ಹೇಳಿಕೆ/Claim: ವಾರಣಾಸಿ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಎಣಿಕೆ ಮಾಡಿದ ಒಟ್ಟು ಮತಗಳು ಒಟ್ಟು ಚಲಾವಣೆಯಾದ ಮತಗಳನ್ನು ಮೀರಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ಹೇಳುತ್ತಿದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. 2019ರಲ್ಲಾಗಲೀ 2024ರಲ್ಲಾಗಲೀ ವಾರಣಾಸಿಯಲ್ಲಿ ಮೋದಿಗೆ ಹಾಕಲಾದ ಮತಗಳು ಒಟ್ಟು ಮತದಾರರ ಸಂಖ್ಯೆಯನ್ನು ಮೀರಿಲ್ಲ.
ರೇಟಿಂಗ್: ತಪ್ಪು ನಿರೂಪಣೆ—
ಸತ್ಯ ಪರಿಶೀಲನೆ ವಿವರಗಳು
ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಗೆ ಸ್ಪರ್ಧಿಸಿದ್ದ ವಾರಣಾಸಿಯಲ್ಲಿ ಇವಿಎಂಗಳಲ್ಲಿ (ವಿದ್ಯುನ್ಮಾನ ಮತಯಂತ್ರ) ಚಲಾವಣೆಯಾದ ಮತಗಳಿಗಿಂತ ಹೆಚ್ಚು ಮತಗಳು ಮೋದಿಯವರಿಗಾಗಿ ಬಿದ್ದಿವೆ ಎಂಬ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
वाराणसी में नरेन्द्र मोदी चुनाव लड़ रहे थे 11 लाख लोगों ने वोट डाले और EVM मसीन से निकले 13 लाख 87 हजार वोट…😎🎅😎#EVM_हटाओ_पाखंडी_भगाओ pic.twitter.com/QJZ8FGGVgt
— PRBAZUKA (@prbazuka_21546) April 12, 2024
ಹಿಂದಿಯಲ್ಲಿರುವ ಹೇಳಿಕೆ ಹೀಗಿದೆ : “वाराणसी में नरेंद्र मोदी चुनाव लड़ रहे थे। 11 लाख लोगों ने वोट डाले। ईवीएम मशीन में निकले 12 लाख 87 हज़ार। ईवीएम मशीन चोर है, चुनाव आयोग चोरों का सरदार” (ಕನ್ನಡದ ಅನುವಾದ ಹೀಗಿದೆ: “ವಾರಣಾಸಿಯಲ್ಲಿ ನರೇಂದ್ರ ಮೋದಿಯವರು ಚುನಾವಣೆಗೆ ಸ್ಪರ್ಧಿಸಿದ್ದರು. 11 ಲಕ್ಷ ಜನ ಮತ ಹಾಕಿದ್ದರು, ಆದರೆ ಇವಿಎಂ ಯಂತ್ರದಲ್ಲಿ ಬಂದದ್ದು 12 ಲಕ್ಷದ 87 ಸಾವಿರ ಮತಗಳು. ಇವಿಎಂ ಯಂತ್ರ ಕಳ್ಳ, ಚುನಾವಣಾ ಆಯೋಗ ಕಳ್ಳರ ನಾಯಕ.”)
ವಾರಣಾಸಿಯಲ್ಲಿ ಇವಿಎಂಗಳ ಕುರಿತಾದ 2019 ರ ಚುನಾವಣೆಗಳ ಬಗೆಗಿನ ಇತ್ತೀಚಿನ ಇದೇ ರೀತಿಯ ಹೇಳಿಕೆ ನಮಗೆ ಇಲ್ಲಿ ದೊರಕಿತು:
2019 में वाराणसी चुनाव में 11 लाख वोट डाले गए,
लेकिन EVM में 12 लाख 87000 वोट गिने गए।मुर्गी जीतने जल्दीअंडा नही देती, उतने तेजी से EVM वोट दे रही थी-वामन मेश्राम #LokSabhaElections2024 #WamanCMeshram #EVM_हटाओ_लोकतंत्र_बचाओ pic.twitter.com/vw9fHMdDod
— Shubham Dharne (@dharne_shubham) April 7, 2024
ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟದ (BAMCEF) ಅಧ್ಯಕ್ಷರಾದ ವಾಮನ್ ಮೆಶ್ರಾಮ್ ರವರು ಈ ವೀಡಿಯೊದಲ್ಲಿ ಈ ಹೇಳಿಕೆಯನ್ನು ನೀಡಿದ್ದರು, ಅವರು ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯನ್ನು ಟೀಕಿಸುತ್ತಾ ಬಂದಿದ್ದಾರೆ ಮತ್ತು ಜನವರಿ 31, 2024ರಂದು ಕೇಂದ್ರ ಚುನಾವಣಾ ಆಯೋಗದ ಕಚೇರಿಯ ಮುಂದೆ ಇವಿಎಂಗಳ ವಿರುದ್ಧ ಪ್ರತಿಭಟನೆಯನ್ನೂ ಸಹ ನಡೆಸಿದ್ದರು.
