Don't Miss

Tag Archives: kannada fact check

ಇಲ್ಲ, ಎಲಾನ್ ಮಸ್ಕ್ ‘ನಾನು ಶಿಶುಕಾಮಿ’ ಎಂದು Xನಲ್ಲಿ ತನ್ನ ಉತ್ತರವನ್ನು ಪೋಸ್ಟ್ ಮಾಡಿಲ್ಲ; ಸತ್ಯ ಪರಿಶೀಲನೆ

No, Elon Musk didn't post his reply on X saying, 'I am a Pedophile'; Fact Check

ಹೇಳಿಕೆ/Claim: ಎಲಾನ್ ಮಸ್ಕ್ ತಾನು ಶಿಶುಕಾಮಿ ಎಂದು ಹೇಳುವ ಟ್ವೀಟ್‌ಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಕಡೆನುಡಿ/Conclusion: ಸುಳ್ಳು, ಎಲಾನ್ ಮಸ್ಕ್ ಅವರ X ಅಥವಾ Twitter ಖಾತೆಯಿಂದ ಅಂತಹ ಯಾವುದೇ ಉತ್ತರವನ್ನು ನೀಡಲಾಗಿಲ್ಲ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು X ಸಾಮಾಜಿಕ ಜಾಲತಾಣದ ಮಾಲೀಕ ಎಲಾನ್ ಮಸ್ಕ್ ಅವರ ಪೋಸ್ಟ್ ನ ಸ್ಕ್ರೀನ್‌ಶಾಟ್‌ನೊಂದಿಗೆ ತೋರಿಸುವ ಹೇಳಿಕೆಯನ್ನು ಹೊಂದಿರುವ ಟ್ವೀಟ್ X ನಲ್ಲಿ ತಿರುಗಾಡುತ್ತಿದೆ. “ನೀವು ಶಿಶುಕಾಮಿ” ಎಂದು ಯಾರೋ ಸುಳ್ಳು ಹರಡುತ್ತಿರುವ ಬಗ್ಗೆ ಬಳಕೆದಾರರೊಬ್ಬರ ಎಚ್ಚರಿಕೆಯು ಇದಕ್ಕೆ ಕಾರಣವಾಗಿತ್ತು. ಶೀಘ್ರದಲ್ಲೇ ಮಾಸ್ಕ್ ಉದ್ದೇಶಪೂರ್ವಕವಾಗಿ ...

Read More »

ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅರವತ್ತು ವರ್ಷ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಭಾರತದ ತಂತ್ರಜ್ಞಾನವು ಬಹಳ ಉತ್ತಮವಾಗಿದೆ ಎಂಬ ಹೇಳಿಕೆಯೊಂದಿಗೆ ರೈಲು ಹಳಿ ಇರಿಸುವ ಯಂತ್ರದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಸುಳ್ಳು. ಭಾರತವು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ರೈಲುಮಾರ್ಗಗಳನ್ನು ಹೇಗೆ ನಿರ್ಮಿಸುತ್ತಿದೆ ಎಂಬುದನ್ನು ತೋರಿಸುವ ವೈರಲ್ ವೀಡಿಯೊ ವಾಸ್ತವವಾಗಿ ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಮಲೇಷ್ಯಾದಲ್ಲಿ ರೈಲು ಮಾರ್ಗವನ್ನು ನಿರ್ಮಿಸುತ್ತಿರುವ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಟ್ಯಾಂಪಿಂಗ್ ಯಂತ್ರವೊಂದು ಚಲಿಸುತ್ತಾ ರೈಲು ಸ್ಲೀಪರ್ ಗಳನ್ನು ಇರಿಸುವ ಒಂದು ಸಣ್ಣ ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ...

Read More »

ಬಿಜೆಪಿ ಚಿಹ್ನೆಯನ್ನು ಹೊಂದಿರುವ ಟೀ ಶರ್ಟ್ ಧರಿಸಿರುವಂತೆ ರಾಹುಲ್ ಗಾಂಧಿಯವರ ಸುಳ್ಳು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim:ರಾಹುಲ್ ಗಾಂಧಿಯವರು ಬಿಜೆಪಿ ಚಿಹ್ನೆ ಇರುವ ಟೀ ಶರ್ಟ್ ಧರಿಸಿರುವ ಚಿತ್ರವನ್ನು ಆತ ಬಿಜೆಪಿ ಏಜೆಂಟ್ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion: ಸುಳ್ಳು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಿಜೆಪಿ ಏಜೆಂಟ್ ಎಂದು ತಪ್ಪಾಗಿ ತೋರಿಸಲು ಅವರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಬೆನ್ನಿನ ಭಾಗದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚಿಹ್ನೆ ಇರುವ ಟೀ ಶರ್ಟ್ ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಧರಿಸಿರುವ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. हमने तो पहले ही कहा था की यह ...

