ಹೇಳಿಕೆ/Claim: ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಮೀಸಲಾತಿಯನ್ನು
ರದ್ದುಗೊಳಿಸಿದೆ.
ಕಡೆನುಡಿ/Conclusion: ಸುಳ್ಳು. ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ
ಕಾಲೇಜುಗಳಿಂದ ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಹಿಂದಿನ ಅಖಿಲೇಶ್ ಯಾದವರ ಸಮಾಜವಾದಿ ಪಕ್ಷದ ಸರ್ಕಾರವೇ ಈ
ನಿಯಮವನ್ನು ಜಾರಿಗೆ ತಂದಿತ್ತು.
ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆ
ಎಂಬ ಹೇಳಿಕೆಯೊಂದಿಗೆ, ಪೋಸ್ಟರ್ ಹೊಂದಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.”ಯುಪಿ ಸರ್ಕಾರಿ
ಶಾಲೆಗಳಲ್ಲಿ ನರ್ಸರಿಯಿಂದ ಆಂಗ್ಲ ಭಾಷೆಯನ್ನು ಪರಿಚಯಿಸಲಾಗುವುದು”; ಎಂದೂ ಸಹ ಬರಹ ಹೇಳಿತು. ಪೋಸ್ಟರ್‌ನಲ್ಲಿರುವ ಇನ್ನೊಂದು ಶೀರ್ಷಿಕೆ ಹೀಗಿದೆ: ” ನ್ಯಾಯಪೂರ್ಣವಲ್ಲದ ಜಾತಿ ಆಧಾರಿತ ಮೀಸಲಾತಿಗಳನ್ನು ಕೊನೆಗೊಳಿಸುವತ್ತ ಒಂದು ಬೃಹತ್ ಹೆಜ್ಜೆ”;
ಇದನ್ನು ಹಲವಾರು ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ”
What? No wonder @RahulGandhi was insisting on caste sensus! pic.twitter.com/Trpiz4zwMK
— Suby #ReleaseSanjivBhatt (@Subytweets) February 7, 2024
”
ಮತ್ತೊಂದರಲ್ಲಿ ಹೀಗೆ ಹೇಳಲಾಗಿದೆ: “ದಯವಿಟ್ಟು SCಗಳು, STಗಳು, OBCಗಳು, ಅಲ್ಪಸಂಖ್ಯಾತರು: “ಮುಸ್ಲಿಮರು”; “ಕ್ರೈಸ್ತ
ಧರ್ಮ”;ದವರನ್ನು ಎಚ್ಚರಿಸಿ. ಇದು ದುರಂತದ ಆರಂಭ (sic)”; ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.
FACT CHECK
ಡಿಜಿಟೈ ಇಂಡಿಯಾ ತಂಡವು ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿಯಲು ಹುಡುಕಿದಾಗ, 2017ರಲ್ಲಿ ಆಗಿನ ಸಮಾಜವಾದಿ ಪಕ್ಷದ (SP)
ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ ಹಲವಾರು ಹಳೆಯ ಸುದ್ದಿ ವರದಿಗಳನ್ನು ನಾವು ಕಂಡುಕೊಂಡೆವು, ಖಾಸಗಿ ವೈದ್ಯಕೀಯ
ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಯಾವುದೇ ಮೀಸಲಾತಿ ಇರುವುದಿಲ್ಲ ಎಂದು ಅವುಗಳಲ್ಲಿ ಸ್ಪಷ್ಟವಾಗಿತ್ತು. ಆರಂಭದಲ್ಲಿ, ಯೋಗಿ
ಆದಿತ್ಯನಾಥ್ ಸರ್ಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ಕೊನೆಗೊಳಿಸಿತು ಎಂದು ಇಂಡಿಯಾ ಟುಡೇ ವರದಿ
ಮಾಡಿತ್ತು ಮತ್ತು ನಂತರ ಇಲ್ಲಿ ಸ್ಪಷ್ಟೀಕರಣವನ್ನು ನೀಡಿತ್ತು.
ಆಗಿನ ವೈದ್ಯಕೀಯ ಶಿಕ್ಷಣ ಮಹಾನಿರ್ದೇಶಕರಾದ ಡಾ.ವಿ.ಎನ್. ತ್ರಿಪಾಠಿಯವರು ಮಾರ್ಚ್ 10, 2017 ರಂದು ಆದೇಶವನ್ನು ಹೊರಡಿಸಿದ್ದರು ಮತ್ತು ಅದು ತಪ್ಪಾಗಿ ವರದಿಯಾದಾಗ, ಉತ್ತರ ಪ್ರದೇಶದಲ್ಲಿರುವ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು ಹೊಸ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತವೆ ಎಂಬ ಅಂಶವನ್ನು ಅವರು ಪುನರುಚ್ಚರಿಸಿದ್ದರು. 2017 ರಲ್ಲಿ ಈ ಹೇಳಿಕೆಯನ್ನು ನಿರಾಕರಿಸಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿ ಮಾಡಲಾಗಿತ್ತು. ಆ ಆದೇಶದಿಂದಾಗಿ ಈ ಖಾಸಗಿ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಸೀಟುಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಅಡಿಯಲ್ಲಿ ಬಂದಿದ್ದವು. ಆದರೆ, ಅಂತಿಮವಾಗಿ ಈ ನಿರ್ಧಾರವನ್ನು ಜಾರಿಗೆ ತರಲಾಗಿದ್ದು ಯೋಗಿ ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿ.
ಇದರ ವಿನಃ, ಉತ್ತರ ಪ್ರದೇಶದಲ್ಲಿ 2006 ರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತರ ಪ್ರದೇಶ (ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ) ಕಾಯ್ದೆಯಡಿಯಲ್ಲಿ ಮೀಸಲಾತಿಗಳನ್ನು ನಿರ್ದಿಷ್ಟಪಡಿಸಲಾಗಿತ್ತು, ಇದು ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳೆರಡಕ್ಕೂ ಅನ್ವಯಿಸುತ್ತದೆ. ಈ ಕಾಯ್ದೆಯಡಿಯಲ್ಲಿ ಪರಿಶಿಷ್ಟ ಜಾತಿಗಳಿಗೆ 21%, ಪರಿಶಿಷ್ಟ ಪಂಗಡಳಿಗೆ 2% ಮತ್ತು ಇತರ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ ನೀಡಲಾಗಿತ್ತು. ಆದರೆ, ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ಈ ಮೀಸಲಾತಿ ಅನ್ವಯವಾಗುವಂತಿರಲಿಲ್ಲ.
ಖಾಸಗಿ ಅನುದಾನರಹಿತ ಮತ್ತು ಸ್ವಯಂ ಹಣಕಾಸು ಪೂರೈಸುವ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಮೀಸಲಾತಿ ನೀಡುವುದು ಭಾರತದ
ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಪೀಠವು ಗಮನಿಸಿದಾಗ ಖಾಸಗಿ ಕಾಲೇಜುಗಳನ್ನು ಹೊರಗಿಡುವ
ನಿರ್ಧಾರವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು 2011ರ ತನ್ನ ತೀರ್ಪಿನಲ್ಲಿ ಎತ್ತಿಹಿಡಿಯಿತು.
ಇದನ್ನೂ ಓದಿ:
ಇಂಡಿಯಾ ಮೈತ್ರಿಕೂಟವು 50% ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿಯವರು ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿಶೀಲನೆ