ಹೇಳಿಕೆ/Claim: ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ SC/ST/OBC ಮೀಸಲಾತಿಯನ್ನು ಕೊನೆಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಬಿಜೆಪಿ ಎಲ್ಲಾ ಮೀಸಲಾತಿಗಳನ್ನು ರದ್ದುಪಡಿಸುತ್ತದೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ ಎಂದು ತೋರಿಸಲು ಧ್ವನಿಯನ್ನು ಬದಲಾಯಿಸಿ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ.
ರೇಟಿಂಗ್: ತಪ್ಪು ನಿರೂಪಣೆ --
ಸತ್ಯ ಪರಿಶೀಲನೆ ವಿವರಗಳು:
ಬಿಜೆಪಿ ಸರ್ಕಾರ ಪುನಃ ರಚನೆಯಾದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (SC/ST/OBC) ನೀಡಲಾಗಿದ್ದ ‘ಅಸಂವಿಧಾನಿಕ ಮೀಸಲಾತಿ’ಯನ್ನು ರದ್ದುಪಡಿಸುವುದಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರವರು ಹೇಳುತ್ತಿರುವ ವಿಡಿಯೋ ತುಣುಕನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ತೆಲುಗು, ಹಿಂದಿ ಮತ್ತು ಆಂಗ್ಮ ಭಾಷೆಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹೊರಬಂದಂತೆ ಮೀಸಲಾತಿ ಮತ್ತು ಇದರ ರದ್ದತಿಯ ವಿವಾದವನ್ನು ಹುಟ್ಟುಹಾಕಿತು.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸದಸ್ಯರೊಬ್ಬರು ತಮ್ಮ X ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಟ್ವೀಟ್ ಹೀಗಿದೆ:
भारतीय जनता पार्टी की सरकार बनेगी तो आज संवैधानिक एससी एसटी ओबीसी का रिजर्वेशन खत्म कर देंगे:- अमित शाह जी
आंखें खोलो भाइयों ये बीजेपी वाले क्या षड्यंत्र रच रहे हैं pic.twitter.com/bxxVg4IRMF— Office Sanjeev Sagar BSP (@OfficeSanjeev) April 27, 2024
X ನ ಹಲವಾರು ಇತರ ಬಳಕೆದಾರರು ವೈರಲ್ ಕ್ಲಿಪ್ ಅನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಹಂಚಿಕೊಂಡಿದ್ದು ಈ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ದೊಡ್ಡ ಚರ್ಚೆಯನ್ನು ಪ್ರಚೋದಿಸಿದ್ದಾರೆ.
FACT CHECK
ವೀಡಿಯೊ ಕ್ಲಿಪ್ ನ ಬಲ ಮೇಲ್ಭಾಗದಲ್ಲಿ ತೀನ್ಮಾರ್ ಅನ್ನು ಕಾಣಬಹುದು ಮತ್ತು ವಾಹಿನಿಯು ತೆಲುಗು ಸುದ್ದಿ ವಾಹಿನಿ V6 ನ್ಯೂಸ್. ಇಲ್ಲಿ ತೋರಿಸಲಾಗಿರುವ ಮೂಲ ವೀಡಿಯೊದಲ್ಲಿ ಅಮಿತ್ ಶಾರವರು, “ಬಿಜೆಪಿ-ಸರ್ಕಾರವು ರಚನೆಯಾದಾಗ ಮುಸ್ಲಿಮರಿಗಿರುವ ಅಸಂವಿಧಾನಿಕ ಮೀಸಲಾತಿಯನ್ನು ರದ್ದುಪಡಿಸುತ್ತೇವೆ. ಈ ಹಕ್ಕು (ಮೀಸಲಾತಿಯ ಹಕ್ಕು) ತೆಲಂಗಾಣದ SC/ST/OBC ಗಳಿಗೆ ಸೇರಿರುವುದು. ಅವರಿಗೆ ಅವರ ಹಕ್ಕು ಸಿಗುತ್ತದೆ ಮತ್ತು ನಾವು ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ.” ಎಂದರು.
ಬಿಜೆಪಿ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಸಭೆಯ ಸಂಪೂರ್ಣ ವೀಡಿಯೊವನ್ನು ಇಲ್ಲಿ ನೋಡಿ:
ಏಪ್ರಿಲ್ 23, 2023 ರಂದು ತೆಲಂಗಾಣದ ಚೆವೆಲ್ಲಾದಲ್ಲಿ ತಮ್ಮ ಸಾರ್ವಜನಿಕ ರ‍್ಯಾಲಿಯಲ್ಲಿ, ಅಮಿತ್ ಶಾ ಅವರು 14:58 ನಿಮಿಷಗಳಲ್ಲಿ ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸುವುದಾಗಿ ಹೇಳುವುದನ್ನು ಕಾಣಬಹುದು, SC/ST/OBC ಮೀಸಲಾತಿಯನ್ನಲ್ಲ. ಕೇಂದ್ರ ಗೃಹ ಸಚಿವರು SC/ST/OBC ಮೀಸಲಾತಿಯನ್ನು ರದ್ದುಪಡಿಸುವ ಬಗ್ಗೆ ಮಾತನಾಡುವುದನ್ನು ತೋರಿಸುವಂತೆ ಚಲಾವಣೆಯಲ್ಲಿರುವ ವೈರಲ್ ವೀಡಿಯೊವನ್ನು ಬದಲಾಯಿಸಲಾಗಿದೆ ಮತ್ತು ಡಿಜಿಟಲ್ ಮಾರ್ಪಾಡು ಮಾಡಲಾಗಿದೆ.
ಆದ್ದರಿಂದ, SC/ST/OBCಗಳಿಗೆ ಮೀಸಲಾತಿಯನ್ನು ಉಳಿಸಿಕೊಂಡು ತೆಲಂಗಾಣದಲ್ಲಿ ಒಬಿಸಿ ಮೀಸಲಾತಿಯಡಿಯಲ್ಲಿರುವ ಕೆಲವು ಮುಸ್ಲಿಂ ಸಮುದಾಯಗಳಿಗೆ ನೀಡಲಾದ ಮೀಸಲಾತಿಗಳನ್ನು ತೆಗೆದುಹಾಕುವ ಬಗ್ಗೆ ಆ ಭಾಷಣವಾಗಿತ್ತು. ಹೇಳಿಕೆಯ ಅನುಸಾರ ಬಿಜೆಪಿ ಸರ್ಕಾರವು ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಎಂದು ಅವರು ಹೇಳಲಿಲ್ಲ. ಆದ್ದರಿಂದ, ಹೇಳಿಕೆ ಸುಳ್ಳು
ಇದನ್ನೂ ಓದಿ:
ರಾಹುಲ್ ಗಾಂಧಿಯವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಧ್ವನಿ ಬದಲಾಯಿಸಿದ ವೀಡಿಯೊ; ಸತ್ಯ ಪರಿಶೀಲನೆ
ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