Don't Miss

ಕೆನಡಾದ ವಿರೋಧ ಪಕ್ಷದ ನಾಯಕರು ಭಾರತದೊಂದಿಗಿನ ಸಂಬಂಧವನ್ನು ಕೆಡಿಸಿದ್ದಕ್ಕಾಗಿ ಜಸ್ಟಿನ್ ಟ್ರುಡೊರನ್ನು ಟೀಕಿಸಿದರೇ?

ಭಾರತ ಮತ್ತು ಕೆನಡಾ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಅನೇಕ ಹೇಳಿಕೆಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಈ ಗೊಂದಲದೆಡೆಯಲ್ಲಿ, ಕೆನಡಾದ ವಿರೋಧ ಪಕ್ಷದ ನಾಯಕರು ಕೆನಡಾದ ಪ್ರಧಾನಿ- ಜಸ್ಟಿನ್ ಟ್ರುಡೊರವರನ್ನು ಟೀಕಿಸುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವಿರೋಧ ಪಕ್ಷದ ನಾಯಕರು ಭಾರತ-ಕೆನಡಾದ ರಾಜತಾಂತ್ರಿಕ ಸಂಬಂಧವನ್ನು ಹಾಳು ಮಾಡಿದ್ದಕ್ಕಾಗಿ ಟ್ರುಡೊ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದನ್ನು ಕಾಣಬಹುದು.

https://twitter.com/NorbertElikes/status/1706003395423981782?s=20

ಕೆನಡಾದ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ಮಾತುಗಳನ್ನು ಪ್ರಸ್ತುತಪಡಿಸುವ ದೃಶ್ಯವನ್ನು ಈ ವೀಡಿಯೊ ತೋರಿಸುತ್ತದೆ. ಈ ವೀಡಿಯೊ Xನಲ್ಲಿ (ಈ ಹಿಂದೆ ಟ್ವಿಟರ್) ವೈರಲ್ ಆಗಿದ್ದು ಅಲ್ಲಿ ಅದು 12 ಸಾವಿರ ಲೈಕ್‌ಗಳು, 3 ಸಾವಿರಕ್ಕಿಂತ ಹೆಚ್ಚು ರಿಟ್ವೀಟ್‌ಗಳು ಮತ್ತು 595 ಸಾವಿರಕ್ಕಿಂತ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ. ವೀಡಿಯೊಗೆ ಲಗತ್ತಿಸಲಾದ ಹೇಳಿಕೆ ಹೀಗಿದೆ:

ಭಾರತದೊಂದಿಗಿನ ರಾಜತಾಂತ್ರಿಕ ವಿವಾದದ ಕುರಿತು ಜಸ್ಟಿನ್ ಟ್ರುಡೊ ಅವರನ್ನು ಕೆನಡಾದ ಸಂಸತ್ತಿನಲ್ಲಿ ಗುರಿಯಾಗಿಸಿದ ವಿರೋಧ ಪಕ್ಷದ ನಾಯಕ ಸ್ಕೀರ್”

ಪಿತೂರಿಯೆಂಬ ಸಿದ್ಧಾಂತಗಳಿಗೆ ನಿಮ್ಮ ಬಳಿ ಯಾವುದೇ ಪುರಾವೆ ಇದೆಯೇ? ಪ್ರಧಾನ ಮಂತ್ರಿಗಳ ಅಸಮರ್ಥತೆಯು, ಪ್ರಮುಖ ಏಷ್ಯಾ ಪ್ರಾಂತ್ಯವಾದ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದೊಂದಿಗೆ ಕೆನಡಾದ ಸಂಬಂಧವನ್ನು ಹಾಳುಮಾಡಿದೆ. ಕೆನಡಾದ ನೆಲದಲ್ಲಿ ಅಪರಾಧ ಸಾಬೀತಾದ ಭಯೋತ್ಪಾದಕನ ಉಪಸ್ಥಿತಿಯು ಭಾರತದ ಜವಾಬ್ದಾರಿಯಲ್ಲ.”

ಈ ವೈರಲ್ ವೀಡಿಯೊದ ಸತ್ಯ ಪರಿಶೀಲನೆ ನಡೆಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಒಂದು ಕೋರಿಕೆ ಬಂತು.

FACT CHECK

ಡಿಜಿಟೈ ಇಂಡಿಯಾದ ತಂಡವು ಈ ನಾಯಕರ ಹೆಸರುಗಳನ್ನು ಬಳಸಿ ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿತು. ವೀಡಿಯೊದ ಒಂದು ಫ್ರೇಮ್ ನಲ್ಲಿ, “ದ ಕೆನೇಡಿಯನ್ ಪ್ರೆಸ್” ಎಂಬ ಲೋಗೋ ಗೋಚರಿಸುತ್ತದೆ. ವೀಡಿಯೊ ಹುಡುಕಲು ನಮ್ಮ ಕೀವರ್ಡ್ ಹುಡುಕಾಟದಲ್ಲಿ ನಾವೀ ಪದವನ್ನು ಬಳಸಿದೆವು.

