Don't Miss

ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ

ಗಾಜಾ಼ದಲ್ಲಿನ ವೈಮಾನಿಕ ದಾಳಿ ಎನ್ನಲಾದ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಾಜಾ಼ ಮತ್ತು ಪ್ಯಾಲೆಸ್ತೀನೀ ಮಕ್ಕಳು ನೀರಿನ ಟ್ಯಾಂಕ್ ಒಂದರ ಬಳಿ ಜೊತೆಗೂಡಿದ್ದಾಗ ಇಸ್ರೇಲ್ ಅವರ ಮೇಲೆ ಬಾಂಬ್ ದಾಳಿ ನಡೆಸಿತು ಎಂದು ವೀಡಿಯೊ ಹೇಳುತ್ತದೆ. ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ:

भूख और प्यास से तड़प रहे पेलेस्टाइन, गाज़ा के बच्चे जब पानी पीने के लिए पानी की टंकी के पास पहुंचे तो, जालिम कातिल इजरायल आतंकवादी यो ने ऊपर से बम गिरा दिया और कइयों की जान चली गई कई जल गए!

क्या लाचारी है जो दुनिया यह सब देख रही है और देखकर आंख बंद कर लेती है??

(ಅನುವಾದ: ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿದ್ದ ಪ್ಯಾಲೆಸ್ತೀನ್, ಗಾಜಾ಼ದ ಮಕ್ಕಳು ನೀರು ಕುಡಿಯಲು ನೀರಿನ ತೊಟ್ಟಿಯ ಬಳಿ ಬಂದಾಗ, ಇಸ್ರೇಲ್ ಮೇಲಿನಿಂದ ಬಾಂಬ್ ಎಸೆದು ಅನೇಕರು ಪ್ರಾಣ ಕಳೆದುಕೊಂಡರು, ಅನೇಕರು ಸುಟ್ಟುಹೋದರು! ಇದನ್ನೆಲ್ಲಾ ನೋಡುವ, ನೋಡಿದ ನಂತರ ಕಣ್ಣು ಮುಚ್ಚಿಕೊಳ್ಳುವ ಜಗತ್ತಿನ ಅಸಹಾಯಕತೆ ಏನು??)

ವೀಡಿಯೊ X (ಈ ಹಿಂದೆ, ಟ್ವಿಟರ್) ನಲ್ಲಿಯೂ ವೈರಲ್ ಆಗುತ್ತಿದೆ ಮತ್ತು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಅದೇ ರೀತಿಯ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

FACT CHECK

ಡಿಜಿಟೈ ಇಂಡಿಯಾ ತಂಡವು ವೀಡಿಯೊವನ್ನು ಹಲವು ಪ್ರಮುಖ ಫ್ರೇಮ್‌ಗಳಾಗಿ ವಿಭಜಿಸಿತು. ನಾವು ಈ ಪ್ರಮುಖ ಫ್ರೇಮ್‌ಗಳನ್ನು ಬಳಸಿ ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು.

ಫಲಿತಾಂಶಗಳಲ್ಲಿ ಒಂದು ಟರ್ಕಿಯ ಸುದ್ದಿ ವೆಬ್‌ಸೈಟ್, ಹೇಬರ್ 7 ಗೆ ನಮ್ಮನ್ನು ಕರೆದೊಯ್ಯಿತು. ಅದರಲ್ಲಿ ಅದೇ ವೀಡಿಯೊವನ್ನು ಹೊಂದಿದ್ದ ಒಂದು ವೀಡಿಯೊ ವರದಿ ಕಂಡುಬಂತು ಮತ್ತು ಅದನ್ನು ಅಕ್ಟೋಬರ್ 13, 2023 ರಂದು ಪೋಸ್ಟ್ ಮಾಡಲಾಗಿತ್ತು. ವರದಿಯ ಮುಖ್ಯಾಂಶ ಹೀಗಿದೆ, “ಸುಡಾನ್‌ನಲ್ಲಿ ಡ್ರೋನ್ ದಾಳಿಯು ದುರಂತವನ್ನು ಎಸಗಿತು! ” ವೀಡಿಯೊಗೆ ಟರ್ಕಿ ಭಾಷೆಯಲ್ಲಿ ವಿವರಣೆಯನ್ನು ಸಹ ನೀಡಲಾಗಿತ್ತು. ಅದರ ಅನುವಾದ ಹೀಗಿದೆ, “RSF ಪಡೆಗಳ ಮೇಲೆ ಸುಡಾನೀ ಸೇನೆಯ ಸಶಸ್ತ್ರ ಡ್ರೋನ್ ದಾಳಿಯಲ್ಲಿ ಇಂಧನ ಹೊತ್ತಿಕೊಂಡ ನಂತರ ಪ್ರದೇಶದ ಜನರು ಬೆಂಕಿಯಲ್ಲಿ ಆವೃತ್ತರಾದರು! ಆ ಕ್ಷಣಗಳು ಈ ರೀತಿ ಕ್ಯಾಮೆರಾದಲ್ಲಿ ಸೆರೆಯಾದವು.”

