Don't Miss

ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಸ್ವಾಗತಿಸುತ್ತಾ ನೀಡಿದ್ದ ಅಸ್ಸಾಮಿ ಶಾಲನ್ನು ಅವರು ನಿರಾಕರಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ಅಸ್ಸಾಮಿ ಗಾಮೋಸವನ್ನು ಧರಿಸಲು ರಾಹುಲ್ ಗಾಂಧಿಯವರು ನಿರಾಕರಿಸಿದ್ದಾರೆ ಎಂದು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ರಾಹುಲ್ ಗಾಂಧಿಯವರು ಗಮೋಸಾವನ್ನು ಧರಿಸಿದ್ದರು ಮತ್ತು ಕೈಯಲ್ಲಿ ಹಲವನ್ನು ಹಿಡಿದಿದ್ದರು, ಅದೇ ವೇಳೆ ಅಸ್ಸಾಂನ ವಿಮಾನ ನಿಲ್ದಾಣದ ಹೊರಗೆ ನೂರಾರು ಜನರು ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂತು.

ರೇಟಿಂಗ್: ದಾರಿತಪ್ಪಿಸುವ ಸುದ್ದಿ

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಅಸ್ಸಾಂ ಭೇಟಿಯ ಸಂದರ್ಭದಲ್ಲಿ, ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ, ಅವರನ್ನು ಸ್ವಾಗತಿಸಲು, ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ಅಸ್ಸಾಮಿ ಗಾಮೋಸಾವನ್ನು ಧರಿಸಲು ಅವರು ನಿರಾಕರಿಸಿದರು ಎಂಬ ಹೇಳಿಕೆಯೊಂದಿಗೆ ಅವರ ಕುರಿತಾದ ವೀಡಿಯೊ ವೈರಲ್ ಆಗುತ್ತಿದೆ.

ರಾಹುಲ್ ಗಾಂಧಿಯವರು ವಿಮಾನ ನಿಲ್ದಾಣದಿಂದ ಹೊರಡುತ್ತಿರುವಾಗ, ಅವರನ್ನು ಹಲವಾರು ಜನರು ಸುತ್ತುವರೆದು ಸ್ಕಾರ್ಫ್‌ಗಳು ಅಥವಾ ತ್ರಿವರ್ಣ ಶಾಲುಗಳನ್ನು ನೀಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವೈರಲ್ ಕ್ಲಿಪ್ ನ ಶೀರ್ಷಿಕೆ ಹೀಗಿದೆ: “ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಸ್ಸಾಮಿ ಗಾಮೋಸಾ ನೀಡಿ ಸ್ವಾಗತಿಸಿದಾಗ, ಆತ ಅದನ್ನು ಧರಿಸಲು ನಿರಾಕರಿಸಿದರು.”

FACT-CHECK

ರಾಹುಲ್ ಗಾಂಧಿಯವರು ಜುಲೈ 8, 2024 ರಂದು ಪ್ರವಾಹ ಸಂತ್ರಸ್ತರನ್ನು ಕಾಣಲು ಅಸ್ಸಾಂಗೆ ಭೇಟಿ ನೀಡಿದರು ಮತ್ತು ಅವರನ್ನು ವಿಮಾನ ನಿಲ್ದಾಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರು ಸ್ವಾಗತಿಸಿದರು ಎಂದು ಸುದ್ದಿ ವರದಿಗಳು ಖಚಿತಪಡಿಸುತ್ತವೆ. ಯುವ ಕಾಂಗ್ರೆಸ್ ಹಂಚಿಕೊಂಡಿರುವ ಒಂದು ವೀಡಿಯೊದಲ್ಲಿ ರಾಹುಲ್ ಗಾಂಧಿಯವರು ಗಾಮೋಸಾ ಧರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.

ವಿಮಾನ ನಿಲ್ದಾಣದ ಹೊರಗೆ ನೂರಾರು ಜನರು ತಮ್ಮ ಕೈಗಳಲ್ಲಿ ರಾಹುಲ್ ಗಾಂಧಿಯವರಿಗೆ ನೀಡಲು ಗಾಮೋಸಾಗಳನ್ನು ಹಿಡಿದಿರುವುದರೊಂದಿಗೆ, ರಾಹುಲ್ ಗಾಂಧಿಯವರು ಹೊರಬರುವಾಗ ತಮ್ಮ ಕೈಯಲ್ಲಿ ಹಲವಾರು ಗಾಮೋಸಾಗಳನ್ನು ಹಿಡಿದಿರುವುದನ್ನು ನೋಡಬಹುದು.  ಜುಲೈ 8, 2024 ರಂದು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ 24 ನ್ಯೂಸ್‌ನ ಮತ್ತೊಂದು ವೀಡಿಯೊ ಇಲ್ಲಿದೆ.

ಹಾಗಾಗಿ, ರಾಹುಲ್ ಗಾಂಧಿಯವರು ಗಾಮೋಸಾ ಧರಿಸಲು ನಿರಾಕರಿಸಿದ್ದಾರೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದು.

ಇದನ್ನೂ ಓದಿ:
ಜವಾಹರಲಾಲ್ ನೆಹರು ರವರು ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಎಂದಾದರೂ ಹೇಳಿದ್ದಾರಾ? ಸತ್ಯ ಪರಿಶೀಲನೆ
IRCTC ಯಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಗಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿದರೆ ದಂಡ ಹೇರಲಾಗುವುದೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*