Don't Miss

ಗೋಮಾಂಸ ಸೇವನೆ ಸಮಸ್ಯೆಯಾಗಬಾರದು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

Claim/ಹೇಳಿಕೆ: ಗೋಮಾಂಸ ಸೇವಿಸುವುದರಲ್ಲಿ ತಪ್ಪೇನಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ.

Conclusion/ಕಡೆನುಡಿ: ಸುಳ್ಳು, ದಿಗ್ವಿಜಯ್ ಸಿಂಗ್ ಅವರು ಸಾವರ್ಕರ್ ಅವರ ಬರವಣಿಗೆಯನ್ನು ಉಲ್ಲೇಖಿಸುತ್ತಿದ್ದರು ಮತ್ತು ಇದು ಅವರ ಸ್ವಂತದ ಹೇಳಿಕೆಯಲ್ಲ.

ರೇಟಿಂಗ್: ತಪ್ಪು ನಿರೂಪಣೆ.

Fact Check  ವಿವರಗಳು

ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ರವರು ಮತ್ತೊಂದು ವಿವಾದದ ಕೇಂದ್ರವಾಗಿದ್ದಾರೆ, ಅದೂ ನವೆಂಬರ್ 2023 ರಲ್ಲಿ ನಡೆಯಲಿರುವ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಡುವೆ. ಈ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕರನ್ನು ಒಳಗೊಂಡಿರುವ ಒಂದು ವೀಡಿಯೊ ವೈರಲ್ ಆಗುತ್ತಿದ್ದು ಅದರಲ್ಲಿ ಅವರು ಗೋಮಾಂಸ ಸೇವನೆಯು ಸಮಸ್ಯೆಯಾಗಬಾರದು ಎಂದು ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ. ವೀಡಿಯೊಗೆ “ಮಧ್ಯ ಪ್ರದೇಶದ ಜನರು ನಿಮ್ಮ ಮಾತುಗಳನ್ನು ಮರೆಯುವುದಿಲ್ಲ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.


ಫೇಸ್ಬುಕ್ನಲ್ಲಿ ಅಂತಹುದೇ ಒಂದು ಹೇಳಿಕೆಯನ್ನು ಇಲ್ಲಿ ನೋಡಿ.

ವೀಡಿಯೋದಲ್ಲಿ ದಿಗ್ವಿಜಯ್ ಸಿಂಗ್ ರವರು: “ಗೋವು ತನ್ನದೇ ಕೊಳಕಿನಲ್ಲಿ ಹೊರಳುವ ಒಂದು ಪ್ರಾಣಿ, ಅಂಥದ್ದರಲ್ಲಿ ಅದು ನಮ್ಮ ತಾಯಿಯಾಗಲು ಹೇಗೆ ಸಾಧ್ಯ? ಗೋಮಾಂಸ ಸೇವಿಸುವುದರಿಂದ ಯಾವುದೇ ಸಮಸ್ಯೆ ಆಗಬಾರದು.” ಎಂದು ಹಿಂದಿಯಲ್ಲಿ ಹೇಳುತ್ತಿರುವುದು ಕೇಳಿಬರುತ್ತಿತ್ತು.

