರೈಮ್ ಸೆಲ್‌ನೊಂದಿಗೆ ಈ ವಿಷಯವನ್ನು ಸಕ್ರಿಯವಾಗಿ ಪರೀಕ್ಷಿಸುತ್ತಿದ್ದೇವೆ. ಅಂತಹ ತಪ್ಪು ಮಾಹಿತಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ, ಜಾಗರೂಕರಾಗಿರಲು ಮತ್ತು ಪರಿಶೀಲಿಸದ ವಿಷಯವನ್ನು ಹಂಚಿಕೊಳ್ಳುವುದನ್ನು ತಡೆಯಲು ನಮ್ಮ ಪ್ರೇಕ್ಷಕರನ್ನು ಕೇಳಿಕೊಳ್ಳುತ್ತೇವೆ.”

ವೀಡಿಯೊ ನಕಲಿಯಾಗಿ ತಯಾರಿಸಲಾಗಿದೆ.

Claim/ಹೇಳಿಕೆ: ಕೌನ್ ಬನೇಗಾ ಕರೋರ್ಪತಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಘ್ ಚೌಹಾನ್ ರವರನ್ನು ಕೆಣಕುವ ರಾಜಕೀಯ ಪ್ರಶ್ನೆಯೊಂದನ್ನು ಅಮಿತಾಭ್ ಬಚ್ಚನ್ ರವರು ಕೇಳುವ ದೃಶ್ಯವನ್ನು ಒಂದು ವೈರಲ್ ವೀಡಿಯೊ ತೋರಿಸುತ್ತದೆ..

Conclusion/ಕಡೆನುಡಿ:ವೀಡಿಯೋದಲ್ಲಿರುವಸ್ವರವನ್ನುನಕಲಿಯಾಗಿತಯಾರಿಸಲಗಿದೆ. ಈಪ್ರಶ್ನೆಯನ್ನುಅಮಿತಾಭ್ಬಚ್ಚನ್ರವರುಕೇಳಲಿಲ್ಲ. 20,000 ರೂ.ಗಳಿಗೆಕೇಳಲಾದಪ್ರಶ್ನೆಯಲ್ಲಿಕ್ರೀಡಾಪಟುವನ್ನುಆಧರಿಸಿರದಬಾಲಿವುಡ್ಚಲನಚಿತ್ರವನ್ನುಆಯ್ಕೆಮಾಡುವಂತೆಹೇಳಲಾಗಿತ್ತು. ಸ್ಪರ್ಧಿಮತ್ತುಸೋನಿಟಿವಿವೀಡಿಯೊವನ್ನುಸುಳ್ಳುಎಂದುಹೇಳಿದ್ದಾರೆ.

ರೇಟಿಂಗ್:ತಪ್ಪು ನಿರೂಪಣೆ-???

[ಇದನ್ನೂ ಓದಿ: ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ]

One comment

Leave a Reply

Your email address will not be published. Required fields are marked *

*