ಹೇಳಿಕೆ/Claim: FIFA ವಿಶ್ವಕಪ್ 2026 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಲ್ಯಾಮಿನ್ ಯಮಲ್ ರವರು ಡೊನಾಲ್ಡ್ ಟ್ರಂಪ್ ಅವರ ಹಸ್ತಲಾಘವವನ್ನು ನಿರ್ಲಕ್ಷಿಸಿವುದನ್ನು ತೋರಿಸಿಲಾಗಿದೆ ಎಂದು ವೀಡಿಯೊ ಹೇಳುತ್ತದೆ.. ಕಡೆನುಡಿ/Conclusion: ಹೇಳಿಕೆ ಸುಳ್ಳು. 2026ರ FIFA ವಿಶ್ವಕಪ್ ಫೈನಲ್ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲ್ಯಾಮಿನ್ ಯಮಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಸ್ತಲಾಘವ ಮಾಡಿದರು. ಆತ ಉದ್ದೇಶಪೂರ್ವಕವಾಗಿ ಟ್ರಂಪ್ ಅವರನ್ನು ನಿರ್ಲಕ್ಷಿಸಿದ್ದಾರೆ ಅಥವಾ ಅಗೌರವಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಇದು ಒಂದು ಸುಳ್ಳು […]
ಹೇಳಿಕೆ/Claim: ಅರ್ಜೆಂಟೀನಾ ವಿರುದ್ಧ 2026ರ ಫಿಫಾ ವಿಶ್ವಕಪ್ ವಿಜಯದ ನಂತರ ಸ್ಪೇನ್ ಕೆಂಪು ಸಮುದ್ರವಾಗಿ ಬದಲಾಗುತ್ತಿರುವುದನ್ನು ಈ ವೈರಲ್ ವೀಡಿಯೊದಲ್ಲಿ ತೋರಿಸಲಾಗಿದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ವೀಡಿಯೊ ಅಧಿಕೃತವಾಗಿರುವಂಥದ್ದೇ, ಆದರೆ ಇದು ಜುಲೈ 2026ರಲ್ಲಿ ಅರ್ಜೆಂಟೀನಾ ವಿರುದ್ಧ ದೇಶದ ವಿಶ್ವಕಪ್ ವಿಜಯದ ನಂತರ ಸ್ಪೇನ್ನಲ್ಲಿನ ಆಚರಣೆಗಳನ್ನು ಚಿತ್ರಿಸುವುದಿಲ್ಲ. ಬದಲಾಗಿ, ಇದು ಪೋಲಿಷ್ ಕ್ಲಬ್ ವಿಸ್ಲಾ ಕ್ರಾಕೋವ್ ಅಭಿಮಾನಿಗಳು ಮೇ 2026ರಲ್ಲಿ ಪೋಲೆಂಡ್ನ ಅಗ್ರ ಲೀಗ್ ಎಕ್ಸ್ಟ್ರಾಕ್ಲಾಸಾಗೆ ತಮ್ಮ ಕ್ಲಬ್ ಬಡ್ತಿಯಾದದ್ದನ್ನು ಆಚರಿಸುತ್ತಿರುವುದನ್ನು […]
ಹೇಳಿಕೆ/Claim: ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿನ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎನ್ನಲಾಗಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ದಾಳಿಗೆ ಒಳಗಾಗುತ್ತಿರುವುದನ್ನು ವೀಡಿಯೊ ತೋರಿಸುವುದಿಲ್ಲ. ಬದಲಾಗಿ, ಇದು ತಪ್ಪಾಗಿ ನಿರೂಪಿಸಲಾದ ಒಂದು ಹಳೆಯ ಕ್ಲಿಪ್ ಆಗಿದೆ. ದೃಶ್ಯಾವಳಿಯಲ್ಲಿ ಕಂಡುಬರುವ ರೈಲು WAG-12 ಎಲೆಕ್ಟ್ರಿಕ್ ಲೋಕೋಮೋಟಿವ್ನಿಂದ ಎಳೆಯಲ್ಪಡುವ ಬೇರೊಂದು ಸೇವೆಯ ರೈಲು ಎಂದು ಉತ್ತರ ರೈಲ್ವೆ ದೃಢಪಡಿಸಿದೆ. ರೇಟಿಂಗ್/Rating: ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು […]