ಫಲಿತಾಂಶಗಳಲ್ಲಿ ಒಂದು ಲಿಂಕ್ ನಮ್ಮನ್ನು ಯೂಟ್ಯೂಬ್‌ನಲ್ಲಿ ದ ಕೆನೇಡಿಯನ್ ಪ್ರೆಸ್ ಪೋಸ್ಟ್ ಮಾಡಿದ ಈ ವೀಡಿಯೊಗೆ ಕರೆದೊಯ್ಯಿತು. ಈ ವೀಡಿಯೊವನ್ನು ಮಾರ್ಚ್ 1, 2018ರಂದು ಪೋಸ್ಟ್ ಮಾಡಲಾಗಿತ್ತು ಮತ್ತು ಇದಕ್ಕೆ, ‘ಕೆನಡಾ- ಭಾರತದ ಸಂಬಂಧವನ್ನು ಹಾನಿಗೊಳಿಸಿದರೆಂದು ಟ್ರೂಡೊ ಮೇಲೆ ಸ್ಕೀರ್ ಆರೋಪಎಂಬ ಶೀರ್ಷಿಕೆ ನೀಡಲಾಗಿದೆ. 0:00ರಿಂದ 0:32ರವರೆಗಿರುವ ವೀಡಿಯೊ ಮತ್ತು ವೈರಲ್ ವೀಡಿಯೊ ಒಂದೇ ಎಂದು ನಾವು ಕಂಡುಕೊಂಡೆವು. ದ ಕೆನೇಡಿಯನ್ ಪ್ರೆಸ್ ನ ವೀಡಿಯೊ ಮುಂದುವರಿದು ಜಸ್ಟಿನ್ ಟ್ರುಡೊರವರ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ಆದರೆ, ಆ ಭಾಗವನ್ನು ವೈರಲ್ ವೀಡಿಯೊದಿಂದ ತೆಗೆದುಹಾಕಲಾಗಿದೆ.

ಪುನಃ 1:35ರಿಂದ 1:55ರವರೆಗೆ ಆಂಡ್ರ್ಯೂ ಸ್ಕೀರ್ ತಮ್ಮ ಮಾತುಗಳನ್ನು ಪ್ರಸ್ತುತಪಡಿಸುವ ಭಾಗವನ್ನು ವೈರಲ್ ವೀಡಿಯೊದಲ್ಲಿ ಬಳಸಲಾಗಿದೆ. ವೈರಲ್ ವೀಡಿಯೊವನ್ನು ಪೋಣಿಸಲು ಈ ಎರಡು ಭಾಗಗಳನ್ನು ಕತ್ತರಿಸಲಾಗಿದೆ.

2018 ರಲ್ಲಿ ಟ್ರುಡೊ ಭಾರತಕ್ಕೆ ಭೇಟಿ ನೀಡಿದಾಗ ಸ್ಕೀರ್ ಅವರ ಆರೋಪವೆದ್ದಿತ್ತು. ಆ ಸಭೆಯಲ್ಲಿ, 1986ರಲ್ಲಿ ಪಂಜಾಬ್ ಮಾಜಿ ಸಚಿವ ಮಲ್ಕಿಯತ್ ಸಿಂಘ್ ಸಿಧುರವರ ಕೊಲೆ ಯತ್ನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಖಲಿಸ್ತಾನಿ ಪ್ರತ್ಯೇಕವಾದಿ ಜಸ್ಪಾಲ್ ಅಟ್ವಾಲ್ ರನ್ನು ಸಹ ಆಹ್ವಾನಿಸಲಾಗಿತ್ತು. ಟ್ರುಡೊ ರವರ ಪತ್ನಿಯೊಂದಿಗೆ ಅಟ್ವಾಲ್ ರ ಫೋಟೋ ತೆಗೆಯಲಾಗಿತ್ತು. ಈ ಘಟನೆಯು ಪ್ರತಿಪಕ್ಷಗಳಿಗೆ ಟ್ರುಡೊರವರ “ಅಸಮರ್ಥತೆಯ” ಬಗ್ಗೆ ಮಾತನಾಡಲು ಅವಕಾಶವನ್ನು ಒದಗಿಸಿತು.

ಈ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು ಮತ್ತೊಂದು ಟ್ವೀಟ್‌ನಲ್ಲಿ, “ವೀಡಿಯೊ ಹಳೆಯದು, ಇತ್ತೀಚಿನದಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಆದ್ದರಿಂದ, ಈ ವೀಡಿಯೊ ಇತ್ತೀಚಿನದು ಎಂಬ ಹೇಳಿಕೆ ಸಂಪೂರ್ಣವಾಗಿ ಸುಳ್ಳು.

https://twitter.com/NorbertElikes/status/1706019022230417852?s=20

CLAIM/ಹೇಳಿಕೆ: ಕೆನಡಾದ ವಿರೋಧ ಪಕ್ಷದ ನಾಯಕ ಆಂಡ್ರ್ಯೂ ಸ್ಕೀರ್ ಅವರು ಇತ್ತೀಚೆಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಭಾರತ-ಕೆನಡಾ  ಸಂಬಂಧಗಳನ್ನು ಹಾನಿಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

CONCLUSION/ಕಡೆನುಡಿ: ವೀಡಿಯೊ ಇತ್ತೀಚಿನದಲ್ಲ ಮತ್ತು 2018 ರದ್ದಾಗಿದೆ.

RATING: Misrepresentation —

[ಇದನ್ನೂ ಓದಿ: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]

5 comments

Leave a Reply

Your email address will not be published. Required fields are marked *

*