Don't Miss

ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ.

ಕಡೆನುಡಿ/Conclusion: ಹೇಳಿಕೆಯಲ್ಲಿ ತಿಳಿಸಿರುವಂತೆ ತೆಲಂಗಾಣದಲ್ಲಿ ಪಡಿತರ ಚೀಟಿ ರದ್ದುಗೊಳಿಸುವ ಯಾವುದೇ ಕ್ರಮವಿಲ್ಲ.

ರೇಟಿಂಗ್ದಾ: ದಾರಿತಪ್ಪಿಸುವ ಸುದ್ದಿ

ಸತ್ಯ ಪರಿಶೀಲನೆ ವಿವರಗಳು:

ತೆಲಂಗಾಣ ರಾಜ್ಯದಲ್ಲಿ ‘ಪ್ರಜಾ ಪಾಲನಾ’ ಪ್ರಕ್ರಿಯೆ ಆರಂಭಗೊಳ್ಳುತ್ತಿರುವ ಸಮಯದಲ್ಲಿ, ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎನ್ನುವ ಸಾಮಾಜಿಕ  ಜಾಲತಾಣದ ಒಂದು ಪೋಸ್ಟ್‌ ಸುದ್ದಿ ಮಾಡುತ್ತಿದೆ. ಇದರಲ್ಲಿ ಮಂಡಲವಾರು ವಿವರಗಳನ್ನು
ನೀಡಲಾಗಿದ್ದು, ಹೊಸ ಕಾಂಗ್ರೆಸ್ ಸರ್ಕಾರವು ರಾಜ್ಯದ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದರಿಂದ ತಮ್ಮ ಪಡಿತರ ಚೀಟಿಗಳು ಚಾಲ್ತಿಯಲ್ಲಿರುವ ಬಗ್ಗೆ ಇದು ಜನರಲ್ಲಿ ಆತಂಕವನ್ನು ಹರಡಿದೆ. ಪೋಸ್ಟ್ ಅನ್ನು ಇಲ್ಲಿ ನೋಡಿ.

ಕನ್ನಡ ಭಾಷೆಗೆ ಅನುವಾದಿಸಲಾಗಿದೆ:
“ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳು ರದ್ದು.. ಜನರಲ್ಲಿ ಆತಂಕ
ಮೇಡ್ಚಲ್ ಜಿಲ್ಲೆಯಲ್ಲಿ ಒಟ್ಟು 95,040 ಬಿಳಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಮತ್ತು
ಬಾಚುಪಲ್ಲಿ ಮಂಡಲ್ – 2,378
ಘಟ್ ಕೇಸರ್ – 2,273
ಕಾಪ್ರಾ – 2,263
ಕೀಸರ – 3388
ಮೇಡ್ಚಲ್ – 2,306
ಮೆಡಿಪಲ್ಲಿ – 4,165
ಸಮೀರ್ಪೇಟ್ – 893
ತಿರುಚಿಂತಲಪಲ್ಲಿ – 3,208 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.

ಉಪ್ಪಲ್ ಪುರಸಭೆ ವೃತ್ತದಲ್ಲಿ 39,270 ಹಾಗೂ ಬಾಲನಗರ ಪುರಸಭೆ ವೃತ್ತದಲ್ಲಿ 35,210 ಚೀಟಿಗಳನ್ನು ರದ್ದುಪಡಿಸಲಾಗಿದೆ.

ಇನ್ನುಳಿದ ಜಿಲ್ಲೆಗಳಲ್ಲೂ ಪಡಿತರ ಚೀಟಿಗಳು ರದ್ದಾಗುವ ಸಾಧ್ಯತೆಯ ಬಗ್ಗೆ ಜನರು ಆತಂಕಗೊಂಡಿದ್ದಾರೆ”.

