ಹೇಳಿಕೆ/Claim: ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಜವಾಹರಲಾಲ್ ನೆಹರು ಅವರು ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಮುಹಮ್ಮದ್ ಅಲಿ ಜಿನ್ನಾ ಕುರಿತು ನೆಹರೂ ಅವರು ನೀಡಿದ ಸಂದರ್ಶನದ ವಿಡಿಯೋವನ್ನು ನೆಹರೂ ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವಂತೆ ಬದಲಾಯಿಸಲಾಗಿದೆ.
ರೇಟಿಂಗ್: ತಪ್ಪು ನಿರೂಪಣೆ
*******************************************************************************************************
ಸತ್ಯ ಪರಿಶೀಲನೆ ವಿವರಗಳು
ಜವಾಹರಲಾಲ್ ನೆಹರು ರವರು ಸಂದರ್ಶನವೊಂದರಲ್ಲಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲೇ ಇಲ್ಲ ಎಂದು ಹೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. X ನಲ್ಲಿರುವ ಹಿಂದಿ ಹೇಳಿಕೆ ಹೀಗಿದೆ: ”
दुर्लभ वीडियो…”मैं आज़ादी की लड़ाई में बिल्कुल भी शामिल नहीं था। बल्कि मैंने इसका विरोध किया था।” नेहरू जी⁉️” Translated, the caption reads: “A rare video….”I was not all involved in the independence fight. In fact, I opposed it — Mr Nehru said”.
दुर्लभ वीडियो…”मैं आज़ादी की लड़ाई में बिल्कुल भी शामिल नहीं था। बल्कि मैंने इसका विरोध किया था।” नेहरू जी⁉️” ಅನುವಾದಿತ ಶೀರ್ಷಿಕೆಯು ಹೀಗಿದೆ: “ಅಪರೂಪದ ವೀಡಿಯೊ….”ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲೇ ಇಲ್ಲ. ವಾಸ್ತವವಾಗಿ, ನಾನು ಅದನ್ನು ವಿರೋಧಿಸಿದ್ದೆ” — ಶ್ರೀ ನೆಹರು”.
दुर्लभ वीडियो…
“मैं आज़ादी की लड़ाई में बिल्कुल भी शामिल नहीं था। बल्कि मैंने इसका विरोध किया था।”
नेहरू जी⁉️🤔🙃 pic.twitter.com/LDw02NwSQH
— Dilip Kumar Singh (@DilipKu24388061) June 22, 2024
ವೀಡಿಯೊದಲ್ಲಿ, ಭಾರತದ ವಿಭಜನೆಯ ಬಗ್ಗೆ ಸಂದರ್ಶಕರೊಬ್ಬರು ನೆಹರೂ ಅವರನ್ನು ಕೇಳಿದಾಗ ಅವರು ಹೇಳಿದ್ದು ಹೀಗೆ: “ನಾನು ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲೇ ಇಲ್ಲ, ವಾಸ್ತವವಾಗಿ, ಅದನ್ನು ವಿರೋಧಿಸಿದ್ದೆ, ಮುಸ್ಲಿಂ ಲೀಗ್ 1911 ರ ಸುಮಾರಿಗೆ ಪ್ರಾರಂಭವಾಯಿತು, ಬ್ರಿಟಿಷರು ಪ್ರಾರಂಭಿಸಿದ್ದು ಎಂದು ನನಗನಿಸುತ್ತದೆ, ನಮ್ಮ ಸಮಾಜದಲ್ಲಿ ಬಣಗಳನ್ನು ಸೃಷ್ಟಿಸಲು ಅವರು ಪ್ರೋತ್ಸಾಹಿಸಿದ್ದರು ಮತ್ತು ಅವರು ಒಂದು ಮಟ್ಟಿಗೆ ಯಶಸ್ವಿಯಾದರು, ಅಂತಿಮವಾಗಿ ವಿಭಜನೆಯಾಯಿತು.”
