Don't Miss

ಪ್ರಧಾನಿ ಮೋದಿ ಸೋನಿಯಾ ಗಾಂಧಿಯವರ ಪಾದಸ್ಪರ್ಶ ಮಾಡುತ್ತಿರುವುದು? ನಕಲಿ ಚಿತ್ರ ಆಗಿದೆ ವೈರಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿಯವರ ಪಾದ ಸ್ಪರ್ಶಿಸುತ್ತಿರುವುದನ್ನು ತೋರಿಸುವ ಈ ಚಿತ್ರವನ್ನು ನೋಡಿ. ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಷೇರ್ ಆಗಿದೆ ಮತ್ತು ಪ್ರಸಾರಗೊಂಡಿದೆ. ಇದರ ಶೀರ್ಷಿಕೆ ಹೀಗಿದೆ:

“72,000 ಕನಿಷ್ಠ ಆದಾಯ ಯೋಜನೆ ಮತ್ತು 22 ಲಕ್ಷ ಉದ್ಯೋಗಗಳ ಬಗ್ಗೆ ಮಾತನಾಡಬೇಡವೆಂದು ನಿಮ್ಮ ಮಗನಿಗೆ (ರಾಹುಲ್ ಗಾಂಧಿ) ಹೇಳಿ. ಇಲ್ಲದಿದ್ದರೆ ನಾನು ಗುಜರಾತಿಗೆ ಹಿಂದಿರುಗಬೇಕಾಗುತ್ತದೆ.”

ಭಾರತದ ಪ್ರಮುಖ ಭಾಗಗಳಲ್ಲಿ ಚುನಾವಣೆಗಳ ಸ್ವಲ್ಪವೇ ಮೊದಲು, ಮೋದಿಯವರ ಬಗ್ಗೆ ನಕಾರಾತ್ಮಕ ಸಂದೇಶವನ್ನು ಹರಡಲು ಈ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಲಾಯಿತು.

ಉತ್ತರ ಭಾರತದ ಸಂಪ್ರದಾಯದ ಪ್ರಕಾರ ಮೋದಿಯವರು ಹಿರಿಯರ ಪಾದಗಳನ್ನು ಸ್ಪರ್ಶಿಸುತ್ತಾರೆಂಬುದು ತಿಳಿದಿರುವ ಸಂಗತಿಯಾದರೂ, ಈ ಚಿತ್ರ ನಂಬಲಾಗದ್ದು ಎಂಬ ಕಾರಣಕ್ಕೆ, ಡಿಜಿಟೈ ಇಂಡಿಯಾದ ತಂಡ ಇದನ್ನು ಪರಿಶೀಲನೆಗೆತ್ತಿಕೊಂಡಿತು.

ಗೂಗಲ್ ಮತ್ತು ಯಾಂಡೆಕ್ಸ್ ನಲ್ಲಿ ಒಂದು ಸರಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೋದಿಯವರು ತಮ್ಮ ರಾಜಕೀಯ ಗುರು ಮತ್ತು ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿಯವರ ಪಾದ ಸ್ಪರ್ಶ ಮಾಡುತ್ತಿರುವ ಹಲವು ಛಾಯಾಚಿತ್ರಗಳು ಕಂಡುಬಂದವು. ಹಿಂದಿದ್ದ ಜನರನ್ನು ಗುರುತಿಸುತ್ತಾ, ನಮ್ಮ ಹುಡುಕಾಟದಲ್ಲಿ ಕಾಣಿಸಿಕೊಂಡ ಮೂಲ ಚಿತ್ರ  ಇಲ್ಲಿದೆ:

2014 ರ ಲೋಕಸಭಾ ಚುನಾವಣೆಗಳ ಮುನ್ನ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಸಂದರ್ಭದ ಗುರುತಾಗಿ ಸೆಪ್ಟೆಂಬರ್ 25, 2013 ರಂದು ಭೋಪಾಲ್ ನಲ್ಲಿ  ಕೈಗೊಳ್ಳಲಾದ ಬಿಜೆಪಿ ರಾಲಿಯಲ್ಲಿ ಎಲ್.ಕೆ.ಆಡ್ವಾಣಿಯವರ ಪಾದಗಳನ್ನು ಮೋದಿಯವರು  ಸ್ಪರ್ಶಿಸಿದಾಗ ಈ ಚಿತ್ರವನ್ನು ತೆಗೆಯಲಾಗಿತ್ತು. ಭೋಪಾಲ್ ನಲ್ಲಿ ವೇದಿಕೆಯ ಮೇಲೆ ಮೋದಿಯವರು ತಮ್ಮ ಪಾದಗಳನ್ನು ಸ್ಪರ್ಶಿಸುವಾಗ ಎಲ್.ಕೆ.ಆಡ್ವಾಣಿಯವರು ಮತ್ತೆಲ್ಲೋ ನೋಡುತ್ತಿದ್ದ ಕಾರಣಕ್ಕೆ ಮೂಲ ಪಿಟಿಐ ಫೋಟೋ ಜನಪ್ರಿಯವಾಗಿತ್ತು.

ಆರು ವರ್ಷಗಳ ಹಿಂದಿನ  ಈ ಚಿತ್ರವನ್ನು ಫೋಟೋಶಾಪ್ ಮಾಡಿ ಮೋದಿಯವರು ವಿರೋಧ ಪಕ್ಷದ ಮುಖಂಡೆಯ ಪಾದಗಳನ್ನು ಸ್ಪರ್ಶಿಸುತ್ತಿರುವಂತೆ ತೋರಿಸಲು ಆಡ್ವಾಣಿಯವರ ಸ್ಥಳದಲ್ಲಿ ಸೋನಿಯಾ ಗಾಂಧಿಯವರ ಚಿತ್ರವನ್ನು ಹಾಕಲಾಗಿತ್ತು.

ಕಡೆನುಡಿ: ರಾಜಕೀಯ ಮುಖಂಡರನ್ನು ಕೀಳಾಗಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಷೇರ್ ಮಾಡಲ್ಪಡುವ ಅನೇಕ ಫೋಟೊಶಾಪ್ ಮಾಡಿದ ಚಿತ್ರಗಳಲ್ಲಿ ಈ ಚಿತ್ರವೂ ಒಂದು.

ನಮ್ಮ ರೇಟಿಂಗ್: ಇದರ ಬಗ್ಗೆ ತಪ್ಪು ನಿರೂಪಣೆ. 

[ಇದನ್ನೂ ಓದಿ: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]

 

 

Leave a Reply

Your email address will not be published. Required fields are marked *

*