Don't Miss

ಮನಮೋಹನ್ ಸಿಂಗ್ ರವರ ನಿಧನದ ನಂತರ ಗಾಂಧಿ ಕುಟುಂಬವು ವಿಯೆಟ್ನಾಂನಲ್ಲಿ ಊಟ ಮಾಡುತ್ತಿದೆಯೇ? ಸತ್ಯ-ಪರಿಶೀಲನೆ

ಹೇಳಿಕೆ/Claim:  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನಿಧನದ ನಂತರ ಗಾಂಧಿ ಕುಟುಂಬವು ವಿಯೆಟ್ನಾಂನಲ್ಲಿ ಊಟ ಮಾಡುತ್ತಿದೆ ಎಂದು ಚಿತ್ರ ತೋರಿಸುತ್ತದೆ.

ಕಡೆನುಡಿ/Conclusion:  ತಪ್ಪು ನಿರೂಪಣೆ – ಗಾಂಧಿ ಕುಟುಂಬವು ಒಟ್ಟಿಗೆ ಊಟ ಮಾಡುತ್ತಿರುವ ವೈರಲ್ ಚಿತ್ರವನ್ನು ನವದೆಹಲಿಯ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಡಿಸೆಂಬರ್ 22, 2024 ರಂದು ತೆಗೆಯಲಾಗಿದೆ ಮತ್ತು ನಾಲ್ಕು ದಿನಗಳ ನಂತರ ಮನಮೋಹನ್ ಸಿಂಗ್ ಅವರ ಮರಣದ ನಂತರ ವಿಯೆಟ್ನಾಂನಲ್ಲಿ ಅಲ್ಲ.

ರೇಟಿಂಗ್/Rating: ತಪ್ಪು ನಿರೂಪಣೆ

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅವರ ಕುಟುಂಬ ಸದಸ್ಯರು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತಿರುವ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಚಿತ್ರದೊಂದಿಗೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮರಣಾನಂತರ ಗಾಂಧಿ ಕುಟುಂಬವು ವಿಯೆಟ್ನಾಂನಲ್ಲಿತ್ತೆಂದು ಸೂಚಿಸುವ ಹೇಳಿಕೆಯೂ ಕಂಡುಬಂದಿದೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಆಂಧ್ರಪ್ರದೇಶ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ರಘು ನೋಮುಲಾ ರವರು ತೆಲುಗು ಭಾಷೆಯಲ್ಲಿ ಹಂಚಿಕೊಂಡಿರುವ ಫೇಸ್‌ಬುಕ್ ಪೋಸ್ಟ್ ಅನ್ನು ನೋಡಿ: “*మాజీ ప్రధాని మన్మోహన్ సింగ్ సంతాపదినాల్లో భాగంగా వియాత్నం దేశంలో తీవ్ర సంతాపం తెలియజేస్తున్న ఆంటోనియో కుటుంబం🤦*”

ಅದರ ಅನುವಾದ ಹೀಗಿದೆ: “ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಶೋಕಾಚರಣೆಯ ದಿನಗಳ ಭಾಗವಾಗಿ ಆಂಟೋನಿಯೊ ಕುಟುಂಬವು ವಿಯೆಟ್ನಾಂನಲ್ಲಿ ಗಾಢ ಸಂತಾಪ ವ್ಯಕ್ತಪಡಿಸುತ್ತಿರುವುದು.”

ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನಿಧನ ಮತ್ತು ನವದೆಹಲಿಯಲ್ಲಿ ಅವರ ಅಂತ್ಯಕ್ರಿಯೆಯ ಸ್ಥಳದ ಇತ್ತೀಚಿನ ವಿವಾದವು ವಿಷಯವಸ್ತು. ಅಗೌರವಾತ್ಮಕ ಅಂತ್ಯಕ್ರಿಯೆಯ ವ್ಯವಸ್ಥೆಯೆಂದೆಣಿಸಿ ಬಿಜೆಪಿಯನ್ನು ಕಾಂಗ್ರೆಸ್ ಟೀಕಿಸಿದರೆ, ಅಸ್ಥಿ ವಿಸರ್ಜನ ಸಮಾರಂಭದಲ್ಲಿ ರಾಹುಲ್ ಗಾಂಧಿಯವರ ಅನುಪಸ್ಥಿತಿಯನ್ನು ಬಿಜೆಪಿ ಪ್ರಶ್ನಿಸಿತು.

ಇದೇ ರೀತಿಯ ಹೇಳಿಕೆಗಳ ಪುನರಾವರ್ತನೆಯೊಂದಿಗೆ ಸಿಂಗ್ ರವರ ಮರಣಾನಂತರವೇ ರಾಹುಲ್ ಗಾಂಧಿಯವರು “ಹೊಸ ವರ್ಷ”ಕ್ಕಾಗಿ ವಿಯೆಟ್ನಾಂಗೆ ಹೋಗಿದ್ದರೆಂಬ ಆರೋಪವಾಗಿದೆ.

ಸತ್ಯ ಪರಿಶೀಲನೆ ವಿವರಗಳು:

ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದೇ ಚಿತ್ರವನ್ನು ರಾಹುಲ್ ಗಾಂಧಿಯವರು ಡಿಸೆಂಬರ್ 22, 2024 ರಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ನಾವು ಕಂಡುಕೊಂಡೆವು. ಶೀರ್ಷಿಕೆ ಹೀಗಿತ್ತು, “ಪ್ರಸಿದ್ಧ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಕುಟುಂಬದೊಂದಿಗೆ ಊಟ. ನೀವು ಹೋದರೆ ಛೋಲೆ ಭಟೂರೆ ತಿಂದು ನೋಡಿ (sic),” ಡಿಸೆಂಬರ್ 26, 2024 ರಂದು ಸಿಂಗ್ ಮರಣಹೊಂದುವ  ಮೊದಲು ತೆಗೆದ ಫೋಟೋ ಎಂದು ಇದು ದೃಢೀಕರಿಸುತ್ತದೆ.

ಇದಲ್ಲದೆ, ಪಿಟಿಐ ನ್ಯೂಸ್ ಡಿಸೆಂಬರ್ 22, 2024 ರಂದು ಅದೇ ಚಿತ್ರವನ್ನು ಪ್ರಕಟಿಸಿದ್ದು, ಗಾಂಧಿ ಕುಟುಂಬವು ಆ ದಿನಾಂಕದಂದು ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದೆ ಎಂಬುದನ್ನು ದೃಢಪಡಿಸುತ್ತದೆ.

ಈ ವರದಿಯನ್ನು ಇತರ ಮಾಧ್ಯಮಗಳು ಸಹ ದೃಢಪಡಿಸಿದ್ದವು. ಆದ್ದರಿಂದ, ರೆಸ್ಟೋರೆಂಟ್ ನವ ದೆಹಲಿಯಲ್ಲಿದೆ, ಹೇಳಿಕೊಂಡಂತೆ ವಿಯೆಟ್ನಾಂನಲ್ಲಲ್ಲ.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*