ಹೇಳಿಕೆ/Claim: ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಕುಸಿದ ನಂತರ ಕಾಂಗ್ರೆಸ್ ನಾಯಕರು ಸಂತೋಷದಿಂದ ನೃತ್ಯ ಮಾಡುತ್ತಿರುವುದು. ಕಡೆನುಡಿ/Conclusion: ಸುಳ್ಳು. ಇದು ಸೇತುವೆ ಕುಸಿತದ ದುರಂತದ ಮೊದಲು ಅಪ್‌ಲೋಡ್ ಮಾಡಿದ ಘಟನೆಯ ವೀಡಿಯೊ ಆಗಿತ್ತು. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರು ಸ್ಥಳೀಯರೊಂದಿಗೆ ಸೇರಿ ಕುಣಿಯುತ್ತಿರುವ ಒಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಮೋರ್ಬಿಯಲ್ಲಿ ಸೇತುವೆ ಕುಸಿದ ನಂತರ ಅವರು ಸಂತಸದಿಂದ ಕುಣಿಯುತ್ತಿದ್ದರು ಎಂಬುದು ಈ ವೀಡಿಯೊದಲ್ಲಿ […]
ಹೇಳಿಕೆ/Claim: ಕೇರಳದ ಬಲ್ಲಾ ಬೀಚ್ನಲ್ಲಿ ನಡೆದ ರ್ಯಾದಲಿಯಲ್ಲಿ ಪಾಕಿಸ್ತಾನದ ಧ್ವಜ ಮತ್ತು ಪಾಕಿಸ್ತಾನದ ರಕ್ಷಣಾ ಸಮವಸ್ತ್ರದಲ್ಲಿ ಪುರುಷರು ಕಾಣಿಸಿಕೊಂಡರು. ಕಡೆನುಡಿ/Conclusion: ಈದ್-ಎ-ಮಿಲಾದ್ ಉನ್-ನಬಿ ಸಂದರ್ಭದಲ್ಲಿ ಬಲ್ಲಾ ಬೀಚ್‌ನಲ್ಲಿ ಈ ರ್ಯಾ ಲಿ ನಡೆಯಿತು. ಧ್ವಜವು ಪಾಕಿಸ್ತಾನದ್ದಲ್ಲ, ಅದು ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲಮಾ ಎಂಬ ಕೇರಳದ ಇಸ್ಲಾಮಿಕ್ ಸಂಘಟನೆಯದ್ದು. ರೇಟಿಂಗ್: ತಪ್ಪು ನಿರೂಪಣೆ- ಸತ್ಯ ಪರಿಶೀಲನೆ ವಿವರಗಳು: ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಸೈನ್ಯದಂತಹ ಖಾಕಿ ಸಮವಸ್ತ್ರವನ್ನು ಧರಿಸಿರುವ ಪುರುಷರನ್ನು ಹೊಂದಿರುವ ರ್ಯಾಲಿಯನ್ನು ವೀಡಿಯೊ ತೋರಿಸುತ್ತದೆ […]
ಹೇಳಿಕೆ/Claim: ದಕ್ಷಿಣ ಭಾರತದಲ್ಲಿ ‘ಪಿತ್ರಿ ನದಿ’ ಪ್ರತಿ ವರ್ಷ ಪಿತೃ ಪಕ್ಷದ ರಾತ್ರಿ ಕಾಣಿಸಿಕೊಂಡು ನಂತರ ದೀಪಾವಳಿಯಂದು ಕಣ್ಮರೆಯಾಗುತ್ತದೆ ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಸುಳ್ಳು. ಇದು, ಕರ್ನಾಟಕದಿಂದ ತಮಿಳುನಾಡಿಗೆ ಬಿಡುಗಡೆ ಮಾಡಲಾದ ಕಾವೇರಿ ನೀರಿಗೆ ಸಂಬಂಧಿಸಿದ ವೀಡಿಯೊ ಕ್ಲಿಪ್. ರೇಟಿಂಗ್: ಸಂಪೂರ್ಣವಾಗಿ ಸುಳ್ಳು . Fact Check ವಿವರಗಳು: ಬಂಜರು ಭೂಮಿಯಲ್ಲಿ ನದಿ ನೀರು ಹರಿಯುತ್ತಿರುವುದನ್ನು ತೋರಿಸುವ ವೀಡಿಯೊವನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗುತ್ತಿತ್ತು, ಅದು ದಕ್ಷಿಣ ಭಾರತದ ‘ಪಿತ್ರಿ ನದಿ’ಗೆ ಸೇರಿದ್ದು ಎಂಬುದು ವೀಡಿಯೊದಲ್ಲಿನ ಹೇಳಿಕೆ. ಪ್ರತಿ […]