FACT CHECK
ನಾವು ಕೆಲವು ಪ್ರಮುಖ ಫ್ರೇಮ್ಗಳ ಸಹಾಯದಿಂದ ಮೂಲ ವೀಡಿಯೊವನ್ನು ಹುಡುಕಿದಾಗ, ನಮಗದು ಇಲ್ಲಿ ಸಿಕ್ಕಿತು. ಅದರಲ್ಲಿ ಕಾಂಗ್ರೆಸ್ ನಾಯಕರು ಹಿಂದುತ್ವ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಕುರಿತು ಮಾತನಾಡುತ್ತಿದ್ದರು. ಇವರು ಗೋಮಾಂಸ ಸೇವನೆ ಸಮಸ್ಯೆಯಲ್ಲ ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ರವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಈ ವೀಡಿಯೊವನ್ನು ಡಿಸೆಂಬರ್ 25, 2021 ರಂದು ಅಪ್ಲೋಡ್ ಮಾಡಲಾಗಿತ್ತು, ಆ ಸಮಯದಲ್ಲಿ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗಳಿಗೆ ಸಂಬಂಧಿಸಿದ ಸುದ್ದಿ ವರದಿಗಳನ್ನು ನಾವು ಹುಡುಕಿದಾಗ, ಪ್ರಮುಖ ಸುದ್ದಿವಾಹಿನಿಗಳು ಪ್ರಕಟಿಸಿದ್ದ ಸುದ್ದಿಗಳು ಇಲ್ಲಿ ಮತ್ತು ಇಲ್ಲಿ ದೊರಕಿದವು.
2021 ರ ವೀಡಿಯೊವನ್ನು ಇಲ್ಲಿ ಕಾಣಬಹುದು:

ವೀಡಿಯೊದಲ್ಲಿ ದಿಗ್ವಿಜಯ ಸಿಂಗ್ ರವರು ಹಿಂದಿಯಲ್ಲಿ ಮಾತನಾಡುತ್ತಿರುವುದು ಕಾಣುತ್ತದೆ. ಅದರ ಅನುವಾದ ಹೀಗಿದೆ: “ವೀರ್ ಸಾವರ್ಕರ್ ಅವರು ತಮ್ಮ ಪುಸ್ತಕದಲ್ಲಿ ಹಿಂದೂ ಧರ್ಮ ಮತ್ತು ಹಿಂದುತ್ವಕ್ಕೆ ಸಂಬಂಧವಿಲ್ಲ ಎಂದು ಬರೆದಿದ್ದರು. ಗೋವು ತನ್ನ ಮಲವನ್ನು ತಾನೇ ನುಂಗುವ ಪ್ರಾಣಿಯಾಗಿದೆ, ಅದನ್ನು ತಾಯಿ ಎಂದು ಪರಿಗಣಿಸುವುದು ಹೇಗೆ ಎಂದು ಕೂಡ ಅವರು ಬರೆದಿದ್ದರು. ಗೋಮಾಂಸ ಸೇವಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದನ್ನು ಸಾವರ್ಕರ್ ಅವರೇ ಹೇಳಿಕೊಂಡಿದ್ದಾರೆ.”
ಪ್ರಸ್ತುತ ವೀಡಿಯೊದಲ್ಲಿ ಸಾವರ್ಕರ್ ಅವರ ಭಾಗವನ್ನು ಅಳಿಸಿ, ದಿಗ್ವಿಜಯ ಸಿಂಗ್ ಈ ಹೇಳಿಕೆಗಳನ್ನು ಹೇಳುತ್ತಿರುವಂತೆ ತೋರಿಸಲಾಗಿದೆ, ಆದ್ದರಿಂದ ಈ ಹೇಳಿಕೆ ಸುಳ್ಳು.

[ಇದನ್ನೂ ಓದಿ: ಕೆನಡಾದ ವಿರೋಧ ಪಕ್ಷದ ನಾಯಕರು ಭಾರತದೊಂದಿಗಿನ ಸಂಬಂಧವನ್ನು ಕೆಡಿಸಿದ್ದಕ್ಕಾಗಿ ಜಸ್ಟಿನ್ ಟ್ರುಡೊರನ್ನು ಟೀಕಿಸಿದರೇ?

ಕೌನ್ ಬನೇಗಾ ಕರೋರ್ಪತಿಯಲ್ಲಿ ಮಧ್ಯ ಪ್ರದೇಶದ ಶಿವರಾಜ್ ಸಿಂಘ್ ಚೌಹಾನ್ ರವರನ್ನು ಕೆಣಕುವ ರಾಜಕೀಯ ಪ್ರಶ್ನೆಯನ್ನು ಕೇಳಲಾಗಿತ್ತೇ? ಸತ್ಯ ಪರಿಶೀಲನೆ

 

One comment

Leave a Reply

Your email address will not be published. Required fields are marked *

*