Don't Miss

‘ಹೆಚ್ಚು ಹಳದಿ’ಯಾಗಿರುವ ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ‘ಹೆಚ್ಚು ಹಳದಿಯಾಗಿರುವ’ ಅರಿಶಿನವು ಸೀಸದ ಕ್ರೋಮೇಟ್ ಪುಡಿಯನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ.

ಕಡೆನುಡಿ/Conclusion: ಅರಿಶಿನವು ಹೆಚ್ಚು ಹಳದಿಯಾಗಿ ಕಾಣುವಂತೆ ಮಾಡಲು ಅದರಲ್ಲಿ ಸೀಸದ ಕ್ರೋಮೇಟ್ ಅನ್ನು ಬಳಸಲಾಗುತ್ತದೆ. ಅರಿಶಿನದಲ್ಲಿ ಸೀಸದ ಕ್ರೋಮೇಟ್ ಇರಬಾರದು ಎಂದು FSSAI ಹೇಳಿದೆ. ಅಷ್ಟೇ ಅಲ್ಲದೆ, ಅರಿಶಿನದಲ್ಲಿ ಕಲಬೆರಕೆಯನ್ನು ಪರೀಕ್ಷಿಸಲು ಜನರು ತಮ್ಮ ಮನೆಗಳಲ್ಲಿ ನಡೆಸಬಹುದಾದ ಸರಳ ಪರೀಕ್ಷೆಗಳನ್ನು ಸಹ ಸಂಸ್ಥೆಯು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಪ್ರಮಾಣೀಕೃತ ಮತ್ತು ಅಧಿಕೃತ ಮಾರಾಟಗಾರರಿಂದ ಅರಿಶಿನವನ್ನು ಖರೀದಿಸಲು ಸಲಹೆ ನೀಡಲಾಗಿದೆ.

ರೇಟಿಂಗ್: ನಿಜ

ಸತ್ಯ ಪರಿಶೀಲನೆ ವಿವರಗಳು

ಆಹಾರದಲ್ಲಿ ಬಳಸಲಾಗುವ ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಮತ್ತು ಅದರಿಂದಾಗಿ ಅದು ಹೆಚ್ಚು ಹಳದಿ ಕಾಣುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ. ಈ ಫಾರ್ವರ್ಡ್ ಸಂದೇಶವು ಅರಿಶಿನದಲ್ಲಿ ಸೀಸದ ಕ್ರೋಮೇಟ್‌ನ ಬಳಕೆಯನ್ನು ವಿವರಿಸುವ ವಿವರಣಾತ್ಮಕ ಚಿತ್ರವನ್ನು ಸಹ ಹೊಂದಿದೆ.

ಚಿತ್ರದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ,

“ಆಫ್ ದ ಶೆಲ್ಫ್ ಅರಿಶಿನ ಪುಡಿ ಪ್ಯಾಕೆಟ್‌ಗಳಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದಾದ ಸೀಸದ ಕ್ರೋಮೇಟ್ ಅನ್ನು ಸೇರಿಸಲಾಗುತ್ತಿದೆ. ಹತ್ತಿರದ ಪುಡಿ ಮಾಡುವ ಗಿರಣಿಗಳಿಂದ ಖರೀದಿಸುವುದು ಉತ್ತಮ.”

ಈ ಹೇಳಿಕೆಯ ವಾಸ್ತವಾಂಶ ಪರಿಶೀಲಿಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಕೋರಿಕೆ ಬಂದಿತು.

ಸತ್ಯ ಪರಿಶೀಲನೆ 

ಡಿಜಿಟೈ ಇಂಡಿಯಾ ತಂಡವು ಚಿತ್ರದ ಮೂಲವನ್ನು ಕಂಡುಹಿಡಿಯಲು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿತು. ಫಲಿತಾಂಶವು ನಮ್ಮನ್ನು ಸೈನ್ಸ್ ಡೈರೆಕ್ಟ್‌ನ ಸಂಶೋಧನಾ ಪ್ರಬಂಧಕ್ಕೆ ಕರೆದೊಯ್ಯಿತು. “ಅತ್ಯಾಕರ್ಷಕ ಬಣ್ಣದ ವ್ಯಾಮೋಹದೊಳಗೆ ಹಳದಿ ಅಸಲಿಯೋ ನಕಲಿಯೋ: ಅರಿಶಿನದಲ್ಲಿ ಸೀಸದ ಕ್ರೋಮೇಟ್‌ ತ್ವರಿತವಾಗಿ ಪತ್ತೆ” ಎಂಬ ಶೀರ್ಷಿಕೆಯ ಈ ಲೇಖನವನ್ನು ಸಾರಾ ಡಬ್ಲ್ಯೂ ಎರಾಸ್ಮಸ್, ಲಿಸಾನ್ ವ್ಯಾನ್ ಹ್ಯಾಸೆಲ್ಟ್, ಲಿಂಡಾ ಎಂ ಎಬ್ಬಿಂಜ್ ಮತ್ತು ಸಾಸ್ಕಿಯಾ ಎಂ. ವ್ಯಾನ್ ರುತ್ ಪ್ರಕಟಿಸಿದ್ದಾರೆ. ಅರಿಶಿನದೊಂದಿಗೆ ಮಿಶ್ರಿತ  ಸೀಸದ ಕ್ರೋಮೇಟ್ ಅನೇಕ ಉತ್ಪಾದನಾ ಘಟಕಗಳಲ್ಲಿ ಕಂಡುಬರುತ್ತದೆ ಎಂದು ಅವರ ಅಧ್ಯಯನವು ಬಹಿರಂಗಪಡಿಸಿತು.

