Don't Miss
Is Vadilal ice cream manufacturer adding beef flavour as the package shows Halal Mark? Fact Check

ವಾಡಿಲಾಲ್ ಐಸ್ ಕ್ರೀಮ್ ಪ್ಯಾಕೇಜ್ ಹಲಾಲ್ ಗುರುತನ್ನು ತೋರಿಸುತ್ತಿರುವುದರಿಂದ ತಯಾರಕರು ಗೋಮಾಂಸ ಪ್ಲೇವರ್ ಸೇರಿಸುತ್ತಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದಲ್ಲಿ ವಾಡಿಲಾಲ್ ಐಸ್ ಕ್ರೀಮ್ ತಯಾರಕರು ತಮ್ಮ ಐಸ್ ಕ್ರೀಮ್‌ಗಳಿಗೆ ಗೋಮಾಂಸ ಫ್ಲೇವರ್ ಸೇರಿಸುತ್ತಾರೆ ಮತ್ತು “ಹಲಾಲ್” ಪ್ರಮಾಣೀಕೃತ ಐಸ್ ಕ್ರೀಮ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ.

ಕಡೆನುಡಿ/Conclusion: ಹಸಿರು ಚುಕ್ಕೆ ಸೂಚಿಸುವಂತೆ ಭಾರತದಲ್ಲಿ ಮಾರಾಟವಾಗುವ ಐಸ್ ಕ್ರೀಮ್‌ಗಳು 100% ಸಸ್ಯಾಹಾರ ಉತ್ಪನ್ನಗಳಾಗಿವೆ. “ಹಲಾಲ್” ಪ್ರಮಾಣೀಕೃತ ಐಸ್ ಕ್ರೀಮ್‌ಗಳು ನಿರ್ದಿಷ್ಟವಾಗಿ ರಫ್ತು ಉದ್ದೇಶಕ್ಕಾಗಿ ತಯಾರಾದವು ಮತ್ತು ಇವುಗಳನ್ನು ಕಟ್ಟುನಿಟ್ಟಾಗಿ ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು

ವಾಡಿಲಾಲ್ ಐಸ್ ಕ್ರೀಮ್ ಪ್ಯಾಕೇಜ್ ಹಲಾಲ್ ಮಾರ್ಕ್ ಪ್ರಮಾಣೀಕರಣವನ್ನು ತೋರಿಸುತ್ತಿರುವುದರಿಂದ ಈ ಸಂಸ್ಥೆಯು ತಯಾರಿಸಿದ ಉತ್ಪನ್ನಗಳಿಗೆ ಗೋಮಾಂಸದ ಫ್ಲೇವರ್ ಸೇರಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ವಾಟ್ಸಾಪ್ ಪೋಸ್ಟ್ ವೈರಲ್ ಆಗುತ್ತಿದೆ.

(ಹಲಾಲ್ ಮಾರ್ಕ್ ಪ್ರಮಾಣೀಕರಣ ಎಂದರೇನು — ಹಲಾಲ್ ಎಂಬುದು ಅರೇಬಿಕ್‌ ಭಾಷೆಯಿಂದ ಪಡೆಯಲಾದ ಶಬ್ದ, “ಅನುಮತಿ ಇದೆ” ಎಂಬುದು ಇದರರ್ಥ ಮತ್ತು ಇದು ಇಸ್ಲಾಮಿಕ್ ಕಾನೂನಿನ ಪ್ರಕಾರ ಕಾನೂನುಬದ್ಧವಾದ ವಿಷಯಗಳು ಅಥವಾ ಕಾರ್ಯಗಳನ್ನು ಸೂಚಿಸುತ್ತದೆ. ಈ ಕಾರಣದಿಂದಾಗಿ, ಹಲಾಲ್ ಪ್ರಮಾಣೀಕರಣವು ಒಂದು ವ್ಯಾಪಾರ ಅಥವಾ ಉತ್ಪನ್ನವು ಕುರಾನ್‌ನಲ್ಲಿನ ಆಹಾರದ ಕುರಿತಾದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತದೆ ಎಂದು ಜನರಿಗೆ ತಿಳಿಸುತ್ತದೆ. ಹಲಾಲ್ ಪ್ರಮಾಣೀಕರಣವು ಆಹಾರಕ್ಕೆ ಮಾತ್ರವಲ್ಲದೆ ಸೌಂದರ್ಯ ಸಾಧನಗಳು, ಔಷಧಿಗಳು ಮತ್ತು ಬ್ಯಾಂಕಿಂಗ್‌ನಂತಹ ಹಲವಾರು ಸೇವೆಗಳಿಗೆ ಅನ್ವಯಿಸುತ್ತದೆ.)

Posts claims “Vadilal in India is promoting “Halal”ceritfied ice creams. Why are ice creams Halal?”

“Rajesh ‘Gandhi’ is the Chairman and Mr. Devanshu ‘Gandhi’ is the Managing Director for Vadilal.”