Read More »

ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅಯೋಧ್ಯೆಯ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಿದ್ದರು. ಕಡೆನುಡಿ/Conclusion: ರಾಷ್ಟ್ರಗಳ ಮುಖ್ಯಸ್ಥರು ಸೆಪ್ಟೆಂಬರ್ 2023ರಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ವೀಡಿಯೊವನ್ನು ಜನವರಿ 2024 ರಲ್ಲಿ ನಡೆದ ರಾಮಮಂದಿರ ಕಾರ್ಯಕ್ರಮದ್ದು ಎನ್ನುವಂತೆ ಹಂಚಿಕೊಳ್ಳಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ಅಮೇರಿಕಾದ ರಾಷ್ಟ್ರಪತಿ  ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತಿತರ ವಿಶ್ವ ನಾಯಕರು  ಸೇರಿದಂತೆ ವಿದೇಶಿ ಗಣ್ಯರು ಜನವರಿ 22, 2024 ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ...

Read More »

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಹೇಳಿಕೆ/Claim: ಬ್ರಿಟಿಷರ ಕಾಲದಿಂದ 2017ರ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು. ಯೋಗಿ ಆದಿತ್ಯನಾಥ್ ರವರಡಿಯಲ್ಲಿ ಈಗ 24 ವಿಮಾನ ನಿಲ್ದಾಣಗಳಿವೆ. ಕಡೆನುಡಿ/Conclusion: 2017 ರ ಮೊದಲು, ದಾಖಲೆಯನುಸಾರ  ಉತ್ತರ ಪ್ರದೇಶದಲ್ಲಿ 6 ವಿಮಾನ ನಿಲ್ದಾಣಗಳಿದ್ದವು ಮತ್ತು ಪ್ರಸ್ತುತ 10 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ ಹಾಗೂ 14 ನಿರ್ಮಾಣ ಹಂತದಲ್ಲಿವೆ ಎಂದು ವಿಮಾನಯಾನ ಸಚಿವರ ಪ್ರಕಟಣೆ ತಿಳಿಸಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಯೋಗಿ ಆದಿತ್ಯನಾಥ್ ರವರು 2017 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಉತ್ತರ ಪ್ರದೇಶದಲ್ಲಿ ...

Read More »

ನೇಪಾಳಿ ಹಿಂದೂಗಳು ಉಡುಗೊರೆಗಳೊಂದಿಗೆ ಅಯೋಧ್ಯೆಗೆ ತಲುಪಿದರೆಂದು ತಪ್ಪಾಗಿ ಹೇಳಿ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ನೇಪಾಳದಲ್ಲಿ ಸೀತಾ ಮಾತೆಯ ಮನೆಯಿಂದ ಅಯೋಧ್ಯೆಯ ಭಗವಾನ್ ರಾಮ ಮಂದಿರದವರೆಗಿನ ಭವ್ಯ ಮೆರವಣಿಗೆಯಲ್ಲಿ ಭಗವಾನ ರಾಮ ಮತ್ತು ಸೀತಾ ಮಾತೆಗೆ ಮದುವೆಯ ಉಡುಗೊರೆಯನ್ನು ಒಯ್ಯಲಾಗುತ್ತಿದೆ ಎಂದು ಒಂದು ವೀಡಿಯೊ ಹೇಳಿತು. ಕಡೆನುಡಿ/Conclusion: ಸುಳ್ಳು. ಜುಲೈ 2023 ರಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ‘ಭಗವತ್ ಕಥಾ‘ಗಾಗಿ 3-ಕಿಲೋಮೀಟರ್–ಉದ್ದದ ಕಲಶ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರ ಹಳೆಯ ವೀಡಿಯೊವನ್ನು ಜನವರಿ 2024 ರಲ್ಲಿ ಅಯೋಧ್ಯೆಗೆ ನೇಪಾಳ ಭಕ್ತರ ಯಾತ್ರೆ ಎಂದು ಹಂಚಿಕೊಳ್ಳಲಾಯಿತು. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಜನವರಿ 22, 2024 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ...

