Don't Miss

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ.

ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಕೇಂದ್ರ ಸರ್ಕಾರವು ಈವರೆಗೆ ತಮ್ಮ ಯಾವುದೇ ಯೋಜನೆಯಡಿಯಲ್ಲಿ ಇಂತಹ ಯಾವುದೇ ಸ್ಕೀಮನ್ನು ಪ್ರಾರಂಭಿಸಿಲ್ಲ.

ರೇಟಿಂಗ್: ಸಂಪೂರ್ಣವಾಗಿ ಸುಳ್ಳು.

ಸತ್ಯ ಪರಿಶೀಲನೆ ವಿವರಗಳು

ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಗಳನ್ನು ನೀಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರವು ಉಚಿತ ಯೋಜನೆಯನ್ನು ಪ್ರಾರಂಭಿಸಿದೆ ಎಂದು ವೈರಲ್ ಸಂದೇಶವು ಹೇಳುತ್ತದೆ.

ವೈರಲ್ ಸಂದೇಶವು ಹೀಗಿದೆ:

“ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಯೋಜನೆ 2024ಕ್ಕಾಗಿ ಅರ್ಜಿಗಳು ಲಭ್ಯವಾಗಿವೆ

ತಮ್ಮ ಶಿಕ್ಷಣದ ಮಟ್ಟದಲ್ಲಿ ಲ್ಯಾಪ್‌ಟಾಪ್ ಅಗತ್ಯವಿದ್ದು, ಹಣಕಾಸಿನ ತೊಂದರೆಯಿಂದಾಗಿ ತಮ್ಮದೇ ಆದ ಲ್ಯಾಪ್‌ಟಾಪ್ ಖರೀದಿಸುವ ಸ್ಥಿತಿಯಲ್ಲಿಲ್ಲದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯು ಲಭ್ಯವಾಗಿದೆ

2024 ರಲ್ಲಿ 960,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕೆಯನ್ನು ವರ್ಧಿಸಲು ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು

ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪ್‌ಗಳನ್ನು ಪಡೆಯಲಾರಂಭಿಸಿದ್ದಾರೆ

ಇಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಿರಿ.”

ಸಂದೇಶದಲ್ಲಿ ಒಂದು ಲಿಂಕ್ ಕೂಡ ಒದಗಿಸಲಾಗಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೈರಲ್ ಹೇಳಿಕೆಯ ವಾಸ್ತವಾಂಶ ಪರಿಶೀಲಿಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ವಿನಂತಿಯೊಂದು ಬಂದಿತು.

ಸತ್ಯ ಪರಿಶೀಲನೆ 

ಅಂತಹ ಯಾವುದೇ ಯೋಜನೆಯನ್ನು ಪ್ರಾರಂಭಿಸಲಾಗಿದೆಯೇ ಎಂದು ನೋಡಲು ಡಿಜಿಟೈ ಇಂಡಿಯಾ ತಂಡವು ಅನೇಕ ಸರ್ಕಾರಿ ವೆಬ್‌ಸೈಟ್‌ಗಳನ್ನು ಪರಿಶೀಲಿಸಿತು. ನಾವು ವೆಬ್‌ಸೈಟ್‌ಗಳನ್ನು ಪರಿಶೀಲಿಸಿದಾಗ ಸರ್ಕಾರದಿಂದ ಅಂತಹ ಯಾವುದೇ ಮಾಹಿತಿ ಕಂಡುಬಂದಿಲ್ಲ.

ಡಿಜಿಟೈ ಇಂಡಿಯಾ ತಂಡವು ಸಂದೇಶಕ್ಕೆ ಲಗತ್ತಿಸಲಾದ ವೆಬ್‌ಸೈಟ್ ಲಿಂಕ್ ಅನ್ನು ನೋಡಿತು. ಆ ಲಿಂಕ್ ಬಳಕೆದಾರರನ್ನು “https://lii.ke/STUDENTS-FREE-LAPT0PS” ಗೆ ನಿರ್ದೇಶಿಸುತ್ತದೆ, ಲಿಂಕ್ ಅನ್ನು ಸಂಕ್ಷಿಪ್ತಗೊಳಿಸಲಾಗಿದೆ. ಸ್ಕ್ಯಾಮರ್‌ಗಳು ತಮ್ಮ ಫಿಶಿಂಗ್ ಹಗರಣಗಳನ್ನು ಪೂರೈಸಲು ಲಿಂಕ್‌ಗಳನ್ನು ಸಂಕ್ಷಿಪ್ತಗೊಳಿಸುತ್ತಾರೆ. ಅಷ್ಟೇ ಅಲ್ಲದೆ, ಲಿಂಕ್‌ನಲ್ಲಿರುವ ‘ಲ್ಯಾಪ್‌ಟಾಪ್’ ಎಂಬ ಪದವನ್ನು ‘lapt0ps’ ಎಂದು ಬರೆಯಲಾಗಿದೆ, ಅಲ್ಲಿ O ಅಕ್ಷರದ ಬದಲಿಗೆ 0 (ಸೊನ್ನೆ) ಬಳಸಲಾಗಿದೆ.