ಸತ್ಯ ಪರಿಶೀಲನೆ
ಮೊದಲಿಗೆ, ಪೋಸ್ಟ್ ಅನ್ನು ಏಪ್ರಿಲ್ 12, 2024ರಂದು ಹಂಚಿಕೊಳ್ಳಲಾಗಿತ್ತು, ಇದು ಜೂನ್ 1, 2024 ರಂದು ನಡೆದ ಮತದಾನಕ್ಕಿಂತ ಬಹಳ ಮುಂಚಿತವಾಗಿರುವ ದಿನಾಂಕ. ಆದ್ದರಿಂದ, ಇದು 2024ರ ಚುನಾವಣೆಗಳಿಗೆ ಸಂಬಂಧಿಸಿರುವುದಾಗಿರುವುದಿಲ್ಲ. ಪ್ರಧಾನಿ ಮೋದಿಯವರು 2019ರಲ್ಲಿ ವಾರಣಾಸಿಯಿಂದ ಸ್ಪರ್ಧಿಸಿ ಯಶಸ್ವಿಯಾಗಿದ್ದರಿಂದ, 2019ರ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಅಂಕಿಅಂಶಗಳನ್ನು ನಾವು ಪರಿಶೀಲಿಸಿದೆವು.
2019 ರ ಲೋಕಸಭಾ ಚುನಾವಣೆಗಳಲ್ಲಿ, 18,56,791 ಮತದಾರರಿದ್ದರು ಮತ್ತು ECI ಅಂಕಿಅಂಶಗಳ ಪ್ರಕಾರ, ಇವಿಎಂಗಳಲ್ಲಿ ಒಟ್ಟು 10,58,744 ಮತಗಳು ಮತ್ತು ಹೆಚ್ಚುವರಿಯಾಗಿ 2,085 ಅಂಚೆ ಮತಗಳು ಹಾಕಲಾಗಿ ಎಣಿಕೆಯಾಗಿದ್ದವು. ಈ ಅಂಕಿಅಂಶಗಳು ಭಾರತೀಯ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿವೆ.
ಇತ್ತೀಚಿನ 2024ರ ಲೋಕಸಭಾ ಚುನಾವಣಾ ಅಂಕಿಅಂಶಗಳ ಪ್ರಕಾರವೂ ವಾರಣಾಸಿ ಕ್ಷೇತ್ರದಲ್ಲಿ 19,97,578 ಮತದಾರರಿದ್ದಾರೆ ಮತ್ತು ಒಟ್ಟು ಚಲಾವಣೆಯಾದ ಮತಗಳು 11,27,081 ಮತ್ತು ಅಂಚೆ ಮತಗಳು 3,062, ಹಾಗಾಗಿ ಒಟ್ಟಾರೆ ಮತಗಳ ಸಂಖ್ಯೆ 11,30,143. ಇಸಿಐ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಪ್ರಧಾನಿ ಮೋದಿಯವರು 1,52,513 ಮತಗಳ ಅಂತರದಿಂದ ಅಥವಾ 52.24% ಮತಗಳೊಂದಿಗೆ ಗೆದ್ದಿದ್ದಾರೆ. ಆದ್ದರಿಂದ, ಹೇಳಿಕೆ ಸುಳ್ಳು.
ಇದನ್ನೂ ಓದಿ: ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆಯೇ? ಸತ್ಯ ಪರಿಶೀಲನೆ