Read More »

ತಮಿಳುನಾಡಿನಲ್ಲಿ BHEL ತಿರುಚ್ಚಿ ಘಟಕವು ರಾಮ ಮಂದಿರಕ್ಕಾಗಿ ಈ ಬೃಹತ್ ಗಂಟೆಗಳನ್ನು ತಯಾರಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ತಮಿಳುನಾಡಿನ ತಿರುಚ್ಚಿಯಲ್ಲಿರುವ BHEL ಘಟಕವು ರಾಮಮಂದಿರಕ್ಕಾಗಿ ಬೃಹತ್ ಗಂಟೆಗಳನ್ನು ತಯಾರಿಸಿದೆ. ಕಡೆನುಡಿ/Conclusion: ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಮೋಹನೂರ್ ರಸ್ತೆಯಲ್ಲಿರುವ ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಈ  ಗಂಟೆಗಳನ್ನು ತಯಾರಿಸಿದೆ ಮತ್ತು ಹೇಳಿಕೆಯಲ್ಲಿರುವಂತೆ BHEL, ತಿರುಚ್ಚಿ ಇವುಗಳನ್ನು ತಯಾರಿಸಿಲ್ಲ. ರೇಟಿಂಗ್:ತಪ್ಪು ನಿರೂಪಣೆ — ಒಂದು ಟ್ರಕ್ ದೊಡ್ಡದಾದ ದೇವಾಲಯದ ಗಂಟೆಗಳನ್ನು ಸಾಗಿಸುತ್ತಿರುವ ವೀಡಿಯೊವನ್ನು ಹೊಂದಿರುವ ಒಂದು ವೀಡಿಯೊ ವೈರಲ್ ಆಗುತ್ತಿದೆ.  ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಸಾರ್ವಜನಿಕ ವಲಯದ ಕಂಪನಿಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL) ಈ ಗಂಟೆಗಳನ್ನು ತಯಾರಿಸಿದೆ ಎಂಬುದು ಅದರೊಂದಿಗಿರುವ ಹೇಳಿಕೆ. ಹೇಳಿಕೆಯ ಅನುಸಾರ: “ಅಯೋಧ್ಯಾಧಾಮಕ್ಕೆ (ರಾಮ ಮಂದಿರ) ರವಾನೆಯಾಗುತ್ತಿರುವ ಈ ಗಂಟೆಗಳನ್ನು ಅಯೋಧ್ಯಾ ಮಂದಿರಕ್ಕಾಗಿ BHEL ತಿರುಚ್ಚಿಯು  ತಯಾರಿಸಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ಜೈ ಶ್ರೀ ರಾಮ್ ಎಂದು ಬರೆಯಿರಿ ಮತ್ತು ಅದನ್ನು ಭಕ್ತರಾಗಿ ಹಂಚಿಕೊಳ್ಳಿ. भारत हैवी इलेक्ट्रिकल्स, त्रिचुरापल्ली में निर्माण कर अयोध्या मंदिर को भेजे जा रहे हैं ये सभी घंटे जय श्री राम लिख कर शेयर करें (ಅನುವಾದ ಹೀಗಿದೆ: ಈ ಎಲ್ಲಾ ಗಂಟೆಗಳನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್, ತಿರುಚಿರಾಪಳ್ಳಿಯಲ್ಲಿ ನಿರ್ಮಾಣ ಮಾಡಿ ಅಯೋಧ್ಯೆ ದೇವಸ್ಥಾನಕ್ಕೆ ಕಳುಹಿಸಲಾಗುತ್ತಿದೆ. ಜೈ ಶ್ರೀ ರಾಮ್ ಎಂದು ಬರೆದು ಹಂಚಿಕೊಳ್ಳಿ). FACT CHECK BHEL ಸಾರ್ವಜನಿಕ ವಲಯದ ಉದ್ಯಮ (PSU) ಆಗಿರುವುದರಿಂದ ಮತ್ತು ಯಾವುದೇ ಸುದ್ದಿವಾಹಿನಿಗಳಲ್ಲಿ ಇಂತಹ ಯಾವುದೇ ವರದಿ  ಪ್ರಕಟವಾಗದ್ದರಿಂದ ಡಿಜಿಟೈ ಇಂಡಿಯಾ ತಂಡವು ಇದನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಕೀ ...

