Don't Miss
ರಾಹುಲ್ ಗಾಂಧಿಯವರು ಸಾರ್ವಜನಿಕ ರ‍್ಯಾಲಿಗಳಲ್ಲಿ ಭಾರತೀಯ ಸಂವಿಧಾನದ ಬದಲಿಗೆ ಚೀನಾದ ಸಂವಿಧಾನದ ಪ್ರತಿಯನ್ನು ಒಯ್ಯುತ್ತಿದ್ದಾರೆಯೇ? ಸತ್ಯ ಪರಿಶೀಲನೆ

ರಾಹುಲ್ ಗಾಂಧಿಯವರು ಸಾರ್ವಜನಿಕ ರ‍್ಯಾಲಿಗಳಲ್ಲಿ ಭಾರತೀಯ ಸಂವಿಧಾನದ ಬದಲಿಗೆ ಚೀನಾದ ಸಂವಿಧಾನದ ಪ್ರತಿಯನ್ನು ಒಯ್ಯುತ್ತಿದ್ದಾರೆಯೇ? ವೀಡಿಯೊದೊಂದಿಗೆ ಸತ್ಯ ಪರಿಶೀಲನೆ

ಹೇಳಿಕೆ/Claim: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತೀಯ ಸಂವಿಧಾನದ ಪ್ರತಿಯನ್ನಲ್ಲ, ಚೀನಾದ ಸಂವಿಧಾನವನ್ನು ಹಿಡಿದಿದ್ದಾರೆ.

ಕಡೆನುಡಿ/Conclusion: ಹೇಳಿಕೆ ತಪ್ಪು. ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಗೋಪಾಲ್ ಸಂಕರನಾರಾಯಣನ್ ರವರ (ಇಬಿಸಿ ಪ್ರಕಟಿತ) ಕೆಂಪು (ಕೋಟ್ ಪಾಕೆಟ್) ಆವೃತ್ತಿಯನ್ನು ಹೊಂದಿದ್ದಾರೆಯೇ ಹೊರತು ಚೀನಾದ ಸಂವಿಧಾನವನ್ನಲ್ಲ.

ರೇಟಿಂಗ್: ಸಂಪೂರ್ಣವಾಗಿ ತಪ್ಪುFive rating

ಸತ್ಯ ಪರಿಶೀಲನೆ ವಿವರಗಳು

ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಕೆಂಪು ಬಣ್ಣದ ಪ್ರತಿಯನ್ನು ಪ್ರದರ್ಶಿಸುತ್ತಿರುವ ಚಿತ್ರವು ಅವರ ಅನೇಕ  ರ‍್ಯಾಲಿಗಳಲ್ಲಿ ಕಂಡುಬಂದಿದೆ, ಅವರ ವಿರೋಧಿಗಳು ಅದು ಚೀನಾದ ಸಂವಿಧಾನದ ಪ್ರತಿ ಮತ್ತು ಭಾರತದ ಸಂವಿಧಾನದ್ದಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಸರ್ಮಾರವರು ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ರಾಹುಲ್ ಗಾಂಧಿಯವರು ‘ಕೆಂಪು ಹೊದಿಕೆ’ ಹೊಂದಿರುವ ‘ಮೂಲ ಚೀನಾ ಸಂವಿಧಾನ’ದ ಪ್ರತಿಯನ್ನು ಹಿಡಿದಿದ್ದಾರೆ ಮತ್ತು ಮೂಲ ಭಾರತೀಯ ಸಂವಿಧಾನವು ‘ನೀಲಿ ಹೊದಿಕೆ’ ಹೊಂದಿದೆ ಎಂದು ಹೇಳಿದ್ದಾರೆ. ಪೋಸ್ಟ್ ಅನ್ನು ಇಲ್ಲಿ ನೋಡಿ:

ಸರ್ಮಾ, ‘ಭಾರತದ ಸಂವಿಧಾನದ ಮೂಲ ಪ್ರತಿಯು ನೀಲಿ ಹೊದಿಕೆಯನ್ನು ಹೊಂದಿದೆ. ಮೂಲ ಚೀನೀ ಸಂವಿಧಾನವು ಕೆಂಪು ಹೊದಿಕೆಯನ್ನು ಹೊಂದಿದೆ. ರಾಹುಲ್ ಚೀನಾದ ಸಂವಿಧಾನವನ್ನು ಒಯ್ಯುತ್ತಿದ್ದಾರಾ? ನಾವದನ್ನು ಪರಿಶೀಲಿಸಬೇಕು.’ ಎಂದು ಟ್ವೀಟ್ ಮಾಡಿದರು.

ಮರುದಿನ, ಮೇ 18, 2024 ರಂದು, “ರಾಹುಲ್ ಅವರು ತಮ್ಮ ಸಭೆಗಳಿಗೆ ಹಾಜರಾಗುವ ಜನರಿಗೆ ಕೆಂಪು ಚೀನೀ ಸಂವಿಧಾನವನ್ನು ಪ್ರದರ್ಶಿಸುತ್ತಿದ್ದಾರೆ. ನೀಲಿ ಬಣ್ಣದಲ್ಲಿರುವ ನಮ್ಮ ಸಂವಿಧಾನವು ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ ಎಂಬ ಅಧ್ಯಾಯವನ್ನು ಒಳಗೊಂಡಿದೆ. ಈ ಅಧ್ಯಾಯವು ನಮ್ಮ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದನ್ನು ಪವಿತ್ರ ಕರ್ತವ್ಯವನ್ನಾಗಿಸುತ್ತದೆ. ರಾಹುಲ್ ಈಗ ಇದನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿಯೇ ಅವರ ಕೈಯಲ್ಲಿರುವ ಸಂವಿಧಾನವು ಚೀನೀ ಆಗಿರಬೇಕು ಎಂದು ನಾನು ಖಚಿತವಾಗಿ ಹೇಳಬಲ್ಲೆ.” ಎಂದು ತಮ್ಮ ಮಾತನ್ನು ಆತ ಸಮರ್ಥಿಸಿಕೊಂಡರು.

