Don't Miss

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಒಂದು ಕೈಗಡಿಯಾರದ ಮರುಸ್ಥಾಪನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮುರಿದ ಗಡಿಯಾರವನ್ನು ಸರಿ ಮಾಡಿರುವುದನ್ನು ತೋರಿಸುತ್ತಾರೆ ಮತ್ತು ಫಲಿತಾಂಶವಾಗಿ ಗಡಿಯಾರವು ಹೊಸದರಂತೆ ಕಾಣುತ್ತದೆ. ತೋರಿಸಲಾಗಿರುವ ಗಡಿಯಾರವು ಟಿಸ್ಸಾಟ್ನ 1853 ರ ಗಡಿಯಾರ ಎಂದು ವೀಡಿಯೊ ಹೇಳುತ್ತದೆ.

ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ವಾಟ್ಸಾಪ್ನಲ್ಲಿನ ಹೇಳಿಕೆ ಹೀಗಿದೆ:

170 ವರ್ಷಗಳ ನಂತರ 1853 ರಲ್ಲಿ ತಯಾರಿಸಲಾದ ಟಿಸ್ಸಾಟ್ ಗಡಿಯಾರದ ದುರಸ್ತಿ. ಅದು ರಿಪೇರಿಯಾಗಿ ಹೊಚ್ಚ ಹೊಸದರಂತಾಗುವುದನ್ನು ವೀಕ್ಷಿಸುವುದು ಒಂದು ಅದ್ಭುತ ಅನುಭವ!


ಈ ವೈರಲ್ ವೀಡಿಯೊದ ಸತ್ಯ ಪರಿಶೀಲನೆ ನಡೆಸುವಂತೆ ಡಿಜಿಟೈ ಇಂಡಿಯಾಗೆ ವಾಟ್ಸಾಪ್ನಲ್ಲಿ ಒಂದು ಕೋರಿಕೆ ಬಂತು.

FACT CHECK

ಡಿಜಿಟೈ ಇಂಡಿಯಾ ತಂಡವು ವೀಡಿಯೊವನ್ನು ಹಲವು ಕೀಫ್ರೇಮ್ಗಳಾಗಿ ವಿಂಗಡಿಸಿ ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. ಒಂದೇ ಹೇಳಿಕೆಯೊಂದಿಗೆ ಅನೇಕ ಜನರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಫಲಿತಾಂಶಗಳಲ್ಲಿ ಕಂಡುಬಂತು. ಈ ರೀಶೇರ್ ಗಳಲ್ಲಿ ಕೆಲವು ಮೇ 2023ರ ಹಿಂದಿನವು.

ವೀಡಿಯೊದ ಕೊನೆಯಲ್ಲಿ, ಮರುಸ್ಥಾಪಿಸಿದ ಗಡಿಯಾರವನ್ನು ನೋಡಬಹುದು. ನಾವು ಆ ಕೀಫ್ರೇಮ್ ಅನ್ನು ತೆಗೆದುಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳ ಅನುಸಾರ ಆ ಗಡಿಯಾರವು ಟಿಸ್ಸಾಟ್ನ ಟಿ-ಕ್ಲಾಸಿಕ್ ಲೆ ಲೊಕಲ್ ಸಂಗ್ರಹದ ಗಡಿಯಾರವೆಂದು ತಿಳಿದುಬರುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ನಾವು ಟಿಸ್ಸಾಟ್ನ ಅಧಿಕೃತ ವೆಬ್ಸೈಟ್ಗೆ ಹೋದೆವು. ಈ ಗಡಿಯಾರ ಟಿಸ್ಸಾಟ್ ಲೆ ಲೋಕಲ್ ಪವರ್ಮ್ಯಾಟಿಕ್ 80. ಇದು ಟಿಸ್ಸಾಟ್ ಟಿ-ಕ್ಲಾಸಿಕ್ ಸಂಗ್ರಹದ ಭಾಗವಾಗಿದೆ ಮತ್ತು ಇದು ಪವರ್ಮ್ಯಾಟಿಕ್ 80 ಚಲನೆಗೆ ಹೆಸರುವಾಸಿಯಾಗಿದೆ, ಇದು 80 ಗಂಟೆಗಳ ವಿದ್ಯುತ್ ರಿಸರ್ವ್ ನೀಡುತ್ತದೆ.