ಅರಿಶಿನವನ್ನು ಹೆಚ್ಚು ಹಳದಿಯಾಗಿಸಲು ಸೀಸದ ಕ್ರೋಮೇಟ್ ಅನ್ನು ಬಳಸಲಾಗುತ್ತದೆ ಎಂದು ಅವರ ಅಧ್ಯಯನವು ಬಹಿರಂಗಪಡಿಸಿದೆ. ಕಲಬೆರಕೆ ಅರಿಶಿನವು ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಅರಿಶಿನಕ್ಕೆ ಸಂಬಂಧಿಸಿದಂತೆ ಹೊಂದಿರುವ ಮಾರ್ಗಸೂಚಿಗಳನ್ನು ನೋಡಲು  ಡಿಜಿಟೈ ಇಂಡಿಯಾ ತಂಡವು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಿತು. ಅವರು ಹೇಳಿರುವಂತೆ, “ಈ ಉತ್ಪನ್ನಗಳು ಬೂಷ್ಟು, ಜೀವಂತ ಮತ್ತು ಸತ್ತ ಕೀಟಗಳು, ಕೀಟ ಭಾಗಗಳು ಮತ್ತು ಇಲ್ಲಿ ಮತ್ತಿತರ ಜೀವಿಗಳಿಂದಾಗುವ ಮಾಲಿನ್ಯದಿಂದ ಮುಕ್ತವಾಗಿರಬೇಕು. ಸೀಸದ ಕ್ರೋಮೇಟ್ ಸೇರಿದಂತೆ ಯಾವುದೇ ಹೆಚ್ಚುವರಿ ಬಣ್ಣ ನೀಡುವ ಪದಾರ್ಥಗಳಿಂದ ಮತ್ತು ವಿದೇಶಿ ಸ್ಟಾರ್ಚ್ ಸೇರಿದಂತೆ ರೂಪವಿಜ್ಞಾನದ ಬಾಹ್ಯ ವಸ್ತುಗಳಿಂದ ಅವು ಮುಕ್ತವಾಗಿರಬೇಕು.” ಅರಿಶಿನವು ಸೀಸದ ಕ್ರೋಮೇಟ್ ನಿಂದ ಮುಕ್ತವಾಗಿರಬೇಕು ಎಂದು ಆಹಾರ ಪ್ರಾಧಿಕಾರವು ಉಲ್ಲೇಖಿಸಿದೆ.

ಅಷ್ಟೇ ಅಲ್ಲದೆ, ಒಂದು ವೀಡಿಯೊದಲ್ಲಿ, ಜನರು ಮನೆಯಲ್ಲಿ ಅರಿಶಿನ ಪುಡಿಯ ಕಲಬೆರಕೆಯನ್ನು ಹೇಗೆ ಪರೀಕ್ಷಿಸಬಹುದು ಎಂಬುದನ್ನು FSSAI ತಿಳಿಸಿದೆ. ಶುದ್ಧ ಅರಿಶಿನವು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ, ಆದರೆ ಕಲಬೆರಕೆಯುಳ್ಳ ಅರಿಶಿನ ಪುಡಿಯು ನೀರಿನಲ್ಲಿ ಹಳದಿ ಮಣ್ಣಿನಂತಹ ರೂಪವನ್ನು ತಾಳುತ್ತದೆ ಎಂದು ಅವರು ಹೇಳಿದ್ದಾರೆ.

ಇಡೀ ಅರಿಶಿನದ ಕಲಬೆರಕೆಯನ್ನು ಮನೆಯಲ್ಲಿ ಹೇಗೆ ಪರೀಕ್ಷಿಸಬೇಕು ಎಂದು ಸಹ FSSAI ಉಲ್ಲೇಖಿಸಿದೆ. ಶುದ್ಧವಾದ ಇಡೀ ಅರಿಶಿನವು ನೀರಿನ ಬಣ್ಣವನ್ನು ಬದಲಾಯಿಸುವುದಿಲ್ಲ, ಆದರೆ ಸೀಸದ ಕ್ರೋಮೇಟ್ ಮಿಶ್ರಿತ ಅರಿಶಿನವು ನೀರಿನ ಬಣ್ಣವನ್ನು ಬದಲಾಯಿಸುತ್ತದೆ ಎಂದು ಈ ಆಹಾರ ಪ್ರಾಧಿಕಾರವು ಬಹಿರಂಗಪಡಿಸಿದೆ.

ಸೀಸದ ಕ್ರೋಮೇಟ್ ಆಸ್ತಮಾದಂತಹ ಲಕ್ಷಣಗಳು, ಚರ್ಮದ ಸಮಸ್ಯೆಗಳು ಮತ್ತು ಜೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಮಾರ್ಗಸೂಚಿಗಳ ಆಧಾರದ ಮೇಲೆ, ಜನರು ಮಾರುಕಟ್ಟೆಯಲ್ಲಿ ಅಧಿಕೃತ ಮತ್ತು ಪರೀಕ್ಷಿತ ಮಾರಾಟಗಾರರಿಂದ ಅರಿಶಿನವನ್ನು ಖರೀದಿಸಬೇಕೆಂದು ಸಲಹೆ ನೀಡಲಾಗಿದೆ.

ಇದನ್ನೂ ಓದಿ:

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ

ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ

One comment

Leave a Reply

Your email address will not be published. Required fields are marked *

*