ಚೀನಾದಲ್ಲಿ ತಯಾರಾದ ಪಟಾಕಿಗಳನ್ನು ಜನರು ಖರೀದಿಸಬೇಡಿ ಎಂಬ ಸಂದೇಶವು ದೀಪಾವಳಿಗೂ ಮುನ್ನ ವಾಟ್ಸಾಪ್ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರ ಪ್ರಕಾರ ಚೀನಾದ ಪಟಾಕಿಗಳು ಕಾರ್ಬನ್ ಮಾನಾಕ್ಸೈಡ್ಗಿಂತ ಹೆಚ್ಚು ವಿಷಕಾರಿ ಹಾಗೂ ಅದು ಕ್ಯಾನ್ಸರ್ಗೆ ಕಾರಣವಾಗಬಹುದು. ಸಂದೇಶದ ಇನ್ನೊಂದು ಭಾಗದಲ್ಲಿ ವಿಶೇಷ ಚೀನೀ ಅಲಂಕಾರಿಕ ದೀಪಗಳು ಪಾದರಸವನ್ನು ಹೊಂದಿರುವುದರಿಂದ ಅವು ಕುರುಡುತನವನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ.
ಇದು ಹಿರಿಯ ತನಿಖಾ ಅಧಿಕಾರಿಗಳು ಜಾರಿಗೊಳಿಸಿದ, ಗೃಹ ಸಚಿವಾಲಯವು ಹಂಚಿಕೊಂಡಿರುವ ಸಲಹೆ ಎಂದು ಈ ಸಂದೇಶವು ಹೇಳಿಕೊಳ್ಳುತ್ತದೆ. ಪಾಕಿಸ್ತಾನವು ಭಾರತದ ಮೇಲೆ ನೇರ ದಾಳಿ ಮಾಡಲು ಸಾಧ್ಯವಿರದ ಕಾರಣ, ಭಾರತವನ್ನು ಸೋಲಿಸುವ ಸಲುವಾಗಿ ಅದು ಚೀನಾದೊಂದಿಗೆ ಕೈಜೋಡಿಸಿದೆ ಎಂದೂ ಅದರಲ್ಲಿ ಹೇಳಲಾಗಿದೆ.
ಈ ಸಂದೇಶವು ಹಲವು ಭಾರತೀಯ ಭಾಷೆಗಳಲ್ಲಿ ವೈರಲ್ ಆಗುತ್ತಿದೆ. ಡಿಜಿಟೈ ಇಂಡಿಯಾ ತಂಡಕ್ಕೆ ಈ ಹೇಳಿಕೆಯ ಮರಾಠಿ ಆವೃತ್ತಿಯು ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್ ಮೂಲಕ ದೊರಕಿತು.
FACT CHECK
ಈ ಸುತ್ತೋಲೆಯನ್ನು ಗೃಹ ಸಚಿವಾಲಯವು ಹೊರಡಿಸಿದೆಯೇ ಎಂದು ಪರಿಶೀಲಿಸಲು ಸಚಿವಾಲಯದ ಅಧಿಕೃತ ವೆಬ್ಸೈಟ್ಗೆ ಡಿಜಿಟೈ ಇಂಡಿಯಾ ತಂಡವು ಭೇಟಿ ನೀಡಿತು, ಆದರೆ ಅಂತರ್ಜಾಲದಲ್ಲಿ ಯಾವುದೇ ದಾಖಲೆ ಕಂಡುಬಂದಿಲ್ಲ.