From Tissot’s website

ನಾವು ಮುಂದೆ ಇನ್ನಷ್ಟು ಹುಡುಕಾಡಿದಾಗ, ಬ್ರ್ಯಾಂಡ್ನ 150 ನೇ ವಾರ್ಷಿಕೋತ್ಸವವನ್ನು ಆಚರಿಸಲು ಟಿಸ್ಸಾಟ್ನ ಲೇ ಲೋಕಲ್ ಸಂಗ್ರಹವನ್ನು ಮೂಲತಃ 2003 ರಲ್ಲಿ ಪ್ರಾರಂಭಿಸಿತ್ತು ಎಂದು ತಿಳಿದುಬಂತು. ಈ ವೆಬ್ಸೈಟ್ ನಲ್ಲಿರುವ ಒಂದು ಲೇಖನವು, “ಲೇ ಲೋಕಲ್ ಸಂಗ್ರಹವು ಈ ಬ್ರ್ಯಾಂಡ್ ನ ಅತ್ಯುತ್ತಮ ಮಾರಾಟವಾಗುವ ವಸ್ತುಗಳಲ್ಲಿ ಒಂದಾಗಿದೆ. ಬ್ರ್ಯಾಂಡ್ನ ಜನ್ಮಸ್ಥಳಕ್ಕೆ ಗೌರವಾರ್ಥವಾದ ಇದು ಸಾಂಪ್ರದಾಯಿಕವಾಗಿ ತಯಾರಿಸಲಾದ ಕೇಸ್ಗಳು ಮತ್ತು ಡಯಲ್ಗಳನ್ನು ಹೊಂದಿದೆ ಮತ್ತಿದು ಲೇ ಲೋಕಲ್ ಚರ್ಚ್ ನ ಗಡಿಯಾರದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಟಿಸ್ಸಾಟ್ನ ಪ್ರಮುಖ ಶ್ರೇಣಿಯಾದ ಇದು ಸಾಂಪ್ರದಾಯಿಕ ಜ್ಞಾನ, ಸಮಯಾತೀತ ಸೌಂದರ್ಯ ಮತ್ತು ಉತ್ತಮ ಅಭಿರುಚಿಯ ನಿರ್ದಿಷ್ಟ ಕಲ್ಪನೆಯನ್ನು ತಿಳಿಸುತ್ತದೆ.”
ಟಿಸ್ಸಾಟ್ ವಿಶ್ವದ ಅತ್ಯಂತ ಹಳೆಯ ಗಡಿಯಾರ ತಯಾರಕರಲ್ಲಿ ಒಂದು. ಸ್ವಿಸ್ ನಗರವಾದ ಲೆ ಲೊಕಲ್ ಮೂಲದ ಈ ಬ್ರ್ಯಾಂಡ್ 1853ರಿಂದ ಕೈಗಡಿಯಾರಗಳನ್ನು ತಯಾರಿಸುತ್ತಾ ಬಂದಿದೆ.

ಆದ್ದರಿಂದ, ಹೇಳಿಕೆ ಸುಳ್ಳು.

CLAIM: ಟಿಸ್ಸಾಟ್ನ 1853ರ ಕೈಗಡಿಯಾರದ ಮರುಸ್ಥಾಪನೆಯನ್ನು ಒಂದು ವೈರಲ್ ವೀಡಿಯೊ ತೋರಿಸುತ್ತದೆ.

CONCLUSION: ವೀಡಿಯೊದಲ್ಲಿನ ಕೈಗಡಿಯಾರವು 1853ರದ್ದಲ್ಲ. ಇದು ಟಿಸ್ಸಾಟ್ ಲೆ ಲೋಕಲ್ ಪವರ್ಮ್ಯಾಟಿಕ್ 80. ಲೆ ಲೊಕಲ್ ಸಂಗ್ರಹವನ್ನು, ಬ್ರ್ಯಾಂಡ್ನ 150 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ ಮೂಲತಃ 2003ರಲ್ಲಿ ಬಿಡುಗಡೆ ಮಾಡಲಾಗಿತ್ತು.

ರೇಟಿಂಗ್: ತಪ್ಪು ನಿರೂಪಣೆ–??

[ಇದನ್ನೂ ಓದಿ: 

ಇಲ್ಲ, ಈ ವೀಡಿಯೊ ಒಬ್ಬ ಬ್ರಾಹ್ಮಣ ಶಿಕ್ಷಕರು ದಲಿತ ಮಗುವನ್ನು ಥಳಿಸುವುದನ್ನು ತೋರಿಸುವುದಿಲ್ಲ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ

9 comments

  1. Pingback: ಸತ್ಯ ಪರಿಶೀಲನೆ: ಕೋಮುಗಳ ನಡುವಿನ ಜಗಳವೆಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಸ್ಟಂಟ್ ತಂಡವೊಂದು ಮಾಡಿದ

  2. Pingback: ಸತ್ಯ ಪರಿಶೀಲನೆ: ಕೋಮುಗಳ ನಡುವಿನ ಜಗಳವೆಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ, ಸ್ಟಂಟ್ ತಂಡವೊಂದು ಮಾಡಿದ

  3. Pingback: ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ - Digiteye Kannada

  4. Pingback: ಸ್ಯಾಂಟಿಯಾಗೊ ಏರ್ಲೈನ್ಸ್ 513 ವಿಮಾನವು 1954 ರಲ್ಲಿ ಟೇಕ್ ಆಫ್ ಮತ್ತು 1989ರಲ್ಲಿ ಮನುಷ್ಯರ ಅಸ್ಥಿಪಂಜರಗಳೊಂದಿಗೆ ಲ್ಯಾ

  5. Pingback: ಈ ಸಂಪೂರ್ಣ ವೀಡಿಯೊ ಕೇರಳದ ದೇವಸ್ಥಾನವೊಂದರ ಪ್ರಸಿದ್ಧ ಸಸ್ಯಾಹಾರಿ ಮೊಸಳೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀ

  6. Pingback: ರಾಷ್ಟ್ರೀಯ ವೈದ್ಯಕೀಯ ಆಯೋಗವು ಧನ್ವಂತರಿ ದೇವತೆಯನ್ನು ಒಳಗೊಂಡ ತನ್ನ ಲಾಂಛನವನ್ನು ಬದಲಾಯಿಸಿದೆಯೇ? ಸತ್ಯ ಪರಿಶ

  7. Pingback: ಅಮೇರಿಕಾದಲ್ಲಿ ವಿಶ್ವದ ಅತಿದೊಡ್ಡ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು, ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರ

  8. Pingback: ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತಯಾರಿಸಲಾದ ವೀಡಿಯೊ

  9. Pingback: ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ - Digiteye Kannada

Leave a Reply

Your email address will not be published. Required fields are marked *

*