Don't Miss

ಮೋದಿಯವರು ಶೇಖ್‌ಗಳಿಗೆ ಕೇಸರಿ ತೊಡಿಸಿದರೇ? ನಕಲಿ ಚಿತ್ರ ಪುನರುದ್ಭವ; ಸತ್ಯ ಪರಿಶೀಲನೆ

ಹೇಳಿಕೆ/Claim: ಮೋದಿಯವರು ಸ್ವಯಂ ಟೋಪಿ ಧರಿಸುವುದಿಲ್ಲ ಆದರೆ ಶೇಖ್‌ಗಳಿಗೆ ಕೇಸರಿ ತೊಡಿಸುತ್ತಾರೆ.

ಕಡೆನುಡಿ/Conclusion: ಸುಳ್ಳು. ವೈರಲ್ ಆದ ಚಿತ್ರ ಫೋಟೋಶಾಪ್ ಮಾಡಿರುವುದು.

ರೇಟಿಂಗ್: ತಪ್ಪು ನಿರೂಪಣೆ —

ಸತ್ಯ ಪರಿಶೀಲನೆ ವಿವರಗಳು

ಅಬುಧಾಬಿಯ ಆಡಳಿತಗಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ‘MBZ’ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇರುವ ಚಿತ್ರವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮೊಹಮ್ಮದ್ ರವರು ಕೇಸರಿ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ಹಿಂದಿಯಲ್ಲಿರುವ ಶೀರ್ಷಿಕೆ ಹೀಗಿದೆ: “ಇದು ಮೋದಿ! ತಾವು ಸ್ವಯಂ ಟೋಪಿ ಧರಿಸುವುದಿಲ್ಲ, ಆದರೆ ಶೇಖ್ ಕೇಸರಿ ಧರಿಸುವಂತೆ ಮಾಡಿದ್ದಾರೆ.” (ಕನ್ನಡದ ಅನುವಾದ). ಫೆಬ್ರವರಿ 2024ರಲ್ಲಿ UAEಗೆ ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಇದು ಸುದ್ದಿಯಲ್ಲಿತ್ತು.

FACT CHECK

ಡಿಜಿಟೈ ಇಂಡಿಯಾದ ವಾಟ್ಸಾಪ್ ಟಿಪ್ ಲೈನ್‌ ನಲ್ಲಿ ಇದರ ಕುರಿತಾದ ಸತ್ಯ ಪರಿಶೀಲನೆ ಕೋರಿಕೆ ದೊರಕಿತು. ನಮ್ಮ ತಂಡವು ಗೂಗಲ್ ಇಮೇಜ್ ಹುಡುಕಾಟವನ್ನು ಬಳಸಿ ಚಿತ್ರವನ್ನು ಹುಡುಕಿದಾಗ, ಇದು 2021ರಲ್ಲಿ ಹಂಚಿಕೊಳ್ಳಲಾದ ಹಳೆಯ ಚಿತ್ರ ಎಂದೂ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗಲೆಲ್ಲಾ ಸತ್ಯ-ಪರೀಕ್ಷಕರು ಅದನ್ನು ತಳ್ಳಿಹಾಕಿದ್ದಾರೆ ಎಂದು ನಮಗೆ ತಿಳಿದುಬಂತು. ಇನ್ನಷ್ಟು ಹುಡುಕಾಡಿದಾಗ, ಇದು 2021ರಲ್ಲಿ ಪ್ರಧಾನಿ ಮೋದಿಯವರು UAEಗೆ ಭೇಟಿ ನೀಡಿದ ಸಂದರ್ಭವಾಗಿತ್ತೆಂದು ತಿಳಿದುಬಂತು, ಅಲ್ಲಿ ಆಗ ಮೋದಿಯವರಿಗೆ UAEಯ ಪ್ರತಿಷ್ಠಿತ ಜಾಯೆದ್ ಪದಕವನ್ನು ನೀಡಲಾಗಿತ್ತು.

ನಾವು ಮೂಲ ಚಿತ್ರವನ್ನು ಹುಡುಕಿದಾಗ, ಅಧಿಕೃತ PIB ಖಾತೆಯಲ್ಲಿ ನಮಗೆ ಒಂದು ಚಿತ್ರ ಸಿಕ್ಕಿತು, ಅದರಲ್ಲಿ UAEಯ ಭಾರತದ ಪ್ರಧಾನಿಗಳಿಗೆ ಪದಕವನ್ನು ನೀಡಿತು ಎಂಬುದನ್ನು ಚಿತ್ರಿಸುವಂತೆ ಇಬ್ಬರೂ ನಾಯಕರು ಕೈ ಕುಲುಕುತ್ತಿರುವ ಚಿತ್ರವನ್ನು ಕಾಣಬಹುದು.

ಹೇಳಿಕೆಯಲ್ಲಿ ತಿಳಿಸಿರುವಂತೆ ಮೂಲ ಚಿತ್ರದಲ್ಲಿ UAE ಆಡಳಿತಗಾರರು ಕೇಸರಿ ಉಡುಪು ಧರಿಸಿರುವುದನ್ನು ತೋರಿಸಲಾಗಿಲ್ಲ, ಆದರೆ ಅದರಲ್ಲಿರುವ ಮೋದಿಯ ಪದಕ (ಮಾಲೆ) ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಶೀರ್ಷಿಕೆಯು ಹೀಗಿದೆ: “ಅಬುಧಾಬಿಯ ಪಟ್ಟದ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು UAEಯ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಜಾಯೆದ್’ ಅನ್ನು ಆಗಸ್ಟ್ 24, 2019ರಂದು UAEಯ ಅಬುಧಾಬಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡುತ್ತಿರುವುದು.” ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಬಿಡುಗಡೆ ಮಾಡಿರುವ ಚಿತ್ರವನ್ನು ಕೆಳಗೆ ನೋಡಬಹುದು:

The Prime Minister, Shri Narendra Modi being conferred with the UAE’s highest civilian award ‘Order of Zayed’ by the Crown Prince of Abu Dhabi, Sheikh Mohammed Bin Zayed Al Nahyan, at Abu Dhabi, in UAE on August 24, 2019. (PIB)

ಆದ್ದರಿಂದ, ಚಿತ್ರವು ನಕಲಿಯಾಗಿದೆ, UAE ಆಡಳಿತಗಾರರು ಕೇಸರಿ ಉಡುಪನ್ನು ಧರಿಸಿರುವಂತೆ ತೋರಿಸಲು ಇದನ್ನು ಫೋಟೋಶಾಪ್ ಮಾಡಲಾಗಿದೆ.

ಇದನ್ನೂ ಓದಿ:

ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

ಇಲ್ಲ, ರಘುರಾಮ್ ರಾಜನ್ ಎಂದಿಗೂ ಮೋದಿಯ ಬಗ್ಗೆ ಯಾವುದೇ ಕಟುವಾದ ಟೀಕೆಗಳನ್ನು ಮಾಡಿಲ್ಲ; ಸತ್ಯ ಪರಿಶೀಲನೆ

One comment

Leave a Reply

Your email address will not be published. Required fields are marked *

*