ಸಂದೇಶದಲ್ಲಿ ಉಲ್ಲೇಖಿಸಿರುವಂತೆ ಹಿರಿಯ ತನಿಖಾ ಅಧಿಕಾರಿ ವಿಶ್ವಜಿತ್ ಮುಖರ್ಜಿ ಎಂಬ ಪ್ರೊಫೈಲ್ ಅನ್ನು ಹುಡುಕಲು ನಾವು ಕೀವರ್ಡ್ ಹುಡುಕಾಟವನ್ನು ಬಳಸಿದೆವು. ಅಂತಹ ಯಾವುದೇ ಹುದ್ದೆ ಇಲ್ಲ ಎಂದು ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಎರಡು ವಿಭಾಗಗಳಿದ್ದು ಅವುಗಳಲ್ಲಿ ಯಾವ ವಿಭಾಗದಲ್ಲಿಯೂ ಹಿರಿಯ ತನಿಖಾ ಅಧಿಕಾರಿಯ ಹುದ್ದೆ ಇಲ್ಲ. ಅಷ್ಟೇ ಅಲ್ಲದೆ, ಗೃಹ ಸಚಿವಾಲಯದಲ್ಲಿ ಈ ಹೆಸರಿನ ಯಾವುದೇ ಅಧಿಕಾರಿಯೂ ನಮಗೆ ಸಿಗಲಿಲ್ಲ.
ನಾವು ಸಾಮಾಜಿಕ ಜಲತಾಣಗಳಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ ನವೆಂಬರ್ 2020ರ ಪಿಐಬಿ ಸತ್ಯ ಪರಿಶೀಲನೆಯು ಕಂಡುಬಂತು, ಅದರಲ್ಲಿ ಈ ಹೇಳಿಕೆ ನಕಲಿ ಎಂದು ಅದು ತಳ್ಳಿಹಾಕಿದೆ.
#WhatsApp पर गृह मंत्रालय के कथित अधिकारी के नाम से वायरल मैसेज में दावा किया गया है कि चीन भारत में अस्थमा फैलाने और नेत्र रोग विकार उत्पन्न करने के लिए विशेष प्रकार के पटाखे और सजावटी लाइट्स भेज रहा है।#PIBFactCheck: यह दावा फर्जी है। गृह मंत्रालय ने ऐसी कोई सूचना नहीं दी है। pic.twitter.com/6s1qLp8b31
— PIB Fact Check (@PIBFactCheck) November 3, 2020
“ಉಬ್ಬಸ ಹರಡಲು ಮತ್ತು ಕಣ್ಣಿನ ಕಾಯಿಲೆಗಳನ್ನು ಉಂಟುಮಾಡಲು ಚೀನಾ ದೇಶವು ವಿಶೇಷ ರೀತಿಯ ಪಟಾಕಿಗಳು ಮತ್ತು ಅಲಂಕಾರಿಕ ದೀಪಗಳನ್ನು ಭಾರತಕ್ಕೆ ಕಳುಹಿಸುತ್ತಿದೆ ಎಂದು ಉಲ್ಲೇಖಿತ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ವೈರಲ್ ಸಂದೇಶವು ಹೇಳಿಕೊಂಡಿದೆ. ಇದು ಹೇಳಿಕೆ ನಕಲಿ. ಗೃಹ ಸಚಿವಾಲಯವು ಅಂತಹ ಯಾವುದೇ ಮಾಹಿತಿಯನ್ನು ನೀಡಿಲ್ಲ.”
Claim/ಹೇಳಿಕೆ:ಚೀನಾದಲ್ಲಿ ತಯಾರಾದ ಪಟಾಕಿಗಳನ್ನು ಖರೀದಿಸದಂತೆ ಗೃಹ ವ್ಯವಹಾರಗಳ ಸಚಿವಾಲಯ ಜನರಿಗೆ ಸಲಹೆ ನೀಡಿದೆ. ಭಾರತೀಯ ಜನರಲ್ಲಿ ಅಸ್ತಮಾ ಮತ್ತು ಕುರುಡುತನವನ್ನು ಉಂಟುಮಾಡುವ ವಿಶೇಷ ಪಟಾಕಿಗಳನ್ನು ಚೀನಾ ಕಳುಹಿಸುತ್ತಿದೆ ಎಂದು ಸಲಹಾ ಹೇಳುತ್ತದೆ.
Conclusion/ಕಡೆನುಡಿ:ಗೃಹ ವ್ಯವಹಾರಗಳ ಸಚಿವಾಲಯವು ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ. ಸಚಿವಾಲಯದಲ್ಲಿ ಅಸ್ತಿತ್ವದಲ್ಲಿಲ್ಲದ ಪೋಸ್ಟ್ಗೆ ಸಂದೇಶವನ್ನು ತಪ್ಪಾಗಿ ಆರೋಪಿಸಲಾಗಿದೆ.