ಇದನ್ನು ತೆಲುಗು ಸ್ಕ್ರೈಬ್ ಪೋಸ್ಟ್ ಮಾಡಿತ್ತು. ತೆಲಂಗಾಣದ ಹೊಸ ಕಾಂಗ್ರೆಸ್ ಸರ್ಕಾರವು ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಮುಖ ಪ್ರಕ್ರಿಯೆಯನ್ನು ಕೈಗೊಂಡಿದ್ದು ಜನಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳು "ಪ್ರಜಾ ಪಾಲನಾ" ಕಾರ್ಯಕ್ರಮದಡಿಯಲ್ಲಿ ಅದಕ್ಕಾಗಿ ಅರ್ಜಿಸಲ್ಲಿಸುವಂತೆ ಕೇಳಿಕೊಂಡಿದ್ದರಿಂದ ಈ ಸುದ್ದಿ ನಿಜವೆಂದು ನಂಬಿ X ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳೆದ್ದವು.

FACT CHECK

ಡಿಜಿಟೈ ಇಂಡಿಯಾ ತಂಡವು ಇದನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಾಗ, AIMIM ನಾಯಕ ಅಸದುದ್ದೀನ್ ಓವೈಸಿಯವರು ಟ್ವಿಟರ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಈ ಹೇಳಿಕೆಯ ಕುರಿತು ಉತ್ತರಕ್ಕಾಗಿ ಸಚಿವ ಉತ್ತಮ್ ಕುಮಾರ್ ರೆಡ್ಡಿಯವರನ್ನು ಟ್ಯಾಗ್ ಮಾಡಿದ್ದರೆಂದು ತಿಳಿದುಬಂತು.
ಇದಕ್ಕೆ ಉತ್ತರಿಸಿದ ಸಚಿವ ಉತ್ತಮ್‌ಕುಮಾರ್‌ ರೆಡ್ಡಿ, ಆರೋಪ ಸುಳ್ಳು ಎಂದು ಹೇಳಿದರು. “ಅಸದ್, ಪಡಿತರ ಚೀಟಿಗಳ ರದ್ದತಿಯ ಈ ಸುದ್ದಿ ಸಂಪೂರ್ಣ ಸುಳ್ಳು. ನಾನು ನಿಮಗೆ ಭರವಸೆ ನೀಡುತ್ತೇನೆ, ನಮ್ಮ ಸರ್ಕಾರವು ರಾಜ್ಯದಲ್ಲಿ ಎಲ್ಲಿಯೂ ಒಂದೇ ಒಂದು ಪಡಿತರ ಚೀಟಿಯನ್ನೂ ರದ್ದುಗೊಳಿಸಿಲ್ಲ” ಎಂದು ಅವರು ಬರೆದರು.
ಅವರ ಉತ್ತರ ಇಲ್ಲಿದೆ:

ಇದಲ್ಲದೆ, ನಾವು ಸುದ್ದಿವಾಹಿನಿಗಳನ್ನು ಪರಿಶೀಲಿಸಿದಾಗ, ಎಲ್ಲಿಯೂ ಅಂತಹ ಯಾವುದೇ  ಸುದ್ದಿಯು ಪ್ರಕಟವಾಗಿರಲಿಲ್ಲ ಮತ್ತು ಟಿವಿ ಸುದ್ದಿ  ವಾಹಿನಿಗಳಲ್ಲಿಯೂ ಈ ಸಮಸ್ಯೆ ಎಲ್ಲಿಯೂ ಕಂಡುಬಂದಿಲ್ಲ. ಯಾವುದೇ ರಾಜ್ಯದಲ್ಲಿ ಒಂದು ಲಕ್ಷ ಫಲಾನುಭವಿಗಳು ತಮ್ಮ ಪಡಿತರ ಚೀಟಿಯನ್ನು ಕಳೆದುಕೊಳ್ಳುವುದು ಪ್ರಮುಖ ಸುದ್ದಿಯಾಗಿರುವುದರಿಂದ ಇಂತಹ ಒಂದು ಕ್ರಮವು ಭಾರೀ ಟೀಕೆ ಮತ್ತು ಸುದ್ದಿ ಪ್ರಸಾರವನ್ನು ಆಕರ್ಷಿಸಿರುತ್ತಿತ್ತು.

ಆದ್ದರಿಂದ, ಈ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ

ಈ ಸಂಪೂರ್ಣ ವೀಡಿಯೊ ಕೇರಳದ ದೇವಸ್ಥಾನವೊಂದರ ಪ್ರಸಿದ್ಧ ಸಸ್ಯಾಹಾರಿ ಮೊಸಳೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