Don't Miss

ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

ಹೇಳಿಕೆ/Claim: “ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿರುವುದಾದರೆ, ನಾವು ಸೋತರೂ ಪರವಾಗಿಲ್ಲ. ಹಿಂದೂಗಳಲ್ಲಿ ಮತ ಯಾಚನೆ ಮಾಡುವ ಮಟ್ಟಕ್ಕೆ ಡಿಎಂಕೆ ಇಳಿಯುವುದಿಲ್ಲ” ಎಂದು ಸ್ಟಾಲಿನ್ ಹೇಳಿದರು.

ಕಡೆನುಡಿ/Conclusion:  ಸುಳ್ಳು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಇಂತಹ ಹೇಳಿಕೆಗಳನ್ನು ಹೊಂದಿರುವ ಯಾವುದೇ ವರದಿಯನ್ನು ನ್ಯೂಸ್ 7 ತಮಿಳು ಪ್ರಕಟಿಸಿಲ್ಲ. ಸ್ಟಾಲಿನ್ ಅವರು ಈ ಮಾತುಗಳನ್ನು ಹೇಳುತ್ತಿರುವಂತೆ  ತೋರಿಸಲು ನ್ಯೂಸ್7 ತಮಿಳಿನ ಹಳೆಯ ಸುದ್ದಿಯೊಂದನ್ನು ಬದಲಾಯಿಸಲಾಗಿದೆ.

ರೇಟಿಂಗ್:ತಪ್ಪು ನಿರೂಪಣೆ —

ಸತ್ಯ ಪರಿಶೀಲನೆ ವಿವರಗಳು

ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರು ಹಿಂದೂಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಒಂದು ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ತಮಿಳುನಾಡು ಮುಖ್ಯಮಂತ್ರಿಯವರ ಚಿತ್ರವಿರುವ ಸುದ್ದಿ ವರದಿಯ ಚಿತ್ರವನ್ನು  ಒಳಗೊಂಡಿತ್ತು.

ಸ್ಕ್ರೀನ್‌ಶಾಟ್ ನಲ್ಲಿ ನ್ಯೂಸ್7 ತಮಿಳಿನ ಲಾಂಛನವನ್ನು ನೋಡಬಹುದು. “ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿರುವುದಾದರೆ, ನಾವು ಸೋತರೂ ಪರವಾಗಿಲ್ಲ. ಹಿಂದೂಗಳಲ್ಲಿ ಮತ ಯಾಚನೆ ಮಾಡುವ ಮಟ್ಟಕ್ಕೆ ಡಿಎಂಕೆ ಇಳಿಯುವುದಿಲ್ಲ” ಎಂದು ಸ್ಟಾಲಿನ್ ಉದ್ದೇಶಪೂರ್ವಕವಾಗಿ ಹೇಳಿರುವುದಾಗಿ ಪೋಸ್ಟ್ ಹೇಳುತ್ತದೆ.

ಪೋಸ್ಟ್ ಇಲ್ಲಿ ನೋಡಿ:

ಅದನ್ನು ಇಲ್ಲಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾಗಿದೆ.

FACT CHECK

ರಾಜಕೀಯ ನಾಯಕರಾದವರೊಬ್ಬರು ಇಂತಹ ಹೇಳಿಕೆ ನೀಡುವ ಅಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇದು ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ ಡಿಜಿಟೈ ಇಂಡಿಯಾ ತಂಡವು ಇದನ್ನು ಸತ್ಯ ಪರಿಶೀಲನೆಗೆ ಕೈಗೆತ್ತಿಕೊಂಡಿತು. ಮೊದಲಿಗೆ, ನಾವು ಸುದ್ದಿ ವಾಹಿನಿಯ ಸುದ್ದಿ ವರದಿಗಳನ್ನು ಪರಿಶೀಲಿಸಿದೆವು, ಆದರೆ ಏನೂ ದೊರಕಲಿಲ್ಲ. ಸಾಮಾಜಿಕ ಜಾಲತಾಣಗಳ ಇತರ ಪೋಸ್ಟ್‌ಗಳು ಸಹ ಸುದ್ದಿ ವರದಿಗೆ ಸಂಬಂಧಿಸಿದಂತೆ ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಗೂಗಲ್ ನ್ಯೂಸ್ ಕೂಡ ಅಂತಹ ಯಾವುದೇ ವರದಿಯನ್ನು ಹೊಂದಿರಲಿಲ್ಲ.