ಮೇಲಿನ ಟ್ವೀಟ್‌ನಲ್ಲಿ ಕಾಣುವಂತೆ, ಕೆಂಪು ಹೊದಿಕೆಯನ್ನು ಹೊಂದಿರುವ ಚೀನಾದ ಸಂವಿಧಾನದ ಒಂದು ಮತ್ತು ನೀಲಿ ಹೊದಿಕೆಯನ್ನು ಹೊಂದಿರುವ ಭಾರತೀಯ ಸಂವಿಧಾನದ ಎರಡು ಚಿತ್ರಗಳನ್ನು ತೋರಿಸಲಾಗಿದೆ. ಈ ಟ್ವೀಟ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸತ್ಯ ಪರಿಶೀಲನೆ

ರಾಹುಲ್ ಗಾಂಧಿಯವರು ತಮ್ಮ ಇತ್ತೀಚಿನ ಎಲ್ಲಾ ಸಾರ್ವಜನಿಕ ರ‍್ಯಾಲಿಗಳಲ್ಲಿ ಕೆಂಪು ಬಣ್ಣದ ಪ್ರತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿನ ದುರ್ಬಲ ವರ್ಗಗಳ ಜನರಿಗೆ ಮೀಸಲಾತಿಯನ್ನು ಒದಗಿಸುವುದರ ಜೊತೆಗೆ, ಒಂದೇ ಸಮನಾದ ಮೂಲಭೂತ ಹಕ್ಕುಗಳನ್ನು ಹೊಂದಿರುವ ಬಡವರು ಮತ್ತು ಶ್ರೀಮಂತರಲ್ಲಿ ಸಮಾನತೆಯನ್ನು ಖಾತರಿಪಡಿಸುವ ಸಂವಿಧಾನದ ಮಹತ್ವವನ್ನು ಅವರು ಒತ್ತಿ ಹೇಳುತ್ತಾ ಬಂದಿದ್ದಾರೆ. ನಾವು ಪುಸ್ತಕವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕೆಂಪು ಪ್ರತಿಯಲ್ಲಿನ ಲಿಖಿತ ಭಾಗವು “ಭಾರತದ ಸಂವಿಧಾನ” ಎಂದು ಸ್ಪಷ್ಟವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಆಂಗ್ಲ ಭಾಷೆಯಲ್ಲಿರುವ ಮತ್ತು ಕೈ ಬರಹದಲ್ಲಿರುವ  ಭಾರತದ ಮೂಲ ಸಂವಿಧಾನವನ್ನು ಇಲ್ಲಿ ಕಾಣಬಹುದು:

ಆದರೆ, ಕೆಂಪು-ಹೊದಿಕೆಯ ಭಾರತೀಯ ಸಂವಿಧಾನದ ಪುಸ್ತಕವು ‘ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ (ಕೋಟ್ ಪಾಕೆಟ್ ಎಡಿಷನ್)’ ಎಂಬ ಶೀರ್ಷಿಕೆಯ ಗೋಪಾಲ್ ಸಂಕರನಾರಾಯಣನ್ ರವರ ವಿಶೇಷ ಆವೃತ್ತಿ. ಇದನ್ನು ಈಸ್ಟರ್ನ್ ಬುಕ್ ಕಂಪನಿ (ಇಬಿಸಿ) ಪ್ರಕಟಿಸಿದ್ದು, ಇದು ಇಬಿಸಿ ವೆಬ್‌ಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ಕೆಳಗೆ ತೋರಿಸಿರುವ ಅಮೇಜಾನ್  ಆನ್‌ಲೈನ್ ಶಾಪಿಂಗ್ ನಲ್ಲಿಯೂ ಇದು ಲಭ್ಯವಿದೆ:

ರಾಹುಲ್ ಗಾಂಧಿಯವರು ಸಾರ್ವಜನಿಕ ರ‍್ಯಾಲಿಗಳಲ್ಲಿ ಹಿಡಿದು ಪ್ರದರ್ಶಿಸುವ ಪ್ರತಿಯೂ ಸಹ ಗೋಪಾಲ್ ಸಂಕರನಾರಾಯಣನ್ ರವರ ಅದೇ ಇಬಿಸಿ ಆವೃತ್ತಿಯಾಗಿದೆ.

ಇದನ್ನು ಚೀನೀ ಸಂವಿಧಾನದ ಪುಸ್ತಕದೊಂದಿಗೆ ಹೋಲಿಸಿದರೆ, ಕೆಂಪು ಬಣ್ಣದಲ್ಲಿರುವ ಚೀನೀ ಸಂವಿಧಾನವು ಕೆಳಗಿನಂತೆ ಕಾಣುತ್ತದೆ ಆದರೆ ಅದರ ಹೊದಿಕೆ ಪುಟದಲ್ಲಿ ಪಠ್ಯವು ಕೆಳಭಾಗದಲ್ಲಿರುತ್ತದೆ.

ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

ನಾಳೆಯಿಂದ ಉಚಿತ ವಿದ್ಯುತ್ ಅನುದಾನ ನಿಲ್ಲುತ್ತದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರಾ? ಸತ್ಯ ಪರಿಶೀಲನೆ

ರಾಹುಲ್ ಗಾಂಧಿಯವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಧ್ವನಿ ಬದಲಾಯಿಸಿದ ವೀಡಿಯೊ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*