ಈ ಹಗರಣದ ಕುರಿತು ಹೆಚ್ಚಿನ ಸುಳಿವುಗಳನ್ನು ಕಂಡುಹಿಡಿಯಲು ನಾವು ಸಾಮಾಜಿಕ ಜಾಲತಾಣಗಳನ್ನು ಹುಡುಕಾಡಿದೆವು. ಆಗಸ್ಟ್ 31, 2023 ರಂದು ಪೋಸ್ಟ್ ಮಾಡಲಾದ PIB ಸತ್ಯ ಪರಿಶೀಲನೆಯ ಟ್ವೀಟ್ ನಮ್ಮ ಕಣ್ಣಿಗೆ ಬಿತ್ತು. ಸರ್ಕಾರವು ಯಾವುದೇ ಉಚಿತ ಲ್ಯಾಪ್‌ಟಾಪ್ ಯೋಜನೆಗಳನ್ನು ಪ್ರಾರಂಭಿಸಿಲ್ಲ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅವರು ಹೇಳಿರುವಂತೆ, “ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆ 2023ರ ಅಡಿಯಲ್ಲಿ ಭಾರತ ಸರ್ಕಾರವು ಯುವ ಜನತೆಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ಹೇಳಿಕೊಳ್ಳುವ ಸೂಚನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸೂಚನೆ #FAKE. ಭಾರತ ಸರ್ಕಾರದ @EduMinOfIndia ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ.”

 

PIB ಸತ್ಯ ಪರಿಶೀಲನೆಯು ಮಾರ್ಚ್ 16, 2023ರಂದು ಕೂಡ ಇದೇ ರೀತಿಯ ಹೇಳಿಕೆಯೊಂದನ್ನು ತಳ್ಳಿಹಾಕಿದೆ. ಆ ಟ್ವೀಟ್‌ನಲ್ಲಿ, “ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆ 2023ರಡಿಯಲ್ಲಿ ಭಾರತ ಸರ್ಕಾರವು ಯುವ ಜನತೆಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ಹೇಳಿಕೊಳ್ಳುವ ಸೂಚನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ #PIBFactCheck. ಈ ಸೂಚನೆ #FAKE. ಭಾರತ ಸರ್ಕಾರದ @EduMinOfIndia ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ.”

ವಾಟ್ಸಾಪ್ ಫಾರ್ವರ್ಡ್‌ಗಳಲ್ಲಿ ಸ್ವೀಕರಿಸುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದೆಂದು ಡಿಜಿಟೈ ಇಂಡಿಯಾ ತಂಡವು ತನ್ನ ಓದುಗರಿಗೆ ಎಚ್ಚರಿಕೆ ನೀಡುತ್ತದೆ. ಅಂತಹ ಲಿಂಕ್‌ಗಳನ್ನು ಫಿಶಿಂಗ್‌ಗಾಗಿ ಬಳಸಬಹುದು ಮತ್ತು  ಫೋನ್ ಸಂಖ್ಯೆ ಮತ್ತು IP ವಿಳಾಸದಿಂದ ಬಳಕೆದಾರರ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲೂ ಬಳಸಬಹುದು.

ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

ತಮಿಳುನಾಡಿನಲ್ಲಿ BHEL ತಿರುಚ್ಚಿ ಘಟಕವು ರಾಮ ಮಂದಿರಕ್ಕಾಗಿ ಈ ಬೃಹತ್ ಗಂಟೆಗಳನ್ನು ತಯಾರಿಸಿದೆಯೇ? ಸತ್ಯ ಪರಿಶೀಲನೆ

ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಭಾಗವಾಗಿರುವ 25,000 ಹವನ ಕುಂಡಗಳನ್ನು ವೀಡಿಯೊ ತೋರಿಸುತ್ತದೆ: ಸತ್ಯ ಪರಿಶೀಲನೆ

6 comments

  1. Pingback: ‘ಹೆಚ್ಚು ಹಳದಿ’ಯಾಗಿರುವ ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ;

  2. Pingback: ಬಿಜೆಪಿ ಚಿಹ್ನೆಯನ್ನು ಹೊಂದಿರುವ ಟೀ ಶರ್ಟ್ ಧರಿಸಿರುವಂತೆ ರಾಹುಲ್ ಗಾಂಧಿಯವರ ಸುಳ್ಳು ಚಿತ್ರವನ್ನು ಹಂಚಿಕೊಳ್

  3. Pingback: ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನ

  4. Pingback: ಭಾರತದಲ್ಲಿ ಅಂಚೆ ಮಾಸ್ತರರ ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ತೋರಿಸುವುದಾಗಿ ಹೇಳುವ ವೈರಲ್ ವೀಡಿ

  5. Pingback: ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿ

  6. Pingback: ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶ

Leave a Reply

Your email address will not be published. Required fields are marked *

*