ಹೇಳಿಕೆ/Claim: ಮುಂಬರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರವರ ಬೆಂಗಳೂರಿನ ರ್ಯಾಲಿ ಪೋಸ್ಟರ್ಗಳಲ್ಲಿ ಭಾರತದ ಧ್ವಜದ ಹಸಿರು ಬಣ್ಣ ಮೇಲಿದ್ದು ಧ್ವಜವು ತಲೆಕೆಳಗಾಗಿ ಕಾಣತ್ತದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಮಧ್ಯಪ್ರದೇಶದ ಜಬಲ್ಪುರದ ಜೂನ್ 2023ರ ಹಳೆಯ ವೀಡಿಯೊವನ್ನು ಏಪ್ರಿಲ್ 22, 2024 ರಂದು ಬೆಂಗಳೂರಿನದ್ದೆಂದು ಹೇಳಿ ಹಂಚಿಕೊಳ್ಳಲಾಗಿದೆ.
ರೇಟಿಂಗ್:ತಪ್ಪು ನಿರೂಪಣೆ —
ಸತ್ಯ ಪರಿಶೀಲನೆ ವಿವರಗಳು:
2024 ರ ಏಪ್ರಿಲ್ 23 ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಭೇಟಿ ನೀಡುವ ಮೊದಲು ಆಕೆಯ ಹೋರ್ಡಿಂಗ್ಗಳನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಭಾರತೀಯ ತ್ರಿವರ್ಣ ಧ್ವಜವನ್ನು ಅವಮಾನಿಸುವ ರೀತಿಯಲ್ಲಿ ತಲೆಕೆಳಗಾದ ಧ್ವಜವನ್ನು ಬಳಸಲಾಗಿದೆ ಎಂದು ಇದರೊಂದಿಗಿನ ಹೇಳಿಕೆ ಸೂಚಿಸುತ್ತದೆ. ಹೋರ್ಡಿಂಗ್ ಭಾರತದ ಧ್ವಜದ ತಲೆಕೆಳಗಾದ ತ್ರಿವರ್ಣ ಛಾಯೆಗಳನ್ನು ತೋರಿಸುತ್ತದೆ.
ಪ್ರಿಯಾಂಕ ವಡ್ರಾಳ ಕಾಲ ಕೆಳಗೆ, ತಲೆಕೆಳಗಾದ ಭಾರತದ ಧ್ವಜವಿರುವ ಬ್ಯಾನರ್ ಗಳು ಬೆಂಗಳೂರಿನಲ್ಲಿ ರಾರಾಜಿಸತ್ತಿವೆ.
ಭಾರತದ ಗರ್ವ ನಮ್ಮ ತ್ರಿವರ್ಣಧ್ವಜವನ್ನ ಗೌರವಿಸಲು ಬಾರದವರಿಗೆ ದೇಶ ಆಳುವ ಹಂಬಲ… pic.twitter.com/q9fs7MmoUo— ನಾಯಕಿ Nayakii 🇮🇳 ( Modi’s Family) (@nammsiem) April 22, 2024
ಇದನ್ನು ಹಲವಾರು ಹೇಳಿಕೆಗಳು ಮತ್ತು ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. Xನಲ್ಲಿರುವ ಅಂತಹದೇ ಒಂದು ಪೋಸ್ಟ್, “ಬೆಂಗಳೂರಿನಲ್ಲಿ ಮುಂಬರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರವರ ರ್ಯಾಲಿ ಪೋಸ್ಟರ್ಗಳಲ್ಲಿ ಭಾರತದ ಧ್ವಜವು ಮೇಲ್ಭಾಗದಲ್ಲಿ ಹಸಿರು ಬಣ್ಣದೊಂದಿಗೆ ತಲೆಕೆಳಗಾಗಿ ಕಾಣುತ್ತದೆ, ವೀಡಿಯೊ ವೈರಲ್” ಎಂದು ಹೇಳಿದೆ.
Upcoming Congress leader Priyanka Gandhi Vadra rally posters in Bengaluru show the Indian flag upside down, with green on top, video goes viral pic.twitter.com/U51UNKrpVu
— Megh Updates 🚨™ (@MeghUpdates) April 22, 2024
ಮತ್ತೊಬ್ಬ X ಬಳಕೆದಾರರು, “ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಮುಂಬರುವ ರ್ಯಾಲಿಯ ಪ್ರಿಯಾಂಕಾ ಗಾಂಧಿ ವಾದ್ರಾರವರ ಪೋಸ್ಟರ್ಗಳಲ್ಲಿ ಭಾರತದ ಧ್ವಜವು ತಲೆಕೆಳಗಾಗಿ ಹಸಿರು ಬಣ್ಣ ಮೇಲೆ ಕಾಣುತ್ತದೆ. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವು ಭಾರತ ಮತ್ತು ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಹಂಚಿಕೊಂಡು ಇಲ್ಲಿ ಮತ್ತು ಇಲ್ಲಿ ಕಾಣುವಂತೆ ಹಲವಾರು ಟೀಕೆಗಳನ್ನು ಮಾಡಲಾಗಿದೆ.