Read More »

ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ. ಕಡೆನುಡಿ/Conclusion: ಹೇಳಿಕೆಯಲ್ಲಿ ತಿಳಿಸಿರುವಂತೆ ತೆಲಂಗಾಣದಲ್ಲಿ ಪಡಿತರ ಚೀಟಿ ರದ್ದುಗೊಳಿಸುವ ಯಾವುದೇ ಕ್ರಮವಿಲ್ಲ. ರೇಟಿಂಗ್ದಾ: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು: ತೆಲಂಗಾಣ ರಾಜ್ಯದಲ್ಲಿ ‘ಪ್ರಜಾ ಪಾಲನಾ’ ಪ್ರಕ್ರಿಯೆ ಆರಂಭಗೊಳ್ಳುತ್ತಿರುವ ಸಮಯದಲ್ಲಿ, ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎನ್ನುವ ಸಾಮಾಜಿಕ  ಜಾಲತಾಣದ ಒಂದು ಪೋಸ್ಟ್‌ ಸುದ್ದಿ ಮಾಡುತ್ತಿದೆ. ಇದರಲ್ಲಿ ಮಂಡಲವಾರು ವಿವರಗಳನ್ನು ನೀಡಲಾಗಿದ್ದು, ಹೊಸ ಕಾಂಗ್ರೆಸ್ ಸರ್ಕಾರವು ರಾಜ್ಯದ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದರಿಂದ ತಮ್ಮ ಪಡಿತರ ಚೀಟಿಗಳು ಚಾಲ್ತಿಯಲ್ಲಿರುವ ...

Read More »

ಸತ್ಯ ಪರಿಶೀಲನೆ: ಕೇರಳದಲ್ಲಿ ಹಣ ಸುಲಿಗೆಯ ನಾಟಕೀಯ ವೀಡಿಯೊ ಸುಳ್ಳು ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಆಗಿದೆ

ಹೇಳಿಕೆ/Claim:ಕೇರಳದಲ್ಲಿ ಹಣ ವಸೂಲಿಯ ನಾಟಕೀಯ ವೀಡಿಯೊವನ್ನು ಕೋಮುವಾದಿ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion:ಡಿಸೆಂಬರ್ 26ರಂದು ಸುಜಿತ್ ರಾಮಚಂದ್ರನ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಬಳಕೆದಾರರು ವೀಡಿಯೊದ ಪಾತ್ರಗಳನ್ನು ಉಲ್ಲೇಖಿಸಿದರು. ಅವರು ನಂತರ, ವೀಡಿಯೊವನ್ನು ಸಂಪೂರ್ಣವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರೀಕರಿಸಲಾಗಿದೆ ಎಂಬ ಒಂದು ಹಕ್ಕು ನಿರಾಕರಣೆಯನ್ನೂ ಸೇರಿಸಿದ್ದರು. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಗಂಡಸರ ಗುಂಪೊಂದು ಕಾರಿನಲ್ಲಿ ಒಬ್ಬ ವ್ಯಕ್ತಿಯಿಂದ ಹಣ ವಸೂಲಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಕೋಮುವಾದಿ  ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೇರಳದಲ್ಲಿ ಸೆರೆಹಿಡಿಯಲಾಗಿದೆ ಮತ್ತು ತಮ್ಮ ಕ್ರಿಸ್ಮಸ್ ...

Read More »

ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೋವಿಡ್-19ನ್ನು ಪತ್ತೆಹಚ್ಚುವ ರೋಗಲಕ್ಷಣಗಳ ಪಟ್ಟಿಯನ್ನು ಹೊಂದಿರುವ ಹೊಸ ಸಲಹೆಯನ್ನು AIIMS ಬಿಡುಗಡೆ ಮಾಡಿದೆ. ಕಡೆನುಡಿ/Conclusion: AIIMSನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಸಾಮಾನ್ಯ ನೆಗಡಿ, ಪ್ಲು ಮತ್ತು ವೈರಲ್ ಜ್ವರದ ಲಕ್ಷಣಗಳು ಕೋವಿಡ್-19ರ ಲಕ್ಷಣಗಳನ್ನು ಹೋಲಬಹುದು. ದೇಶದ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ, ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ರೇಟಿಂಗ್:  ದಾರಿತಪ್ಪಿಸುವ ಸುದ್ದಿ  ಸತ್ಯ ಪರಿಶೀಲನೆ ವಿವರಗಳು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (AIIMS) ಕೋವಿಡ್-19 ಅನ್ನು ಪತ್ತೆಹಚ್ಚಲು ಹೊಸ ರೋಗಲಕ್ಷಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ...

Read More »