ನಾವು ಚಿತ್ರದ ಕೀಫ್ರೇಮ್ ಪರಿಶೀಲಿಸಿದಾಗ, ಫೆಬ್ರವರಿ 15, 2019, ಮಧ್ಯಾಹ್ನ 02:00  ಗಂಟೆಯ ಎಂದು ಬರೆದ ದಿನಾಂಕವನ್ನು ಕಂಡೆವು, ಆದರೆ ಆಗ ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿರಲಿಲ್ಲ. ಆಗ ಎಐಎಡಿಎಂಕೆಯ ಪಳನಿಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ನಿಜಾಂಶದಲ್ಲಿ, ಆಗಿನ ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿಯವರ ಹೇಳಿಕೆಯನ್ನು ಹೊಂದಿರುವ ನ್ಯೂಸ್7 ತಮಿಳು ವಾಹಿನಿಯ ವರದಿಯೊಂದು  2019ರಲ್ಲಿ ಅದೇ ದಿನಾಂಕ ಮತ್ತು ಸಮಯದೊಂದಿಗೆ ಇರುವುದು ನಮಗೆ ಕಂಡುಬಂದಿತು, ಆ ವರದಿಯಲ್ಲಿ ಆತ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಹಣಕಾಸಿನ ನೆರವು ನೀಡುತ್ತಿರುವುದನ್ನು ಕಾಣಬಹುದು. ಹಳೆಯ ಚಿತ್ರವನ್ನು ಬದಲಾಯಿಸಲಾಗಿದೆ ಆದರೆ ದಿನಾಂಕವನ್ನು ಬದಲಾಯಿಸಲಾಗಿಲ್ಲ, ಇದರಿಂದಾಗಿ ಅದು ಬದಲಾದ ಚಿತ್ರ ಎಂಬ ಅಂಶವು ಹೊರಬಿತ್ತು.

ಸ್ಟಾಲಿನ್ ಅವರು ಮೇ 7, 2021ರಂದು ತಮಿಳುನಾಡಿನ ಮುಖ್ಯಮಂತ್ರಿಗಳಾದರು. ಡಿಎಂಕೆ ಹಿಂದೂ ವಿರೋಧಿಯೆಯಲ್ಲ ಎಂದು ಎಂ.ಕೆ.ಸ್ಟಾಲಿನ್ ಸ್ಪಷ್ಟಪಡಿಸುತ್ತಾ ಬಂದಿದ್ದಾರೆ ಎಂಬುದು ಗಮನಾರ್ಹ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅಕ್ಟೋಬರ್ 2023ರಲ್ಲಿ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆಗಳು ಸುದ್ದಿ ಮಾಡಿದಾಗ, ಸ್ಟಾಲಿನ್ ಅವರು ಹಿಂದೂ ಧರ್ಮದ ಬಗ್ಗೆ ಹೇಳಿಕೆಗಳನ್ನು ನೀಡದಿರುವಂತೆ ಎಲ್ಲಾ ಡಿಎಂಕೆ ನಾಯಕರಿಗೆ ಬಹಿರಂಗವಾಗಿ ಹೇಳಿದ್ದರು.

ಆದ್ದರಿಂದ, 2019ರ ಈ ವೀಡಿಯೊದಲ್ಲಿ ತಿದ್ದುಪಡಿ ಮಾಡಿ ಮಾಜಿ ಮುಖ್ಯ ಮಂತ್ರಿ ಪಳನಿಸ್ವಾಮಿಯವರ ಚಿತ್ರದ ಮೇಲೆ ಸ್ಟಾಲಿನ್ ಅವರ ಚಿತ್ರವನ್ನು ಸೂಪರ್ ಇಂಪೋಸ್ ಮಾಡಲಾಗಿದೆ.

ಇದನ್ನೂ ಓದಿ:

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ

5 comments

Leave a Reply

Your email address will not be published. Required fields are marked *

*