Rating Misrepresentation:
[ಇದನ್ನೂ ಓದಿ: Image of beautiful marine animal Sea Pen passed off as Nagapushpa, a rare flower ; Is Tata Motors giving out gifts for the success of G20 summit in Delhi? Fact Check]
14 comments
Pingback: ಕೌನ್ ಬನೇಗಾ ಕರೋರ್ಪತಿಯಲ್ಲಿ ಮಧ್ಯ ಪ್ರದೇಶದ ಶಿವರಾಜ್ ಸಿಂಘ್ ಚೌಹಾನ್ ರವರನ್ನು ಕೆಣಕುವ ರಾಜಕೀಯ ಪ್ರಶ್ನೆಯನ್ನ
Pingback: 1982 ರ ಈ ಭಾರತೀಯ ಅಂಚೆ ಚೀಟಿಯು ಒಬ್ಬ ಮುಸ್ಲಿಂ ಕುಸ್ತಿಪಟು ಹಿಂದೂ ಕುಸ್ತಿಪಟುವನ್ನು ಹೊಡೆಯುತ್ತಿರುವುದನ್ನು ತೋರ
Pingback: ಹಮಾಸ್ ಇಸ್ರೇಲ್ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದ
Pingback: ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತ
Pingback: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನಿಧನರಾದರೇ? ನಕಲಿ ಟ್ವಿಟರ್ ಖಾತೆಯ ಹೇಳಿಕೆ ವೈರಲ್ ಆಗಿದೆ; ಸತ್ಯ ಪರ
Pingback: ಭಾರತದಾದ್ಯಂತ ಎಲ್ಲಾ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆಯೇ? ಸತ್ಯ ಪರಿಶೀಲನೆ - Digi
Pingback: ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ - Digiteye Kannada
Pingback: ಇಲ್ಲ, ಈ ವೀಡಿಯೊ ಒಬ್ಬ ಬ್ರಾಹ್ಮಣ ಶಿಕ್ಷಕರು ದಲಿತ ಮಗುವನ್ನು ಥಳಿಸುವುದನ್ನು ತೋರಿಸುವುದಿಲ್ಲ; ಸತ್ಯ ಪರಿಶೀಲನೆ -
Pingback: ಇಂದಿರಾ ಗಾಂಧಿಯೊಂದಿಗೆ ಕನ್ನಡದ ವರನಟ ಡಾ। ರಾಜಕುಮಾರ್ ಅವರ ಹಳೆಯ ಛಾಯಾಚಿತ್ರದಲ್ಲಿ ಮೋದಿ? Fact Check - Digiteye Kannada
Pingback: ಇಲ್ಲ, ರಾಹುಲ್ ಗಾಂಧಿಯವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಘೋಷಿಸಿಲ್ಲ - Digiteye Kanna
Pingback: ಸೇನೆಯ ಖಾಸಗಿ ವಾಹನಗಳಿಗೂ ಟೋಲ್ ಶುಲ್ಕ ವಿನಾಯಿತಿಯ ವಿಸ್ತರಣೆ? ವೈರಲ್ ಪೋಸ್ಟ್ ಕುರಿತು ಸತ್ಯ ಪರಿಶೀಲನೆ - Digiteye Kannada
Pingback: ವಿಶ್ವಕಪ್ 2023ರ ಫೈನಲ್ನಲ್ಲಿ 1.5 ಲಕ್ಷ ಜನರು ಹನುಮಾನ್ ಚಾಲೀಸಾ ಪಠಿಸಿದರಾ? ಸತ್ಯ ಪರಿಶೀಲನೆ - Digiteye Kannada
Pingback: ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ - Digiteye Kannada
Pingback: ಇಲ್ಲ, ರಘುರಾಮ್ ರಾಜನ್ ಎಂದಿಗೂ ಮೋದಿಯ ಬಗ್ಗೆ ಯಾವುದೇ ಕಟುವಾದ ಟೀಕೆಗಳನ್ನು ಮಾಡಿಲ್ಲ; ಸತ್ಯ ಪರಿಶೀಲನೆ - Digiteye Kannada