ನಾವು ಈ ಸುಳಿವನ್ನು ಬಳಸಿ ಈ ವೈರಲ್ ವೀಡಿಯೊದ ಮೂಲದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳಲ್ಲಿ ಒಂದು, ಅಲ್ ಜಜೀರಾ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ತಮ್ಮ ವರದಿಯಲ್ಲಿ, ಅವರು ಅರಬೀ ಭಾಷೆಯಲ್ಲಿ ವಿವರಣೆಯನ್ನು ಸೇರಿಸಿದ್ದಾರೆ. ಅದರಂತೆ “ಸುಡಾನೀ ಸೈನ್ಯದ ಒಂದು ತಂಡ ಖಾರ್ತುಮ್‌ನಲ್ಲಿ ರಾಪಿಡ್ ಸಪೋರ್ಟ್ ಫೋರ್ಸ್ ಗಳಿಗೆ ಸೇರಿದ ಇಂಧನ ಟ್ಯಾಂಕರ್ ಮೇಲೆ ಬಾಂಬ್ ಸಿಡಿಸಿತು #Video #Al Jazeera_Sudan.” ಈ ವೀಡಿಯೊವನ್ನು ಅಕ್ಟೋಬರ್ 12, 2023ರಂದು ಪೋಸ್ಟ್ ಮಾಡಲಾಗಿದೆ.

Xನಲ್ಲಿ ಮತ್ತಷ್ಟು ಪರಿಶೀಲಿಸಿದಾಗ, ಅಕ್ಟೋಬರ್ 12, 2023ರಂದು ಅದೇ ವೀಡಿಯೊವನ್ನು ಪೋಸ್ಟ್ ಮಾಡಿದ ಸುಡಾನ್ ನ್ಯೂಸ್‌ನ ಈ ಟ್ವೀಟ್ ನಮಗೆ ದೊರಕಿತು. “ತಮ್ಮ ಮೋಟಾರ್‌ಸೈಕಲ್‌ಗಳಿಗೆ ಇಂಧನ ತುಂಬಲು ಒಟ್ಟುಗೂಡಿದ್ದ ರಾಪಿಡ್ ಸಪೋರ್ಟ್ ಮಿಲಿಷಿಯಾ ಕೂಲಿ ಮರ್ಸೆನರಿಗಳ ಗುಂಪನ್ನು ಗುರಿಯಾಗಿಸಿಕೊಂಡು ಸೈನ್ಯದ ಮಾರ್ಚ್.” ಎಂದು ಅವರು ಟ್ವೀಟ್ ಮಾಡಿದ್ದರು.

ಆದ್ದರಿಂದ, ಈ ವೈರಲ್ ವೀಡಿಯೊ, ಖಾರ್ತುಮ್ (ಸುಡಾನ್) ನಿಂದ ಬಂದಿದೆ, ಗಾಜಾ಼ದಿಂದ ಅಲ್ಲ.

Claim/ಹೇಳಿಕೆ: ಗಾಜಾ಼ ಮತ್ತು ಪ್ಯಾಲೆಸ್ತೀನಿನ ಮಕ್ಕಳು ನೀರಿನ ತೊಟ್ಟಿಯ ಮುಂದೆ ಸೇರಿರುವಾಗ ಅವರ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದನ್ನು ಒಂದು ವೈರಲ್ ವೀಡಿಯೊ ತೋರಿಸುತ್ತದೆ.

Conclusion/ಕಡೆನುಡಿ: ವೀಡಿಯೊ ಗಾಜಾ಼ ಅಥವಾ ಪ್ಯಾಲೆಸ್ತೀನಿನಿಂದ ಬಂದಿಲ್ಲ. ಅದು ಸುಡಾನ್‌ನಿಂದ ಬಂದಿದ್ದು ಸುಡಾನ್‌ನ ಖಾರ್ತುಮ್‌ನಲ್ಲಿ ಪ್ಯಾರಾಮಿಲಿಟರಿ ಪಡೆಯಾದ ರಾಪಿಡ್ ಸಪೋರ್ಟ್ ಫೋರ್ಸ್ (RSF)ಗೆ ಸೇರಿದ ಇಂಧನ ಟ್ಯಾಂಕರ್ ಮೇಲೆ ಸುಡಾನೀ ಸೇನೆ ಬಾಂಬ್ ದಾಳಿ ನಡೆಸಿದ್ದನ್ನು ತೋರಿಸುತ್ತದೆ. ವೀಡಿಯೊ ಅಕ್ಟೋಬರ್ ಆರಂಭದಲ್ಲಿ ಮೂಡಿತ್ತು. ಸುಡಾನ್ ನಲ್ಲಿ ಸೇನೆ ಮತ್ತು RSF ನಡುವೆ ಘರ್ಷಣೆ ನಡೆಯುತ್ತಿದೆ.

ರೇಟಿಂಗ್: ತಪ್ಪು ನಿರೂಪಣೆ–

[ಇದನ್ನೂ ಓದಿ: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]