ಮಹಾತ್ಮ ಗಾಂಧಿಯವರು ವಿಭಜನೆಯೆಡೆಗೆ ಒಲವು ತೋರಿದ್ದರೇ ಎಂದು ಸಂದರ್ಶಕರು ಕೇಳಿದಾಗ, ನೆಹರು ರವರು ಶೀಘ್ರವಾಗಿ, “ಶ್ರೀ ಗಾಂಧಿಯವರು ಕೊನೆಯವರೆಗೂ ಅದರ ಪರವಾಗಿರಲಿಲ್ಲ, ಅದು ಬಂದಾಗಲೂ ಅವರು ಅದರ ಪರವಾಗಿರಲಿಲ್ಲ. ನಾನು ಕೂಡ ಅದರ ಪರವಾಗಿರಲಿಲ್ಲ, ಆದರೆ ಕೊನೆಗೆ ನಾನು ಇತರರಂತೆ ನಿರ್ಧಿರಿಸಿದೆ. ಈ ನಿರಂತರ ತೊಂದರೆಗಿಂತ ವಿಭಜನೆ ಸೂಕ್ತ.” ಎಂದು ಉತ್ತರಿಸಿದರು.
FACT-CHECK
ಈ ಹೇಳಿಕೆ ನಂಬಲಸಾಧ್ಯವಾಗಿದ್ದರಿಂದ ಡಿಜಿಟೈ ಇಂಡಿಯಾ ಇದನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ರವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಮತ್ತು ಇತರ ಅನೇಕ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ಇದು ಐತಿಹಾಸಿಕ ದಾಖಲೆಗಳಲ್ಲಿಯೂ ಇದೆ. ನೆಹರೂ ಅವರ ಸಂದರ್ಶನ, ಸ್ವಾತಂತ್ರ್ಯ, ಸ್ವಾತಂತ್ರ್ಯ ಹೋರಾಟ, ಗಾಂಧಿ ಮತ್ತು ವಿಭಜನೆಯಂತಹ ಕೀವರ್ಡ್ ಗಳನ್ನು ವೀಡಿಯೊದಿಂದ ತೆಗೆದುಕೊಂಡು ನಾವು ಪರಿಶೀಲಿಸಿದಾಗ “ಪ್ರಸಾರ ಭಾರತಿ ಆರ್ಕೈವ್ಸ್” ನಿಂದ ಮೂಲ ವೀಡಿಯೊವನ್ನು ಪತ್ತೆಹಚ್ಚಲು ಸಾಧ್ಯವಾಯಿತು.
“ಪ್ರಸಾರ ಭಾರತಿ ಆರ್ಕೈವ್ಸ್” ನ ಮೂಲ ವೀಡಿಯೊಗಳನ್ನು ಕೆಳಗೆ ನೋಡಬಹುದು:
ಹೆಚ್ಚಿನ ವೀಡಿಯೊಗಳನ್ನು ಪ್ರಸಾರ ಭಾರತಿ ಆರ್ಕೈವ್ಸ್‌ನಲ್ಲಿ ನೋಡಬಹುದು
ಮೂಲ ವೀಡಿಯೋದಲ್ಲಿ, “ಶ್ರೀ ಜಿನ್ನಾ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲೇ ಇಲ್ಲ, ವಾಸ್ತವವಾಗಿ ಅದನ್ನು ವಿರೋಧಿಸಿದ್ದರು.” ಎಂದು ನೆಹರೂ ಅವರು ಹೇಳುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಹಾಗಾಗಿ, ಅವರು ಮುಸ್ಲಿಂ ಲೀಗ್ ಅನ್ನು ಪ್ರತಿನಿಧಿಸುತ್ತಿದ್ದ ಮತ್ತು ಮೊದಲಿನಿಂದಲೂ ವಿಭಜನೆಯ ಪರವಾಗಿದ್ದ ಮುಹಮ್ಮದ್ ಅಲಿ ಜಿನ್ನಾ ಅವರ ಬಗ್ಗೆ ಮಾತನಾಡುತ್ತಿದ್ದರೆಂಬುದು ಸ್ಪಷ್ಟವಾಗಿದೆ. ನೆಹರೂ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳುತ್ತಿದ್ದಾರೆಂದು ಸುಳ್ಳು ಹೇಳಿಕೆ ನೀಡಲು ವೀಡಿಯೊವನ್ನು ಬದಲಾಯಿಸಿ ಮಾರ್ಪಡಿಸಲಾಗಿದೆ.
ಆದ್ದರಿಂದ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆಯೇ? ಸತ್ಯ ಪರಿಶೀಲನೆ