ಹೇಳಿಕೆ/Claim: ಸೈನಿಕರು ಅಥವಾ ಅಗ್ನಿವೀರರನ್ನು ನೇಮಿಸಿಕೊಳ್ಳಲು ಅಗ್ನಿಪಥ್ ಯೋಜನೆಯನ್ನು ಮಾರ್ಪಾಡುಗಳೊಂದಿಗೆ ಮರುಪ್ರಾರಂಭಿಸಲಾಗಿದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಸರ್ಕಾರಿ ಸ್ವಾಮ್ಯದ ಪಿ.ಐ.ಬಿ ಈ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ಅದನ್ನು ನಕಲಿ ಎಂದು ಹೇಳಿದೆ.
ರೇಟಿಂಗ್: ದಾರಿತಪ್ಪಿಸುವ ಸುದ್ದಿ–
**************************************************************************************
ಸತ್ಯ ಪರಿಶೀಲನೆ ವಿವರಗಳು
ಅಗ್ನಿಪಥ್ ಯೋಜನೆಯನ್ನು ಎನ್‌ಡಿಎ ಸರ್ಕಾರವು ಸೈನಿಕ ಸಮ್ಮಾನ್ ಯೋಜನೆ ಎಂದು ಮರುಪ್ರಾರಂಭಿಸಲಿದೆ ಎಂಬ ಹೇಳಿಕೆಯೊಂದಿಗೆ ಒಂದು ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
आग्निवीर में बदलाव की खबर आ रही है,
क्या ये खबर सही है..? #आग्निवीर #G72024 #लड़कों_का_हक_मत_मारो pic.twitter.com/toCk41mE39— Vinod Meena (@vkmeena443) June 15, 2024
ಇದರ ಹಿನ್ನೆಲೆ ಏನೆಂದರೆ, ಪ್ರತಿಪಕ್ಷ ಇಂಡಿಯಾ ಬ್ಲಾಕ್ ಈ ಯೋಜನೆಯನ್ನು ಕಟುವಾಗಿ ವಿರೋಧಿಸಿದೆ ಮತ್ತು ರಕ್ಷಣಾ ಪಡೆಗಳ ಮೂರೂ ಶಾಖೆಗಳಿಗೆ ಕಮಿಷನ್ಡ್ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿನ ಸೈನಿಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲು ಸೆಪ್ಟೆಂಬರ್ 2022 ರಲ್ಲಿ ಜಾರಿಗೊಂಡ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದೆ. ಈ ವ್ಯವಸ್ಥೆಯ ಅಡಿಯಲ್ಲಿ ನೇಮಕಗೊಂಡ ಸಿಬ್ಬಂದಿಗಳನ್ನು ಅಗ್ನಿವೀರರು ಎಂದು ಕರೆಯಲಾಗುವುದು. ಈ ಸಂದೇಶವನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.
ಅಗ್ನಿಪಥ್ (ಅಗ್ನಿವೀರ್) ಯೋಜನೆಯ ಮರುಪರಿಶೀಲನೆಗಾಗಿ ಎನ್.ಡಿ.ಎ ಒಳಗಯೇ ಮನವಿಗಳು ಎದ್ದ ನಂತರದಿಂದ ಈ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಗಮನ ಸೆಳೆಯಿತು.
FACT-CHECK
ಅಧೀಕೃತ ಮೂಲಗಳನ್ನು ಹುಡುಕಿದಾಗ, ನಮಗೆ ಯಾವುದೇ ವರದಿ ಅಥವಾ ಬಿಡುಗಡೆಯಾದ ಸುದ್ದಿ ದೊರಕಿಲ್ಲ. ಇದನ್ನು ಘೋಷಿಸಲಾಗಿದ್ದರೆ, ಇದು ಎಲ್ಲಾ ಪಕ್ಷಗಳ ಅಭಿಪ್ರಾಯಗಳೊಂದಿಗೆ ದಿನವಿಡೀ ಮುಖ್ಯಾಂಶಗಳಲ್ಲಿರುತ್ತಿತ್ತು. ನಾವು ಅಧಿಕೃತ ಪಿ.ಐ.ಬಿ ಹೇಳಿಕೆಗಾಗಿ ಹೆಚ್ಚಿನ ಹುಡುಕಾಟ ನಡೆಸಿದಾಗ, ಅಗ್ನಿಪಥ್ ಯೋಜನೆಯನ್ನು ಮರುಪ್ರಾರಂಭಿಸಲಾಗಿದೆ ಎಂಬ ವರದಿಗಳನ್ನು ಸರ್ಕಾರದ ಪಿ.ಐ.ಬಿ ಭಾನುವಾರ ತಳ್ಳಿಹಾಕಿದೆಯೆಂದು ಮತ್ತು ಸಾಮಾಜಿಕ ಜಾಲತಣಗಳ ಈ ಸಂದೇಶವು ನಕಲಿ ಎಂದು ಹೇಳಿದೆಯೆಂಬುದು ಕಂಡುಬಂತು.
“ಅಗ್ನಿಪಥ್ ಯೋಜನೆಯನ್ನು ಪುನರ್ವಿಮರ್ಶಿಸಿ, 7 ವರ್ಷಗಳವರೆಗೆ ಕರ್ತವ್ಯದ ಅವಧಿಯ ವಿಸ್ತರಣೆ, ಶೇಕಡಾ 60 ರಷ್ಟು ಕಾಯಂ ಸಿಬ್ಬಂದಿ ಮತ್ತು ಆದಾಯ ಹೆಚ್ಚಳ ಸೇರಿದಂತೆ ಹಲವಾರು ಬದಲಾವಣೆಗಳೊಂದಿಗೆ ಅದನ್ನು ‘ಸೈನಿಕ್ ಸಮ್ಮಾನ್ ಯೋಜನೆ’ ಎಂದು ಮರುಪ್ರಾರಂಭಿಸಲಾಗಿದೆ ಎಂದು #fake ವಾಟ್ಸಾಪ್ ಸಂದೇಶವು ಹೇಳುತ್ತದೆ … ಭಾರತ ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ತನ್ನ X ಹ್ಯಾಂಡಲ್‌ನಲ್ಲಿ ಸ್ಪಷ್ಟಪಡಿಸಿದೆ.
✔️GOI has taken no such decision pic.twitter.com/1a3zmuVjfk
— PIB Fact Check (@PIBFactCheck) June 16, 2024
ಇದಲ್ಲದೆ, ನಕಲಿ ಸಂದೇಶವು ಹಲವಾರು ಲೇಖನದ ತಪ್ಪುಗಳನ್ನು ಹೊಂದಿದ್ದು ಇದು ಸರ್ಕಾರದ ಹೇಳಿಕೆಯೇ ಎಂಬ ಪ್ರಶ್ನೆ ಮೂಡುತ್ತದೆ. ಆದ್ದರಿಂದ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆಯೇ? ಸತ್ಯ ಪರಿಶೀಲನೆ