ಹೇಳಿಕೆ/Claim: ಕೋವಿಡ್-19ನ್ನು ಪತ್ತೆಹಚ್ಚುವ ರೋಗಲಕ್ಷಣಗಳ ಪಟ್ಟಿಯನ್ನು ಹೊಂದಿರುವ ಹೊಸ ಸಲಹೆಯನ್ನು AIIMS ಬಿಡುಗಡೆ ಮಾಡಿದೆ.
ಕಡೆನುಡಿ/Conclusion: AIIMSನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಸಾಮಾನ್ಯ ನೆಗಡಿ, ಪ್ಲು ಮತ್ತು ವೈರಲ್ ಜ್ವರದ ಲಕ್ಷಣಗಳು ಕೋವಿಡ್-19ರ ಲಕ್ಷಣಗಳನ್ನು ಹೋಲಬಹುದು. ದೇಶದ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ, ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
ರೇಟಿಂಗ್: ದಾರಿತಪ್ಪಿಸುವ ಸುದ್ದಿ
ಸತ್ಯ ಪರಿಶೀಲನೆ ವಿವರಗಳು
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (AIIMS) ಕೋವಿಡ್-19 ಅನ್ನು ಪತ್ತೆಹಚ್ಚಲು ಹೊಸ ರೋಗಲಕ್ಷಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳುವ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಈ ಸಂದೇಶವು ಸುದ್ದಿ ಮಾಡುತ್ತಿದೆ. ಈ ಸಂದೇಶದ ಪ್ರಕಾರ, AIIMS ನ ರೋಗಶಾಸ್ತ್ರ ವಿಭಾಗವು ಮನೆಯಲ್ಲಿ ಕೊರೊನಾವೈರಸ್ ಅನ್ನು ಹೇಗೆ ಕಂಡುಹಿಡಿಯಬಹುದು ಎಂದು ಪಟ್ಟಿ ಮಾಡಿದೆ.
ವೈರಲ್ ಆಗಿರುವ ಈ ಸಂದೇಶ ಹೇಳುವಂತೆ
(1) ಒಣ ಕೆಮ್ಮು + ಸೀನು = ವಾಯು ಮಾಲಿನ್ಯ
(2) ಕೆಮ್ಮು + ಕಫ + ಸೀನು + ಮೂಗಿನಿಂದ ಇಳಿಯುವುದು = ನೆಗಡಿ
(3) ಕೆಮ್ಮು + ಕಫ + ಸೀನು + ಮೂಗಿನಿಂದ ಇಳಿಯುವುದು + ಮೈಕೈ ನೋವು + ಕ್ಷೀಣತೆ + ಸ್ವಲ್ಪಜ್ವರ = ಫ್ಲೂ
(4) ಒಣ ಕೆಮ್ಮು + ಸೀನು + ಮೈಕೈ ನೋವು + ಕ್ಷೀಣತೆ + ತುಂಬಾ ಜ್ವರ + ಉಸಿರಾಟದ ತೊಂದರೆ = ಕೊ ರೋನಾ ವೈರಸ್
ಈ ವೈರಲ್ ಸಂದೇಶದ ಸತ್ಯ ಪರಿಶೀಲನೆ ಮಾಡಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಕೋರಿಕೆ ಬಂತು.
FACT CHECK
ಡಿಜಿಟೈ ಇಂಡಿಯಾ ತಂಡವು AIIMS ವೆಬ್‌ಸೈಟ್‌ಗೆ ಭೇಟಿ ನೀಡಿ ಅವರು ಈ ಕುರಿತು ಯಾವುದೇ ಸಲಹೆ-ಸೂಚನೆಯನ್ನು ಅಥವಾ ಹೇಳಿಕೆಯನ್ನು ನೀಡಿದ್ದಾರೆಯೇ ಎಂದು ಪರಿಶೀಲಿಸಿತು. ಕೋವಿಡ್-19 ಅನ್ನು ಪತ್ತೆ ಮಾಡುವುದು ಹೀಗೆ ಎಂದು ತಿಳಿಸುವ ಯಾವುದೇ ಸೂಚನೆ ಅಥವಾ ಜ್ಞಾಪನವು ನಮಗೆ ಕಾಣಸಿಗಲಿಲ್ಲ. ನಾವು ಗೂಗಲ್‌ನಲ್ಲಿಯೂ ಇದರ ಕುರಿತು ಕೀವರ್ಡ್ ಹುಡುಕಾಟವನ್ನು ನಡೆಸಿದೆವು.ಒಂದು ಫಲಿತಾಂಶದಲ್ಲಿ ನಮಗೆ ಡಿಸೆಂಬರ್ 27, 2023ರಂದು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ಈ ಸುದ್ದಿ ಲೇಖನ ದೊರಕಿತು. “ಗಂಭೀರವಾಗಿ ಅನಾರೋಗ್ಯ ಪೀಡಿತರಾಗಿರುವ ಕೋವಿಡ್-19 ರೋಗಿಗಳಿಗಾಗಿ ಸಿ6 ವಾರ್ಡ್‌ನಲ್ಲಿ 12 ಹಾಸಿಗೆಗಳನ್ನು ಮೀಸಲಿಡಲಾಗುವುದು”.ಎಂದು ಉಲ್ಲೇಖಿಸುವ ಜ್ಞಾಪನ ಪತ್ರವೊಂದನ್ನು AIIMS ಹೊರಡಿಸಿದೆ ಎಂದು ಈ ಸುದ್ದಿಯು ಹೇಳುತ್ತದೆ.