ಮತ್ತೊಂದು ಪೋಸ್ಟ್ ಹೀಗೆ ಹೇಳುತ್ತದೆ:
वाडीलाल आईस्क्रीम का ब्रांड आईसक्रीममे गोमांस के फ्लेवर का उपयोग करता है और इसी कारण वाडीलाल ने हलाल सर्टिफिकेट कार्टन पर छाप लिया है तो आज से कोई हिंदू वाडीलाल का आईस्क्रीम न खाए सभी हिंदू भाई इसका बड़े पैमाने पर बायकाट करें औ ये पोस्ट ज्यादा से ज्यादा शेयर करे

[ಕನ್ನಡದ ಅನುವಾದ ಹೀಗಿದೆ: “ವಾಡಿಲಾಲ್ ಐಸ್‌ಕ್ರೀಮ್‌ ಬ್ರ್ಯಾಂಡ್ ತನ್ನ ಐಸ್‌ಕ್ರೀಮ್‌ನಲ್ಲಿ ಗೋಮಾಂಸ ಫ್ಲೇವರ್ ಅನ್ನು ಬಳಸುತ್ತದೆ ಮತ್ತು ಅದಕ್ಕಾಗಿಯೇ ವಾಡಿಲಾಲ್ ತನ್ನ ಕಾರ್ಟನ್ ಮೇಲೆ ಹಲಾಲ್ ಪ್ರಮಾಣೀಕರಣವನ್ನು ಮುದ್ರಿಸಿದೆ, ಆದ್ದರಿಂದ ಇಂದಿನಿಂದ ಯಾವುದೇ ಹಿಂದೂಗಳು ವಾಡಿಲಾಲ್ ಅವರ ಐಸ್ ಕ್ರೀಮ್ ಅನ್ನು ತಿನ್ನಬಾರದು. ಎಲ್ಲಾ ಹಿಂದೂ ಸಹೋದರರು ದೊಡ್ಡ ಪ್ರಮಾಣದಲ್ಲಿ ಇದನ್ನು ಬಹಿಷ್ಕರಿಸಬೇಕು ಮತ್ತು ಈ ಪೋಸ್ಟ್ ಅನ್ನು ಸಾಧ್ಯವಾದಷ್ಟು ಶೇರ್ ಮಾಡಿ.”]

FACT-CHECK

ಡಿಜಿಟೈ ಇಂಡಿಯಾ ತಂಡವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪುಟಗಳಲ್ಲಿ ವಾಡಿಲಾಲ್ ಐಸ್‌ಕ್ರೀಮ್ ಕುರಿತು ಹೆಚ್ಚಿನ ಮಾಹಿತಿಯನ್ನು ಹುಡುಕಿದಾಗ, ವಾಡಿಲಾಲ್ ಸಂಸ್ಥೆಯು ವೈರಲ್ ಹೇಳಿಕೆಯನ್ನು ನಿರಾಕರಿಸುತ್ತಾ ಸ್ಪಷ್ಟೀಕರಣ ನೀಡಿದ್ದು ನಮಗೆ ಕಂಡುಬಂತು. ಹೇಳಿಕೆಯನ್ನು ನಿರಾಕರಿಸಿದ ಕಂಪನಿಯು ತಮ್ಮ ಲಿಂಕ್ಡ್‌ಇನ್ ಪುಟದಲ್ಲಿ ಸ್ಪಷ್ಟೀಕರಣವನ್ನು ನೀಡಿದೆ.

 

ಅವರ ಸ್ಪಷ್ಟೀಕರಣದ ಪ್ರಕಾರ, ಹಲಾಲ್ ಪ್ರಮಾಣೀಕೃತ ಪ್ಯಾಕೇಜ್‌ಗಳು ರಫ್ತಿಗೆ ಬಳಸುವಂಥವು ಮತ್ತು ರಫ್ತು ಉದ್ಯಮದ ಮಾನದಂಡಗಳ ಪ್ರಕಾರ ಈ ಪ್ರಮಾಣೀಕರಣ ಅಗತ್ಯ. ಈ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ಪ್ಯಾಕೇಜಿಂಗ್ ಹಸಿರು ಚುಕ್ಕೆಯನ್ನು ತೋರಿಸುತ್ತದೆ, ಅಂದರೆ ಇದು 100% ಸಸ್ಯಾಹಾರಿ ಉತ್ಪನ್ನ ಎಂದರ್ಥ. ಆದ್ದರಿಂದ ಹೇಳಿಕೆ ಸುಳ್ಳು.


ಇದನ್ನೂ ಓದಿ:

ನಾಗಾರ್ಜುನ ಸಿಮೆಂಟ್ಸ್ 9/11 ವಿಷಯವಸ್ತುವನ್ನು ಒಳಗೊಂಡ ಜಾಹೀರಾತನ್ನು ತೋರಿಸಿದೆಯೇ? ಸತ್ಯ ಪರಿಶೀಲನೆ

ಮೋದಿಯವರು ಶೇಖ್‌ಗಳಿಗೆ ಕೇಸರಿ ತೊಡಿಸಿದರೇ? ನಕಲಿ ಚಿತ್ರ ಪುನರುದ್ಭವ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*