FACT CHECK
ಡಿಜಿಟೈ ಇಂಡಿಯಾ ತಂಡವು ವೀಡಿಯೊದ ಪ್ರಮುಖ ಫ್ರೇಮ್ಗಳನ್ನು ತೆಗೆದುಕೊಂಡು ಮೂಲ ವೀಡಿಯೊ ಅಥವಾ ಸಂಬಂಧಿತ ದೃಶ್ಯಗಳಿಗಾಗಿ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿತು. ವೀಡಿಯೊ ಬೆಂಗಳೂರಿನದ್ದಲ್ಲ, ಬದಲಾಗಿ ಮಧ್ಯಪ್ರದೇಶದಿಂದ ಬಂದದ್ದು, ಮತ್ತಿದು ರಾಜ್ಯದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜೂನ್ 12, 2023 ರ ದಿನಾಂಕದ ವೀಡಿಯೊ ಎಂದು ಫಲಿತಾಂಶಗಳು ತೋರಿಸಿವೆ.
उल्टे तिरंगे के साथ @INCMP की चुनावी शुरूआत ?! pic.twitter.com/yI87pyvVOt
— Prahlad Singh Patel (मोदी का परिवार) (@prahladspatel) June 12, 2023
ಮಧ್ಯಪ್ರದೇಶದ ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ಕಾರ್ಮಿಕ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ರವರು ಈ ವೀಡಿಯೊವನ್ನು ಹಂಚಿಕೊಂಡಿದ್ದರು. ಆತ ಅದರಲ್ಲಿ: “@INCMP ತಲೆಕೆಳಗಾದ ತ್ರಿವರ್ಣದೊಂದಿಗೆ ಚುನಾವಣೆಯನ್ನು ಪ್ರಾರಂಭಿಸುತ್ತಾರಾ?!” ಎಂದು ಬರೆದಿದ್ದರು. ಆತ ಅದೇ ವೀಡಿಯೊವನ್ನು ಫೇಸ್ಬುಕ್ನಲ್ಲಿಯೂ ಪೋಸ್ಟ್ ಮಾಡಿದ್ದರು, ಅದರ ಶೀರ್ಷಿಕೆ ಹೀಗಿದೆ :उल्टे तिरंगे के साथ Indian National Congress – Madhya Pradesh की चुनावी शुरूआत? ये संस्कारधानी जबलपुर है,जहां शताब्दी पहले पणतंत्र भारत में टाउनहॉल पर” [ಕನ್ನಡದ ಅನುವಾದ ಹೀಗಿದೆ:”ಟೌನ್ ಹಾಲ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಮೊದಲು ಧ್ವಜ ಸತ್ಯಾಗ್ರಹ ಆರಂಭಿಸಿದ ಸಾಂಸ್ಕೃತಿಕ ರಾಜಧಾನಿ ಜಬಲ್ಪುರ್. ಮತ್ತೀಗ ಇದು ಇಂದಿನ ಚಿತ್ರ. ನೀವೇ ನಿರ್ಧರಿಸಿ.”]
2023ರ ವಿಧಾನಸಭಾ ಚುನಾವಣೆಗಾಗಿ ಜಬಲ್ಪುರದಲ್ಲಿ ಪ್ರಿಯಾಂಕಾ ಗಾಂಧಿಯವರು ಪ್ರಚಾರವನ್ನು ಪ್ರಾರಂಭಿಸಿದಾಗ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಹೇಳಿದ ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಝೀ ನ್ಯೂಸ್ನಂತಹ ಸುದ್ದಿವಾಹಿನಿಗಳು ಈ ಸುದ್ದಿಯನ್ನು ಪ್ರಸಾರ ಮಾಡಿದ್ದವು. ನಂತರ, ಈ ಕುರಿತು ಪ್ರಕರಣ ದಾಖಲಿಸಲಾಗುವುದು ಎಂದು ನಯಿ ದುನಿಯಾ ವರದಿ ಮಾಡಿತ್ತು. ಹಾಗಾಗಿ ಈ ವೀಡಿಯೊ, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಿಯಾಂಕಾ ಗಾಂಧಿಯವರ ಬೆಂಗಳೂರು ಭೇಟಿಗೆ ಸಂಬಂಧಿಸಿದ್ದಲ್ಲ.
ಇದನ್ನೂ ಓದಿ:
ರಾಹುಲ್ ಗಾಂಧಿಯವರು ಕಾಂಗ್ರೆಸ್ಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಧ್ವನಿ ಬದಲಾಯಿಸಿದ ವೀಡಿಯೊ; ಸತ್ಯ ಪರಿಶೀಲನೆ
ಪಿ.ವಿ ನರಸಿಂಹರಾವ್ ಅವರ ಪುತ್ರ ಭಾರತ ರತ್ನ ಸ್ವೀಕರಿಸುವಾಗ ಖರ್ಗೆಯವರು ಚಪ್ಪಾಳೆ ತಟ್ಟಲಿಲ್ಲವೇ? ಸತ್ಯ ಪರಿಶೀಲನೆ