ನಾವು ಇನ್ನಷ್ಟು ಹುಡುಕಿದಾಗ AIIMS ನಿಂದ ಅಪ್‌ಲೋಡ್ ಮಾಡಲಾದ ಕೋವಿಡ್-19 ಕೈಪಿಡಿ ನಮಗೆ ದೊರಕಿತು. ಅವರು ಕೈಪಿಡಿಯಲ್ಲಿ, ಕೋವಿಡ್-19 ರ ಲಕ್ಷಣಗಳು- “ಜ್ವರ, ಗಂಟಲು ನೋವು,ಕೆಮ್ಮು ಮತ್ತು ಉಸಿರಾಟದ ತೊಂದರೆ. ಇವುಗಳು ಸಾಮಾನ್ಯ ನೆಗಡಿ, ಇನ್ಫ್ಲುಯೆಂಜಾ ಮುಂತಾದ ಯಾವುದೇ ವೈರಲ್ ಸೋಂಕಿನ ಲಕ್ಷಣಗಳನ್ನು ಹೋಲುತ್ತವೆ.” ಎಂದು ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹೇಳಿಕೆಯನ್ನು AIIMS ಬಿಡುಗಡೆ ಮಾಡಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ, ಕೋವಿಡ್-19ರ ಲಕ್ಷಣಗಳು- ಜ್ವರ, ಕೆಮ್ಮು, ಸುಸ್ತು, ರುಚಿ ಅಥವಾ ವಾಸನೆಯ ನಷ್ಟ, ಗಂಟಲು ನೋವು, ತಲೆನೋವು, ನೋವುಗಳು ಮತ್ತು ಸಿಡಿತ, ಅತಿಸಾರ, ಚರ್ಮದ ದದ್ದು, ಅಥವಾ ಕೈಬೆರಳುಗಳು ಅಥವಾ ಕಾಲ್ಬೆರಳುಗಳ ಬಣ್ಣ ಬಣ್ಣಗುಂದುವುದು,
ಮತ್ತು/ಅಥವಾ ಕೆಂಪು ಕಣ್ಣುಗಳು ಅಥವಾ ಕಣ್ಣಿನಲ್ಲಿ ಕಿರಿಕಿರಿ.
ಡಿಜಿಟೈ ಇಂಡಿಯಾ ತಂಡವು ದಕ್ಷಿಣ ದೆಹಲಿ ಮೂಲದ ವೈದ್ಯರಾಗಿರುವ ಶಗುನ್ ಗೋವಿಲ್ ಅವರೊಂದಿಗೆ ಮಾತನಾಡಿದಾಗ, ಅವರು “ಕೋವಿಡ್-19ರ ಲಕ್ಷಣಗಳು ಜ್ವರ ಮತ್ತು ಸಾಮಾನ್ಯ ನಿಗದಿಯಂತೆ ಕಾಣಬಹುದು, ಆದರೆ ಅದನ್ನು ನಿರ್ಲಕ್ಷಿಸಬಾರದು. ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದರೆ, ಸರಿಯಾದ ಮಾರ್ಗದರ್ಶನಕ್ಕಾಗಿ ಅವರು ಹತ್ತಿರದ ವೈದ್ಯರನ್ನು ಭೇಟಿ ಮಾಡಬೇಕು”.
ಆದ್ದರಿಂದ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ರಾಷ್ಟ್ರೀಯ ವೈದ್ಯಕೀಯ ಆಯೋಗವು ಧನ್ವಂತರಿ ದೇವತೆಯನ್ನು ಒಳಗೊಂಡ ತನ್ನ ಲಾಂಛನವನ್ನು ಬದಲಾಯಿಸಿದೆಯೇ? ಸತ್ಯ ಪರಿಶೀಲನೆ
3 comments
Pingback: ರತನ್ ಟಾಟಾರವರು ಇತ್ತೀಚೆಗೆ ಗುಂಡು ತಡೆದುಕೊಳ್ಳುವ ಮತ್ತು ಬಾಂಬ್ ತಡೆದುಕೊಳ್ಳುವ ಬಸ್ಸುಗಳನ್ನು ಭಾರತೀಯ ಸೇನೆ
Pingback: ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ - Digiteye Kannada
Pingback: ತಮಿಳುನಾಡಿನಲ್ಲಿ BHEL ತಿರುಚ್ಚಿ ಘಟಕವು ರಾಮ ಮಂದಿರಕ್ಕಾಗಿ ಈ ಬೃಹತ್ ಗಂಟೆಗಳನ್ನು ತಯಾರಿಸಿದೆಯೇ? ಸತ್ಯ ಪರಿಶೀಲನ