ಹೇಳಿಕೆ/Claim: ಟೇಲರ್ ಸ್ವಿಫ್ಟ್ ತಮ್ಮ ಮದುವೆಯಲ್ಲಿ ಪಾಲ್ಗೊಂಡ 1201 ಜನರಿಗೆ ಕಾರ್ಟಿಯರ್ ವಾಚ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಡೆನುಡಿ/Conclusion:ಈ ಹೇಳಿಕೆ ಸುಳ್ಳು. ವರದಿಗಳ ಪ್ರಕಾರ, ಕಾರ್ಟಿಯರ್ ವಾಚ್ಗಳನ್ನು ಪ್ರತಿ ಅತಿಥಿಗೆ ಉಡುಗೊರೆಯಾಗಿ ನೀಡಲಾಗಲಿಲ್ಲ, ಬದಲಿಗೆ ಈ ಕೈಗಡಿಯಾರಗಳನ್ನು ಐಷಾರಾಮಿ ಡಿಸೈನರ್ ಹ್ಯಾಂಡ್ಬ್ಯಾಗ್ಗಳು ಮತ್ತು ವಿಂಟೇಜ್ 1970 ಶೆವ್ರೊಲೇ ಶೆವೆಲ್ ಜೊತೆಗೆ ಹಲವಾರು ರಾಫೆಲ್ (ಚೀಟಿ) ಬಹುಮಾನಗಳ ಭಾಗವಾಗಿ ನೀಡಲಾಯಿತು. ರಿಸೆಪ್ಷನ್ ಸಮಯದಲ್ಲಿ ಅತಿಥಿಗಳು ಆಟಗಳಲ್ಲಿ ಭಾಗವಹಿಸುವ ಮೂಲಕ ರಾಫೆಲ್ ಟಿಕೆಟ್ಗಳನ್ನು ಗೆದ್ದರು ಎಂದು ವರದಿಯಾಗಿದೆ, ಅಂದರೆ ವಿಜೇತರು ಮಾತ್ರ […]
ಹೇಳಿಕೆ/Claim: ವಾಟ್ಸಾಪ್ ನಲ್ಲಿ “ಒಂದು ವೀಕ್ಷಣೆ”ಯ ಫೈಲ್ ಅನ್ನು ಒಮ್ಮೆ ತೆರೆದ ನಂತರ, “.rvo” ಎಂದು ಟೈಪ್ ಮಾಡುವುದರಿಂದ (ಪ್ರತ್ಯುತ್ತರಕ್ಕಾಗಿ) ಸ್ವಯಂಚಾಲಿತವಾಗಿ ಫೋಟೋ ಪುನಃ ಕಾಣುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. “.rvo” ಎಂದು ಟೈಪ್ ಮಾಡುವುದರಿಂದ ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಏನೂ ಆಗುವುದಿಲ್ಲ. ಒಂದು ವೀಕ್ಷಣೆಯ ಫೋಟೋ ಅಥವಾ ವೀಡಿಯೊವನ್ನು ಒಮ್ಮೆ ತೆರೆದು ಮುಚ್ಚಿದ ನಂತರ, ಅದು ಶಾಶ್ವತವಾಗಿ ಕಣ್ಮರೆಯಾಗುತ್ತದೆ ಮತ್ತು ಅದನ್ನು ಪುನಃ ನೋಡಲಾಗುವುದಿಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ […]
ಹೇಳಿಕೆ/Claim:ಒಂದು ಫುಟ್ಬಾಲ್ ಪಂದ್ಯದ ಸಮಯದಲ್ಲಿ ಲಯೋನೆಲ್ ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಅಂತಹ ಬೈಸಿಕಲ್ ಕಿಕ್ ಗಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ವೈರಲ್ ವೀಡಿಯೊ AI- ರಚಿತವಾಗಿದ್ದು, ಸಂಭವಿಸಿರದ ಕಾಲ್ಪನಿಕ ಕ್ಷಣವನ್ನು ಚಿತ್ರಿಸುತ್ತದೆ. ರೇಟಿಂಗ್/Rating: ಸುಳ್ಳು ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. […]
Claim: ಎಂಪೈರ್ ಸ್ಟೇಟ್ ಬಿಲ್ಡಿಂಗ್ನಲ್ಲಿ ಇಬ್ಬರು ವ್ಯಕ್ತಿಗಳು “TRANS WOMEN AR MEN!” (“ಮಂಗಳಮುಖಿಗಳು ಪುರುಷರು”) ಎಂಬ ಬ್ಯಾನರ್ ಹಿಡಿದಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ಬೇರೆಯದೇ ಆದ ಬ್ಯಾನರ್ ಪಠ್ಯವನ್ನು ಹೊಂದಿರುವ ಈ ವೈರಲ್ ವೀಡಿಯೊವನ್ನು ಗ್ರಾಕ್ ಇಮ್ಯಾಜಿನ್ ಬಳಸಿ ರಚಿಸಲಾಗಿದೆ. ಇದನ್ನು ಜುಲೈ 1, 2026ರ ಅಧಿಕೃತ ದೃಶ್ಯಾವಳಿಗಳನ್ನು ಉಲ್ಲೇಖಿಸಿ/ ತೆಗೆದುಕೊಂಡು ರಚಿಸಲಾಗಿದೆ, ಅದರಲ್ಲಿ ವಾಸ್ತವವಾಗಿ ಪರ್ವತಾರೋಹಿಗಳಾದ ಏಂಜೆಲಾ ನಿಕೋಲೌ ಮತ್ತು ಇವಾನ್ ಬೀರ್ಕಸ್ “ಪ್ರೀತಿಯ ಶಕ್ತಿಯು ಅಧಿಕಾರದ […]