ಹೇಳಿಕೆ/Claim: ಭಾರತೀಯ ಪ್ರೀಮಿಯಂ ಉಪ್ಪುಗಳು ಸೈನೈಡ್ ಅನ್ನು ಹೊಂದಿವೆ ಎಂದು ವೈರಲ್ ಸುದ್ದಿ ವರದಿ ಹೇಳುತ್ತದೆ. ಕಡೆನುಡಿ/Conclusion: ಎಫ್.ಎಸ್.ಎಸ್.ಎ.ಐ ಸಂಸ್ಥೆಯು 1 ಕೆಜಿಗೆ 10 ಮಿಗ್ರಾಂ ವರೆಗಿನ ಪೊಟ್ಯಾಸಿಯಮ್ ಫೆರೋಸೈನೈಡ್ ಬಳಕೆಯನ್ನು ಅನುಮತಿಸುತ್ತದೆ. ಟಾಟಾ ಉಪ್ಪಿನಂತಹ ಉಪ್ಪಿನ ಬ್ರ್ಯಾಂಡ್‌ಗಳು ಪಿ.ಎಫ್.ಸಿ ಮಟ್ಟವನ್ನು ಪ್ರತಿ ಕಿಲೋಗೆ 3 ಮಿಗ್ರಾಂನಷ್ಟಕ್ಕೆ ಇರಿಸುತ್ತವೆ, ಇದು ಅನುಮತಿಸಲಾದ ಮಿತಿಯೊಳಗಿದ್ದು ಉಪ್ಪನ್ನು ಬಳಕೆಗೆ ಸುರಕ್ಷಿತವಾಗಿಸುತ್ತದೆ. ಪಿ.ಎಫ್.ಸಿ ಎಂಬುದು ಉಪ್ಪಿನ ಕಣಗಳಲ್ಲಿ ತೇವಾಂಶ ಉಳಿಯದಂತೆ ಕಾಪಾಡುವ ಒಂದು ಆಂಟಿ-ಕೇಕಿಂಗ್ ಏಜೆಂಟ್. ಟಾಟಾ ಕೆಮಿಕಲ್ಸ್ ಸಹ ಈ […]
Claim/ಹೇಳಿಕೆ: ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಅಂತಿಮ ವಿಶ್ವಕಪ್ ಪಂದ್ಯಾಟದ ಸಮಯದಲ್ಲಿ ಭಾರಿ ಜನಸಮೂಹವು ಹನುಮಾನ್ ಚಾಲೀಸಾ ಪಠಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.Conclusion/ಕಡೆನುಡಿ: ಸುಳ್ಳು, ವೀಡಿಯೊದ ಧ್ವನಿ ಟ್ರ್ಯಾಕ್ ಅನ್ನು ಬದಲಾಯಿಸಿ ಹನುಮಾನ್ ಚಾಲೀಸಾ ಬಳಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ Fact Check ವಿವರಗಳು: ನವೆಂಬರ್ 19, 2023ರ ಭಾನುವಾರದಂದು ಅಹಮದಾಬಾದ್ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಾಟದ ಕುರಿತಾದ ಅಬ್ಬರದ ಪ್ರಚಾರದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೊಗಳು ಮತ್ತು ಮೀಮ್ಗಳು ವೈರಲ್ ಆಗಲಾರಂಭಿಸಿದವು. ಅಂತಹ ಒಂದು […]
Claim/ಹೇಳಿಕೆ: ಪ್ಯಾರಿಸ್‌ನಲ್ಲಿ ತಮಗೆ ಕಿರುಕುಳ ನೀಡುತ್ತಿದ್ದ ಪುರುಷರೊಂದಿಗೆ ಮಹಿಳೆಯರ ಗುಂಪೊಂದು ಸೆಣಸಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೋಮುವಾದದ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ. Conclusion/ಕಡೆನುಡಿ: ವೃತ್ತಿಪರವಾಗಿ ಸ್ಟಂಟ್ ಗಳನ್ನು ಮಾಡಲು ಜನರಿಗೆ ತರಬೇತಿ ನೀಡುವ ಫ್ರೆಂಚ್ ಸ್ಟಂಟ್ ಗುಂಪೊಂದು ಈ ವೀಡಿಯೊವನ್ನು ಮಾಡಿದೆ. ಈ ತಿಂಗಳ ಆರಂಭದಲ್ಲಿ ಆ ಗುಂಪು ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು: ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಲವಾರು ಗಂಡಸರೊಂದಿಗೆ ಮಹಿಳೆಯರ ಗುಂಪೊಂದು […]
Claim/ಹೇಳಿಕೆ: ಮಧ್ಯಪ್ರದೇಶದಲ್ಲಿ ಮತದಾನಕ್ಕೂ ಮುನ್ನವೇ ಸಾರ್ವಜನಿಕರು ಆಡಳಿತ ಪಕ್ಷದ (ಬಿಜೆಪಿ) ನಾಯಕರನ್ನು ಓಡಿಸಲಾರಂಭಿಸಿದ್ದಾರೆ. Conclusion/ಕಡೆನುಡಿ:ಸುಳ್ಳು, ಪಶ್ಚಿಮ ಬಂಗಾಳ ಚುನಾವಣೆಗಳ ಹಳೆಯ ವೀಡಿಯೊವನ್ನು ಮಧ್ಯ ಪ್ರದೇಶದ ಮತದಾನವೆಂದು ನವೆಂಬರ್ 17, 2023ರಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ. Fact