Don't Miss

ಮೊರ್ಬಿ ಸೇತುವೆ ಕುಸಿತದ ನಂತರ ತೆಲಂಗಾಣದಲ್ಲಿ ರಾಹುಲ್ ಗಾಂಧಿ ನೃತ್ಯ? ಸತ್ಯ ಪರಿಶೀಲನೆ

ಹೇಳಿಕೆ/Claim: ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಕುಸಿದ ನಂತರ ಕಾಂಗ್ರೆಸ್ ನಾಯಕರು ಸಂತೋಷದಿಂದ ನೃತ್ಯ ಮಾಡುತ್ತಿರುವುದು.

ಕಡೆನುಡಿ/Conclusion: ಸುಳ್ಳು. ಇದು ಸೇತುವೆ ಕುಸಿತದ ದುರಂತದ ಮೊದಲು ಅಪ್‌ಲೋಡ್ ಮಾಡಿದ ಘಟನೆಯ ವೀಡಿಯೊ ಆಗಿತ್ತು.

ರೇಟಿಂಗ್: ತಪ್ಪು ನಿರೂಪಣೆ—

ಸತ್ಯ ಪರಿಶೀಲನೆ ವಿವರಗಳು

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರು ಸ್ಥಳೀಯರೊಂದಿಗೆ ಸೇರಿ ಕುಣಿಯುತ್ತಿರುವ ಒಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಮೋರ್ಬಿಯಲ್ಲಿ ಸೇತುವೆ ಕುಸಿದ ನಂತರ ಅವರು ಸಂತಸದಿಂದ ಕುಣಿಯುತ್ತಿದ್ದರು ಎಂಬುದು ಈ ವೀಡಿಯೊದಲ್ಲಿ ನೀಡಲಾದ ಹೇಳಿಕೆ.

ಗುಜರಾತ್‌ನಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ದುರಂತದೆಡೆಗೆ ಕಾಂಗ್ರೆಸ್ ನಾಯಕರು ಬೇಜವಾಬ್ದಾರಿ ತೋರಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕುಣಿಯುತ್ತಿದ್ದರು ಎಂಬುದು ಹಿನ್ನೆಲೆ. ಅಂತಹ ಹಲವಾರು ಪೋಸ್ಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಲಕ್ಷಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ.

ಸತ್ಯ ಪರಿಶೀಲನೆ

ನಾವು ವೀಡಿಯೊದ ಮೂಲವನ್ನು ಪರಿಶೀಲಿಸಿದಾಗ ಕಂಡುಬಂದದ್ದೇನೆಂದರೆ ಈ ವೀಡಿಯೊ ತಮ್ಮ ನಾಯಕರು ಸ್ಥಳೀಯರೊಂದಿಗೆ ಗುಂಪು ನೃತ್ಯ ಮಾಡುವುದನ್ನು ಕಾಂಗ್ರೆಸ್ ಪಕ್ಷವು ತೋರಿಸುವ ವೀಡಿಯೊ. ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸೆರೆಹಿಡಿಯಲಾದ ಕೆಲವು ಕ್ಷಣಗಳನ್ನು ಇದರಲ್ಲಿ ತೋರಿಸುತ್ತಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಅಕ್ಟೋಬರ್ 30 ರಂದು ಅದೇ ಹೇಳಿಕೆಗಳೊಂದಿಗೆ ಅಧಿಕೃತವಾಗಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿತು.

ಕನಿಷ್ಠ 141 ಜನರ ಜೀವವನ್ನು ಬಲಿತೆಗೆದುಕೊಂಡಿರುವ ಮೋರ್ಬಿಯಲ್ಲಿ ನಡೆದ ಸೇತುವೆ ಕುಸಿತಕ್ಕೂ ಈ ವೀಡಿಯೊಗೂ ಯಾವುದೇ ಸಂಬಂಧವಿಲ್ಲ.

ಎರಡನೆಯದಾಗಿ, ಅಕ್ಟೋಬರ್ 30 ರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ, ಆದರೆ ಸೇತುವೆ ಕುಸಿದಿರುವುದು ಅಕ್ಟೋಬರ್ 30 ರ ಸಂಜೆ, ನಿಖರವಾಗಿ ಹೇಳುವುದಾದರೆ, ಸಂಜೆ 6:32 ಕ್ಕೆ.

‘ಶ್ರೀ ರಾಹುಲ್ ಗಾಂಧಿ ಮತ್ತು ಸಹ ಭಾರತ ಯಾತ್ರಿಗಳು ತೆಲಂಗಾಣದ ಸಾಂಪ್ರದಾಯಿಕ ಬತುಕಮ್ಮ ನೃತ್ಯದಲ್ಲಿ ಭಾಗವಹಿಸಿದರು’. ಎಂಬ ಶೀರ್ಷಿಕೆಯೊಂದಿಗೆ ಅಕ್ಟೋಬರ್ 30 ರಂದು ಬೆಳಿಗ್ಗೆ 10:08 ಕ್ಕೆ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊವನ್ನು ನೋಡಿ.

ವಾಸ್ತವವಾಗಿ ಕಾಂಗ್ರೆಸ್ ಸಂತಾಪ ವ್ಯಕ್ತಪಡಿಸಿತು ಮತ್ತು ಯಾರು ಹೊಣೆಗಾರರು ಎಂಬ ರಾಜಕೀಯ ಯುದ್ಧಕ್ಕಿಳಿಯಲು ನಿರಾಕರಿಸಿತು. ರಾಹುಲ್ ಗಾಂಧಿಯವರ ವೀಡಿಯೊವನ್ನು ಇಲ್ಲಿ ನೋಡಿ:

ಇದನ್ನೂ ಓದಿ:

ನಂದಿನಿ ತುಪ್ಪದ ಪೂರೈಕೆಗೆ ಕೆಎಂಎಫ್ ನೀಡಿದ ಬೆಲೆ ಹೇಳಿಕೆಯನ್ನು ಟಿಟಿಡಿ 50 ವರ್ಷಗಳ ನಂತರ ತಿರಸ್ಕರಿಸಿತೇ? ಸತ್ಯ ಪರಿಶೀಲನೆ

ಇಂದಿರಾ ಗಾಂಧಿಯೊಂದಿಗೆ ಕನ್ನಡದ ವರನಟ ಡಾ। ರಾಜಕುಮಾರ್ ಅವರ ಹಳೆಯ ಛಾಯಾಚಿತ್ರದಲ್ಲಿ ಮೋದಿ? Fact Check