ಹೇಳಿಕೆ/Claim: ಬಿಟ್ಕಾಯಿನ್ ಅನ್ನು ಹ್ಯಾಕ್ ಮಾಡಿದ ಮತ್ತು 15 ಬಿಟ್ ಖಾಸಗಿ ಕೀಯನ್ನು ಭೇದಿಸಿರುವ ಕ್ಲೌಡ್ ಮೈಥೋಸ್ ಅನ್ನು ಆಂಥ್ರೊಪಿಕ್ ಬಿಡುಗಡೆ ಮಾಡಲಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಯಾವುದೇ ಆಂಥ್ರೊಪಿಕ್ ದಸ್ತಾವೇಜೀಕರಣ ಅಥವಾ ಪ್ರಕಟಣೆಗಳು ಕ್ಲಾಡ್ ಮೈಥೋಸ್ ಅನ್ನು 256-ಬಿಟ್ ಎಲಿಪ್ಟಿಕ್ ಕರ್ವ್ ಭದ್ರತೆಯನ್ನು ಬಳಸುವ ಯಾವುದೇ ಬಿಟ್ಕಾಯಿನ್-ಶೈಲಿಯ ಖಾಸಗಿ ಕೀಯನ್ನು ಭೇದಿಸಿದೆಯೆಂದು ತಿಳಿಸಿಲ್ಲ. 15 ಬಿಟ್ ಖಾಸಗಿ ಕೀಯನ್ನು ಸ್ವತಂತ್ರ ಸಂಶೋಧಕ ಜಿಯಾನ್ಕಾರ್ಲೊ ಲೆಲ್ಲಿ ಭೇದಿಸಿದ್ದಾರೆ, AI ಅಲ್ಲ ರೇಟಿಂಗ್/Rating: ಸುಳ್ಳು ಕ್ಲಾಡ್ ಮೈಥೋಸ್ ಬಿಟ್ಕಾಯಿನ್ ಅನ್ನು […]
ಹೇಳಿಕೆ/Claim: ಚಿತ್ರವು ಹೊಸ ಪೋರ್ಚುಗಲ್ ರಾಷ್ಟ್ರೀಯ ತಂಡದ 2026 ವಿಶ್ವಕಪ್ ಪೂರ್ವ-ಪಂದ್ಯದ ಜ್ಯಾಕೆಟ್ ಅನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಚಿತ್ರಗಳನ್ನು AI ಬಳಸಿ ರಚಿಸಲಾಗಿದೆ ಮತ್ತು ಯಾವುದೇ ಅಧಿಕೃತ ಪೋರ್ಚುಗಲ್ ರಾಷ್ಟ್ರೀಯ ತಂಡದಿಂದ ಉಡುಪುಗಳ ಕುರಿತು ಅಂತಹ ಯಾವುದೇ ಅಧಿಕೃತ ಘೋಷಣೆ ಅಸ್ತಿತ್ವದಲ್ಲಿಲ್ಲ. ಇದಲ್ಲದೆ, ಜ್ಯಾಕೆಟ್ ನೈಕಿ ಲೋಗೋವನ್ನು ಒಳಗೊಂಡಿದೆ, ಆದರೆ ಪೋರ್ಚುಗಲ್ ನೈಕಿ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿ ಜನವರಿ 1, 2025ರಿಂದ ಪೂಮಾದೊಂದಿಗೆ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿತ್ತು. ರೇಟಿಂಗ್/Rating: ಸುಳ್ಳು ಹಲವಾರು […]
ಹೇಳಿಕೆ/Claim: ಇರಾನ್ ಪಡೆಗಳು ಕುವೈತ್ನಲ್ಲಿರುವ ಅಮೆರಿಕದ ನೆಲೆಯ ಮೇಲೆ ದಾಳಿ ಮಾಡಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂತಿದೆ. ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಕುವೈತ್ನ ಮೇಲೆ ದಾಳಿ ಮಾಡಿದ್ದರೂ, ಹೇಳಿಕೆಯಲ್ಲಿರುವ ವೀಡಿಯೊ ಕುವೈತ್ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಯಾವುದೇ ದಾಳಿಯನ್ನು ತೋರಿಸುವುದಿಲ್ಲ. ಇದು ಜೂನ್ 1, 2026ರಂದು ಮಾಲ್ಟಾದಲ್ಲಿ ನಡೆದ ಪಟಾಕಿ ಕಾರ್ಖಾನೆಯ ಸ್ಫೋಟದ ಸುದ್ದಿಯನ್ನು ತಪ್ಪಾಗಿ ತೋರಿಸಲಾದ ದೃಶ್ಯವಾಗಿದೆ. ರೇಟಿಂಗ್/Rating:ದಾರಿ ತಪ್ಪಿಸುವಂತಿದೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ ಕ್ಲಿಪ್ […]