Don't Miss

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವೆಂದು ಜಗನ್ನಾಥ ರಥಯಾತ್ರೆಯ ಚಿತ್ರವನ್ನು ತೋರಿಸಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ನಡೆದ ಪ್ರತಿಭಟನೆಗಳನ್ನು ತೋರಿಸುವ ಬೃಹತ್ ಜನಸಮೂಹದ ಚಿತ್ರ.

ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. 2023 ರಲ್ಲಿ ಪ್ರಸಿದ್ಧ ಜಗನ್ನಾಥ ರಥ ಯಾತ್ರೆಯಲ್ಲಿ ಭಾಗವಹಿಸಿದ ಜನರನ್ನು ಚಿತ್ರ ತೋರಿಸುತ್ತದೆ.

ರೇಟಿಂಗ್: ತಪ್ಪು ನಿರೂಪಣೆ-- 

ಸತ್ಯ ಪರಿಶೀಲನೆ ವಿವರಗಳು

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವನ್ನು ತೋರಿಸುತ್ತಿರುವುದೆಂಬ ಹೇಳಿಕೆಯೊಂದಿಗೆ ರಸ್ತೆಯಲ್ಲಿ ಜನರ ಬೃಹತ್ ಸಮೂಹವನ್ನು ತೋರಿಸುವ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ.

ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ ರವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 21, 2024 ರ ರಾತ್ರಿ ಬಂಧಿಸಿ ಸಂಸ್ಥೆಯ ವಶದಲ್ಲಿ ಇಟ್ಟಿತು. ಅಂದಿನಿಂದ ಆಮ್ ಆದ್ಮಿ ಪಕ್ಷವು ಪ್ರತಿಭಟನೆ ನಡೆಸುತ್ತಿದೆ. ಮಾರ್ಚ್ 26, 2024 ರಂದು ರಾಷ್ಟ್ರಾದ್ಯಂತ ಹಲವಾರು ಪ್ರತಿಭಟನೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ, ಹೇಳಿಕೆಯನ್ನು ಹೊಂದಿರುವ ಕೆಳಗಿನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಮತ್ತೊಬ್ಬ ಬಳಕೆದಾರರು ಈ ಹೇಳಿಕೆಯನ್ನು ತಿರುಚಿ, ಈ ಪ್ರತಿಭಟನೆ ಕಾಂಗ್ರೆಸ್ ಪಕ್ಷದ ವಿರುದ್ಧದ್ದು ಎಂದರು. ಹಿಂದಿಯಲ್ಲಿರುವ ಹೇಳಿಕೆಯ ಅನುವಾದ ಹೀಗಿದೆ: “ಕಾಂಗ್ರೆಸ್‌ನ ಅಂತ್ಯ ಖಚಿತ ಎಂಬುದನ್ನು ಈ ಚಿತ್ರ ತೋರಿಸುತ್ತದೆ… ಜನರು ಕಾಂಗ್ರೆಸ್‌ನ ಹೊಗಳುಭಟ್ಟರ ವಿರುದ್ಧ ಬೀದಿಗಿಳಿದಿದ್ದಾರೆ. ದೆಹಲಿ.”

kejriwal protest

ಅದೇ ದೃಶ್ಯವನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

FACT-CHECK

ದೃಶ್ಯವು ಪರಿಚಿತವಾಗಿದ್ದು ಪ್ರಮುಖ ಘಟನೆಗಳು ಅಥವಾ ಪ್ರತಿಭಟನೆಗಳಲ್ಲಿ ಭಾರಿ ಜನಸಂದಣಿಯನ್ನು ತೋರಿಸಲು ಈ ಹಿಂದೆ ಹಲವಾರು ಬಾರಿ ದೃಶ್ಯವನ್ನು ಬಳಸಲಾಗಿದ್ದರಿಂದ ಡಿಜಿಟೈ ಇಂಡಿಯಾ ಇದನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಮೂಲ ಚಿತ್ರವನ್ನು ಹುಡುಕಿದಾಗ, ಇದು 2023 ರಲ್ಲಿ ಪ್ರಸಿದ್ಧ ಜಗನ್ನಾಥ ಪುರಿ ರಥ ಯಾತ್ರೆಯಲ್ಲಿ ಭಾಗವಹಿಸಿದ ಜನಸಮೂಹಕ್ಕೆ ಸಂಬಂಧಿಸಿರುವ ಚಿತ್ರವೆಂದು ನಮಗೆ ತಿಳಿದುಬಂತು.

ಇದನ್ನು ಮೂಲತಃ ಇನ್ಸ್ಟಾಗ್ರಾಂ ಖಾತೆಯಲ್ಲಿ sri_mandir ಎಂಬ ಬಳಕೆದಾರರು ಜೂನ್ 20, 2023 ರಂದು ಜಗನ್ನಾಥ ಪುರಿ ರಥ ಯಾತ್ರೆಯ ವಿವರಣೆಯೊಂದಿಗೆ ಅಪ್‌ಲೋಡ್ ಮಾಡಿದ್ದರು. ಈ ಚಿತ್ರವನ್ನು ಹಿಂದೆ ಹಲವಾರು ಬಾರಿ ಬಳಸಲಾಗಿದೆ ಮತ್ತು ಗೂಗಲ್ ಫ್ಯಾಕ್ಟ್ ಚೆಕ್ ಎಕ್ಸ್‌ಪ್ಲೋರರ್‌ನಲ್ಲಿ ಚಿತ್ರ ಹುಡುಕಾಟದ ಫಲಿತಾಂಶಗಳು ತೋರಿಸುವಂತೆ ಹಲವು ಬಾರಿ ಇದರ ನಿಜಸ್ವರೂಪ ಬಯಲುಮಾಡಲಾಗಿದೆ.

ಆದ್ದರಿಂದ, ಈ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