Check ವಿವರಗಳು: ನವೆಂಬರ್ 17, 2023 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯುವ ಕೆಲವೇ ದಿನ ಮೊದಲು, ರಾಜ್ಯದಲ್ಲಿ ಬಿಜೆಪಿ ನಾಯಕರನ್ನು ಬೂತ್ಗಳಿಂದ ಓಡಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿದ್ದ ಹಿಂದಿ ಹೇಳಿಕೆ ಹೀಗಿದೆ: “मध्यप्रदेश […]
Claim/ಹೇಳಿಕೆ: ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ. Conclusion/ಕಡೆನುಡಿ:2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿಯವರು ಯಾವುದೇ ಉಚಿತ ಮೊಬೈಲ್ ರೀಚಾರ್ಜ್ ಕೊಡುಗೆಯನ್ನು ನೀಡಿಲ್ಲ. ರೇಟಿಂಗ್: Misleading/ದಾರಿತಪ್ಪಿಸುವ ಮಾಹಿತಿ. Fact Check ವಿವರಗಳು: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ ಎಂಬ ಹೇಳಿಕೆಯನ್ನು ಹೊಂದಿರುವ ಒಂದು […]
Claim/ಹೇಳಿಕೆ: ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ಸರ್ವೋಚ್ಚ ನ್ಯಾಯಾಲಯವು ನಿಷೇಧ ಘೋಷಿಸಿತು, ಈ ಹಿಂದೆ ದೆಹಲಿ-NCRಗೆ ಸೀಮಿತವಾಗಿದ್ದದ್ದು ಈಗ ರಾಷ್ಟ್ರವ್ಯಾಪಿಯಾಗಿ ಅನ್ವಯಿಸುತ್ತದೆ. Conclusion/ಕಡೆನುಡಿ: ಪಟಾಕಿಗಳ ಮೇಲಿನ ಸರ್ವೋಚ್ಚ ನ್ಯಾಯಾಲಯದ ನಿಷೇಧವು ಭಾರತದಾದ್ಯಂತ ಬೇರಿಯಂ ಬಳಕೆಗೆ ಸಂಬಂಧಿಸಿದೆ ಮತ್ತಿದು ಎಲ್ಲಾ ಪಟಾಕಿಗಳ ಮೇಲೆ ಹೇರಲಾದ ನಿಷೇಧವಲ್ಲ. Rating: Misleading — Fact Check ವಿವರಗಳು: ಭಾರತದ ಸರ್ವೋಚ್ಚ ನ್ಯಾಯಾಲಯವು ಕೇವಲ ದೆಹಲಿ-NCR ಪ್ರದೇಶಕ್ಕೆ ಸೀಮಿತವಾಗಿರದೆ ಭಾರತದಾದ್ಯಂತ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಎನ್ನುವ ತಪ್ಪು ಮಾಹಿತಿಯುಳ್ಳ […]
Claim/ಹೇಳಿಕೆ: ಗೋಮಾಂಸ ಸೇವಿಸುವುದರಲ್ಲಿ ತಪ್ಪೇನಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ. Conclusion/ಕಡೆನುಡಿ: ಸುಳ್ಳು, ದಿಗ್ವಿಜಯ್ ಸಿಂಗ್ ಅವರು ಸಾವರ್ಕರ್ ಅವರ ಬರವಣಿಗೆಯನ್ನು ಉಲ್ಲೇಖಿಸುತ್ತಿದ್ದರು ಮತ್ತು ಇದು ಅವರ ಸ್ವಂತದ ಹೇಳಿಕೆಯಲ್ಲ. ರೇಟಿಂಗ್: ತಪ್ಪು ನಿರೂಪಣೆ. Fact Check ವಿವರಗಳು ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ರವರು ಮತ್ತೊಂದು ವಿವಾದದ ಕೇಂದ್ರವಾಗಿದ್ದಾರೆ, ಅದೂ ನವೆಂಬರ್ 2023 ರಲ್ಲಿ ನಡೆಯಲಿರುವ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಡುವೆ. ಈ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕರನ್ನು […]